Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಸುಲಭವಾಗಿ ಮಾಡಬಹುದಾದ 7 ಬಗೆಯ ಸ್ನ್ಯಾಕ್ಸ್
ಎಲ್ಲಾ ವೀಕೆಂಡ್ ನಲ್ಲಿ ಹೊರಗಡೆ ಹೋಗಿ ಸುತ್ತಾಡಲು ಮೂಡ್ ಬರುವುದಿಲ್ಲ. ಎಲ್ಲಿಗೂ ಹೋಗುವುದು ಬೇಡ, ಸಿಗುವ 1-2 ದಿನ ರಜೆಯನ್ನು ಆರಾಮವಾಗಿ ಮನೆಯಲ್ಲಿಯೇ ಕಳೆಯೋಣ ಅನಿಸಿ ಬಿಡುತ್ತೆ. ಹಾಗೇ ಅಂದುಕೊಂಡು ಮನೆಯಲ್ಲಿ ಕೂತರೂ ವೀಕೆಂಡ್ ನ ಫೀಲ್ ಬರಬೇಕೆಂದರೆ ಮನೆಯಲ್ಲಿ ಏನಾದರೂ ಸ್ಪೆಷಲ್ ಅಡುಗೆ ಮಾಡಲೇಬೇಕು ಅಲ್ವಾ?
ವೀಕೆಂಡ್ ಸ್ಪೆಷಲ್ ಅಡುಗೆ ಜೊತೆ ಸಂಜೆ ತಿಂಡಿಗೆ ಯಾವುದಾದರೂ ಸರಳವಾದ ಸ್ನ್ಯಾಕ್ಸ್ ರೆಸಿಪಿಗೆ ಹುಡುಕುತ್ತಿದ್ದರೆ ಈ ಲೇಖನ ಓದುವುದನ್ನು ಮುಂದುವೆರೆಸಿ. ಇಲ್ಲಿ ನಾವು ಸರಳವಾಗಿ ಮಾಡಬಹುದಾದ ಸ್ನಾಕ್ಸ್ ರೆಸಿಪಿಗಳನ್ನು ನೀಡಿದ್ದೇವೆ. ಇವುಗಳಲ್ಲಿ ನಿಮಗಿಷ್ಟವಾದ ರೆಸಿಪಿಯನ್ನು ಆಯ್ಕೆ ಮಾಡಿ, ರಜೆಯನ್ನು ಸಂತೋಷವಾಗಿ ಕಳೆಯಿರಿ:

ದಾಲ್ ಡಂಪ್ಲಿಂಗ್
ನನ್ನ ಅಮ್ಮ ಮಾಡುವ ಸ್ಪೆಷಲ್ ಅಡುಗೆಗಳಲ್ಲಿ ದಾಲ್ ಡಂಪ್ಲಿಂಗ್ಸ್ ಅಂದರೆ ನನಗೆ ಮಾತ್ರವಲ್ಲ,ಮನೆಯವರೆಲ್ಲರಿಗೂ ಪಂಚಪ್ರಾಣ. ಆವಿಯಲ್ಲಿ ಬೇಯಿಸಿದ ದಾಲ್ ಡಂಪ್ಲಿಂಗ್ಸ್ ಅನ್ನು ತಟ್ಟೆಯಲ್ಲಿ ಹಾಕಿ, ತೆಂಗಿನಕಾಯಿ ಚಟ್ನಿಯನ್ನು ತಟ್ಟೆಯ ಒಂದು ಬದಿಯಲ್ಲಿ ಹಾಕಿ, ಒಂದು ಗ್ಲಾಸ್ ಕಾಫಿ ಹಿಡಿದು ಕೂತರೆ ಈ ಸ್ನ್ಯಾಕ್ಸ್ ಮುಗಿಯುವವರೆಗೆ ಕುಳಿತ ಜಾಗದಿಂದ ನೀವು ಕದಲುವುದಿಲ್ಲ.

