Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಬೇಸಿಗೆ ರೆಸಿಪಿ: ಬೆಂಡೆಕಾಯಿ-ಮಜ್ಜಿಗೆ ಸಾರು, ರುಚಿಗೂ ಸೂಪರ್, ದೇಹಕ್ಕೂ ಒಳ್ಳೆಯದು
ಬೇಸಿಗೆಯಲ್ಲಿ ನಾವು ಮಾಡುವ ಅಡುಗೆ ಬೇಸಿಗೆ ಕಾಲಕ್ಕೆ ಸೂಕ್ತವಾಗುವಂತೆ ಇರಬೇಕು, ದೇಹವನ್ನು ತಂಪಾಗಿಡಬೇಕು ಹಾಗೂ ತುಂಬಾನೇ ಖಾರ ಇರಬಾರದು, ಬೇಸಿಗೆಯಲ್ಲಿ ಜೀರ್ಣಕ್ರಿಯೆಗೆ, ಮೈಯನ್ನು ತಂಪಾಗಿಡಲು ಈ ಮಜ್ಜಿಗೆ ಸಾರು ತುಂಬಾನೇ ಒಳ್ಳೆಯದು.

ಬೇಕಾಗುವ ಸಾಮಗ್ರಿ
ಬೆಂಡೆಕಾಯಿ ಅರ್ಧ ಕೆಜಿ
ತೆಂಗಿನ ತುರಿ (ಅರ್ಧ ತೆಂಗಿನಕಾಯಿ)
1 ಚಮಚ ಬೆಳ್ತಕ್ಕಿ
ಹಸಿಮೆಣಸು 4
ಮೊಸರು 1 ಕಪ್
ಅರಿಶಿಣ ಪುಡಿ 1 ಚಮಚ
ಚಿಟಿಕೆಯಷ್ಟು ಇಂಗು
ಸಾಸಿವೆ
1/2 ಚಮಚ ಮೆಂತೆ
ತೆಂಗಿನೆಣ್ಣೆ 2 ಚಮಚ (ಯಾವುದೇ ಅಡುಗೆಯೆಣ್ಣೆ ಬಳಸಬಹುದು)
ಕರಿಏವು
ಒಣಮೆಣಸು
ರುಚಿಗೆ ತಕ್ಕ ಉಪ್ಪು (1 ಚಿಕ್ಕ ಚಮಚ)
ಮೊಸರು ಅಥವಾ ಮಜ್ಜಿಗೆ (ಮೊಸರು ಆದರೆ ಸ್ವಲ್ಪ ನೀರು ಹಾಕಿ ರುಬ್ಬಿಕೊಳ್ಳಿ)
ಮಾಡುವ ವಿಧಾನ
- ಅಕ್ಕಿ ನೀರು ಸೋಸಿ, ನೆನಸಿದ ಅಕ್ಕಿ ಹಾಗೂ ತೆಂಗಿನ ತುರಿ, ಹಸಿ ಮೆಣಸಿನ ಕಾಯಿ, ಸ್ವಲ್ಪ ಜೀರಿಗೆ ಹಾಕಿ ನುಣ್ಣನೆ ರುಬ್ಬಿಕೊಳ್ಳಿ. ಪೇಸ್ಟ್ ಗಟ್ಟಿಯಾಗಿರಲಿ.
- ಈಗ ಪ್ಯಾನ್‌ಗೆ ಎಣ್ಣೆಹಾಕಿ ಬೆಂಡೆಕಾಯಿಯನ್ನು ಚೆನ್ನಾಗಿ ಫ್ರೈ ಮಾಡಿ, ಹೀಗೆ ಫ್ರೈ ಮಾಡುವಾಗ ಸ್ವಲ್ಪ ಉಪ್ಪು ಸೇರಿಸಿ, ಫ್ರೈ ಮಾಡಿ, ಆವಾಗ ಬೆಂಡೆಕಾಯಿ ಟೇಸ್ಟ್ ರುಚಿಯಾಗಿರುತ್ತದೆ, ಇಲ್ಲದೆ ಸಪ್ಪೆ ಅನಿಸುವುದು.
