Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಅತಿ ಕಡಿಮೆ ಎಣ್ಣೆ.. ಹೋಟೆಲ್‌ನಲ್ಲಿ ನೀಡುವ ಉಬ್ಬಿದ ಪೂರಿ ಮಾಡೋದು ಹೇಗೆ? ಹಿಟ್ಟು ಕಲಸುವ ಸೀಕ್ರೆಟ್ ಇಲ್ಲಿದೆ
ಮನೆಯಲ್ಲೇ ತಯಾರಿಸಿ ರೆಸ್ಟೋರೆಂಟ್ ಶೈಲಿಯ ಪೂರಿ! ಎಣ್ಣೆ ಹೀರಿಕೊಳ್ಳದ, ಗರಿಗರಿಯಾದ ಪೂರಿ ಮಾಡುವ ರಹಸ್ಯ ಇಲ್ಲಿದೆ. ಹೌದು, ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿ ಪೂರಿ-ಸಾಗು ನೆಚ್ಚಿನ ಉಪಹಾರ. ಬಿಸಿಬಿಸಿ, ಚೆಂಡಿನಂತೆ ಉಬ್ಬಿರುವ ಪೂರಿ, ಆಲೂಗಡ್ಡೆ ಸಾಗು ಇದ್ದರೆ ಬೆಳಗಿನ ಉಪಹಾರವೇ ಹಬ್ಬ. ಆದರೆ, ಮನೆಯಲ್ಲಿ ಮಾಡಿದ ಪೂರಿ (Poori) ಹೋಟೆಲ್‌ನಂತೆ ಉಬ್ಬದೆ, ಹೆಚ್ಚೆಣ್ಣೆ ಹೀರಿಕೊಳ್ಳುತ್ತದೆ ಎಂಬುದು ಸಾಮಾನ್ಯ ದೂರು. ಚಿಂತಿಸಬೇಡಿ..! ಮನೆಯಲ್ಲೇ ಪರಿಪೂರ್ಣ ರೆಸ್ಟೋರೆಂಟ್ ಶೈಲಿಯ ಪೂರಿ ತಯಾರಿಸುವ ವಿಧಾನ ಇಲ್ಲಿದೆ.
ಪೂರಿಗಳ ರಹಸ್ಯವೆಂದರೆ ರವೆ (Suji). ಇದು ಪೂರಿ ಚೆನ್ನಾಗಿ ಉಬ್ಬಲು ಮತ್ತು ದೀರ್ಘಕಾಲ ಗರಿಗರಿಯಾಗಿರಲು ಸಹಾಯಕಾರಿ. ಸಾಮಾನ್ಯವಾಗಿ ಗೋಧಿ ಹಿಟ್ಟಿನಿಂದ ಪೂರಿ ತಯಾರಿಸುತ್ತಾರೆ. ಆದರೆ, ಹೋಟೆಲ್‌ಗಳಲ್ಲಿ ಗೋಧಿ ಹಿಟ್ಟಿಗೆ ಸ್ವಲ್ಪ ರವೆ ಬೆರೆಸುವುದರಿಂದ ಪೂರಿಗಳು ಉಬ್ಬಿ, ಬೇಗನೆ ಮೆತ್ತಗಾಗುವುದಿಲ್ಲ. ಮನೆಯಲ್ಲೇ ರೆಸ್ಟೋರೆಂಟ್ ಶೈಲಿಯ ಸಾಫ್ಟ್ ಪೂರಿ ಮಾಡಲು ಬೇಕಾಗುವ ಪದಾರ್ಥಗಳು ಮತ್ತು ತಯಾರಿಸುವ ಸರಳ ವಿಧಾನ (Poori Recipe) ತಿಳಿಯಲು ಮುಂದೆ ಓದಿ.

