ಕ್ರಿಸ್ಪಿ, ಜುಸಿ, ಸ್ಪೈಸಿ! 100% ರೆಸ್ಟೋರೆಂಟ್ ಸ್ಟೈಲ್.. ಮನೆಯಲ್ಲೇ ಮಾಡೋ ಚಿಕನ್ ಲಾಲಿಪಾಪ್ ಸೀಕ್ರೆಟ್

Posted By:

ಈಗ ಮನೆಯಲ್ಲೇ 100% ರೆಸ್ಟೋರೆಂಟ್ ರೀತಿ ಚಿಕನ್ ಲಾಲಿಪಾಪ್ ಮಾಡಿ. ಹೆಚ್ಚು ಖರ್ಚು ಕೂಡ ಆಗುವುದಿಲ್ಲ ಮತ್ತು ಸುಲಭವಾಗಿ ಮಾಡಬಹುದು. ಹೌದು, ಸಾಮಾನ್ಯವಾಗಿ ಚಿಕನ್ ಮಾಡುವಾಗ ಚಿಕನ್ ಬಿರಿಯಾನಿ, ಚಿಕನ್ 65 ಹೀಗೆ ಹಲವು ಬಗೆಯ ಸ್ನ್ಯಾಕ್ಸ್ ಮಾಡುತ್ತಾರೆ. ಆದರೆ, ನಾನ್ ವೆಜ್ ತಿನ್ನುವ ಎಲ್ಲರೂ ವಿಭಿನ್ನವಾದ ಹಾಗೂ ವಿಧವಿಧವಾದ ತಿಂಡಿಗಳನ್ನು ತಯಾರಿಸಬೇಕು ಅಂದುಕೊಳ್ಳುತ್ತಾರೆ. ಹೀಗಿರುವಾಗ, ರೆಸ್ಟೋರೆಂಟ್ ರೀತಿ ಚಿಕನ್ ಲಾಲಿಪಾಪ್ (Chicken Lollipop) ಮಾಡಬಹುದು. ಹಾಗಿದ್ರೆ, ಚಿಕನ್ ಲಾಲಿಪಾಪ್ ತಯಾರಿಸಲು ಬೇಕಾಗುವ ಪದಾರ್ಥಗಳು ಮತ್ತು ವಿಧಾನದ ಬಗ್ಗೆ ತಿಳಿಯೋಣ ಬನ್ನಿ.

ಚಿಕನ್ ಲಾಲಿಪಾಪ್ ಮಾಂಸಹಾರ ಪ್ರಿಯರ ಫೇವರಿಟ್ ಖಾದ್ಯ. ಇದು ಪಾರ್ಟಿಗಳಿಗೆ ಮತ್ತು ಸ್ನ್ಯಾಕ್ಸ್ ಆಗಿ ತುಂಬಾ ಸೂಕ್ತವಾಗಿವೆ. ಚಿಕನ್ ಡ್ರಮ್‌ಸ್ಟಿಕ್‌ಗಳನ್ನು ಒಂದು ವಿಶೇಷ ರೀತಿಯಲ್ಲಿ ತಯಾರಿಸಿ, ಮಸಾಲೆಗಳೊಂದಿಗೆ ಬೆರೆಸಿ ಹುರಿಯುವುದು ಅಥವಾ ಬೇಯಿಸುವುದು ಮಾಡುವ ಮೂಲಕ ತಯಾರಿಸಲಾಗುತ್ತದೆ. ಇದು ಸಾಮಾನ್ಯವಾಗಿ ಚಿಕನ್ ವಿಂಗ್ಲೆಟ್‌ನಿಂದ ತಯಾರಿಸಲ್ಪಡುತ್ತದೆ. ಮಾಂಸವನ್ನು ಎಲುಬಿನ ತುದಿಯಿಂದ ಸಡಿಲಗೊಳಿಸಿ ಕೆಳಕ್ಕೆ ತಳ್ಳಿ ಲಾಲಿಪಾಪ್‌ನಂತೆ ಕಾಣುವಂತೆ ಮಾಡಲಾಗುತ್ತದೆ. ರೆಸ್ಟೋರೆಂಟ್‌ಗಳಲ್ಲಿ ಬಹಳ ದುಬಾರಿಯಾದ ಬೆಲೆಗೆ ಮಾರಾಟ ಮಾಡುವ ಚಿಕನ್ ಲಾಲಿಪಾಪ್ ಅನ್ನು ನಿಮ್ಮ ಮನೆಯಲ್ಲೇ ಸುಲಭವಾಗಿ ತಯಾರಿಸಬಹುದು. ಅದು ಹೇಗೆ (Chicken Lollipop Recipe) ಎನ್ನುವುದನ್ನು ತಿಳಿಯಲು ಮುಂದೆ ಓದಿ.

