For Quick Alerts
ALLOW NOTIFICATIONS  
For Daily Alerts

ವೆಜಿಟೇಬಲ್ ಪಾಸ್ತಾ ಸೂಪ್

|

ಪಾಸ್ತಾ, ನೂಡಲ್ಸ್ ಇವೆಲ್ಲಾ ವಿದೇಶಿ ಅಡುಗೆಗಳಾದರೂ ಭಾರದತಲ್ಲಿ ಜನಪ್ರಿಯತೆಯನ್ನು ಗಳಿಸಿದೆ. ಇವುಗಳನ್ನು ಮಾಡಲು ತುಂಬಾ ಸಮಯ ತೆಗೆದುಕೊಳ್ಳದ ಕಾರಣ, ಪುರುಸೊತ್ತು ಇಲ್ಲದಿದ್ದಾಗ, ಆಪೀಸ್ ಹೊತ್ತಾದಾಗ ಈ ನೂಡಲ್ಸ್, ಪಾಸ್ತಾದಂತಹ ಫಾಸ್ಟ್ ಫುಡ್ ಗಳು ನಮ್ಮ ಲಂಚ್ ಬಾಕ್ಸ್ ಸೇರುತ್ತದೆ.

ಪಾಸ್ತಾವನ್ನು ಅನೇಕ ರುಚಿಯಲ್ಲಿ ತಯಾರಿಸಬಹುದು. ಇಲ್ಲಿ ನಾವು ಪಾಸ್ತಾ ಬಳಸಿ ಮಾಡುವ ಸವಿರುಚಿಯ ಸೂಪ್ ರೆಸಿಪಿ ನೀಡಿದ್ದೇವೆ ನೋಡಿ:

Vegetable Pasta Soup

ಬೇಕಾಗುವ ಸಾಮಾಗ್ರಿಗಳು
ಪಾಸ್ತಾ ಅರ್ಧ ಕಪ್
ತರಕಾರಿ 1/4 ಕಪ್
ಚೆನ್ನಾ 3 ಚಮಚ
ಪಾಸ್ತಾ ಸಾಸ್ 1 ಕಪ್
ಟೊಮೆಟೊ ಸಾಸ್ 1 ಕಪ್
ಸ್ವಲ್ಪ ದೊಡ್ಡ ಪತ್ರೆ
ರುಚಿಗೆ ತಕ್ಕ ಉಪ್ಪು
ನೀರು 1/4 ಕಪ್
ಜೋಳದ ಹಿಟ್ಟು 1 ಚಮಚ
ಚಿಕ್ಕ ಈರುಳ್ಳಿ 1
ಬೆಳ್ಳುಳ್ಳಿ ಎಸಳು 3-4 ಎಸಳು
ಎಣ್ಣೆ 2 ಚಮಚ

ತಯಾರಿಸುವ ವಿಧಾನ:

* ದೊಡ್ಡ ಕಡಲೆಯನ್ನು ನೆನೆ ಹಾಕಿರಬೇಕು. ನಂತರ ಅದನ್ನು ತರಕಾರಿಗಳ ಜೊತೆ ಬೇಯಿಸಿ ಒಂದು ಪಾತ್ರೆಯಲ್ಲಿ ಹಾಕಿಡಿ.

* ಒಂದು ಪಾತ್ರೆಯಲ್ಲಿ ನೀರನ್ನು ಕುದಿಸಿ ಅದಕ್ಕೆ ಸ್ವಲ್ಪ ಉಪ್ಪು ಹಾಕಿ ಪಾಸ್ತಾವನ್ನು ಅದರಲ್ಲಿ ಹಾಕಿ. ಪಾಸ್ತಾ ಮೆತ್ತಗಾದ ಮೇಲೆ ಅದನ್ನು ಒಂದು ಪಾತ್ರೆಯಲ್ಲಿ ಹಾಕಿಡಿ.

* ಈಗ ಪಾತ್ರೆಗೆ ಎಣ್ಣೆ ಹಾಕಿ ಬಿಸಿ ಮಾಡಿ, ನಂತರ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಿರಿ. ನಂತರ ಬೇಯಿಸಿ ತರಕಾರಿ ಸೇರಿಸಿ ಸೌಟ್ ನಿಂದ ಆಡಿಸಿ. ನಂತರ ಪಾಸ್ತಾ ಹಾಗೂ ಟೊಮೆಟೊ ಸಾಸ್ ಸೇರಿಸಿ. ದೊಡ್ಡ ಪತ್ರೆ ಹಾಕಿ, ಕಡಿಮೆ ಉರಿಯಲ್ಲಿ ಸೌಟ್ ನಿಂದ ಆಡಿಸುತ್ತಾ 2 ನಿಮಿಷ ಬೇಯಿಸಿ. ನೀರು ಹಾಕಿ, ಈಗ ಪಾಸ್ತಾ ಹಾಕಿ, ರುಚಿಗೆ ತಕ್ಕ ಉಪ್ಪು ಸೇರಿಸಿ, ಜೋಳದ ಹಿಟ್ಟು ಕಡಿಮೆ ಉರಿಯಲ್ಲಿ 3-4 ನಿಮಿಷ ಬೇಯಿಸಿದರೆ ಪಾಸ್ತಾ ಸೂಪ್ ರೆಡಿ.

English summary

Vegetable Pasta Soup | Variety Of Soup Recipe | ವೆಜಿಟೇಬಲ್ ಪಾಸ್ತಾ ಸೂಪ್ | ಅನೇಕ ಬಗೆಯ ಸೂಪ್ ರೆಸಿಪಿ

Last month, I bought a pack of pasta and was bored of making the usual tomato based and milk based ones, So I wanted to try a soup with it.The soup was thick, delicious and filling too and never felt hungry for the next meal.
X
Desktop Bottom Promotion