Latest Updates
-
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ?
ತೆಂಗಿನೆಣ್ಣೆಯ ಸ್ವಾದದೊಂದಿಗೆ ಸ್ಪೆಷಲ್ ಚಿಕನ್ ಕರಿ
Recipes
oi-Reena TK
Posted By: Reena TK
ಇಲ್ಲಿ ತೆಂಗಿನೆಣ್ಣೆ ಬಳಸಿ ಮಾಡುವ ಸೂಪರ್ ರುಚಿಯ ಚಿಕನ್ ಕರಿ ರೆಸಿಪಿ ನೀಡಿದ್ದೇವೆ, ಚಿಕನ್ ಈ ರೀತಿ ತಿಂದರೆ ಬಾಡಿಹೀಟ್ ಕೂಡ ಆಗಲ್ಲ. ಇಂಥದ್ದೊಂದು ಕರಿ ನೀವು ಇದುವರೆಗೆ ಟೇಸ್ಟ್ ಮಾಡಿರಲ್ಲ, ರೆಸಿಪಿ ತುಂಬಾ ಸರಳವಾಗಿದೆ, ಒಮ್ಮೆ ಟ್ರೈ ಮಾಡಿ ನೋಡಿ, ಇದರ ರುಚಿಗೆ ನೀವಾಗುವಿರಿ ಫಿದಾ...

ಬೇಕಾಗುವ ಸಾಮಗ್ರಿ
ಚಿಕನ್ 1 ಕೆಜಿ
ಈರುಳ್ಳಿ 3-4
ಜಜ್ಜಿದ ಶುಂಠಿ 2 ಚಮಚ
ಜಜ್ಜಿದ ಬೆಳ್ಳುಳ್ಳಿ 2 ಚಮಚ
ತೆಂಗಿನೆಣ್ಣೆ
ಕರಿಬೇವು
ಅರಿಶಿಣ ಪುಡಿ
ಮೆಣಸಿನ ಪುಡಿ
ಗರಂ ಮಸಾಲ ಪುಡಿ
ಕಾಳು ಮೆಣಸಿನ ಪುಡಿ 1 ಚಮಚ
ರುಚಿಗೆ ತಕ್ಕ ಉಪ್ಪು
ಮಾಡುವ ವಿಧಾನ:
- ನೀವು ಸಾರು ಪಾತ್ರೆ ಬಿಸಿ ಮಾಡಿ ಅದಕ್ಕೆ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದಾಗ 3-4 ಈರುಳ್ಳಿ ಕತ್ತರಿಸಿದ್ದು ಸೇರಿಸಿ ಫ್ರೈ ಮಾಡಿ. ಈರುಳ್ಳಿಯನ್ನು ನಾವು ಬಿರಿಯಾನಿಗೆ ರೋಸ್ಟ್ ಮಾಡುವಂತೆ ರೋಸ್ಟ್ ಮಾಡಿ. ನಂತರ ಈರುಳ್ಳಿ ತೆಗೆದು ಒಂದು ಬೌಲ್‌ನಲ್ಲಿ ಹಾಕಿಡಿ
- ಈಗ ನೀವು ತೊಳೆದಿಟ್ಟ ಚಿಕನ್‌ಗೆ ಅರ್ಧ ಚಮಚ ಅರಿಶಿಣ ಪುಡಿ, ಒಂದು ಚಮಚ ಖಾರದ ಪುಡಿ (ನಿಮ್ಮ ಖಾರಕ್ಕೆ ತಕ್ಕಷ್ಟು), 1 ಚಮಚ ಕಾಳು ಮೆಣಸಿನ ಪುಡಿ, 1/4 ಚಮಚ ಗರಂ ಮಸಾಲ ಪುಡಿ ಹಾಗೂ ಸ್ವಲ್ಪ ಕರಿಬೇವು, ರುಚಿಗೆ ತಕ್ಕ ಉಪ್ಪು, 2 ಚಮಚ ಜಜ್ಜಿದ ಬೆಳ್ಳುಳ್ಳಿ, ಸ್ವಲ್ಪ ಜ್ಜಜಿದ ಶುಂಠಿ, 1 ಚಮಚ ತೆಂಗಿನೆಣ್ಣೆ , ನಂತರ ಎಣ್ಣೆಯಲ್ಲಿ ಫ್ರೈ ಮಾಡಿಟ್ಟ ಈರುಳ್ಳಿ, ರುಚಿಗೆ ತಕ್ಕ ಉಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
- ನೀವು ಈ ಮಸಾಲೆ ಮಿಕ್ಸ್ ಚಿಕನ್ ಅನ್ನು ಅರ್ಧ ಗಂಟೆ ಇಡಿ.
