Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ತೆಂಗಿನಕಾಯಿ ಹಾಲು ಹಾಕಿ ಮಾಡುವ ಮೀನಿನ ಸಾರು, ತುಂಬಾ ರುಚಿಯಾಗಿರುತ್ತೆ
ನೀವು ಮೀನು ಸಾರು ಮಾಡುವುದಾದರೆ ತುಂಬಾ ಸರಳವಾದ ಮೀನಿನ ರೆಸಿಪಿ ನೀಡಿದ್ದೇವೆ, ಈ ಮೀನು ಸಾರನ್ನು ನೀವು ಸುಲಭವಾಗಿ ಮಾಡಬಹುದು, ಅಲ್ಲದೆ ತುಂಬಾ ರುಚಿಯಾಗಿ ಬರುತ್ತೆ ಕೂಡ. ಬನ್ನಿ ಈ ಮೀನಿನ ಸಾರು ಮಾಡುವುದು ಹೇಗೆ ಎಂದು ನೋಡೋಣ ಬನ್ನಿ:

ಬೇಕಾಗುವ ಸಾಮಗ್ರಿ
1/ 2 ಅಥವಾ 1 ಕೆಜಿ ಮೀನು
ಟೊಮೆಟೊ 2-3
ಒಂದೂವರೆ ಚಮಚ ಮೆಣಸಿನ ಪುಡಿ
1/2 ಚಮಚ ಕೊತ್ತಂಬರಿ ಪುಡಿ
1/2 ಅರಿಶಿಣ ಪುಡಿ
1 ಚಮಚ ಎಣ್ಣೆ
ಸ್ವಲ್ಪ ಸಾಸಿವೆ
ಹಸಿ ಮೆಣಸು 2
ಈರುಳ್ಳಿ 1
ಸ್ವಲ್ಪ ಮೆಂತೆ
ಉಪ್ಪು
ಹುಣಸೆ ಹಣ್ಣು ಒಂದು ನಿಂಬೆ ಹಣ್ಣು ಗಾತ್ರದಷ್ಟು
ಒಂದು ಕಪ್ ತೆಂಗಿನಕಾಯಿ ಹಾಲು
ಮಾಡುವ ವಿಧಾನ:
- ಪಾತ್ರೆಗೆ ಎಣ್ಣೆ ಹಾಕಿ ಬಿಸಿ ಮಾಡಿ
- ಎಣ್ಣೆ ಬಿಸಿಯಾದಾಗ ಸ್ವಲ್ಪ ಸಾಸಿವೆ ಹಾಕಿ, ಸಾಸಿವೆ ಚಟ್ಪಟ್ ಶಬ್ದ ಮಾಡುವಾಗ, ಸ್ವಲ್ಪ ಮೆಂತೆ, ಈರುಳ್ಳಿ ಹಾಕಿ ಫ್ರೈ ಮಾಡಿ, ಈರುಳ್ಳಿ ಸ್ವಲ್ಪ ಮೆತ್ತಗಾದ ಮೇಲೆ ನೀವು ಟೊಮೆಟೊ ಹಾಕಿ
- ಟೊಮೆಟೊ ಮೆತ್ತಗಾಗುವವರೆಗೆ ಫ್ರೈ ಮಾಡಿ
- ನಂತರ ಅರಿಶಿಣ ಪುಡಿ, ಕೊತ್ತಂಬರಿ ಪುಡಿ, ಮೆಣಸಿನ ಪುಡಿ ಹಾಕಿ ಫ್ರೈ ಮಾಡಿ
- ನಂತರ ಹುಣಸೆ ಹಣ್ಣಿನ ರಸ ಹಾಕಿ, ಉಪ್ಪು ಹಾಕಿ ಕುದಿ ಬರಿಸಿ
- ನಂತರ ಮೀನು ಹಾಕಿ
- ಮೀನು ಹಾಕಿದ ಮೇಲೆ ಕಡಿಮೆ ಉರಿಯಲ್ಲಿ 5 ನಿಮಿಷ ಬೇಯಿಸಿ
- ನಂತರ ತೆಂಗಿನಕಾಯಿ ಹಾಲು ಹಾಕಿ 5 ನಿಮಿಷ ಕುದಿಸಿ
- ನಂತರ ಉರಿಯಿಂದ ಇಳಿಸಿ ಸ್ವಲ್ಪ ಕರಿಬೇವು ಹಾಕಿ, ಪಾತ್ರೆಯ ಬಾಯಿ ಮುಚ್ಚಿ 10 ನಿಮಿಷ ಹಾಗೇ ಬಿಡಿ
- ಇಷ್ಟು ಮಾಡಿದರೆ ಮೀನಿನ ಸಾರು ಸರ್ವ್ ಮಾಡಲು ರೆಡಿ.
ಸಲಹೆ: ನೀವು ತೆಂಗಿನಕಾಯಿ ಮಾರ್ಕೆಟ್ನಿಂದ ಪ್ಯಾಕ್
ಮಾಡಿಟ್ಟ ತೆಂಗಿನಕಾಯಿ ಹಾಲು ಬಳಸಬಹುದು.
ನೀವೇ ತೆಂಗಿನಕಾಯಿ ಹಾಲು ರೆಡಿ ಮಾಡಿದರೆ ಇನ್ನೂ ಒಳ್ಳೆಯದು
ಒಂದು ಕಪ್ ತೆಂಗಿನ ತುರಿಗೆ ಸ್ವಲ್ಪ ನೀರು ಹಾಕಿ ರುಬ್ಬಿ, ನಂತರ ಅದನ್ನು ಸೋಸಿ, ಆ
ಹಾಲನ್ನು ಒಂದು ಪಾತ್ರೆಯಲ್ಲಿ ಸಂಗ್ರಹಿಸಿದರೆ ಆ ಹಾಲನ್ನು ಬಳಸಬಹುದು.
ಇತರ ಟಿಪ್ಸ್
ನೀವು ಒಂದು ಚಮಚ ಖಾರದ ಪುಡಿ ಹಾಗೂ ಅರ್ಧ ಚಮಚ ಕಾಶ್ಮೀರಿ ಮೆಣಸಿನ ಪುಡಿ ಹಾಕಿದರೆ
ಮೀನಿನ ಸಾರು ಕೆಂಪಗೆ ಆಕರ್ಷಕವಾಗಿ ಕಾಣುವುದು.
ಯಾವ ಮೀನು ಬಳಸಬಹುದು?
ನಿಮಗಿಷ್ಟವಾದ ಮೀನನ್ನು ಈ ಸಾರಿಗೆ ಬಳಸಬಹುದು, ಆದರೆ ಕೆರೆ ಮೀನು ಅಥವಾ ಹೊಳೆ
ಮೀನು ಟೇಸ್ಟ್ ಅನಿಸುವುದಿಲ್ಲ, ಸಮುದ್ರ ಮೀನುಗಳಾದ ಬೂತಾಯಿ, ಬಂಗುಡೆ, ತುನಾ,
ಅಂಜಲ್ ಹೀಗೆ ನಿಮಗಿಷ್ಟವಾದ ಮೀನು ಬಳಸಬಹುದು.



Click it and Unblock the Notifications