Latest Updates
-
ಶನಿ-ಮಂಗಳನ ಚಲನೆಯಿಂದ ದ್ವಿ ದ್ವಾದಶ ಯೋಗ: ಈ ರಾಶಿಯವರಿಗೆ ಆಶೀರ್ವಾದ, ಹಣ ಲಾಭದ ನಿರೀಕ್ಷೆ -
ವಿಶ್ವದ ದುಬಾರಿ ಬಣ್ಣ ಇದು: 1 ಗ್ರಾಮ್ಗೆ ಬರೋಬ್ಬರಿ 80 ಸಾವಿರ ರೂ.! -
ಎಷ್ಟೇ ಹಠಮಾರಿ ಕಲೆಗಳಿದ್ದರೂ ಚಿಟಿಕೆಯಲ್ಲಿ ಮಾಯ! ಇಲ್ಲಿದೆ ಹಣ ಉಳಿಸುವ ಸಿಂಪಲ್ ಉಪಾಯ -
ಊಟ, ಮುದ್ದೆ ಸವಿಯೋಕೆ ಈ ರೀತಿ ಮಟನ್ ಸಾಂಬಾರ್ ಮಾಡಿ! -
10 ನಿಮಿಷದ ಸ್ನ್ಯಾಕ್ಸ್ ರೆಸಿಪಿ.. 1 ಕಪ್ ರವೆ, 1 ಬಾಳೆಹಣ್ಣು ಇದ್ದರೆ ಸಾಕು! 2 ದಿನ ಇಟ್ಟು ತಿನ್ನಬಹುದು -
Actor Vijay father S A Chandrasekhar old video about daughter in law Sangeetha is trending -
ಈ 4 ಬಗೆಯ ಜನರಿಗೆ ಎಂದಿಗೂ ಸಹಾಯ ಮಾಡಬೇಡಿ! ನಿಮ್ಮ ಒಳ್ಳೆಯತನವೇ ಮುಳುವಾಗುತ್ತೆ -
ನಿಶಕ್ತಿ, ಬಲಹೀನತೆ ಇದ್ರೆ ವಾರದಲ್ಲಿ ಈ 2 ಮುದ್ದೆ ತಿನ್ನಿ ಸಾಕು -
ಹೆಸರುಬೇಳೆ ಬಳಸಿ ಪಕೋಡ ಮಾಡಿ ಸವಿಯಿರಿ! ಇಲ್ಲಿವೆ ಶೆಫ್ ಸ್ಟೈಲ್ನ ಈ 2 ಸಿಂಪಲ್ ವಿಧಾನಗಳು -
ಮೀನ ರಾಶಿಯಲ್ಲಿ ಶುಕ್ರ-ಚಂದ್ರನ ಸಮ್ಮಿಲನ; ಅಪರೂಪದ ಕಲಾತ್ಮಕ ಯೋಗ ಸೃಷ್ಟಿ!
ಸಕ್ಕರೆ ಬೇಡ, ಬೆಲ್ಲವೂ ಬೇಡ! ಹೆಲ್ದಿ & ಶುಗರ್ ಫ್ರೀ ಗುಲಾಬ್ ಜಾಮೂನ್ ಮಾಡುವ ಸೀಕ್ರೆಟ್ ಇಲ್ಲಿದೆ
ಸಕ್ಕರೆ ಬೇಡ, ಬೆಲ್ಲವೂ ಬೇಡ! ಅತೀ ಆರೋಗ್ಯಕರ ಸಾಫ್ಟ್ ಗುಲಾಬ್ ಜಾಮೂನ್ ಮಾಡುವ ರಹಸ್ಯ ಇಲ್ಲಿದೆ. ಹೌದು, ನಮ್ಮಲ್ಲಿ ಅತಿ ಜನಪ್ರಿಯ ಸಿಹಿ ತಿಂಡಿಗಳಲ್ಲಿ ಗುಲಾಬ್ ಜಾಮೂನ್‌ಗೆ (Gulab Jamun for Diabetics) ಮೊದಲ ಸ್ಥಾನ. ಮದುವೆ, ಹಬ್ಬ ಅಥವಾ ಯಾವುದೇ ವಿಶೇಷ ಸಂದರ್ಭವಿರಲಿ, ಇದರ ರುಚಿ ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸುತ್ತದೆ. ಆದರೆ, ತಮ್ಮ ಆರೋಗ್ಯದ ಬಗ್ಗೆ ಕಾಳಜಿ ಹೊಂದಿರುವವರು ಮತ್ತು ಡಯಟ್ ಮಾಡುವವರು, ಇದರಲ್ಲಿರುವ ಸಕ್ಕರೆಯ ಪಾಕದ ಕಾರಣದಿಂದ ಇದನ್ನು ತಿನ್ನಲು ಹಿಂಜರಿಯುತ್ತಾರೆ.
