Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ವಾರೆವ್ಹಾ! ರುಚಿ ಹೇಗಿದೆ ಅಂದ್ರೆ, ಎಲ್ಲರೂ ಮತ್ತೆ ಮತ್ತೆ ಕೇಳ್ತಾರೆ; 5 ನಿಮಿಷಗಳಲ್ಲಿ ಈ ಚಾಟ್ ರೆಡಿ
ಸ್ವೀಟ್ ಕಾರ್ನ್ (ಮೆಕ್ಕೆಜೋಳ) ರುಚಿಗೆ ಮಾತ್ರವಲ್ಲ. ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅದಕ್ಕಾಗಿಯೇ, ನಿಮ್ಮ ಆಹಾರದಲ್ಲಿ ಸ್ವೀಟ್ ಕಾರ್ನ್ (Sweet Corn) ಇದ್ದರೆ ಅನೇಕ ಆರೋಗ್ಯ ಸಮಸ್ಯೆಗಳು ದೂರ ಆಗುತ್ತವೆ. ಹೌದು, ಸ್ವೀಟ್ ಕಾರ್ನ್ ತಿನ್ನುವುದರಿಂದ ಲೆಕ್ಕವಿಲ್ಲದಷ್ಟು ಲಾಭಗಳಿವೆ. ನೀವು ಇದನ್ನು ಸ್ವೀಟ್ ಕಾರ್ನ್ ಚಾಟ್ ಆಗಿಯೂ ತಿನ್ನಬಹುದು. ಇದಕ್ಕೆ ಸ್ವೀಟ್ ಕಾರ್ನ್ ಮತ್ತು ಸೌತೆಕಾಯಿ ಇದ್ದರೆ ಸಾಕು. ಕೇವಲ 5 ನಿಮಿಷಗಳಲ್ಲಿ ಆರೋಗ್ಯಕರ ಚಾಟ್ ರೆಡಿ (Sweet Corn Chat Recipe) ಮಾಡಬಹುದು. ಇದರ ರುಚಿ ಹೇಗಿರುತ್ತೆ ಎಂದರೆ ಎಲ್ಲರೂ ಮತ್ತೆ ಮತ್ತೆ ಕೇಳುತ್ತಾರೆ. ಇದನ್ನು ಮಕ್ಕಳ ಊಟದ ಬಾಕ್ಸ್ಗೆ ಬಳಸಬಹುದು. ಒಂದು ವೇಳೆ ಸಂಜೆ ಇದ್ದಕ್ಕಿದ್ದಂತೆ ಅತಿಥಿಗಳು ಬಂದರೆ, ಅವರಿಗೂ ಇದನ್ನು ನೀಡಬಹುದು.
ಕೆಲಸದಿಂದ ಬಂದಾಗ ಸಂಜೆ ಹಸಿವು ಸಾಮಾನ್ಯ. ಶಾಲೆಯಿಂದ ಮಕ್ಕಳ ಹಸಿವು ನೀಗಿಸಲು ಬೇಗನೆ ಏನು ಮಾಡಬೇಕು ಎಂಬುದು ಎಲ್ಲರ ಚಿಂತೆ. ಈ ಪರಿಸ್ಥಿತಿಯಲ್ಲಿ, ಬಹುತೇಕರು ಹೊರಗಡೆ ಸಿಗುವ ಆಹಾರವನ್ನು ಕೇಳುತ್ತಾರೆ. ಅದು ಆರೋಗ್ಯಕ್ಕೆ ಒಳ್ಳೆಯದಲ್ಲ. ಈ ಸಮಯದಲ್ಲಿ, ಮನಸ್ಸಿನಲ್ಲಿ ಬರುವ ಪ್ರಶ್ನೆಯೆಂದರೆ ಏನು ಮಾಡಬೇಕು? ಮುಖ್ಯವಾಗಿ ಬೇಗ ಮತ್ತು ಆರೋಗ್ಯಕರವಾಗಿ ಏನನ್ನು ತಯಾರಿಸಬೇಕು? ಎಂಬ ಚಿಂತೆ. ಇಂದು ನಾವು ಈ ಮನೆಯಲ್ಲಿಯೇ ಇರುವ ವಸ್ತುಗಳನ್ನು ಬಳಸಿ, ಬೇಗನೇ ಆರೋಗ್ಯಕರ ಚಾಟ್ ಅನ್ನು ಹೇಗೆ ತಯಾರಿಸಬಹುದು ಎಂಬುವುದನ್ನು ತಿಳಿಸುತ್ತೇವೆ. ಇದನ್ನು ನೀವು ಒಮ್ಮೆ ಮಾಡಿದರೆ, ಎಲ್ಲರೂ ಸಂತೋಷಪಡುತ್ತಾರೆ.

