For Quick Alerts
ALLOW NOTIFICATIONS  
For Daily Alerts

ಮಡಹಾಗಲಕಾಯಿ ಪೋಡಿ ಬೋಂಡಾ

Posted By:
|

ಕರೋನಾ ಸಮಯದಲ್ಲಿ ಕರುಂಕುರುಂ ತಿಂಡಿಗಳನ್ನು ಹೊರಗಿನಿಂದ ತಂದು ತಿನ್ನುವುದಕ್ಕೂ ಭಯವಾಗುತ್ತದೆ. ಮೊದಲೆಲ್ಲಾ ಶಾಪಿಂಗ್ ಗೆ ಹೋದಾಗ, ಬೀದಿ ಸುತ್ತುವಾಗ ಅಲ್ಲೇ ಹತ್ತಿರದ ಬೋಂಡಾ ಅಂಗಡಿಗೆ ಎಂಟ್ರಿ ಕೊಟ್ಟು ಒಂದೆರಡು ಪ್ಲೇಟ್ ಭಜ್ಜಿ ಬೋಂಡಾ ತಿಂದು ಬಂದ್ರೆ ಮನಸ್ಸಿಗೆ ತೃಪ್ತಿ ಅನ್ನಿಸುತ್ತಿತ್ತು. ಆದರೆ ಈಗ ಹಾಗಿಲ್ಲ. ಹಾಗಂತ ತಿನ್ನದೇ ಇದ್ರೆ ಬಾಯಿ ಕೇಳುತ್ತದೆಯೇ? ಬಾಯಿ ತನ್ನ ಚಪಲವನ್ನು ಬಿಡುವುದಿಲ್ಲ. ಬಾಯಿಗೆ ತೃಪ್ತಿಯಾಗಬೇಕೆಂದರೆ ನೀವು ಮನೆಯಲ್ಲೇ ರುಚಿರುಚಿ ಅಡುಗೆ ಮಾಡಿಕೊಳ್ಳುವುದನ್ನು ಕಲಿಯಲೇಬೇಕು.

spiny gourd bonda

ಎಣ್ಣೆ ಬಾಣಲೆಗೆ ಸ್ವಲ್ಪ ಕೆಲಸ ಕೊಡಬೇಕಾ? ಹಾಗಿದ್ದರೆ ಈ ಸ್ಟೋರಿ ಪೂರ್ತಿ ಓದಿದರೆ ಖಂಡಿತ ಸಾಧ್ಯವಾಗುತ್ತದೆ. ರುಚಿರುಚಿಯಾದ ಮತ್ತು ಆರೋಗ್ಯಕ್ಕೂ ಹಿತವಾದ ರೆಸಿಪಿಯನ್ನು ನಾವಿಲ್ಲಿ ನಿಮಗೆ ತಿಳಿಸಿಕೊಡುತ್ತಿದ್ದೇವೆ. ಅದುವೆ ಮಡಹಾಗಲಕಾಯಿಯ ಪೋಡಿ ಅಂದರೆ ಕಾಡುಹಾಗಲ ಎಂದು ಕರೆಯುವ ಚಿಕ್ಕಚಿಕ್ಕದಾಗಿರುವ ಕಹಿ ಇಲ್ಲದ ಹಾಗಲಕಾಯಿಯ ಬೋಂಡಾ ರೆಸಿಪಿ.

spiny gourd bonda

ಹಾಗಲಕಾಯಿಯಲ್ಲೂ ಬೋಂಡಾವೇ ಎಂದು ಹುಬ್ಬೇರಿಸಬೇಡಿ. ತಿಂದರೆ ತಿನ್ನುತ್ತಲೇ ಇರಬೇಕು ಎನ್ನುವಷ್ಟು ಯಮ್ಮಿಯಾಗಿರುತ್ತದೆ ಇದು. ಹೌದು, ಶುಗರ್ ಇರುವವರೂ ಕೂಡ ಸೇವಿಸಬಹುದಾದ ಅಧ್ಬುತ ಅಡುಗೆ ಇದು. ಟೊಮೆಟೋ ಸಾರು, ಅನ್ನ ಮತ್ತು ಇದೊಂದು ಬೋಂಡಾವಿದ್ದರೆ ಊಟಕ್ಕೆ ಎರಡು ಕೈ ಸಾಲದು ಎಂಬಷ್ಟು ರುಚಿ. ಹಾಗಿದ್ದರೆ ಇದನ್ನು ತಯಾರಿಸುವುದು ಹೇಗೆ ನೋಡೋಣ.
Spiny Gourd Bonda Recipe/ ಮಡಹಾಗಲಕಾಯಿ ಪೋಡಿ ಬೋಂಡಾ
Spiny Gourd Bonda Recipe/ ಮಡಹಾಗಲಕಾಯಿ ಪೋಡಿ ಬೋಂಡಾ
Prep Time
15 Mins
Cook Time
5M
Total Time
20 Mins

