Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ತಗಟೆ ಸೊಪ್ಪಿನ ಪಲ್ಯದ ರೆಸಿಪಿ: ಈ ಸೊಪ್ಪಿನಲ್ಲಿ ರಕ್ತ ಶುದ್ಧೀಕರಿಸುವುದರ ಜೊತೆಗೆ ಅನೇಕ ಪ್ರಯೋಜನಗಳಿವೆ
ಕನ್ನಡದಲ್ಲಿ ತಗಟೆ, ತುಳುವಿನಲ್ಲಿ ತಜಂಕ್ ಎಂದು ಕರೆಯಲ್ಪಡುವ ಸೊಪ್ಪಿಗೆ ಇಂಗ್ಲಿಷ್‌ನಲ್ಲಿ cassia tora ಎಂದು ಕರೆಯುತ್ತಾರೆ. ಈ ಸೊಪ್ಪು ಮಳೆಗಾಲದಲ್ಲಿ ಹಳ್ಳಿ ಕಡೆಗಳಲ್ಲಿ ಯಥೇಚ್ಛವಾಗಿ ಬೆಳೆಯುತ್ತದೆ. ಇದರ ಚಿಗುರು ಎಲೆ ಚಿವುಟಿ ತಂದು ಅದನ್ನು ಸ್ವಚ್ಛ ಮಾಡಿ ಕತ್ತರಿಸಿ ಇದರಿಂದ ಪಲ್ಯ, ಸಾರು, ಪತ್ರೊಡೆ ಮುಂತಾದ ರುಚಿಕರವಾದ ಅಡುಗೆ ಮಾಡಲಾಗುವುದು.

ನಾವಿಲ್ಲಿ ತಗಟೆ ಸೊಪ್ಪಿನ ಪಲ್ಯ ಮಾಡಿದ್ದೇವೆ. ಇದರ ಪಲ್ಯ ಮಾಡುವ ವಿಧಾನ ಇತರ ಸೊಪ್ಪು ಪಲ್ಯದಂತೆಯೇ ಹೆಚ್ಚಿನ ವ್ಯತ್ಯಾಸವೇನೂ ಇಲ್ಲ, ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ:
Recipe By: Reena TK
Recipe Type: Palya
Serves: 4
-
ಬೇಕಾಗುವ ಸಾಮಗ್ರಿ
ತಜಂಕ್ ಅಥವಾ ತಗಟೆ ಎಲೆ
ಈರುಳ್ಳಿ 2
ಹಸಿ ಮೆಣಸಿನಕಾಯಿ 2
ಅರಿಶಿಣ ಪುಡಿ 1/2 ಚಮಚ
1/4 ಕಪ್ ತೆಂಗಿನ ತುರಿ
ರುಚಿಗೆ ತಕ್ಕ ಉಪ್ಪು
ಸಾಸಿವೆ
ತೆಂಗಿನೆಣ್ಣೆ 2 ಚಮಚ/ಯಾವ ಅಡುಗೆ ಎಣ್ಣೆ ಬೇಕಾದರೂ ಬಳಸಬಹುದು
-
ಮಾಡುವ ವಿಧಾನ
* ಮೊದಲಿಗೆ ಕಜಂಕ್ ಅಥವಾ ತಗಟೆ ಸೊಪ್ಪಿನ ಎಲೆ ಬಿಡಿಸಿಕೊಳ್ಳಬೇಕು.
* ಈರುಳ್ಳಿ ಹಾಗೂ ಹಸಿ ಮೆಣಸು ಕತ್ತರಿಸಿ
* ಈಗ ಪ್ಯಾನ್‌ಗೆ ಎಣ್ಣೆ ಹಾಕಿ ಎಣ್ಣೆ ಬಿಸಿಯಾದಾಗ ಸಾಸಿವೆ ಹಾಕಿ, ಸಾಸಿವೆ ಚಟ್‌ಪಟ್ ಶಬ್ದ ಮಾಡುವಾಗ ಈರುಳ್ಳಿ , ಹಸಿ ಮೆಣಸಿನಕಾಯಿ ಹಾಕಿ ಫ್ರೈ ಮಾಡಿ.
* ನಂತರ ಸೊಪ್ಪು ತೊಳೆದು ಹಾಕಿ, ರುಚಿಗೆ ತಕ್ಕ ಉಪ್ಪು, ಅರಿಶಿಣ ಸೇರಿಸಿ ಕಡಿಮೆ ಉರಿಯಲ್ಲಿ 10 ನಿಮಿಷ ಬೇಯಿಸಿ.
* ಸೊಪ್ಪು ಬೆಂದು ಬರುವಾಗ ತುರಿದ ತೆಂಗಿನ ಕಾಯಿ ಮತ್ತೆ 2 ನಿಮಿಷ ಫ್ರೈ ಮಾಡಿದರೆ ತಗಟೆ ಸೊಪ್ಪಿನ ಪಲ್ಯ ರೆಡಿ.
- ಸೂಚನೆ ತಗಟೆ ಸೊಪ್ಪು ಮಳೆಗಾಲದಲ್ಲಿ ಮಾಡಲಾಗುವುದು, ಉಳಿದ ಸಮಯದಲ್ಲಿ ಮಾಡಿದರೆ ಕಹಿ ಬರುವುದು. * ಇದರಿಂದ ಸಾರು, ಅಂಬೊಡೆ ಕೂಡ ಮಾಡಲಾಗುವುದು.
- ಸರ್ವ್ - 1ಕಪ್
- ಪ್ರೊಟೀನ್ - 11.63 ಗ್ರಾಂ
- ಕಾರ್ಬ್ಸ್ - 36.60ಗ್ರಾಂ
ಪ್ರಯೋಜನಗಳು
* ಕಿಬ್ಬೊಟ್ಟೆ ನೋವು ಹೋಗಲಾಡಿಸುತ್ತದೆ
* ರಕ್ತವನ್ನು ಶುದ್ಧೀಕರಿಸುತ್ತದೆ

* ಮಲಬದ್ಧತೆ ಹೋಗಲಾಡಿಸುತ್ತೆ
* ಉರಿಯೂತ ಕಡಿಮೆ ಮಾಡುತ್ತದೆ

* ಬೊಜ್ಜು ಕರಗಿಸುತ್ತೆ
* ತ್ವಚೆ ಆರೋಗ್ಯಕ್ಕೂ ಒಳ್ಳೆಯದು.



Click it and Unblock the Notifications