For Quick Alerts
ALLOW NOTIFICATIONS  
For Daily Alerts

ಯುಗಾದಿ ಹಬ್ಬದ ಸಂಭ್ರಮ ಹೆಚ್ಚಿಸುವ ಸಜ್ಜಪ್ಪ

By Staff
|
Sajjappa, sweet recipe for Ugadi
ಕೆಂಪಗೆ ಕರಿದ ಬಿಸಿಬಿಸಿಯಾದ, ಗರಿಗರಿಯಾದ ಸಜ್ಜಪ್ಪವನ್ನು ಮಾಡುವುದೇ ಒಂದು ಸಂಭ್ರಮ. ಅದನ್ನು ಸವಿಯುವುದು ಮತ್ತೊಂದು ಸಂಭ್ರಮ! ಯುಗಾದಿಗೆ ಹೋಳಿಗೆಯನ್ನೇ ಮಾಡಬೇಕೆಂದೇನೂ ಇಲ್ಲ, ಒಮ್ಮೆ ಸಜ್ಜಪ್ಪವನ್ನೂ ಮಾಡಿ ನೋಡಿ. ಓದುಗರಿಗೆಲ್ಲ ಹೊಸವರ್ಷದ ಹಾರ್ದಿಕ ಶುಭಾಶಯಗಳು.

* ವಾಣಿ ನಾಯಿಕ, ಬೆಂಗಳೂರು

ಬೇಕಾಗುವ ಪದಾರ್ಥಗಳು

ಚಿರೋಟಿ ರವೆ 1 ಬಟ್ಟಲು
ತುಪ್ಪ 1 ಟಿಸ್ಪೂನ್
ಕಾಯಿತುರಿ 2 ಬಟ್ಟಲು
ಬೆಲ್ಲ 1 ಬಟ್ಟಲು
ಏಲಕ್ಕಿ ಪುಡಿ 1 ಟಿಸ್ಪೂನ್
ದ್ರಾಕ್ಷಿ ಮತ್ತು ಗೋಡಂಬಿ 1/4 ಬಟ್ಟಲು (ತುಪ್ಪದಲ್ಲಿ ಹುರಿದದ್ದು)

ಮಾಡುವ ವಿಧಾನ

ಮೊದಲಿಗೆ ಚಿರೋಟಿ ರವೆಯನ್ನು ಒಂದು ಪಾತ್ರೆಗೆ ಹಾಕಿಕೊಳ್ಳಿ. ಅದಕ್ಕೆ ತುಪ್ಪವನ್ನು ಸುರಿದು ಕಲಸಿಟ್ಟಿಕೊಳ್ಳಿ. ಈ ಮಿಶ್ರಣಕ್ಕೆ ನೀರನ್ನು ಹಾಕಿ ಪೂರಿ ಹಿಟ್ಟಿನ ಹದಕ್ಕೆ ಕಲಸಿ, ಚೆನ್ನಾಗಿ ನಾದಬೇಕು. ಹತ್ತರಿಂದ ಹದಿನೈದು ನಿಮಿಷದವರೆಗೆ ಹಿಟ್ಟನ್ನು ನೆನೆಯಲು ಬಿಡಿ. ಆ ಸಮಯದಲ್ಲಿ ಇನ್ನೊಂದೆಡೆ ಹೂರಣಕ್ಕೆ ಸಿದ್ಧತೆ ನಡೆಸಿ.

ಹೂರಣವನ್ನು ಮಾಡುವ ವಿಧಾನ : ಕಾಯಿತುರಿ ಹಾಗೂ ನುಣ್ಣಗೆ ಜಜ್ಜಿಕೊಂಡ ಬೆಲ್ಲವನ್ನು ಒಂದು ಬಾಣಲೆಯಲ್ಲಿ ಹಾಕಿ ಹುರಿಯಿರಿ. ನಂತರ ಏಲಕ್ಕಿ ಪುಡಿ ಮತ್ತು ತುಪ್ಪದಲ್ಲಿ ಹುರಿದ ದ್ರಾಕ್ಷಿ ಮತ್ತು ಗೋಡಂಬಿಯನ್ನು ಸೇರಿಸಿ ಸ್ಟೋವ್‌ನಿಂದ ಕೆಳಗಿಳಿಸಿ.

ನಂತರ ಮೊದಲೇ ಕಲಸಿಟ್ಟಿದ್ದ ಹಿಟ್ಟನ್ನು ತೆಗೆದುಕೊಂಡು, ಸಣ್ಣ ಸಣ್ಣಗೆ ದುಂಡಾಕಾರದ ಉಂಡೆಗಳನ್ನು ಮಾಡಿ. ಅದರೊಳಕ್ಕೆ ಹೂರಣವನ್ನು ತುಂಬಿ. ಆಮೇಲೆ ಹಿಟ್ಟಿನ ತುದಿಯಿಂದ ಮುಚ್ಚಿ ಎಣ್ಣೆ ಕೈಯಿಂದ ಕೈಯಲ್ಲಿ ದುಂಡಾಕಾರಕ್ಕೆ ತಟ್ಟಬೇಕು. ಹೀಗೆ ಲಟ್ಟಿಸಿದ ಪೂರಿ ಆಕಾರದ ದುಂಡಗಿನ ಸಜ್ಜಪ್ಪವನ್ನು ಎಣ್ಣೆಯಲ್ಲಿ ಕರಿಯಿರಿ.

ಕೆಂಪಗೆ ಕರಿದ ಬಿಸಿಬಿಸಿಯಾದ, ಮತ್ತು ಗರಿಗರಿಯಾದ ಸಜ್ಜಪ್ಪವನ್ನು ಮಾಡುವುದೇ ಒಂದು ಸಂಭ್ರಮ. ಅದನ್ನು ಸವಿಯುವುದು ಮತ್ತೊಂದು ಸಂಭ್ರಮ! ಓದುಗರಿಗೆಲ್ಲ ಹೊಸವರ್ಷದ ಹಾರ್ದಿಕ ಶುಭಾಶಯಗಳು.

Story first published: Wednesday, March 25, 2009, 12:25 [IST]
X
Desktop Bottom Promotion