ಅಂತಹವರಿಗಾಗಿಯೇ, ಸಾಂಪ್ರದಾಯಿಕ ರುಚಿಯನ್ನು ಉಳಿಸಿಕೊಂಡು, ಸಕ್ಕರೆ ಬಳಸದೆಯೇ ತಯಾರಿಸುವ ಹೆಲ್ದೀ ಗುಲಾಬ್ ಜಾಮೂನ್ (Sugar-Free Gulab Jamun) ರೆಸಿಪಿ ಇಲ್ಲಿದೆ. ಭಾರತೀಯ ಹಬ್ಬಗಳ ಆಚರಣೆ ಸಿಹಿ ತಿಂಡಿಗಳಿಲ್ಲದೆ ಅಪೂರ್ಣ. ಅದರಲ್ಲೂ ಬಿಸಿಬಿಸಿಯಾದ, ಮೃದುವಾದ ಗುಲಾಬ್ ಜಾಮೂನ್ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ? ಆದರೆ, ಸಕ್ಕರೆ ಅಂಶ ಹೆಚ್ಚಿರುತ್ತದೆ ಎಂಬ ಆತಂಕ ಮಧುಮೇಹಿಗಳಿಗೆ ಅಥವಾ ತೂಕ ಇಳಿಸುವವರಿಗೆ ಇಷ್ಟವಿದ್ದರೂ ಇದರಿಂದ ದೂರ ಉಳಿಯುವಂತೆ ಮಾಡುತ್ತದೆ.
ಈಗ ಈ ಚಿಂತೆಯನ್ನು ಬಿಟ್ಟುಬಿಡಿ! ಆರೋಗ್ಯದ ದೃಷ್ಟಿಯಿಂದ ಮತ್ತು ಹಬ್ಬದ ರುಚಿಯನ್ನು ಉಳಿಸಿಕೊಳ್ಳಲು ಸಕ್ಕರೆ ರಹಿತ ಅಥವಾ ಶುಗರ್ ಫ್ರೀ ಗುಲಾಬ್ ಜಾಮೂನ್ ನಿಜಕ್ಕೂ ಅದ್ಭುತ ಆಯ್ಕೆ. ಗುಲಾಬ್ ಜಾಮೂನ್ ತಯಾರಿಸಲು ಬೇಕಾಗುವ ಪದಾರ್ಥಗಳು ಮತ್ತು ಸರಳ ವಿಧಾನ (Gulab Jamun Recipe) ಇಲ್ಲಿದೆ.
