Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಅಯ್ಯಪ್ಪಸ್ವಾಮಿ ಪೂಜೆಗೆ ಅರವಣ ಪಾಯಸ ಮಾಡುವುದು ಹೇಗೆ?
ಜನವರಿ 14ಕ್ಕೆ ಮಕರವಿಳಕ್ಕು, ಈ ದಿನ ಅಯ್ಯಪ್ಪಸ್ವಾಮಿ ತನ್ನ ಭಕ್ತರಿಗೆ ನಕ್ಷತ್ರ ರೂಪದಲ್ಲಿ ದರ್ಶನ ನೀಡುತ್ತಾನೆ ಎಂಬುವುದು ನಂಬಿಕೆ, ಅದನ್ನು ಮಕರವಿಳಕ್ಕು ಎಂದು ಕರೆಯಲಾಗುವುದು ಈ ಮಕರವಿಳಕ್ಕು ದರ್ಶನ ಪಡೆಯಲೆಂದೇ ಲಕ್ಷಾಂತರ ಭಕ್ತರು ಕಠಿಣ ವ್ರತ ನಿಯಮ ಪಾಲಿಸಿ ಕೇರಳದ ಶಬರಿಮಲೆಗೆ ಭೇಟಿ ನೀಡುತ್ತಾರೆ.
ಜನವರಿ ಮಾಸವೆಂದರೆ ಅಯ್ಯಪ್ಪಸ್ವಾಮಿ ಪೂಜೆಯ ಸಮಯ. ಭಜನೆ, ಕಟ್ಟು ತುಂಬಿಸಿ ಹೋಗುವುದು ಹೀಗೆ ಧಾರ್ಮಿಕ ಪೂಜೆಗಳು ನಡೆಯುತ್ತಿರುತ್ತದೆ. ಈ ಪೂಜೆಯಲ್ಲಿ ನೀವು ಅರವಣ ಪಾಯಸ ತಯಾರಿಸಿ ನೈವೇದ್ಯವಾಗಿ ಅರ್ಪಿಸಬಹುದು.

ಅರವಣ ಪಾಯಸವೆಂಬುವುದು ಅಯ್ಯಪ್ಪಸ್ವಾಮಿ ಕ್ಷೇತ್ರದಲ್ಲಿ ದೊರೆಯುವ ವಿಶೇಷ ಪ್ರಸಾದವಾಗಿದೆ.ಇದೇ ರುಚಿಯಲ್ಲಿ ಮನೆಯಲ್ಲಿ ನಡೆಸುವ ಅಯ್ಯಪ್ಪಸ್ವಾಮಿ ಪೂಜೆಯಲ್ಲಿಯೂ ಪಾಯಸ ತಯಾರಿಸಬಹುದಾಗಿದ್ದು ಅದರ ರೆಸಿಪಿ ನೋಡಿ ಇಲ್ಲಿದೆ:
1 ಕಪ್ ಮಟ್ಟಾರೈಸ್
1 ಕಪ್ ತುಪ್ಪ2 ಕಪ್ ನೀರು
ಸ್ವಲ್ಪ ತೆಂಗಿನಕಾಯಿ ತುಂಡು(ಒಂದು ತೆಂಗಿನಕಾಯಿಯ ತುಂಡು)
ಬೆಲ್ಲ 1 ಕಪ್
ಒಣ ಶುಂಠಿ (ಪುಡಿ ಮಾಡಿದ್ದು 1/4 ಚಮಚ)
4-5 ಏಲಕ್ಕಿ
ನೀರು 3 ಕಪ್
ಅರವಣ ಪಾಯಸ ಮಾಡುವುದು ಹೇಗೆ?
- ನೀವು ಈ ಪಾಯಸ ಮಾಡಲು ಉರುಳಿ ಬಳಸಿ (ದಪ್ಪ ತಳವಿರುವ ಪಾತ್ರೆ)
- ಈಗ ಪಾತ್ರೆ ಬಿಸಿ ಮಾಡಿ ಅದಕ್ಕೆ ತುಪ್ಪ ಹಾಕಿ ಬಿಸಿ ಮಾಡಿ, ನಂತರ ತುಪ್ಪದಲ್ಲಿ ತೆಂಗಿಕಾಯಿ ತುಂಡುಗಳನ್ನು ಹಾಕಿ ಸ್ವಲ್ಪ ಕಂದು ಬಣ್ಣಕ್ಕೆ ಬರುವವರೆಗೆ ಫ್ರೈ ಮಾಡಿ ನಂತರ ತೆಗೆದು ತಟ್ಟೆಯಲ್ಲಿ ಹಾಕಿಡಿ.
- ಈಗ ಅದೇ ತುಪ್ಪಕ್ಕೆ ಮತ್ತಷ್ಟು ತುಪ್ಪ ಸೇರಿಸಿ ಅದರಲ್ಲಿ ಮಟ್ಟಾ ರೈಸ್ ಹಾಕಿ ಫ್ರೈ ಮಾಡಿ, ನಂತರ 3 ಕಪ್ ನೀರು ಸೇರಿಸಿ ಬೇಯಿಸಿ
- ಈಗ ಬೆಲ್ಲವನ್ನು ಸೇರಿಸಿ ( ಬೆಲ್ಲ ತುರಿದು ಅಥವಾ ಪುಡಿ ಮಾಡಿ ಸೇರಿಸಿ)
- ಏಲಕ್ಕಿ ಸೇರಿಸಿ
- ತುಪ್ಪ ಮಿಶ್ರಣದ ಮೇಲ್ಭಾಗದಲ್ಲಿ ತೇಲುವಷ್ಟು ಹೊತ್ತು ಬೇಯಿಸಿ. ಹೀಗೆ ಬೇಯಿಸುವಾಗ ತಳ ಹಿಡಿಯದಿರಲು ಆಆಗ ಸೌಟ್ನಿಂದ ಆಡಿಸುತ್ತಾ ಇರಿ.
- ಪಾಯಸ ಸ್ವಲ್ಪ ಮಂದವಾಗುವಾಗ ಉರಿಯಿಂದ ಇಳಿಸಿ ದೇವರಿಗೆ ನೈವೇದ್ಯವಿಟ್ಟು ನಂತರ ಸರ್ವ್ ಮಾಡಿ.
- ತಾಮ್ರದ ಕಡಾಯಿಯಲ್ಲಿ ಮಾಡಿದರೆ ಇನ್ನೂ ರುಚಿ, ಪಾಯಸದ ಸ್ವಾದ ತುಂಬಾ ಚೆನ್ನಾಗಿರುತ್ತದೆ.



Click it and Unblock the Notifications