Latest Updates
-
March 11 Horoscope: ಪ್ರಯಾಣಗಳಲ್ಲಿ ನಿಮಗೆ ಶುಭವಿಲ್ಲ! ಅಪಾಯದ ಮುನ್ಸೂಚನೆ! -
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ
ಹುಣಸೆಹಣ್ಣು ಹಾಕಿ ಮಾಡುವ ಚಿತ್ರಾನ್ನ ರೆಸಿಪಿ, ಬೊಂಬಾಟ್ ರುಚಿ
ಚಿತ್ರಾನ್ನ ಕರ್ನಾಟಕದ ಪ್ರಮುಖ ಬ್ರೇಕ್ಫಾಸ್ಟ್ಗಳಲ್ಲಿ ಒಂದು ಚಿತ್ರಾನ್ನ, ಬಹುತೇಕ ಮನೆಗಳಲ್ಲಿ ವಾರದ ಒಂದು ಬಾರಿಯಾದರೂ ಚಿತ್ರಾನ್ನವಿರುತ್ತದೆ, ಅದರಲ್ಲೂ ಹೊರಗಡೆ ದುಡಿಯಲು ಹೋಗುವ ಮಹಿಳೆಯರಿಗೆ ಬೇಗನೆ ಮಾಡಬಹುದಾದ ರೆಸಿಪಿ ಕೂಡ ಇದಾಗಿದೆ.
ಈ ಚಿತ್ರಾನ್ನವನ್ನು ಹಲವು ರುಚಿಯಲ್ಲಿ ತಯಾರಿಸುತ್ತಾರೆ, ಕೆಲ ಚಿತ್ರಾನ್ನ ತಿಂದ್ರೆ ಚಿತ್ರಾನ್ನ ಮೇಲಿದ್ದ ಬೇಸರ ದೂರಾಗುವುದು, ಹೌದು ಅಷ್ಟೊಂದು ರುಚಿಯಾಗಿರುತ್ತದೆ. ನಾವಿಲ್ಲಿ ಸ್ವಲ್ಪ ಭಿನ್ನವಾಗಿ ಮಾಡುವ ಅಂದರೆ ಹುಣಸೆಹಣ್ಣು ಹಾಕಿ ಮಾಡುವ ಚಿತ್ರಾನ್ನ ಇದಾಗಿದೆ. ಇದನ್ನು ಉಡುಪಿ ಕಡೆ ಹೆಚ್ಚಾಗಿ ಮಾಡಲಾಗುವುದು, ಬನ್ನಿ ಈ ಚಿತ್ರಾನ್ನ ರೆಸಿಪಿ ನೋಡೋಣ:

ಬೇಕಾಗುವ ಸಾಮಗ್ರಿ
1/2 ಕಪ್ ತೆಂಗಿನತುರಿ
1/2 ಚಮಚ ಸಾಸಿವೆ
2 ಒಣ ಮೆಣಸು
1/2 ಚಮಚ ಅರಿಶಿಣ ಪುಡಿ
ಇತರ ಸಾಮಗ್ರಿ
1 ಚಮಚ ತೆಂಗಿನೆಣ್ಣೆ
1 ಚಮಚ ಸಾಸಿವೆ
1/2 ಚಮಚ ಉದ್ದಿನ ಬೇಳೆ
1 ಒಣ ಮೆಣಸು
ಸ್ವಲ್ಪ ಕರಿಬೇವು
2 ಚಮಚ ಹುಣಸೆಹಣ್ಣು
1/2 ಚಮಚ ಬೆಲ್ಲ
1/2 ಚಮಚ ಉಪ್ಪು
ಅನ್ನ (2 ಕಪ್ ಅಕ್ಕಿ ಬೇಯಿಸಿದ್ದು)
ಮಾಡುವ ವಿಧಾನ:
1. ಮೊದಲಿಗೆ ತೆಂಗಿನತುರಿ, 1/2 ಚಮಚ ಸಾಸಿವೆ, 2 ಒಣ ಮೆಣಸು, ಒಣ ಮೆನಸು ಹಾಗೂ ಸ್ವಲ್ಪ ಹುಣಸೆ ಹಣ್ಣು ಹಾಕಿ ಬ್ಲೆಂಡ್ ಮಾಡಿ. ಹೆಚ್ಚು ನೀರು ಸೇರಿಸಿದರೆ ತರಿತರಿ ರುಬ್ಬಿಕೊಳ್ಳಿ.
2. ಈಗ ಪ್ಯಾನ್ ಬಿಸಿ ಮಾಡಿ 1 ಚಮಚ ಎಣ್ಣೆ ಹಾಕಿ
3. ಎಣ್ಣೆ ಬಿಸಿಯಾದಾಗ 1 ಚಮಚ ಸಾಸಿವೆ, 1/2 ಚಮಚ ಉದ್ದಿನ ಬೇಳೆ, 1 ಒಣ ಮೆಣಸು, ಸ್ವಲ್ಪ ಕರಿಬೇವು, 2 ಚಮಚ ನೆಲೆಗಡಲೆ ಹಾಕಿ.
