Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ರೆಸಿಪಿ: ಆಹಾ! ಯಾರಿಗೆ ತಾನೆ ಇಷ್ಟವಾಗಲ್ಲ ಸುಟ್ಟ ಬದನೆಕಾಯಿ ಗೊಜ್ಜು
ಸುಟ್ಟ ಬದನೆಕಾಯಿ ಗೊಜ್ಜು ಎಂದರೆ ಅದನ್ನು ಟೇಸ್ಟ್ ಮಾಡಿದ ಎಲ್ಲರಿಗೂ ಅದನ್ನು ನೋಡುವಾಗಲೇ ಬಾಯಲ್ಲಿ ನೀರು ಬರುತ್ತದೆ, ನೀವು ಇದುವರೆಗೆ ಟೇಸ್ಟ್ ಮಾಡಿಯೇ ಇಲ್ಲ ಎಂದರೆ ಇದನ್ನು ಟೇಸ್ಟ್ ಮಾಡಲೇಬೇಕು, ಇಷ್ಟ ಆಗಿಲ್ಲ ಅಂತ ಯಾರೂ ಹೇಳಲ್ಲ, ಅಷ್ಟೊಂದು ರುಚಿಯಾಗಿರುತ್ತದೆ. ನೀವು ಬೇಕಿದ್ದರೆ ಬದನೆಕಾಯಿ ಸುಟ್ಟು, ಅದಕ್ಕೆ ಹುಳಿ, ಉಪ್ಪು, ಹಸಿ ಮೆಣಸು ಮಿಕ್ಸ್ ಮಾಡಿ ಕೂಡ ಸೇವಿಸಬಹುದು. ಬನ್ನಿ ಸುಟ್ಟ ಬದನೆಕಾಯಿ ಗೊಜ್ಜು ಮಾಡುವುದು ಹೇಗೆ ಎಂದು ನೋಡೋಣ:

ಬೇಕಾಗುವ ಸಾಮಗ್ರಿ
1 ದೊಡ್ಡ ಬದನೆಕಾಯಿ
10 ಒಣಮೆಣಸು
ಸ್ವಲ್ಪ ಹುಣಸೆಹಣ್ಣು
1 ಚಮಚ ಉದ್ದಿನ ಬೇಳೆ
ಸ್ವಲ್ಪ ಇಂಗು
ಸ್ವಲ್ಪ ಬೆಲ್ಲ
ಉಪ್ಪು
2 ಚಮಚ ಎಣ್ಣೆ
ಮಾಡುವ ವಿಧಾನ
* ಮೊದಲಿಗೆ ಬದನೆಕಾಯಿಯನ್ನು ತೊಳೆಯಿರಿ
* ನಂತರ ಬದನೆಕಾಯಿ ಸಿಪ್ಪೆ ಮೇಲೆ ಎಣ್ಣೆ ಸವರಿ
* ನಂತರ ಸ್ಟೌವ್ ಮೇಲೆ ಮೆಟಲ್ ಸ್ಕ್ವಿವರ್ ಇಡಿ. '
* ಡೈರಕ್ಟ್ ಆಗಿ ಬೇಕಾದರೆ ಸುಡಬಹುದು, ಒಲೆಯಿದ್ದರೆ ಕೆಂಡದಲ್ಲಿ ಹಾಕಿ
ಸುಡಬಹುದು.
* ಬದನೆಕಾಯಿಯನ್ನು ಚೆನ್ನಾಗಿ ಸುಡಿ. ಇಲ್ಲದಿದ್ದರೆ ಅದರ ಸಿಪ್ಪೆ ಎದ್ದು
ಬರಲ್ಲ
* ನಂತರ ಸ್ಟೌವ್‌ನಿಂದ ತೆಗೆದು ಸ್ವಲ್ಪ ತಣ್ಣಗಾದ ಮೇಲೆ ಸಿಪ್ಪೆ ಸುಲಿಯಿರಿ
* ನಂತರ ಕೈಯಿಂದಲೇ ಹಿಸುಕಿ
* ನಂತರ ಪ್ಯಾನ್ ಬಿಸಿ ಮಾಡಿ ಸ್ವಲ್ಪ ಎಣ್ಣೆ ಹಾಕಿ ಅದರಲ್ಲಿ ಒಣಮೆಣಸು, ಉದ್ದಿನ
ಬೇಳೆ, ಇಂಗು ಹಾಕಿ ಸ್ವಲ್ಪ ಹೊತ್ತು ಫ್ರೈ ಮಾಡಿ.
* ನಂತರ ಸ್ವಲ್ಪ ಹುಣಸೆಹಣ್ಣು, ರುಚಿಗೆ ತಕ್ಕ ಉಪ್ಪು ಸೇರಿಸಿ ಸ್ವಲ್ಪ ರುಬ್ಬಿ,
ಕೊನೆಗೆ ಬದನೆಕಾಯಿ ಹಾಕಿ ಒಂದು ರೌಂಡ್ ತಿರುಗಿಸಿದರೆ ಸಾಕು.
ಸಲಹೆ: ತುಂಬಾ ನುಣ್ಣನೆ ರುಬ್ಬಿ
* ಬದನೆಕಾಯಿಯ ಎಲ್ಲಾ ಕಡೆ ಚೆನ್ನಾಗಿ ಬೆಂದಿರಬೇಕು. ಇಲ್ಲದಿದ್ದರೆ ರುಚಿ
ಚೆನ್ನಾಗಿರಲ್ಲ. ರುಚಿ ಕಹಿ ಬರುತ್ತೆ, ಆದ್ದರಿಂದ ಬದನೆಕಾಯಿ ಚೆನ್ನಾಗಿ
ಬೆಂದಿರಬೇಕು.
* ತುಂಬಾ ಖಾರ ಬೇಕೆಂದರೆ ಒಣ ಮೆಣಸು ಅಧಿಕ ಸೇರಿಸಬಹುದು.
* ಒಣಮೆಣಸು ಫ್ರೈ ಮಾಡುವಾಗಲೇ ಹುಣಸೆಹಣ್ಣು ಹಾಕಬಹುದು
* ನೀರು ಸೇರಿಸದೆ ರುಬ್ಬಬೇಕು.



Click it and Unblock the Notifications