Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಸ್ವೀಟ್ ಅಂಡ್ ಸ್ಪೈಸಿ ಫ್ರೆಂಚ್ ಫ್ರೈ
ಸ್ಟ್ರಿಕ್ಟ್ ಡಯಟ್ ನಲ್ಲಿರುವವರ ಮುಂದೆ ಸ್ವಲ್ಪ ಫ್ರೆಂಚ್ ಫ್ರೈ ಇಟ್ಟರೆ ಡಯಟ್ ಅನ್ನು ತಾತ್ಕಲಿಕವಾಗಿ ಮರೆತು ಹೋಗುವುದಂತು ಖಂಡಿತ, ಫ್ರೆಂಚ್ ಫ್ರೈ ನ ಸ್ಪೆಷಾಲಿಟಿಯೇ ಅದು. ಈ ಫ್ರೆಂಚ್ ಫ್ರೈಯನ್ನು ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದು. ಈ ಫ್ರೆಂಚ್ ಫ್ರೈಯಲ್ಲಿ ಹೊಸ ರುಚಿಯನ್ನು ಟ್ರೈ ಮಾಡಿದ್ದೀರಾ?
ಇಲ್ಲ ಅಂದರೆ ಇಲ್ಲಿದೆ ನೋಡಿ ಸ್ವೀಟ್ ಅಂಡ್ ಸ್ಪೈಸಿ ಫ್ರೆಂಚ್ ಫ್ರೈ ರೆಸಿಪಿ.

ಬೇಕಾಗುವ ಸಾಮಾಗ್ರಿಗಳು
ಆಲೂಗಡ್ಡೆ 6-7
ಕೆಂಪು ಮೆಣಸಿನ ಪೇಸ್ಟ್ 2 ಚಮಚ
ಟೊಮೆಟೊ ಸಾಸ್ 1 ಚಮಚ
ಟೊಮೆಟೊ ಪೇಸ್ಟ್ 1 ಚಮಚ
ರುಚಿಗೆ ತಕ್ಕ ಉಪ್ಪು
chilli flakes 2 ಚಮಚ
ಜೇನು 2 ಚಮಚ
ವಿನೆಗರ್ 2 ಚಮಚ
ಫ್ರೈ ಮಾಡಲು ಎಣ್ಣೆ
ತಯಾರಿಸುವ ವಿಧಾನ
* ಆಲೂಗಡ್ಡೆಯ ಸಿಪ್ಪೆ ಸುಲಿದು ಅದನ್ನು ಉದ್ದುದ್ದವಾಗಿ ಸೀಳಿ ನೀರಿನಲ್ಲಿ ಹಾಕಿ ತೊಳೆದು ನಂತರ ಅದಕ್ಕೆ ರುಚಿಗೆ ತಕ್ಕ ಉಪ್ಪು ಹಾಕಿ ಮಿಕ್ಸ್ ಮಾಡಿ ಇಡಿ.
* ಈಗ ಪ್ಯಾನ್ ನಲ್ಲಿ ಅರ್ಧದಷ್ಟು ಎಣ್ಣೆ ಹಾಕಿ ಬಿಸಿ ಮಾಡಿ ಅದರಲ್ಲಿ ಆಲೂಗಡ್ಡೆ ಹಾಕಿ ಸ್ವಲ್ಪ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ, ಎಣ್ಣೆಯಿಂದ ತೆಗೆದು ಪೇಪರ್ ಹಾಕಿದ ಪಾತ್ರೆಯಲ್ಲಿ ಹಾಕಿಡಿ.
* ನಂತರ ಪ್ಯಾನ್ ನಲ್ಲಿ 1 ಚಮಚದಷ್ಟು ಎಣ್ಣೆ ಹಾಕಿ ಅದರಲ್ಲಿ ಟೊಮೆಟೊ ಪೇಸ್ಟ್, ಟೊಮೆಟೊ ಸಾಸ್, ಕೆಂಪು ಮೆಣಸಿನ ಪೇಸ್ಟ್, ವಿನೆಗರ್, chilli flakes, ಸ್ವಲ್ಪ ಉಪ್ಪು ಹಾಕಿ ಮಿಕ್ಸ್ ಮಾಡಿ ಅದರಲ್ಲಿ ಫ್ರೈ ಮಾಡಿ ಆಲೂ ಫಿಂಗರ್ ಚಿಪ್ಸ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ, ಉರಿಯಿಂದ ಇಳಿಸಿ, ಜೇನು ಹಾಕಿ ಮಿಕ್ಸ್ ಮಾಡಿದರೆ ಬಿಸಿ-ಬಿಸಿಯಾದ ಸ್ವೀಟ್ ಅಂಡ್ ಸ್ಪೈಸಿ ಫ್ರೆಂಚ್ ಫ್ರೈ ರೆಡಿ.



Click it and Unblock the Notifications
