Latest Updates
-
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ
ಖಾರ ಪ್ರಿಯರಿಗೆ ಇಲ್ಲಿದೆ ಟೇಸ್ಟಿ ಮೊಟ್ಟೆ ಸಾರಿನ ರೆಸಿಪಿ
ಮೊಟ್ಟೆಯನ್ನು ನೀವು ಸಾವಿರಕ್ಕೂ ಹೆಚ್ಚು ಬಗೆಯಲ್ಲಿ ತಯಾರಿಸಬಹುದು. ಸಾಮಾನ್ಯ ಅಡುಗೆ ಗೊತ್ತಿರುವವರಿಗೂ ಒಂದು 5-6 ಬಗೆಯ ಮೊಟ್ಟೆ ರೆಸಿಪಿ ಗೊತ್ತಿರುತ್ತದೆ.
ಇನ್ನು ಪಾಕ ಪ್ರವೀಣರಿಗೆ ಇದರಿಂದ ನೂರಕ್ಕೂ ಹೆಚ್ಚು ಬಗೆಯ ರೆಸಿಪಿ ಗೊತ್ತಿರುತ್ತದೆ. ಮೊಟ್ಟೆ ಸಾರು ಅಥವಾ ಗ್ರೇವಿ ಮಾಡುವಾಗ ಅದಕ್ಕೆ ಬಳಸುವ ಮಸಾಲೆಯ ಹದ ಗೊತ್ತಿರಬೇಕು, ಇಲ್ಲಾಂದರೆ ಮೊಟ್ಟೆ ಸಾರು ರುಚಿಸಲ್ಲ.

ಇಲ್ಲಿ ನಾವು ನೀವು ಚಪಾತಿ, ತುಪ್ಪದನ್ನ ಮಾಡಿದಾಗ ಸೈಡ್ಡಿಶ್ ಆಗಿ ಸವಿಯಲು ರುಚಿಯಾದ ಗ್ರೇವಿ ಮಾಡ ಬಯಸುವುದಾದರೆ ಅದಕ್ಕೆ ಹೊಂದುವ ರೆಸಿಪಿ ನೀಡಿದ್ದೇವೆ ಈ ರೆಸಿಪಿ ತುಂಬಾ ಸರಳವಾಗಿದೆ ನೋಡಿ:
Recipe By: Reena TK
Recipe Type: Nonveg
Serves: 4
-
ಬೇಕಾಗುವ ಸಾಮಗ್ರಿ
ಮೊಟ್ಟೆ 4
ಈರುಳ್ಳಿ ಸಾಧಾರಣ ಗಾತ್ರದ್ದು 2
ಶುಂಠಿ-ಬೆಳ್ಳುಳ್ಳಿ ಪೇಸ್ಟ್ 2 ಚಮಚ
ಹಣ್ಣಾದ ಟೊಮೆಟೊ 4
ಅರಿಶಿಣ ಪುಡಿ 1/4 ಚಮಚ
ರುಚಿಗೆ ತಕ್ಕ ಉಪ್ಪು
ಒಂದು ಚಿಕ್ಕ ತುಂಡು ಬೆಲ್ಲ/1 ಚಮಚ ಸಕ್ಕರೆ
ಗರಂ ಮಸಾಲ ಪುಡಿ 1 ಚಮಚ
1 ಚಮಚ ಕೊತ್ತಂಬರಿ ಪುಡಿ
1 ಚಮಚ ಖಾರದ ಪುಡಿ (ನಿಮ್ಮ ರುಚಿಗೆ ತಕ್ಕಷ್ಟು)
1 ಇಂಚಿನಷ್ಟು ದೊಡ್ಡದಾದ ಚಕ್ಕೆ
2 ಚಕ್ಕೆ
ಸಾಸಿವೆ
ಕರಿಬೇವು ಸ್ವಲ್ಪ
ಎಣ್ಣೆ 2 ಚಮಚ
-
ಮಾಡುವ ವಿಧಾನ
* ಮೊದಲಿಗೆ ಮೊಟ್ಟೆಯನ್ನು ಬೇಯಿಸಿ.