ಗುಲಾಬ್ ಜಾಮೂನ್‌ಗೆ ಬೇಕಾಗುವ ಪದಾರ್ಥಗಳು
ಜಾಮೂನ್ ಉಂಡೆಗೆ
• ಖೋವಾ (ಸಕ್ಕರೆ ರಹಿತ ಮಾವಾ)
• ತುರಿದ ಪನೀರ್
• ಮೈದಾ
• ಬೇಕಿಂಗ್ ಸೋಡಾ
• ತುಪ್ಪ ಅಥವಾ ಎಣ್ಣೆ
ಶುಗರ್ ಫ್ರೀ ಪಾಕ
• ನೀರು
• ಶುಗರ್ ಫ್ರೀ ಪೌಡರ್ (ಸ್ವೀಡಿಯಾ ಅಥವಾ ಇತರ ನೈಸರ್ಗಿಕ ಸಿಹಿಕಾರಕ
ಬಳಸಬಹುದು)
• ಏಲಕ್ಕಿ (ಪುಡಿ ಮಾಡಿ)
• ಕೇಸರಿ ದಳಗಳು
ಜಾಮೂನ್ ತಯಾರಿಸುವ ವಿಧಾನ
- ಒಂದು ದೊಡ್ಡ ಪಾತ್ರೆಯಲ್ಲಿ ಖೋವಾ, ತುರಿದ ಪನೀರ್, ಮೈದಾ ಮತ್ತು ಬೇಕಿಂಗ್ ಸೋಡಾವನ್ನು ಸೇರಿಸಿ. ಈ ಮಿಶ್ರಣವನ್ನು ಚೆನ್ನಾಗಿ ಬೆರೆಸಿ, ಹದವಾದ ಮತ್ತು ಮೃದುವಾದ ಹಿಟ್ಟನ್ನು ತಯಾರಿಸಿ. ಹಿಟ್ಟು ಹೆಚ್ಚು ಗಟ್ಟಿಯೆನಿಸಿದರೆ, ನೀವು ಸ್ವಲ್ಪ ಹಾಲನ್ನು ಬಳಸಬಹುದು. ಆದರೆ ಹಿಟ್ಟು ಅತಿಯಾಗಿ ಮೆತ್ತಗಾಗದಂತೆ ಎಚ್ಚರ ವಹಿಸಿ.
- ಸಿದ್ಧಪಡಿಸಿದ ಹಿಟ್ಟಿನಿಂದ ಸಣ್ಣ ಸಣ್ಣ ಉಂಡೆಗಳನ್ನು ತಯಾರಿಸಿಕೊಳ್ಳಿ. ಉಂಡೆಗಳ ಮೇಲೆ ಯಾವುದೇ ಬಿರುಕುಗಳು ಇಲ್ಲದಂತೆ ನಯವಾಗಿರಲಿ. ಬಿರುಕುಗಳಿದ್ದರೆ, ಎಣ್ಣೆಯಲ್ಲಿ ಕರಿಯುವಾಗ ಜಾಮೂನ್ ಒಡೆಯುವ ಸಾಧ್ಯತೆ ಇರುತ್ತದೆ.
- ಈಗ, ಕಡಾಯಿಯಲ್ಲಿ ತುಪ್ಪ ಅಥವಾ ಎಣ್ಣೆಯನ್ನು ಕಡಿಮೆ ಉರಿಯಲ್ಲಿ ಬಿಸಿ ಮಾಡಿ. ಎಣ್ಣೆ ಹದವಾಗಿ ಬಿಸಿಯಾದ ನಂತರ ತಯಾರಿಸಿದ ಉಂಡೆಗಳನ್ನು ನಿಧಾನವಾಗಿ ಎಣ್ಣೆಗೆ ಬಿಡಿ. ಉರಿಯನ್ನು ಮಂದವಾಗಿಯೇ ಇರಿಸಿ, ಜಾಮೂನ್‌ಗಳು ಹೊಂಬಣ್ಣಕ್ಕೆ ತಿರುಗುವವರೆಗೆ ನಿಧಾನವಾಗಿ ಕರಿಯಿರಿ. ಜಾಮೂನ್‌ಗಳು ಒಳಗಿನವರೆಗೂ ಚೆನ್ನಾಗಿ ಬೆಂದಿರುವುದು ಮುಖ್ಯ.