- ಈಗ ನೀವು ಅದೇ ಪ್ಯಾನ್‌ಗೆ ಎಣ್ಣೆ ಹಾಕಿ ಅದಕ್ಕೆ ಸಾಸಿವೆ ಹಾಕಿ, ಸಾಸಿವೆ ಚಟ್‌ಪಟ್ ಶಬ್ದ ಮಾಡುವಾಗ ಮೆಂತೆ ಹಾಕಿ, ಕರಿಬೇವು ಹಾಕಿ ನಂತರ ರುಬ್ಬಿದ ತೆಂಗಿನಕಾಯಿ ಹಾಕಿ.
- ನಂತರ ರುಚಿಗೆ ತಕ್ಕ ಉಪ್ಪು, ಸೇರಿಸಿ, ಸ್ವಲ್ಪ ಅರಿಸಿಣ ಪುಡಿ ಹಾಕಿ ಕುದಿಸಿ
- ಫ್ರೈ ಮಾಡಿದ ಮೇಲೆ ಬೆಂಡೆಕಾಯಿಯನ್ನು ಹಾಕಿ
- ನಂತರ ಉರಿಯಿಂದ ಇಳಿಸಿ.
- ಬಿಸಿ ಸ್ವಲ್ಪ ಕಡಿಮೆಯಾದಾಗ ಮಿಕ್ಸ್‌ಯಲ್ಲಿ ಒಂದು ಹಸಿ ಮೆಣಸು ಹಾಕಿ ಒಂದು ರೌಂಡ್ ತಿರುಗಿಸಿದ ಮೊಸರು ಸೇರಿಸಿ ಮುಚ್ಚಿಡಿ, ಇಷ್ಟು ಮಾಡಿದರೆ ರುಚಿ ರುಚಿಯಾದ ಬೆಂಡೆಕಾಯಿ -ಮಜ್ಜಿಗೆ ಸಾರು ರೆಡಿ.
- ಟಿಪ್ಸ್: ನೀವು ಬೆಂಡೆಕಾಯಿ ಹಾಕದೆ ಕೂಡ ತಯಾರಿಸಬಹುದು, ಬೆಂಡೆಕಾಯಿ ಹಾಕದೆ ಇದ್ದರೆ ಕುಡಿಯಲು ತುಂಬಾ ಟೇಸ್ಟ್ ಅನಿಸುವುದು.
- ನೀವು ಬೇಕಾದರೆ ಫ್ರೈ ಮಾಡಿದ ಬೆಂಡೆಕಾಯಿ ಬದಲಿಗೆ ಬೂದಿ ಕುಂಬಳಕಾಯಿ ಸೇರಿಸಬಹುದು.
- ಇದನ್ನು ಅನ್ನದ ಜೊತೆ ಸವಿಯಲು ತುಂಬಾನೇ ರುಚಿಯಾಗಿರುತ್ತದೆ.
- ಬೇಸಿಗೆಯಲ್ಲಿ ಮಜ್ಜಿಗೆ ಕುಡಿಯುವುದರಿಂದ ದೊರೆಯುವ ಪ್ರಯೋಜನಗಳು
- ದೇಹವನ್ನು ತಂಪಾಗಿ ಇಡುತ್ತದೆ
- ದೇಹವನ್ನು ತಂಪಾಗಿ ಇಡುವಲ್ಲಿ ಮಜ್ಜಿಗೆ ಸಹಾಯ ಮಾಡುತ್ತದೆ, ಆದ್ದರಿಂದ ಬೇಸಿಗೆಯಲ್ಲಿ ಮಜ್ಜಿಗೆಯನ್ನು ಸೇವಿಸಿ, ಈ ರೀತಿ ಸಾರು ಮಾಡಿ ಕೂಡ ಬಳಸಬಹುದು.
