Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಉರಿ ಬಿಸಿಲಿಗೆ ಸೇವಿಸಬೇಕು ಮಸಾಲೆ ಮಜ್ಜಿಗೆ: ಮಿಕ್ಸಿಯಲ್ಲಿ ಹಾಕದೆಯೂ ಮಾಡಬಹುದು
ಬೇಸಿಗೆಯಲ್ಲಿ ನಾವು ದೇಹವನ್ನು ತಂಪಾಗಿಸುವ ಆಹಾರ ತಿನ್ನುವುದು, ಪಾನೀಯ ಕುಡಿಯುವುದು ಮಾಡುವುದು ಒಳ್ಳೆಯದು. ಇನ್ನು ಮಜ್ಜಿಗೆ ಅದರಲ್ಲೂ ಮಸಾಲೆ ಮಜ್ಜಿಗೆ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಈ ಮಸಾಲೆ ಮಜ್ಜಿಗೆಯನ್ನು ಬೇಸಿಗೆಯಲ್ಲಿ ಬಳಸುವುದರಿಂದ ದೇಹದ ಉಷ್ಣಾಂಶ ಕ
ಈ ಮಸಾಲೆ ಮಜ್ಜಿಗೆಯನ್ನು ನೀವು ಬ್ಲೆಂಡರ್ ಬಳಸಿಯೂ ಮಾಡಬಹುದು, ಬ್ಲೆಂಡರ್ ಇಲ್ಲದೆಯೂ ಮಾಡಬಹುದು, ಬ್ಲೆಂಡರ್ ಬಳಸದೆ ಮಾಡುವ ಮಸಾಲೆ ಮಜ್ಜಿಗೆ ತುಂಬಾನೇ ರುಚಿಯಾಗಿರುತ್ತದೆ. ಈ ಮಸಾಲೆ ಮಜ್ಜಿಗೆಯನ್ನು ನೀವು ಬ್ಲೆಂಡರ್ನಲ್ಲಿ ಮಾಡಬಹುದು, ಬ್ಲೆಂಡರ್ ಇಲ್ಲ ಅಥವಾ ಕರೆಂಟ್ ಇಲ್ಲ ಅಂದ್ರೆ ಹಾಗೆಯೂ ಮಾಡಬಹುದು. ಬನ್ನಿ ಇದನ್ನು ಮಾಡುವ ವಿಧಾನ ನೋಡೋಣ:

ಬ್ಲೆಂಡರ್ ಬಳಸಿ ಮಸಾಲೆ ಮಜ್ಜಿಗೆ ಮಾಡುವ ವಿಧಾನ
ಬ್ಲೆಂಡರ್ಗೆ ಪ್ಲೇನ್ ಮೊಸರು 3/ ಕಪ್ ಸೇರಿಸಿ, ಮನೆಯಲ್ಲಿಯೇ ಮಾಡಿದ
ಮೊಸರಾದರೆ ಇನ್ನೂ ಒಳ್ಳೆಯದು.
ಈಗ ಸ್ವಲ್ಪ ಪುದೀನಾ, ಸ್ವಲ್ಪ ಕೊತ್ತಂಬರಿ ಸೊಪ್ಪು, ಸ್ವಲ್ಪ ಶುಂಠಿ,
ಚಿಟಿಕೆಯಷ್ಟು ಬ್ಲ್ಯಾಕ್ಸಾಲ್ಟ್, ಕಾಲು ಚಮಚಕ್ಕಿಂತಲೂ ಸ್ವಲ್ಪ ಕಡಿಮೆ ಉಪ್ಪು ,
1.2 ಚಮಚ ರೋಸ್ಟ್ ಮಾಡಿದ ಜೀರಿಗೆ ಪುಡಿ
ಇವುಗಳನ್ನು ಚೆನ್ನಾಗಿ ಬ್ಲೆಂಡ್ ಮಾಡಿ. ನಂತರ 3 ಲೋಟ... 1 ಲೋಟ ಮೊಸರು ಹಾಕಿದರೆ ಅದರ ಮೂರಷ್ಟು ನೀರು ಹಾಕಿ ಬ್ಲೆಂಡ್ ಮಾಡಿ.
ತುಂಬಾ ಗಟ್ಟಿ ಬೇಡವೆಂದರೆ ಒಂದು ಲೋಟ ಕೂಡ ಹೆಚ್ಚು ನೀರು ಹಾಕಬಹುದು. ಇದಕ್ಕೆ ಸ್ವಲ್ಪ ಐಸ್ಕ್ಯೂಬ್ಸ್ ಹಾಕಿ, ಅದಕ್ಕೆ ಜೀರಿಗೆ ಪುಡಿ ಹಾಕಿ, ಸರ್ವ್ ಮಾಡಿ.
ಬ್ಲೆಂಡರ್ನಲ್ಲಿ ಹಾಕದೆ ಮಸಾಲೆ ಮಜ್ಜಿಗೆ ಮಾಡುವುದು ಹೇಗೆ?