- ಒಂದು ಪಾತ್ರೆಯಲ್ಲಿ 2 ಕಪ್ ನೀರನ್ನು ಹಾಕಿ ಕುದಿಯಲು ಬಿಡಿ. ಇದಕ್ಕೆ ಏಲಕ್ಕಿ ಪುಡಿ ಮತ್ತು ಕೇಸರಿ ದಳಗಳನ್ನು ಸೇರಿಸಿ. ನೀರು ಚೆನ್ನಾಗಿ ಕುದ್ದ ನಂತರ ಗ್ಯಾಸ್ ಆಫ್ ಮಾಡಿ.
- ಈಗ ನಿಮ್ಮ ರುಚಿಗೆ ತಕ್ಕಷ್ಟು ಶುಗರ್ ಫ್ರೀ ಪೌಡರ್ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. (ಗಮನಿಸಿ.. ಶುಗರ್ ಫ್ರೀ ಸಿಹಿಕಾರಕಗಳನ್ನು ನೀರು ಕುದಿಯುವಾಗ ಹಾಕುವ ಬದಲು, ಗ್ಯಾಸ್ ಆಫ್ ಮಾಡಿದ ಮೇಲೆ ಸೇರಿಸುವುದು ಉತ್ತಮ).
- ಕರಿದು ತೆಗೆದ ಬಿಸಿಬಿಸಿಯಾದ ಜಾಮೂನ್‌ಗಳನ್ನು ಉಗುರು ಬೆಚ್ಚಗಿನ ಶುಗರ್ ಫ್ರೀ ಪಾಕಕ್ಕೆ ಹಾಕಿ. ಪಾತ್ರೆಯನ್ನು ಮುಚ್ಚಿ 1 ರಿಂದ 2 ಗಂಟೆಗಳ ಕಾಲ ಹಾಗೆಯೇ ಬಿಡಿ. ಜಾಮೂನ್ ಸಂಪೂರ್ಣವಾಗಿ ಪಾಕವನ್ನು ಹೀರಿಕೊಂಡು ಮೃದುವಾಗಿ, ರುಚಿಕರವಾಗುತ್ತವೆ.
ಈ ಶುಗರ್ ಫ್ರೀ ಗುಲಾಬ್ ಜಾಮೂನ್ ಮಧುಮೇಹಿಗಳಿಗೆ ಅತ್ಯುತ್ತಮ ಆಯ್ಕೆ. ಏಕೆಂದರೆ, ಸಕ್ಕರೆ ಬದಲಿಗೆ ನೈಸರ್ಗಿಕ ಸಿಹಿಕಾರಕಗಳನ್ನು ಬಳಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ಏರುವುದಿಲ್ಲ. ಇದರಲ್ಲಿ ಖೋವಾ ಮತ್ತು ಪನೀರ್ ಇರುವುದರಿಂದ ಪ್ರೋಟೀನ್ ಹಾಗೂ ಕ್ಯಾಲ್ಸಿಯಂ ಹೇರಳವಾಗಿ ದೊರೆಯುತ್ತದೆ.
ಅಲ್ಲದೆ, ಸಕ್ಕರೆ ಪಾಕ ಇಲ್ಲದ ಕಾರಣ ಕ್ಯಾಲೋರಿಗಳ ಪ್ರಮಾಣವೂ ಗಣನೀಯವಾಗಿ ಕಡಿಮೆಯಾಗಿರುತ್ತದೆ. ಜಾಮೂನ್ ಸವಿಯುವ ಮೊದಲು ಸ್ವಲ್ಪ ಬಿಸಿ ಮಾಡಿ ಕೊಟ್ಟರೆ ಅದರ ರುಚಿ ಮತ್ತಷ್ಟು ಹೆಚ್ಚುತ್ತದೆ. ಈ ಬಾರಿ ಹಬ್ಬವನ್ನು ಆರೋಗ್ಯದ ಚಿಂತೆ ಇಲ್ಲದೆ, ಸಂಪೂರ್ಣವಾಗಿ ಎಂಜಾಯ್ ಮಾಡಿ.



Click it and Unblock the Notifications