ಈ ಪೂರಿ ತಯಾರಿಸಲು ಬೇಕಾಗುವ ಪದಾರ್ಥಗಳು
• ಗೋಧಿ ಹಿಟ್ಟು
• ರವೆ (ಚಿರೋಟಿ ಅಥವಾ ಉಪ್ಪಿಟ್ಟು ರವೆ)
• ಎಣ್ಣೆ (ಕರಿಯಲು ಅಗತ್ಯವಿರುವಷ್ಟು)
• ರುಚಿಗೆ ತಕ್ಕಷ್ಟು ಉಪ್ಪು
• ನೀರು (ಹಿಟ್ಟು ಕಲಸಲು ಬೇಕಾದಷ್ಟು)
ಸಾಫ್ಟ್ ಪೂರಿ ತಯಾರಿಸುವ ವಿಧಾನ
- ಒಂದು ದೊಡ್ಡ ಪಾತ್ರೆಯಲ್ಲಿ ಗೋಧಿ ಹಿಟ್ಟು, ರವೆ, ಉಪ್ಪು ಮತ್ತು ಒಂದು ಚಮಚ ಎಣ್ಣೆ ಹಾಕಿ ಚೆನ್ನಾಗಿ ಬೆರೆಸಿ.
- ನಂತರ ಸ್ವಲ್ಪ ಸ್ವಲ್ಪ ನೀರು ಸೇರಿಸುತ್ತಾ ಹಿಟ್ಟನ್ನು ಕಲಸಿ. ಪೂರಿ ಹಿಟ್ಟು ಚಪಾತಿ ಹಿಟ್ಟಿಗಿಂತ ಗಟ್ಟಿಯಾಗಿರಬೇಕು. ಗಟ್ಟಿಯಾದ ಹಿಟ್ಟು ಕಡಿಮೆ ಎಣ್ಣೆ ಹೀರುವುದರಿಂದ ಪೂರಿ ಚೆನ್ನಾಗಿ ಬರುತ್ತದೆ.
- ಕಲಸಿದ ಹಿಟ್ಟಿಗೆ ಸ್ವಲ್ಪ ಎಣ್ಣೆ ಸವರಿ, ಬಟ್ಟೆ ಅಥವಾ ತಟ್ಟೆಯಿಂದ ಮುಚ್ಚಿ 30 ನಿಮಿಷಗಳ ಕಾಲ ನೆನೆಯಲು ಬಿಡಿ. ರವೆ ನೀರಿನಂಶವನ್ನು ಹೀರಿಕೊಂಡು ಹಿಟ್ಟು ಮೃದುವಾಗುತ್ತದೆ. ಇದು ಪೂರಿಗಳು ಉತ್ತಮವಾಗಿ ಉಬ್ಬಲು ಸಹಾಯಕವಾಗುತ್ತದೆ.
- 30 ನಿಮಿಷಗಳ ನಂತರ, ಹಿಟ್ಟನ್ನು ಇನ್ನೊಮ್ಮೆ ನಾದಿಕೊಂಡು ಸಣ್ಣ ಉಂಡೆಗಳನ್ನು ಮಾಡಿ.
- ಪೂರಿ ಲಟ್ಟಿಸುವಾಗ ಹಿಟ್ಟು ಬಳಸುವ ಬದಲು, ಕೈಗೆ ಸ್ವಲ್ಪ ಎಣ್ಣೆ ಹಚ್ಚಿ ಲಟ್ಟಿಸಿ. ಇದರಿಂದ ಕರಿಯುವ ಎಣ್ಣೆಯ ಶುಚಿತ್ವ ಹಾಳಾಗುವುದಿಲ್ಲ.
- ಈಗ ಡಾಯಿಯಲ್ಲಿ ಎಣ್ಣೆಯನ್ನು ಚೆನ್ನಾಗಿ ಬಿಸಿ ಮಾಡಿ. ಎಣ್ಣೆಯ ತಾಪಮಾನ ಪರೀಕ್ಷಿಸಲು, ಒಂದು ಸಣ್ಣ ಹಿಟ್ಟಿನ ತುಂಡನ್ನು ಎಣ್ಣೆಗೆ ಹಾಕಿ. ಅದು ತಕ್ಷಣ ಮೇಲೆ ತೇಲಿ ಬಂದರೆ ಎಣ್ಣೆ ಕರಿಯಲು ಸಿದ್ಧವಾಗಿದೆ. ಈಗ ಉರಿಯನ್ನು ಮಧ್ಯಮಕ್ಕೆ ಇರಿಸಿ.