ಬೇಕಾಗುವ ಸಾಮಗ್ರಿ
3/4 ಕಪ್ ಮೊಸರು
1/2 ಚಮಚ ಚಾಟ್ ಮಸಾಲ
3/4 ಚಮಚ ರೋಸ್ಟ್ ಮಾಡಿದ ಜೀರಿಗೆ ಪುಡಿ
1/2 ಚಮಚ ಕಾಳು ಮೆಣಸಿನ ಪುಡಿ
ಸ್ವಲ್ಪ ಕೊತ್ತಂಬರಿ ಸೊಪ್ಪು
ಸ್ವಲ್ಪ ಪುದೀನಾ ಎಲೆ
ಇವೆಲ್ಲಾವನ್ನು ಒಂದು ದೊಡ್ಡ ಬೌಲ್ಗೆ ಹಾಕಿ ಒಂದು ದೊಡ್ಡ ಸೌಟ್ನಿಂದ ಚೆನ್ನಾಗಿ ಕದಡಬೇಕು.
ಈ ರೀತಿ ನೀವು 5-10 ನಿಮಿಷ ಕದಡಬೇಕು. ನಂತರ 3 ಲೋಟ ತಣ್ಣನೆಯ ನೀರು ಸೇರಿಸಿ, ಸ್ವಲ್ಪ ನಿಂಬೆರಸ ಹಿಂಡಿದರೆ ಮಸಾಲೆ ಮಜ್ಜಿಗೆ ರಡಿ.
ಮಸಾಲೆ ಮಜ್ಜಿಗೆ ಯಾವ ಪಾತ್ರೆಯಲ್ಲಿ ಇಡಬೇಕು?
ಮಸಾಲೆಯನ್ನು ಮಜ್ಜಿಗೆ ಯಾವುದೇ ಪಾತ್ರೆಯಲ್ಲಿ ಇಡಬಹುದು, ಆದರೆ ಮಣ್ಣಿನ
ಪಾತ್ರೆಯಲ್ಲಿ ಹಾಕಿಟ್ಟರೆ ಇನ್ನೂ ರುಚಿ, ಬೇಸಿಗೆಗೆ ಈ ಮಜ್ಜಿಗೆ ಕುಡಿದರೆ
ತುಂಬಾನೇ ರಿಲ್ಯಾಕ್ಸ್ ಅನಿಸುವುದು. ನೀವು ಇದನ್ನು ಒಂದು 10-11 ಗಂಟೆಗೆ ಮಾಡಿ
ಮಣ್ಣಿನ ಮಡಿಕೆಯಲ್ಲಿ ಮಧ್ಯಾಹ್ನ ಹೊತ್ತು ಕುಡಿಯುವಾಗ ಮಜ್ಜಿಗೆ ತುಂಬಾನೇ ತಂಪು
ಇರುತ್ತದೆ.
ಈ ಮಸಾಲೆ ಮಜ್ಜಿಗೆ ಕುಡಿಯುವುದರಿಂದ ದೊರೆಯುವ
ಪ್ರಯೋಜನಗಳು
ಬೇಸಿಗೆಯಲ್ಲಿ ಈ ಮಸಾಲೆ ಮಜ್ಜಿಗೆ ಕುಡಿಯವುದರಿಂದ ನಿರ್ಜಲೀಕರಣ ಅಂದರೆ ಮೈಯಲ್ಲಿ
ನೀರಿನಂಶ ಕಡಿಮೆಯಾಗುವುದನ್ನು ತಡೆಗಟ್ಟಬಹುದು.
ಎಲೆಕ್ಟ್ರೋಲೈಟ್ ಬ್ಯಾಲೆನ್ಸ್ ಮಾಡುತ್ತದೆ:
- ಈ ಮಸಾಲೆ ಮಜ್ಜಿಗೆ ಕುಡಿಯುವುದರಿಂದ ಸೆಕೆ ತಡೆಯಲು ಸಾಧ್ಯವಾಗುವು ಅಲ್ಲದೆ ಮೈ ಬೆವರುವುದು ಕಡಿಮೆಯಾಗುವುದು.
- ಈ ಮಸಾಲೆ ಮಜ್ಜಿಗೆಯಲ್ಲಿ ಕ್ಯಾಲ್ಸಿಯಂ, ವಿಟಮಿನ್ ಬಿ, ಪ್ರೊಟೀನ್ಸ್ ಅಧಿಕವಿರುತ್ತದೆ
- ಜೀರ್ಣಕ್ರಿಯೆಗೆ ಒಳ್ಳಯದು, ಇದರ ಜೀರಿಗೆ ಪುಡಿ ಕೂಡ ಇರುವುದರಿಂದ ದೇಹಕ್ಕೆ ಇನ್ನೂ ತಂಪು
- ಅಸಿಡಿಟಿ ಸಮಸ್ಯೆ ಕಡಿಮೆ ಮಾಡುತ್ತದೆ
- ಅಸಿಡಿಟಿ ಸಮಸ್ಯೆ ಇರುವವರು ಈ ಮಸಾಲೆ ಮಜ್ಜಿಗೆ ಕುಡಿಯುವುದರಿಂದ ಅಸಿಡಿಟಿ ಕಡಿಮೆಯಾಗುವುದು.
- ಅತ್ಯಧಿಕ ರಕ್ತದೊತ್ತಡ ನಿಯಂತ್ರಣದಲ್ಲಿಡಲು ಸಹಕಾರಿ



Click it and Unblock the Notifications