4. ಕಡಿಮೆ ಉರಿಯಲ್ಲಿ 2 ನಿಮಿಷ ಫ್ರೈ ಮಾಡಿ, ಹೆಚ್ಚು ಉರಿ ಮಾಡಿದರೆ ಸೀದು ಹೋಗುವುದು.
5. ನಂತರ 2 ಚಮಚ ಹುಣಸೆ ರಸ, 1/2 ಚಮಚ ಬೆಲ್ಲ, ರುಚಿಗೆ ತಕ್ಕ ಕಲ್ಲುಪ್ಪು (1/2 ಚಮಚ) ಹಾಕಿ ಮಿಕ್ಸ್ ಮಾಡಿ.
6. ನಂತರ ರುಬ್ಬಿದ ತೆಂಗಿನಕಾಯಿ ಮಿಶ್ರಣ ಹಾಕಿ ಮತ್ತೆ 2 ನಿಮಿಷ ಪ್ರೈ ಮಾಡಿ, ನಂತರ ಅನ್ನ ಹಾಕಿ ಮಿಕ್ಸ್ ಮಾಡಿದರೆ ಹುಣಸೆಹಣ್ಣನ ಚಿತ್ರಾನ್ನ ರೆಡಿ.
ಸಲಹೆ: ಈ ಚಿತ್ರಾನ್ನ ನೀವು ಬೇಗನೆ ತಯಾರಿಸಬಹುದು, ನೀವು ತೆಂಗಿನತುರಿ ಮಸಾಲೆ ರಾತ್ರಿ ರೆಡಿ ಮಾಡಿಟ್ಟು ಫ್ರಿಡ್ಜ್ನಲ್ಲಿಟ್ಟು ಬೇಕಾದರೆ ಬಳಸಬಹುದು, ಇನ್ನು ಈ ರೆಸಿಪಿ ನಿಂಬೆರಸ ಹಾಕಿ ಮಾಡುವ ಚಿತ್ರಾನ್ನಕ್ಕಿಂತ ರುಚಿ, ಅಲ್ಲದೆ ಈ ಚಿತ್ರಾನ್ನ ಗೊಜ್ಜು ರೆಡಿ ಮಾಡಿಟ್ಟು ಫ್ರಿಡ್ಜ್ನಲ್ಲಿಟ್ಟರೆ ವಾರದವರೆಗೆ ಬಳಸಲೂಬಹುದು.
ಇನ್ನು ತೆಂಗಿನ ತುರಿ ನೀವು ತಾಜಾ ಬಳಸಿ, ತುಂಬಾ ಸಮಯ ಇಡುವುದಾದರೆ ಕೊಬ್ಬರಿ
ತುರಿ ಬಳಸಿ.
ನೀವು ಇದೇ ರೀತಿ ಮಾವಿನಕಾಯಿ ಚಿತ್ರಾನ್ನ, ಪುದೀನಾ ಚಿತ್ರಾನ್ನ ಹೀಗೆ ಹಲವು ಬಗೆಯ
ಬ್ರೇಕ್ಫಾಸ್ಟ್ ಬಳಸಬಹುದು.
ನೀವು ಅನ್ನ ಬಳಸುವಾಗ ಬಿಸಿ ಬಿಸಿ ಅನ್ನ ಬದಲಿಗೆ ರಾತ್ರಿಯಲ್ಲಿ ಉಳಿದ ಅನ್ನವಾದರೆ
ಇನ್ನೂ ಟೇಸ್ಟ್ ಅನಿಸುವುದು.
ಇದನ್ನು ನೀವು ಹಾಗೆಯೇ ಸವಿಯಬಹುದು, ಬೇಕಿದ್ದರೆ ಚಟ್ನಿ ಕಾಂಬಿನೇಷನ್ನಲ್ಲಿ
ಸವಿಯಬಹುದು.
ಈಗ ನಿಂಬೆಹಣ್ಣು ರೇಟ್ ಕೂಡ ಜಾಸ್ತಿಯಾಗಿದೆ ಅಂಥ ಸಮಯದಲ್ಲಿ ನಿಂಬೆಹಣ್ಣಿನ ಬದಲಿಗೆ ಈ ಹುಣಸೆಹಣ್ಣಿನ ಚಿತ್ರಾನ್ನ ಬೆಸ್ಟ್. ನೀವು ನೆಲಗಡಲೆ ಜೊತೆಗೆ ಕಡ್ಲೆ ಬೇಳೆ ಹಾಕಿದರೆ ಟೇಸ್ಟ್ ಸೂಪರ್.
ಇದೀಗ ಮಾವಿನಕಾಯಿ ಸೀಸನ್. ನೀವು ಹಣಸೆರಸ ಬದಲಿಗೆ ಮಾವಿನಕಾಯಿ ತುರಿದು ಬಳಸಬಹುದು, ಮಾವಿನಕಾಯಿ ಹುಳಿ ರುಚಿ ಬಾಯಿಗೆ ಇನ್ನೂ ಸೂಪರ್.



Click it and Unblock the Notifications