- ದೇಹದ ಉಷ್ಣಾಂಶ ನಿಯಂತ್ರಣದಲ್ಲಿರುತ್ತದೆ
ಅಸಿಡಿಟಿ ಕಡಿಮೆಯಾಗುವುದು
ಮಜ್ಜಿಗೆ ಅಸಿಡಿಟಿ ಸಮಸ್ಯೆ ಕಡಿಮೆಯಾಗುವುದು. ಆಗಾಗ ಅಸಿಡಿಟಿ ಸಮಸ್ಯೆ
ಕಾಡುತ್ತಿದ್ದರೆ ಮಜ್ಜಿಗೆ ಬಳಸಿ.
ರಕ್ತದೊತ್ತಡ ನಿಯಂತ್ರಣದಲ್ಲಿಡುತ್ತದೆ
ಮಜ್ಜಿಗೆ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು ಸಹಕಾರಿ. ಮಜ್ಜಿಗೆ ಪ್ರತಿನಿತ್ಯ
ತೆಗೆದುಕೊಳ್ಳುವುದರಿಂದ ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ.
ದೇಹಕ್ಕೆ ಅವಶ್ಯಕವಾದ ವಿಟಮಿನ್ಸ್ ದೊರೆಯಲಿದೆ
ಮಜ್ಜಿಗೆ ಕುಡಿಯುವುದರಿಂದ ವಿಟಮಿನ್ ಬಿ, ಅತ್ಯಧಿಕ ಪ್ರೊಟೀನ್ ಹಾಗೂ ಇತರ
ಪ್ರೊಟೀನ್ ಅಂಶ ದೊರೆಯುವುದು.
ತೂಕ ನಿಯಂತ್ರಣಕ್ಕೆ ಸಹಕಾರಿ
ಮಜ್ಜಿಗೆ ದೇಹಕ್ಕೆ ಅವಶ್ಯಕವಾದ ಪೋಷಕಾಂಶ ನೀಡುವುದು ಹಾಗೂ ಮೈ ತೂಕವನ್ನು
ನಿಯಂತ್ರಣದಲ್ಲಿಡಲು ಸಹಕಾರಿ.
ಬೆಂಡೆಕಾಯಿ:
ಬೆಂಡೆಕಾಯಿ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು, ಮಧುಮೇಹವನ್ನು ನಿಯಂತ್ರಣದಲ್ಲಿಡಲು ಸಹಕಾರಿ. ಇದರಲ್ಲಿ ವಿಟಮಿನ್ ಸಿ ಇರುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ, ಇದನ್ನು ಸೇವಿಸುವುದರಿಂದ ಉರಿಯೂತದ ಸಮಸ್ಯೆ ಕಡಿಮೆಯಾಗುವುದು. ರಕ್ತಹೀನತೆ ತಡೆಗಟ್ಟುತ್ತದೆ. ಗರ್ಭಿಣಿಯರು ಸೇವಿಸಿದರೆ ತಾಯಿ-ಮಗುವಿನ ಆರೋಗ್ಯಕ್ಕೆ ಒಳ್ಳೆಯದು.
ಈ ಸಾರಿನಲ್ಲಿ ನೀವು ಬೆಂಡೆಕಾಯಿ ಹಾಗೂ ಮಜ್ಜಿಗೆ ಮಿಕ್ಸ್ ಮಾಡುವುದರಿಂದ ಇಷ್ಟೆಲ್ಲಾ ಪ್ರಯೋಜನಗಳನ್ನು ಪಡೆಯಬಹುದು, ನೀವು ಟ್ರೈ ಮಾಡಿದ ಹೊಸ ರೆಸಿಪಿ ಕಮೆಂಟ್‌ನಲ್ಲಿ ಶೇರ್ ಮಾಡಬಹುದು.



Click it and Unblock the Notifications