ವಿಶ್ವದ ಟಾಪ್‌ 100ರಲ್ಲಿ ಭಾರತದ 4 ಆಹಾರಗಳಿವೆ, ನಮ್ಮಲ್ಲಿನ ಈ ಆಹಾರ ಟಾಪ್‌ 7

Posted By:

ಟೇಸ್ಟ್‌ಅಟ್ಲಾಸ್‌ ಎಂಬುವುದು ವಿಶ್ವದ ಪ್ರಸಿದ್ಧ ಫುಡ್‌ ವೆಬ್‌ಸೈಟ್‌. ಇದು ಪ್ರತಿವರ್ಷ ವಿಶ್ವದ ಎಲ್ಲಾ ಕಡೆಯ ಆಹಾರಗಳಲ್ಲಿ ಟಾಪ್‌100 ಆಹಾರಗಳ ಪಟ್ಟಿ ಮಾಡುತ್ತದೆ. ಟೇಸ್ಟ್‌ಅಟ್ಲಾಸ್‌ನಲ್ಲಿ ಸ್ಥಾನ ಪಡೆಯುವುದು ಅಷ್ಟೇನು ಸುಲಭದ ಕೆಲಸವಲ್ಲ, ಆ ಅಹಾರ ಅಷ್ಟೊಂದು ರುಚಿಕರವಾಗಿದ್ದರೆ ಮಾತ್ರ ಈ ವೆಬ್‌ಸೈಟ್‌ನಲ್ಲಿ ಸ್ಥಾನ ಪಡೆಯಲು ಸಾಧ್ಯವಾಗುವುದು.

Tasteatlas Award 2023-24

ಟೇಸ್ಟ್‌ಅಟ್ಲಾಸ್‌ನಲ್ಲಿ ಯಾವುದಾದರು ಅಹಾರ ಸ್ಥಾನ -ಪಡೆದಿದೆ ಎಂದರೆ ಅದು ಆಯಾ ದೇಶಗಳಿಗೂ ಹಿರಿಮೆ, ಅಲ್ಲದೆ ಟೂರಿಸಂ ದೃಷ್ಟಿಯಿಂದ ಕೂಡ ತುಂಬಾನೇ ಮುಖ್ಯ, ಟೂರ್‌ ಬರುವ ವಿದೇಶಿಗರು ಆ ದೇಶದ ಬೆಸ್ಟ್‌ ಫುಡ್‌ ಯಾವುದೆಂದು ಟ್ರೈ ಮಾಡಲು ಇಷ್ಟಪಡುತ್ತಾರೆ, ಒಂದು ಸ್ಥಳಕ್ಕೆ ಹೋದಾಗ ಅಲ್ಲಿಯ ಪ್ರಸಿದ್ಧ ಆಹಾರ ಟೇಸ್ಟ್‌ ಮಾಡುವುದನ್ನು ಮಿಸ್ ಮಾಡಲೇಬಾರದು.

ಈ ಬಾರಿ ಟೆಸ್ಟ್‌ಅಟ್ಲಾಸ್‌ನಲ್ಲಿ ಭಾರತದ ಕೆಲವು ಅಹಾರಗಳು ಕೂಡ ಟಾಪ್‌ 100ರಲ್ಲಿ ಸ್ಥಾನ ಪಡೆದಿದೆ, ಅದರೆ ಆ ಅಹಾರಗಳು ನಮ್ಮ ಸಾಂಪ್ರದಾಯಕವಾದ ಆಹಾರವಲ್ಲ, ಆದರೆ ಭಾರತದಲ್ಲಿ ಆ ಅಹಾರಗಳು ತುಂಬಾನೇ ಪ್ರಸಿದ್ಧಿ ಪಡೆದಿದ್ದು, ಭಾರತೀಯ ಮಸಾಲೆಯಿಂದ ಅದರ ಮೂಲಕ್ಕಿಂತ ರುಚಿ ಭಿನ್ನವಾಗಿದೆ .

ಟೇಸ್ಟ್‌ಅಟ್ಲಾಸ್‌ನಲ್ಲಿ ಸ್ಥಾನ ಪಡೆದ ಟಾಪ್‌ 10 ಆಹಾರಗಳು
Picanha(ಪಿಕಾನ್ಹಾ)- ಬ್ರೆಜಿಲ್‌
roti canai (ರೋಟಿ ಕನೈ)-ಮಲೇಷ್ಯಾ
Phat Kaphrao (ಫಟ್ ಕಫ್ರಾವ್)-ಥೈಲ್ಯಾಂಡ್
Pizza Napoletana (ಪಿಜ್ಜಾ ನೆಪೋಲೆಟಾನಾ)- ಇಟಲಿ
Guotie ( ಗುಟಿ)- ಚೀನಾ
Khao Soi ( ಖಾವೋ ಸೋಯಿ): ಥೈಲ್ಯಾಂಡ್‌
Butter Garlic Nan (ಗಾರ್ಲಿಕ್ ಬಟರ್‌ ನಾನ್)- ಭಾರತ
Tangbao (ಟ್ಯಾಂಗ್ಬಾವೊ)- ಚೀನಾ
Shashlik ( ಶಶ್ಲಿಕ್): ರಷ್ಯಾ
Phanaeng Curry ( ಫನೇಂಗ್ ಕರಿ): ಥೈಲ್ಯಾಂಡ್

[ of 5 - Users]
Story first published: Friday, July 19, 2024, 17:54 [IST]
X
Desktop Bottom Promotion