Restaurant style Yummy Chicken Lollipop

ಚಿಕನ್ ಲಾಲಿಪಾಪ್ ತಯಾರಿಸಲು ಬೇಕಾಗುವ ಪದಾರ್ಥಗಳು

• ಚಿಕನ್ ಡ್ರಮ್‌ಸ್ಟಿಕ್ಸ್ - 500 ಗ್ರಾಂ (12)
• ಶುಂಠಿ ಬೆಳ್ಳುಳ್ಳಿ ಪೇಸ್ಟ್ - 2 ಸ್ಪೂನ್
• ನಿಂಬೆ ರಸ - 1 ಸ್ಪೂನ್
• ಖಾರದ ಪುಡಿ - 1 ಸ್ಪೂನ್
• ಅರಿಶಿನ ಪುಡಿ - 1/2 ಸ್ಪೂನ್
• ಕೊತ್ತಂಬರಿ ಪುಡಿ - 1 ಸ್ಪೂನ್
• ಜೀರಿಗೆ ಪುಡಿ - 1/2 ಸ್ಪೂನ್
• ಗರಂ ಮಸಾಲಾ - 1/4 ಸ್ಪೂನ್
• ಉಪ್ಪು - ರುಚಿಗೆ ತಕ್ಕಷ್ಟು
• ಸೋಯಾ ಸಾಸ್ - 1 ಸ್ಪೂನ್
• ವಿನೆಗರ್ - 1 ಸ್ಪೂನ್
• ಮೈದಾ - 2 ಸ್ಪೂನ್
• ಕಾರ್ನ್‌ಫ್ಲೋರ್ - 1 ಸ್ಪೂನ್
• ಎಣ್ಣೆ - ಅಗತ್ಯಕ್ಕೆ ತಕ್ಕಂತೆ

Yummy Chicken Lollipop
Take a Poll

ಚಿಕನ್ ಲಾಲಿಪಾಪ್ ತಯಾರಿಸುವ ವಿಧಾನ

ಮೊದಲಿಗೆ ಚಿಕನ್ ಡ್ರಮ್‌ಸ್ಟಿಕ್ಸ್‌ಗಳನ್ನು ಚೆನ್ನಾಗಿ ತೊಳೆಯಿರಿ. ಒಂದು ಚೂಪಾದ ಚಾಕುವನ್ನು ಬಳಸಿ ಡ್ರಮ್‌ಸ್ಟಿಕ್‌ನ ದಪ್ಪ ಭಾಗದ ಸುತ್ತಲೂ ವೃತ್ತಾಕಾರವಾಗಿ ಕತ್ತರಿಸಿ. ಎಲುಬಿನ ಕೊನೆಯವರೆಗೆ ಕತ್ತರಿಸಬೇಡಿ. ನಂತರ ಕೊಯ್ದ ಭಾಗದಿಂದ ಚರ್ಮವನ್ನು ಮತ್ತು ಮಾಂಸವನ್ನು ಎಲುಬಿನ ಕೊನೆಯವರೆಗೆ ತಳ್ಳಿರಿ. ಇದು ಲಾಲಿಪಾಪ್ ಆಕಾರವನ್ನು ನೀಡುತ್ತದೆ. ಎಲುಬು ಒಂದು ಹಿಡಿ ರೀತಿ ಕಾಣುತ್ತದೆ. ಎಲ್ಲಾ ಡ್ರಮ್‌ಸ್ಟಿಕ್ಸ್‌ಗಳನ್ನು ಇದೇ ರೀತಿ ಸಿದ್ಧಪಡಿಸಿ.

ಈಗ ಒಂದು ದೊಡ್ಡ ಬಟ್ಟಲಿನಲ್ಲಿ ಶುಂಠಿ ಬೆಳ್ಳುಳ್ಳಿ ಪೇಸ್ಟ್, ನಿಂಬೆ ರಸ, ಖಾರದ ಪುಡಿ, ಅರಿಶಿನ ಪುಡಿ, ಕೊತ್ತಂಬರಿ ಪುಡಿ, ಜೀರಿಗೆ ಪುಡಿ, ಗರಂ ಮಸಾಲಾ, ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಸೋಯಾ ಸಾಸ್ ಮತ್ತು ಬೇಕೆನಿಸಿದರೆ ವಿನೆಗರ್ ಕೂಡ ಹಾಕಿ ಮಿಕ್ಸ್ ಮಾಡಿ. ಸಿದ್ಧಪಡಿಸಿದ ಚಿಕನ್ ಡ್ರಮ್‌ಸ್ಟಿಕ್ಸ್‌ಗಳನ್ನು ಈ ಮಿಶ್ರಣದಲ್ಲಿ ಹಾಕಿ ಚೆನ್ನಾಗಿ ಕಲಸಿ, ಮಸಾಲೆಯು ಚಿಕನ್‌ಗೆ ಚೆನ್ನಾಗಿ ಹಿಡಿಯುವಂತೆ ನೋಡಿಕೊಳ್ಳಿ. ಬಟ್ಟಲನ್ನು ಮುಚ್ಚಿ ಕನಿಷ್ಠ 30 ನಿಮಿಷಗಳು ಅಥವಾ ಗರಿಷ್ಠ 2 ರಿಂದ 3 ಗಂಟೆಗಳ ಕಾಲ ಫ್ರಿಜ್‌ನಲ್ಲಿಡಿ. ಹೆಚ್ಚು ಸಮಯ ಮ್ಯಾರಿನೇಟ್ ಮಾಡಿದರೆ, ಚಿಕನ್ ಇನ್ನಷ್ಟು ರುಚಿಕರವಾಗಿರುತ್ತದೆ.

