Latest Updates
-
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್ -
ಮಳೆಗಾಲದಲ್ಲಿ ನಿಮ್ಮ ಮನೆಯ ಗಿಡಗಳು ಸಾಯುತ್ತಿವೆಯೇ? ಈ 15 ನಿಮಿಷದ ಟಿಪ್ಸ್ ಪಾಲಿಸಿ!
ಮೆಂತ್ಯೆ ಸೊಪ್ಪಿನ ಭಾತ್ನಲ್ಲಿ ರುಚಿ ಮತ್ತು ಶಕ್ತಿ!
Snacks
oi-Staff
By Super
ಮನೆಗೆ ಅತಿಥಿಗಳು ಬಂದಾಗ, ಈ ತಿಂಡಿಯನ್ನು ಟ್ರೆೃಮಾಡಿ... ಒಂದು ಪ್ರಶಂಸೆಯನ್ನು ದಕ್ಕಿಸಿಕೊಳ್ಳಿ...
ಬೇಕಾಗುವ ಸಾಮಾಗ್ರಿಗಳು :
- ಮೆಂತ್ಯೆ ಸೊಪ್ಪು- ಒಂದು ಕಟ್ಟು
- ಈರುಳ್ಳಿ -2
- ಟೊಮೆಟೊ-2
- ಬೆಳ್ಳುಳ್ಳಿ- 6ಎಸಳು
- ಚೆಕ್ಕೆ ಸ್ವಲ್ಪ
- ಲವಂಗ-2
- ಬಟಾಣಿ -ಒಂದು ಮುಷ್ಟಿ
- ಅಕ್ಕಿ- ಒಂದು ಪಾವು
- ಕಾಯಿತುರಿ - ಒಂದು ಮುಷ್ಟಿ
- ಸಾರಿನ ಪುಡಿ - 1 ಚಮಚ
- ಹುಳಿ ಪುಡಿ - 1 ಚಮಚ
- ಎಣ್ಣೆ - 5ರಿಂದ 6 ಚಮಚ
- ನಿಂಬೆಹಣ್ಣಿನ ರಸ ಸ್ವಲ್ಪ
ಮಾಡುವ ವಿಧಾನ :
ಮೊದಲು ಮಿಕ್ಸಿಯಲ್ಲಿ ಬೆಳ್ಳುಳ್ಳಿ, ಚೆಕ್ಕೆ, ಲವಂಗ, ಕಾಯಿ ತುರಿ, ಸಾರಿನ ಪುಡಿ, ಹುಳಿ ಪುಡಿ ಹಾಕಿ ನೀರು ಹಾಕದೆ ಪುಡಿ ಮಾಡಿಕೊಳ್ಳಿ.
ನಂತರ ಬಾಣಲೆಗೆ ಎಣ್ಣೆ ಹಾಕಿ ಒಗ್ಗರಣೆ ಮಾಡಿ. ನಂತರ ಈರುಳ್ಳಿ, ಮೆಂತ್ಯೆ ಸೊಪ್ಪು ಎರಡನ್ನು ಎಣ್ಣೆಗೆ ಹಾಕಿ ಬಾಡಿಸಿರಿ. ಇವೆರಡು ಬೆಂದ ಮೇಲೆ ಟೊಮೆಟೊ ಹಾಕಿ ಬಾಡಿಸಿರಿ.
ನಂತರ ಮಿಕ್ಸಿಯಲ್ಲಿ ಪುಡಿ ಮಾಡಿಕೊಂಡ ಮಿಶ್ರಣವನ್ನು ಹಾಕಿ ಸೇರಿಸಿ. ಆಮೇಲೆ ಅನ್ನ, ಬಟಾಣಿ, ಉಪ್ಪು ಎಲ್ಲ ಹಾಕಿ ಕಲೆಸಿ. 5 ನಿಮಿಷದವರೆಗೂ ಹಾಗೆ ಬಿಡಿ. ಒಲೆ ಆರಿಸಿ ಕೆಳಗಿಳಿಸಿದ ಮೇಲೆ ಕೊನೆಯಲ್ಲಿ ನಿಂಬೆರಸವನ್ನು ಬೆರೆಸಿರಿ.
ಆಮೇಲೆ ಅನ್ನುವಿರಾ? ಅಲ್ಲಿಗೆ ಮೆಂತ್ಯೆ ಭಾತ್ ರೆಡಿ... ರುಚಿ ನೋಡೋದೊಂದು ಬಾಕಿ...
Comments
Read more about: kannada karnataka bangalore kannada websites food culture menthya fenu greek helathy dishes onion spicy taste garlic groundnut oil rice dishes deserts lemon tomato ricebath adugemane sandhya dayanand alexa com click in kannada oneindia in



Click it and Unblock the Notifications