* ಅದೇ ಸಮಯಕ್ಕೆ ಈರುಳ್ಳಿ ಕತ್ತರಿಸಿ ಪೇಸ್ಟ್ ಮಾಡಿ ಇಡಿ.
* ಟೊಮೆಟೊ ಕೂಡ ಕತ್ತರಿಸಿ ಪ್ರತ್ಯೇಕ ಪೇಸ್ಟ್ ಮಾಡಿ.
* ಈಗ ಪ್ಯಾನ್ಗೆ ಎಣ್ಣೆ ಹಾಕಿ ಬಿಸಿ ಮಾಡಿ, ಅದಕ್ಕೆ ಸಾಸಿವೆ ಹಾಕಿ ಚಟ್ಪಟ್ ಶಬ್ದ ಬರುವಾಗ ಚಕ್ಕೆ, ಲವಂಗ , ಕರಿಬೇವು ಹಾಕಿ. ನಂತರ ಪೇಸ್ಟ್ ಮಾಡಿದ ಈರುಳ್ಳಿ ಹಾಗೂ ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಹಾಕಿ 4-5 ನಿಮಿಷ ಫ್ರೈ ಮಾಡಿ.
* ಈಗ ಟೊಮೆಟೊ ಪೇಸ್ಟ್ ಹಾಕಿ ಮತ್ತೆ 5 ನಿಮಿಷ ಫ್ರೈ ಮಾಡಿ, ಹೀಗೆ ಫ್ರೈ ಮಾಡುವಾಗ ಉರಿ ಕಡಿಮೆ ಇರಲಿ. ಟೊಮೆಟೊ ಪೇಸ್ಟ್ ರೀತಿಯಾದಾಗ ಅದಕ್ಕೆ ಕೊತ್ತಂಬರಿ ಪುಡಿ, ಅರಿಶಿಣ ಪುಡಿ, ಖಾರದ ಪುಡಿ, ಸ್ವಲ್ಪ ಬೆಲ್ಲ ಅಥವಾಸಕ್ಕರೆ ಹಾಕಿ ಮಿಶ್ರ ಮಾಡಿ, ಈಗ ರುಚಿಗೆ ತಕ್ಕ ಉಪ್ಪು ಸೇರಿಸಿ ಮತ್ತೊಮ್ಮೆ ಮಿಶ್ರ ಮಾಡಿ.
* ಈಗ ಒಂದು ಕಪ್ ನೀರು ಹಾಕಿ ಮಿಶ್ರಣವನ್ನು ಕುದಿಸಿ. ಮಿಶ್ರಣ ಚೆನ್ನಾಗಿ ಕುದಿ ಬಂದು ಗಟ್ಟಿ ಗ್ರೇವಿಯಾಗಲಿ.
* ಆಗ ಮೊಟ್ಟೆಯನ್ನು ಕತ್ತರಿಸಿ ಹಾಕಿ ಮಿಶ್ರ ಮಾಡಿ ನಂತರ ಉರಿಯಿಂದ ಇಳಿಸಿದರೆ ಚಪಾತಿ, ತುಪ್ಪದನ್ನ ಜೊತೆ ಸವಿಯಲು ರುಚಿಯಾದ ಮೊಟ್ಟೆ ಗ್ರೇವಿ ರೆಡಿ.
- *ತುಂಬಾ ಹಣ್ನಾದ ಟೊಮೆಟೊ ಬಳಸಿ' *ಈರುಳ್ಳಿ ಚೆನ್ನಾಗಿ ರೋಸ್ಟ್ ಆಗಿರಬೇಕು' * ಎಣ್ಣೆ ಬದಲಿಗೆ ತುಪ್ಪ ಬಲಸಬಹುದು
- ಸರ್ವ್ - 1 ಮೊಟ್ಟೆ
- ಕ್ಯಾಲೋರಿ - 75ಕ್ಯಾ
- ಕೊಬ್ಬು - 5ಗ್ರಾಂ
- ಪ್ರೊಟೀನ್ - 7ಗ್ರಾಂ



Click it and Unblock the Notifications