Chicken Lollipop

ಈಗ ಮತ್ತೊಂದು ಬಟ್ಟಲಿನಲ್ಲಿ ಮೈದಾ ಮತ್ತು ಕಾರ್ನ್‌ಫ್ಲೋರ್ ಹಾಕಿ ಮಿಕ್ಸ್ ಮಾಡಿ. ಇದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಖಾರದ ಪುಡಿ, ಚಿಟಿಕೆ ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಸ್ವಲ್ಪ ಸ್ವಲ್ಪ ನೀರು ಹಾಕುತ್ತಾ ಗಂಟಿಲ್ಲದಂತೆ ಒಂದು ದಪ್ಪನೆಯ ಹಿಟ್ಟನ್ನು ತಯಾರಿಸಿಕೊಳ್ಳಿ. ಹಿಟ್ಟು ತುಂಬಾ ತೆಳುವಾಗಿ ಅಥವಾ ತುಂಬಾ ಗಟ್ಟಿಯಾಗಿ ಇರಬಾರದು. ಇದು ಚಿಕನ್‌ಗೆ ಚೆನ್ನಾಗಿ ಹಿಡಿಯುವಂತಿರಬೇಕು. ಬಳಿಕ ಫ್ರಿಜ್‌ನಿಂದ ಮ್ಯಾರಿನೇಟ್ ಮಾಡಿದ ಚಿಕನ್ ಡ್ರಮ್‌ಸ್ಟಿಕ್ಸ್‌ಗಳನ್ನು ತೆಗೆಯಿರಿ. ಒಂದೊಂದೇ ಡ್ರಮ್‌ಸ್ಟಿಕ್ ಅನ್ನು ತಯಾರಿಸಿದ ಹಿಟ್ಟಿನಲ್ಲಿ ಚೆನ್ನಾಗಿ ಅದ್ದಿ, ಹಿಟ್ಟು ಎಲ್ಲ ಕಡೆ ಸಮನಾಗಿ ಹತ್ತುವಂತೆ ನೋಡಿಕೊಳ್ಳಿ.

ಈಗ ಒಂದು ಬಾಣಲೆಯಲ್ಲಿ ಅಥವಾ ಪ್ಯಾನ್‌ನಲ್ಲಿ ಎಣ್ಣೆಯನ್ನು ಚೆನ್ನಾಗಿ ಬಿಸಿ ಮಾಡಿ. ಅದರಲ್ಲಿ ಕೋಟ್ ಮಾಡಿದ ಚಿಕನ್ ಲಾಲಿಪಾಪ್‌ಗಳನ್ನು ಒಂದೊಂದಾಗಿ ಎಣ್ಣೆಯಲ್ಲಿ ಹಾಕಿ ಅವುಗಳನ್ನು ಗೋಲ್ಡನ್ ಬಣ್ಣ ಬರುವವರೆಗೆ ಫ್ರೈ ಮಾಡಿ. ಹಾಗೆಯೇ ಮಧ್ಯದಲ್ಲಿ ತಿರುಗಿಸುತ್ತಾ ಇರಿ. ಎಲ್ಲಾ ಕಡೆ ಸಮನಾಗಿ ಬೇಯಬೇಕು. ಫ್ರೈ ಮಾಡಿದ ಲಾಲಿಪಾಪ್‌ಗಳನ್ನು ತೆಗೆದು ಒಂದು ಪ್ಲೇಟ್‌ ಅಥವಾ ಟಿಶ್ಯೂ ಪೇಪರ್ ಮೇಲೆ ಹಾಕಿ. ಇದು ಹೆಚ್ಚುವರಿ ಎಣ್ಣೆಯನ್ನು ಹೀರಿಕೊಳ್ಳುತ್ತದೆ. ಇಷ್ಟು ಮಾಡಿದರೆ, ಚಿಕನ್ ಲಾಲಿಪಾಪ್ ಸಿದ್ಧ. ಈ ರೀತಿ ಸುಲಭವಾಗಿ ಮನೆಯಲ್ಲೇ ರುಚಿಕರವಾದ ಚಿಕನ್ ಲಾಲಿಪಾಪ್ ತಯಾರಿಸಬಹುದು. ಮನೆಯಲ್ಲಿ ತಯಾರಿಸುವುದರಿಂದ ಆರೋಗ್ಯಕರವಾಗಿರುತ್ತದೆ ಮತ್ತು ಹೊರಗಡೆ ದುಬಾರಿ ಬೆಲೆ ಕೊಟ್ಟು ತರವು ಪ್ರಮೇಯವೇ ಇಲ್ಲ.

[ of 5 - Users]
Story first published: Thursday, June 26, 2025, 12:40 [IST]
X
Desktop Bottom Promotion