- ಬಳಿಕ ಕಾದ ಎಣ್ಣೆಗೆ ಒಂದೊಂದೇ ಪೂರಿಯನ್ನು ನಿಧಾನವಾಗಿ ಇಡಿ. ಜಾಲರಿಯಿಂದ ಪೂರಿ ಮೇಲೆ ಲಘುವಾಗಿ ಒತ್ತಿದಾಗ, ಅದು ಚೆಂಡಿನಂತೆ ಉಬ್ಬುತ್ತದೆ.
- ಎರಡೂ ಬದಿಯಲ್ಲಿ ಹೊಂಬಣ್ಣ ಬರುವವರೆಗೆ ಕರಿದ ನಂತರ ಎಣ್ಣೆಯಿಂದ ಹೊರತೆಗೆಯಿರಿ. ಹೀಗೆ ಮಾಡಿದ ಪೂರಿ (Soft and Fluffy Poori) ಬಹಳ ಸಮಯದವರೆಗೆ ಉಬ್ಬಿರುತ್ತದೆ.
ಪರ್ಫೆಕ್ಟ್ ಪೂರಿಗಾಗಿ ಸೀಕ್ರೆಟ್ ಟಿಪ್ಸ್
ಪರಿಪೂರ್ಣ ಪೂರಿಗಾಗಿ ಕೆಲವು ಮುಖ್ಯ ಟಿಪ್ಸ್‌ಗಳನ್ನು ಫಾಲೋ ಮಾಡಿ. ಅವುಗಳು ಈ ಕೆಳಗಿನಂತಿವೆ.
- ಎಣ್ಣೆ ಸರಿಯಾಗಿ ಕಾಯದಿದ್ದರೆ ಪೂರಿ ಉಬ್ಬದೆ ಹೆಚ್ಚು ಎಣ್ಣೆ ಹೀರಿಕೊಳ್ಳುತ್ತದೆ.
- ಹಿಟ್ಟಿನ ಹದವೂ ನಿರ್ಣಾಯಕ. ತುಂಬಾ ಮೆತ್ತಗಿದ್ದರೆ ಪೂರಿ ಉಬ್ಬುವುದಿಲ್ಲ.
- ಗಟ್ಟಿಯಾಗಿ ನಾದಿದ ಹಿಟ್ಟು ಪೂರಿಗೆ ಉತ್ತಮ.
- ರವೆ ಸೇರಿಸುವುದರಿಂದ ಪೂರಿಗಳು ಕರಿದ ನಂತರವೂ ಬಹಳ ಹೊತ್ತು ಉಬ್ಬಿ ಗರಿಗರಿಯಾಗಿರುತ್ತವೆ.
ಈ ಬಿಸಿಬಿಸಿ ಪೂರಿಗಳನ್ನು ಆಲೂಗಡ್ಡೆ ಸಾಗು, ಕುರ್ಮಾ, ಅಥವಾ ಚಟ್ನಿಯೊಂದಿಗೆ ಸವಿಯಬಹುದು. ಮಧ್ಯಾಹ್ನಕ್ಕೆ ಬೇಕಿದ್ದರೆ, ಮಾವಿನಕಾಯಿ ಶೀಕರಣೆಯೊಂದಿಗೂ ಇದು ಚೆನ್ನಾಗಿ ಮ್ಯಾಚ್ ಆಗುತ್ತೆ. ನೀವು ಇಂದೇ ಮನೆಯಲ್ಲೇ ಹೋಟೆಲ್ ಶೈಲಿಯ ಪೂರಿ ಮಾಡಿ ಎಂಜಾಯ್ ಮಾಡಿ.



Click it and Unblock the Notifications