Recipe By: Sushma

Recipe Type: Snacks

Serves: 4

Ingredients
  • ಬೇಕಾಗುವ ಸಾಮಗ್ರಿಗಳು

    ಅಕ್ಕಿ- 250 ಗ್ರಾಂ

    ಕೊತ್ತುಂಬರಿ- ಒಂದು ಸ್ಪೂನ್

    ಜೀರಿಗೆ- ಒಂದು ಸ್ಪೂನ್

    ಬ್ಯಾಡಗಿ ಕೆಂಪು ಮೆಣಸು- 8 ರಿಂದ 9

    ಅರಿಶಿನ- ಕಾಲು ಸ್ಪೂನ್

    ಇಂಗು- ಚಿಟಿಕೆ

    ಹುಣಸೆಹಣ್ಣು- ಒಂದು ಹುಣಸೆ ಗಾತ್ರ

    ಮಡಹಾಗಲಕಾಯಿ - ಅರ್ಧ ಕೆಜಿ

    ಉಪ್ಪು- ರುಚಿಗೆ ತಕ್ಕಷ್ಟು

    ಕೊಬ್ಬರಿ ಎಣ್ಣೆ - ಅರ್ಧ ಲೀಟರ್

Red Rice Kanda Poha
How to Prepare
  • ಮಾಡುವ ವಿಧಾನ:

    ಅಕ್ಕಿಯನ್ನು ಸುಮಾರು ಒಂದು ಘಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ.

    ನಂತರ ಚೆನ್ನಾಗಿ ತೊಳೆದು ನೀರು ತೆಗೆದು ಅಕ್ಕಿಗೆ ಜೀರಿಗೆ, ಕೊತ್ತುಂಬರಿ ಬೀಜ, ಇಂಗು, ಉಪ್ಪು, ಹುಣಸೆಹಣ್ಣು, ಕೆಂಪು ಮೆಣಸು, ಅರಿಶಿನ ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ.

    ಅರಿಶಿನ ಹೆಚ್ಚು ಹಾಕುವುದರಿಂದ ಬೋಂಡಾದ ಬಣ್ಣ ಹೆಚ್ಚು ಕೆಂಪು ಬರುವಂತೆ ಮಾಡಲು ಸಾಧ್ಯವಾಗುತ್ತದೆ.

    ಮಡಹಾಗಲಕಾಯಿಯನ್ನು ಚೆನ್ನಾಗಿ ತೊಳೆದು ವೃತ್ತಾಕಾರದ ಹೋಳುಗಳಾಗಿ ಕತ್ತರಿಸಿಕೊಳ್ಳಿ.

    ನಂತರ ಅಡುಗೆ ಎಣ್ಣೆಯನ್ನು ಬಿಸಿಗಿಟ್ಟು ರುಬ್ಬಿದ ಮಸಾಲೆಯಲ್ಲಿ ಹೋಳುಗಳನ್ನು ಅದ್ದಿ ಕರಿದರೆ ರುಚಿರುಚಿಯಾದ ಮಡಹಾಗಲ ಪೋಡಿ ಸಿದ್ಧವಾದಂತೆ.

    ಟೊಮೆಟೋ ಸಾರಿನ ಊಟಕ್ಕೆ ಇದು ಅಧ್ಬುತ ಸೈಡ್ಸ್ ಆಗಿರುತ್ತದೆ.

Instructions
  • ಮಡಹಾಗಲಕಾಯಿಯಲ್ಲಿ ವಿಟಮಿನ್ ಸಿ,ಅಲ್ಕಲಾಯ್ಡ್ಸ್,ಫ್ಲೆವನಾಯ್ಡ್ಸ್,ಗ್ಲೈಯೋಸೈಡ್ಸ್,ಅಮೈನೋ ಆಸಿಡ್ ಅಂಶಗಳಿರುತ್ತದೆ.ಲೆಕ್ಟಿನ್ಸ್,ಪ್ರೋಟೀನ್ಸ್, ದೊಡ್ಡ ಪ್ರಮಾಣದ ವಿಟಮಿನ್ ಗಳ ಆಗರ ಇದು.
Nutritional Information
  • ನೀರು - 7.7 g
  • ಕಾರ್ಬೋಹೈಡ್ರೇಟ್- - 7.7 g
  • ಫೈಬರ್ - - 3.0 g
[ 3.5 of 5 - 41 Users]
Story first published: Monday, August 31, 2020, 13:12 [IST]
X
Desktop Bottom Promotion