ಆಲೂ ಕಟ್ಲೇಟ್
ಇಲ್ಲಿ ನಾವು ಆರೋಗ್ಯಕರವಾದ, ರುಚಿಯಾದ ಆಲೂ ಕಟ್ಲೇಟ್ ರೆಸಿಪಿ ನೀಡಿದ್ಧೇವೆ. ಈ ಕಟ್ಲೇಟ್ ರುಚಿಯಲ್ಲಿ ಸೂಪರ್ ಆಗಿದ್ದರೂ ಮಾಡುವ ವಿಧಾನ ಮಾತ್ರ ಸರಳವಾಗಿದೆ. ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ:

ರವೆ ವಡೆ
ಎಷ್ಟೇ ಹೇಳಿ ಸಂಜೆ ಟೀ ಜೊತೆ ಫ್ರೂಟ್ ಸಲಾಡ್ ಇಟ್ಟು ತಿನ್ನಲು ಇಷ್ಟವಾಗುವುದೇ? ಏನಿದ್ದರೂ ಕುರುಕುಲು ತಿಂಡಿಗಳು/ಕರಿದ ತಿಂಡಿಗಳೇ ಟೀಗೆ ಬೆಸ್ಟ್ ಕಾಂಬಿನೇಷನ್. ಮೊದಲೇ ಹೇಳಿದಂತೆ ಅಪರೂಪಕ್ಕೆ ತಿಂದರೆ ಪರ್ವಾಗಿಲ್ಲ, ಒಂದು ಸುತ್ತು ವ್ಯಾಯಾಮ ಜಾಸ್ತಿ ಮಾಡಿದರಾಯ್ತು, ಏನಂತೀರಿ? ಬನ್ನಿ ಸವಿರುಚಿಯ ರವೆ ವಡೆಯ ರುಚಿ ನೋಡೋಣ:

ಫ್ರೆಂಚ್ ಫ್ರೈ
ಈ ಫ್ರೆಂಚ್ ಫ್ರೈಯನ್ನು ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದು. ಈ ಫ್ರೆಂಚ್ ಫ್ರೈಯಲ್ಲಿ ಹೊಸ ರುಚಿಯನ್ನು ಟ್ರೈ ಮಾಡಿದ್ದೀರಾ? ಇಲ್ಲ ಅಂದರೆ ಇಲ್ಲಿದೆ ನೋಡಿ ಸ್ವೀಟ್ ಅಂಡ್ ಸ್ಪೈಸಿ ಫ್ರೆಂಚ್ ಫ್ರೈ ರೆಸಿಪಿ.

ಅನ್ನ-ಮೆಂತೆ ಸೊಪ್ಪಿನ ಪಕೋಡ
ಸಾಮಾನ್ಯವಾಗಿ ಪಕೋಡವನ್ನು ಕಡಲೆ ಹಿಟ್ಟು ಬಳಸಿ ಮಾಡಿದರೆ, ಈ ಪಕೋಡವನ್ನು ಅನ್ನದಿಂದ ಮಾಡಲಾಗುವುದು. ಅನ್ನಕ್ಕೆ ಮೆಂತೆ ಸೊಪ್ಪು ಮತ್ತು ಇತರ ಪಕೋಡ ಪದಾರ್ಥಗಳನ್ನು ಹಾಕಿ ಎಣ್ಣೆಯಲ್ಲಿ ಕರಿದರೆ ರುಚಿಯಾದ ಅನ್ನ-ಮೆಂತೆ ಸೊಪ್ಪಿನ ಪಕೋಡ ರೆಡಿಯಾಗುವುದು.

ಆಲೂಬೋಂಡಾ

ಹುರಿಗಡಲೆಯ ವಡೆ
ಕಡ್ಲೆ ವಡೆ, ಪಾಲಾಕ್ ವಡೆ ಹೀಗೆ ಅನೇಕ ಬಗೆಯ ವಡಾ ರುಚಿ ನೋಡಿರಬಹುದು. ಹುರಿಗಡಲೆಯಿಂದ ತಯಾರಿಸಿದ ವಡೆಯ ರುಚಿ ನೋಡಿದ್ದೀರಾ? ಬರೀ ಹುರಿಗಡಲೆ ತಿನ್ನಲು ರುಚಿಯಾಗಿರುತ್ತದೆ, ಇನ್ನು ಅದರಿಂದ ವಡೆ ಮಾಡಿದರೆ ಹೇಳಬೇಕೆ? ಈ ಸವಿರುಚಿಯ ಹುರಿಗಡಲೆಯ ವಡೆ ಮಾಡಬಯಸುವುದಾದರೆ ರೆಸಿಪಿ ನೋಡಿ ಇಲ್ಲಿದೆ:



Click it and Unblock the Notifications