ಸ್ವೀಟ್ ಕಾರ್ನ್ ತಯಾರಿಸಕು ಬೇಕಾಗುವ ಸಾಮಗ್ರಿಗಳು
- ಸೌತೆಕಾಯಿ
- ಪಫ್ಡ್
- ಸಿಹಿ ಕಾರ್ನ್ ( ಸ್ವೀಟ್ ಕಾರ್ನ್)
- ಹೆಸರುಬೇಳೆ
- ಈರುಳ್ಳಿ
- ಹಸಿ ಮೆಣಸಿನಕಾಯಿ
- ಕೊತ್ತಂಬರಿ ಸೊಪ್ಪು
- ಚಾಟ್ ಮಸಾಲ
- ರುಚಿಗೆ ತಕ್ಕಷ್ಟು ಉಪ್ಪು
- ಹುರಿದ ಕಡಲೆಕಾಯಿ
- ರುಚಿಗೆ ತಕ್ಕಷ್ಟು ಕಪ್ಪು ಉಪ್ಪು
- ನಿಂಬೆಹಣ್ಣು
ಸ್ವೀಟ್ ಕಾರ್ನ್ ತಯಾರಿಸುವ ವಿಧಾನ
ಮೊದಲು, 250 ಗ್ರಾಂ ಸ್ವೀಟ್ ಕಾರ್ನ್ (ಸಿಹಿ ಜೋಳ) ತೆಗೆದುಕೊಳ್ಳಿ. ಅದನ್ನು ಕುದಿಸಿ. ಬಳಿಕ ತಣ್ಣೀರಿನಿಂದ ತೊಳೆದು ಪಕ್ಕಕ್ಕೆ ಇಡಿ. ಈಗ ದಪ್ಪ ತಳವಿರುವ ಪಾತ್ರೆಯನ್ನು ತೆಗೆದುಕೊಳ್ಳಿ. ಅದರಲ್ಲಿ ಎಲ್ಲಾ ವಸ್ತುಗಳನ್ನು ಒಂದೊಂದಾಗಿ ಹಾಕಿ ಮಿಕ್ಸ್ ಮಾಡಿ. ಮೊದಲು ಸ್ವೀಟ್ ಕಾರ್ನ್ ಹಾಕಬೇಕು. 100 ಗ್ರಾಂ ಸೌತೆಕಾಯಿ ಹಾಕಿ. ಸಣ್ಣಗೆ ಹೆಚ್ಚಿದ ಒಂದು ಹಸಿ ಮೆಣಸಿನಕಾಯಿ ಮತ್ತು 100 ಗ್ರಾಂ (ಹೆಸರುಬೇಳೆ) ಹೆಸರುಕಾಳು ಹಾಕಿ.
ಇದಾದ ಬಳಿಕ ಎರಡು ಚಿಟಿಕೆ ಚಾಟ್ ಮಸಾಲ ಮತ್ತು ಎರಡು ಸಣ್ಣಗೆ ಹೆಚ್ಚಿದ ಈರುಳ್ಳಿ ಮಿಕ್ಸ್ ಮಾಡಿ. ಈಗ ಎಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿ. ರುಚಿಗೆ ತಕ್ಕಷ್ಟು ಕಪ್ಪು ಉಪ್ಪು ಬೆರಸಿ. ಈಗ ಅದಕ್ಕೆ ನಿಂಬೆ ಹಣ್ಣಿನ ರಸ ಸೇರಿಸಿ, ಸಣ್ಣಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪು ಹಾಕಿ. ನೀವು ಇದಕ್ಕೆ ಮೊಸರು ಸೇರಿಸಬಹುದು. ಇದು ಚಾಟ್ಗೆ ಹೊಸ ರುಚಿಯನ್ನು ನೀಡುತ್ತದೆ. ಮತ್ತು ಅದು ಮೊಸರು ಸಿಹಿ ಕಾರ್ನ್ ಚಾಟ್ ಆಗುತ್ತದೆ. ಇದಾದ ಬಳಿಕ. ಮತ್ತು 20 ಗ್ರಾಂ ಹುರಿದ ಕಡಲೆಕಾಯಿ ಪುಡಿಮಾಡಿ ಅದಕ್ಕೆ ಬೆರಸಿ. ಇದು ಹೆಚ್ಚು ರುಚಿಕರವಾಗಿರುತ್ತದೆ. ಇಷ್ಟು ಮಾಡಿದರೆ, ರುಚಿಕರವಾದ ಮತ್ತು ಆರೋಗ್ಯಕರವಾದ ಸ್ವೀಟ್ ಕಾರ್ನ್ ಸವಿಯಲು ಸಿದ್ದವಾಗುತ್ತದೆ.
ಮಲಬದ್ಧತೆ, ಗ್ಯಾಸ್ ಮತ್ತು ಅಸಿಡಿಟಿ ಸಮಸ್ಯೆ ನಿವಾರಣೆ
ಮೆಕ್ಕೆಜೋಳದಲ್ಲಿ (ಸ್ವೀಟ್ಕಾರ್ನ್) ಫೈಬರ್ ಅಂಶ ಸಮೃದ್ಧವಾಗಿದೆ. ಮಲಬದ್ಧತೆ ಮತ್ತು ಪೈಲ್ಸ್ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಸ್ವೀಟ್ಕಾರ್ನ್ ಉತ್ತಮ ಪರಿಹಾರ. ಇದರಲ್ಲಿ ಆ್ಯಂಟಿಆಕ್ಸಿಡೆಂಟ್ ಅಧಿಕವಿದೆ. ಇದು ಕ್ಯಾನ್ಸರ್ ಉಂಟುಮಾಡುವ ಸ್ವತಂತ್ರ ರಾಡಿಕಲ್ಗಳನ್ನು ತಡೆಯುತ್ತೆ. ಸ್ತನ ಮತ್ತು ಯಕೃತ್ತಿನ ಕ್ಯಾನ್ಸರ್ ಅನ್ನು ತಡೆಗಟ್ಟುವ ಉತ್ಕರ್ಷಣ ನಿರೋಧಕಗಳು ಇವೆ. ಸ್ವೀಟ್ ಕಾರ್ನ್ ತಿಂದರೆ ಅಸಿಡಿಟಿ ಸಮಸ್ಯೆಗೆ ಮುಕ್ತಿ ಸಿಗುತ್ತೆ. ಇದನ್ನು ಒಮ್ಮೆ ಟ್ರೈ ಮಾಡಿ, ನೀವು ಸಹ ವಾರೆವ್ಹಾ ಅಂತೀರಿ!



Click it and Unblock the Notifications