- ನಂತರ ಈರುಳ್ಳಿ ಫ್ರೈ ಮಾಡಿಟ್ಟ ಎಣ್ಣೆಗೆ ಸೇರಿಸಿ
- ಚಿಕನ್ ಮಿಕ್ಸ್ ಮಾಡಿಟ್ಟ ಪಾತ್ರೆಗೆ ಸ್ವಲ್ಪ ನೀರು ಸೇರಿಸಿ ಅದನ್ನು ಚಿಕನ್‌ಗೆ ಹಾಕಿ
- ನಂತರ ಮತ್ತೆ 2 ಚಮಚ ತೆಂಗಿನೆಣ್ಣೆ ಹಾಗೂ ಸ್ವಲ್ಪ ಕರಿಬೇವು ಹಾಕಿ ಬೇಯಿಸಿ. ಇಷ್ಟು ಮಾಡಿದರೆ ನೀವು ಇದುವರೆಗೆ ಟೇಸ್ಟ್ ಮಾಡಿರದ ಹೊಸ ರುಚಿಯಲ್ಲಿ ಈ ಚಿಕನ್ ಕರಿ ರೆಡಿಯಾಗಿರುತ್ತದೆ.
ರೆಡಿಯಾದ ಚಿಕನ್ ಕರಿಯನ್ನು ಅನ್ನ, ತುಪ್ಪದನ್ನ ಇವುಗಳ ಜೊತೆ ಸವಿಯಲು ತುಂಬಾನೇ ಚೆನ್ನಾಗಿರುತ್ತದೆ.
ಇತರ ಸಲಹೆ:
- ಈ ಚಿಕನ್ ರುಚಿ ಅಡಗಿರುವುದು ನೀವು ರೋಸ್ಟ್ ಮಾಡಿದ ಈರುಳ್ಳಿ ಹಾಗೂ ತೆಂಗಿನೆಣ್ಣೆಯಲ್ಲಿ, ಇತರ ಎಣ್ಣೆಯಲ್ಲಿ ಮಾಡಿದರೆ ತೆಂಗಿನೆಣ್ಣೆಯಲ್ಲಿ ಮಾಡಿದಷ್ಟು ಸ್ವಾದ ಅನಿಸಲ್ಲ. ತೆಂಗಿನೆಣ್ಣೆಯ ಸ್ವಾದ ಈ ಕರಿಗೆ ಹೊಸ ಟೇಸ್ಟ್, ಸುವಾಸನೆ ನೀಡುತ್ತದೆ, ಹಾಗಾಗಿ ಸಾರಿಗೆ ಬಳಸುವ ಶುದ್ಧ ತೆಂಗಿನೆಣ್ಣೆಯನ್ನೇ ಬಳಸಿ.
- ಈರುಳ್ಳಿಯನ್ನು ತೆಂಗಿನೆಣ್ಣೆಯಲ್ಲಿಯೇ ಕರಿಯಿರಿ
- ಚಿಕನ್‌ಗೆ ಮಸಾಲೆ ಮಿಕ್ಸ್ ಮಾಡುವಾಗ ತೆಂಗಿನೆಣ್ಣೆ ಸೇರಿಸಬೇಕು
- ನಂತರ ಸಾರು ಕುದಿ ಬರುವಾಗ ಕೂಡ ತೆಂಗಿನೆಣ್ಣೆ ಸೇರಿಸಿ, ಇಷ್ಟು ಮಾಡಿದರೆ ಚಿಕನ್ ಸಾರು ಸೂಪರ್ ಆಗಿರುತ್ತದೆ.
Comments
[ of 5 - Users]
Story first published: Saturday, March 22, 2025, 21:32 [IST]
Other articles published on Mar 22, 2025



Click it and Unblock the Notifications