Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ಚಳಿಗಾಲಕ್ಕೆ ಬೆಸ್ಟ್ ಈ ಖಡಕ್ ಪಕೋಡ ಖಡಿ

ಪಕೋಡಾ ಖಡಿಗೆ ಏನೇನು ಬೇಕು?
ಖಡಿಗೆ ಬೇಕಾಗುವ ಪದಾರ್ಥ: 4 ಕಪ್ ಕದಡಿದ ಮೊಸರು, 2 ಚಮಚ ಕಡಲೆ ಹಿಟ್ಟು, ಉಪ್ಪು, ಅರಿಶಿನ, ಕೊತ್ತಂಬರಿ ಸೊಪ್ಪು, ಹಸಿರು ಮೆಣಸಿನ ಕಾಯಿ, ಕರಿಬೇವು, ಮೆಂತ್ಯೆ, ಕೆಂಪು ಮೆಣಸಿನ ಕಾಯಿ ಪುಡಿ, ಸೊಂಪು, ಜೀರಿಗೆ, ಸಾಸಿವೆ, ಇಂಗು, ನೀರು.
ಪಕೋಡಾಗೆ ಬೇಕಾಗುವ ಪದಾರ್ಥ: 1 ಕಪ್ ಕಡಲೆಹಿಟ್ಟು, ಉಪ್ಪು, ಸೋಂಪು, ಕೆಂಪು ಮೆಣಸಿನಕಾಯಿ ಪುಡಿ, ಅಡುಗೆ ಸೋಡಾ, ನೀರು, ಎಣ್ಣೆ.
ಪಕೋಡಾ ಖಡಿ ತಯಾರಿಸೋದು ಹೇಗೆ?
* ಒಂದು ಬಟ್ಟಲಿನಲ್ಲಿ ಪಕೋಡಾ ತಯಾರಿಸಲು ಮೇಲೆ ತಿಳಿಸಿರುವ ಸಾಮಾನುಗಳನ್ನು (ಎಣ್ಣೆ ಹೊರತುಪಡಿಸಿ) ಮಿಶ್ರಣ ಮಾಡಿ ನೀರು ಬೆರೆಸಿ ಹದವಾಗಿ ಕಲೆಸಬೇಕು.
* ಬಾಣಲೆಯಲ್ಲಿ ಎಣ್ಣೆ ಕಾಯಿಸಿ ಅದರಲ್ಲಿ ಪಕೋಡಾಗೆಂದು ಕಲೆಸಿದ ಹಿಟ್ಟನ್ನು ಹಾಕಿ ಕೆಂಪಾಗುವವರೆಗೂ ಹುರಿದು ನಂತರ ಪೇಪರ್ ಮೇಲೆ ಎಣ್ಣೆ ಹೀರಿಕೊಳ್ಳಲು ಹರಡಿ ಒಂದೆಡೆ ಇಟ್ಟುಕೊಳ್ಳಬೇಕು.
* ಬಟ್ಟಲೊಂದರಲ್ಲಿ ಖಡಿಗೆಂದು ತಿಳಿಸಿರುವ ಕಡಲೆಹಿಟ್ಟು ಮತ್ತು ಮೊಸರನ್ನು ಕಲೆಸಿಕೊಂಡು ನೀರು ಹಾಕಿ ಚೆನ್ನಾಗಿ ಕದಡಬೇಕು. ಇದಕ್ಕೆ ಅರಿಶಿನ, ಹಸಿರುಮೆಣಸಿನ ಕಾಯಿ ಮತ್ತು ಉಪ್ಪು ಹಾಕಿ ಒಂದೆಡೆ ಇಡಬೇಕು.
* ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಕಾಯಿಸಿ ಅದಕ್ಕೆ ಸಾಸಿಗೆ, ಜೀರಿಗೆ, ಮೆಂತ್ಯೆ, ಇಂಗು, ಕರಿಬೇವು, ಸೋಂಪು ಹಾಕಿ ಒಂದು ನಿಮಿಷ ಹುರಿದು ನಂತರ ಕೆಂಪು ಮೆಣಸಿನ ಕಾಯಿ ಪುಡಿ ಹಾಕಬೇಕು. ತಕ್ಷಣವೇ ಇದಕ್ಕೆ ಕಲೆಸಿಟ್ಟುಕೊಂಡಿದ್ದ ಮೊಸರಿನ ಮಿಶ್ರಣವನ್ನು ಹಾಕಿ 3-4 ನಿಮಿಷದವರೆಗೆ ಬಿಡದೆ ಚೆನ್ನಾಗಿ ತಿರುಗಿಸಬೇಕು. ಇಲ್ಲವೆಂದರೆ ಮೊಸರು ಒಡೆದುಹೋಗುತ್ತದೆ. 10-14 ನಿಮಿಷ ಸಣ್ಣ ಉರಿಯಲ್ಲಿ ಇದನ್ನು ಬೇಯಿಸಬೇಕು.
* ಈಗ ಖಡಿಗೆ ಕರಿದ ಪಕೋಡಾ ಹಾಕಿ ಮೃದುವಾಗಿ ಕಲೆಸಿ ಒಲೆ ಆರಿಸಬೇಕು.
ಕೊತ್ತಂಬರಿ ಸೊಪ್ಪನ್ನು ಸಣ್ಣದಾಗಿ ಕತ್ತರಿಸಿ ಮೇಲೆ ಉದುರಿಸಿದರೆ ಪಕೋಡಾ ಖಡಿ ತಿನ್ನಲು ರೆಡಿ. ರೋಟಿ, ಅನ್ನ ಯಾವುದೊಂದಿಗಾದರೂ ಈ ಪಕೋಡಾ ಖಡಿ ತಿನ್ನಲು ರುಚಿಕರವಾಗಿರುತ್ತೆ.



Click it and Unblock the Notifications
