Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ರೆಸಿಪಿ: ಮೋದಕ ಪ್ರಿಯನಿಗಾಗಿ ಮಾಡಿ ಸ್ವೀಟ್ ಮೋದಕ
ಮೋದಕ ಪ್ರಿಯ ಗಣಪನಿಗೆ ನೀವು ಬಗೆ ಬಗೆಯ ಮೋದಕ ಮಾಡಿ ನೈವೇದ್ಯ ಇಡಲು ಬಯಸುವುದಾದರೆ ನಾವಿಲ್ಲಿ ಸುಲಭದಲ್ಲಿ ತಯಾರಿಸಬಹುದಾದ ಸ್ವೀಟ್ ಮೋದಕ ರೆಸಿಪಿಯನ್ನು ಶೇರ್ ಮಾಡಿದ್ದೇವೆ.

ಸ್ವೀಟ್ ಮೋದಕ ತುಂಬಾ ಸರಳವಾದರೆಸಿಪಿಯಾಗಿದ್ದು ಹೆಚ್ಚಿನ ಶ್ರಮವಿಲ್ಲದೆ ರುಚಿಕರವಾದ ಮೋದಕ ತಯಾರಿಸಬಹುದಾಗಿದೆ. ಈ ಮೋದಕವನ್ನು ಅರ್ಧ ಗಂಟೆಯ ಒಳಗಾಗಿ ತಯಾರಿಸಬಹುದು. ಸ್ವೀಟ್ ಮೋದಕ ಮಾಡಲು ಬೇಕಾಗುವ ಸಾಮಗ್ರಿ ಏನು, ಇದನ್ನು ಮಾಡುವುದು ಹೇಗೆ ಎಂದು ನೋಡೋಣ:
Recipe By: Reena TK
Recipe Type: Sweet
Serves: 3-4
-
ಬೇಕಾಗುವ ಸಾಮಗ್ರಿ
ಅಕ್ಕಿ ಹಿಟ್ಟು 250 ಗ್ರಾಂ
ನೀರು 500ml
ಸಕ್ಕರೆ 100ಗ್ರಾಂ
ಸ್ಟ್ರಾಬೆರ್ರಿ ಪಲ್ಪ್ 100ml
ತುಪ್ಪ 25ಗ್ರಾಂ
-
ಮಾಡುವ ವಿಧಾನ:
* ದಪ್ಪ ತಳವಿರುವ ಪ್ಯನ್ ತೆಗೆದುಕೊಂಡು ಅದಕ್ಕೆ ತುಪ್ಪ, ಸ್ಟ್ರಾಬೆರ್ರಿ ಪಲ್ಪ್, ಸಕ್ಕರೆ, ನೀರು ಹಾಕಿ ಕುದಿಯಲು ಇಡಿ.
* ನೀರು ಕುದಿಯಲು ಪ್ರಾರಂಭಿಸಿದಾಗ ಅಕ್ಕಿ ಹಿಟ್ಟು ಹಾಕಿ ಕಲೆಸಿ. ಅಕ್ಕಿ ಹಿಟ್ಟು ಗಂಟು ಕಟ್ಟದಂತೆ ಅಕ್ಕಿ ಹಿಟ್ಟು ಸುರಿಯುವಾಗ ಸೌಟ್‌ನಿಂದ ಆಡಿಸುತ್ತಾ ಇರಬೇಕು. ಹಿಟ್ಟು ಚೆನ್ನಾಗಿ ಮಿಕ್ಸ್ ಆಗಿ ಮೃದುವಾದ ಬಳಿಕ ಉರಿಯಿಂದ ಇಳಿಸಿ.
* ನಂತರ ಹಿಟ್ಟು ಸ್ವಲ್ಪ ತಣ್ಣಗಾದ ಮೇಲೆ ಚಿಕ್ಕ-ಚಿಕ್ಕ ಉಂಡೆಗಳನ್ನು ಕಟ್ಟಿ, ಮೋದಕ ತಯಾರಿಸಿ.
* ಮೋದಕವನ್ನು ನಿಮಗೆ ಬೇಕಾದ ಆಕಾರದಲ್ಲಿ ತಯಾರಿಸಿ, ತಣ್ಣಗಾಗಲು ಬಿಡಿ. ಇಷ್ಟು ಮಾಡಿದರೆ ಸ್ವೀಟ್ ಮೋದಕ ರೆಡಿ.
- ಮೋದಕ ತಯಾರಿಸಿ ಫ್ರಿಡ್ಜ್‌ನಲ್ಲಿ ಇಡಿ, ತುಂಬಾ ಹೊತ್ತು ಇಡಬೇಡಿ, ಗಟ್ಟಿಯಾಗುವುದು
- ಸರ್ವ್: - 1 ಪೀಸ್
- ಕ್ಯಾಲೋರಿ: - 180 ಕ್ಯಾ
- ಕೊಬ್ಬು: - 8 ಗ್ರಾಂ
- ಪ್ರೊಟೀನ್ 2 ಗ್ರಾಂ - 2 ಗ್ರಾಂ
- ಕಾರ್ಬೋಹೈಡ್ರೇಟ್ಸ್ - 40ಗ್ರಾಂ
- ಸಕ್ಕರೆ - 35ಗ್ರಾಂ
- ಡಯಟರಿ ಫೈಬರ್ - 2ಗ್ರಾಂ



Click it and Unblock the Notifications