Latest Updates
-
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು
ಈ ಸಮಯದಲ್ಲಿ ಮಾಡಿ ಹಲಸಿನ ಕಾಯಿ ಕಬಾಬ್

ಆದ್ದರಿಂದ ಈ ಸಮಯದಲ್ಲಿ ಊರಿಗೆ ಹೋದರೆ ಗುಜ್ಜೆ (ಎಳೆ ಹಲಸಿನ ಕಾಯಿ) ತರಲು ಮರೆಯಬೇಡಿ. ಇದರಿಂದ ಅನೇಕ ರುಚಿಕರ ಖಾದ್ಯಗಳನ್ನು ತಯಾರಿಸುವ ವಿಧಾನ ಬಗ್ಗೆ ಕನ್ನಡ ಬೊಲ್ಡ್ ಸ್ಕೈ ನಿಮಗೆ ತಿಳಿಸಿ ಕೊಡಲಿದೆ. ಇವತ್ತು ನಾವು ಹಲಸಿನ ಕಾಯಿಯಿಂದ ಕಬಾಬ್ ಮಾಡುವ ವಿಧಾನ ತಿಳಿಯೋಣ:
ಬೇಕಾಗುವ ಸಾಮಾಗ್ರಿಗಳು:
1. ಚಿಕ್ಕ ಗಾತ್ರದ ಎಳೆ ಹಲಸಿನ ಕಾಯಿ 1(ಎಳೆ ತೊಳೆಗಳಿರಬೇಕು)
2. 1/2 ಕಪ್ ಬೇಳೆ
3. ಒಂದು ಬೆಳ್ಳುಳ್ಳಿ
4. ಸ್ವಲ್ಪ ಚಕ್ಕೆ ಮತ್ತು ಲವಂಗ
5. 1/2 ಕಪ್ ಕಡಲೆ ಹಿಟ್ಟು
6. 1 ಚಮಚ ಮೆನಸಿನ ಪುಡಿ (ಖಾರ ಬೇಕಿದ್ದರೆ ಇನ್ನೂ ಸ್ವಲ್ಪ ಹಾಕಿ)
7. ರುಚಿಗೆ ತಕ್ಕ ಉಪ್ಪು
8. ಎಣ್ಣೆ
9. ಶುಂಠಿ (ಎರಡು ಇಂಚಿನಷ್ಟು)
10. ಕತ್ತರಿಸಿದ ಈರುಳ್ಳಿ
11. ಅರಿಶಿಣ
ತಯಾರಿಸುವ ವಿಧಾನ:
1. ಹಲಸಿನ ಕಾಯಿಯ ಸಿಪ್ಪೆಯನ್ನು ಕೆತ್ತಿ ಬಿಸಾಡಬೇಕು. ಈಗ ಅದನ್ನು ಚಿಕ್ಕ ತುಂಡುಗಳಾಗಿ ಕತ್ತರಿಸಿ ( ಸಾರಿಗೆ ಆಲೂಗಡ್ಡೆ ಕತ್ತರಿಸಿ ಹಾಕುವಷ್ಟು ಗಾತ್ರದಲ್ಲಿ).
2. ಈಗ ಅದನ್ನು ಬೇಳೆ ಜೊತೆ ಹಾಕಿ ಸವಲ್ಪ ನೀರು ಹಕಿ ಚೆನ್ನಾಗಿ ಬೇಯಿಸಿ. ಬೆಂದ ಮೇಲೆ ಚಿಟಿಕೆಯಷ್ಟು ಉಪ್ಪು 2-3 ನಿಮಿಷ ಬೇಯಿಸಿ. ನಂತರ ಅದರಲ್ಲಿರುವ ಅಧಿಕ ನೀರನ್ನು ಸೋಸಿ ತೆಗೆಯಬೇಕು.
3. ಬೆಂದ ಹಲಸಿನ ಕಾಯಿ ಮತ್ತು ಬೇಳೆಗೆ ಬೆಳ್ಳುಳ್ಳಿ, ಚಕ್ಕೆ, ಲವಂಗ, ರುಚಿಗೆ ತಕ್ಕ ಉಪ್ಪು ಹಾಕಿ ಮಿಕ್ಸಿಯಲ್ಲಿ ಅರೆಯಬೇಕು (ತುಂಬಾ ನುಣ್ಣಗೆ ಅರೆಯಬಾರದು)
4. ಈಗ ಅರೆದ ಮಿಶ್ರಣಕ್ಕೆ ಮೆಣಸಿನ ಪುಡಿ, ಅರಿಶಿಣ ಹಾಕಿ, ಕತ್ತರಿಸಿದ ಈರುಳ್ಳಿ, ಜಜ್ಜಿದ ಶುಂಠಿ ಹಾಕಿ ಚೆನ್ನಾಗಿ ಮಿಶ್ರ ಮಾಡಬೇಕು.
5. ಬಾಣಲೆಯಲ್ಲಿ ಎಣ್ಣೆಯನ್ನು ಹಾಕಿ ಬಿಸಿ ಮಾಡಬೇಕು.
6. ನಂತರ ಆ ಮಿಶ್ರಣದಿಂದ ಕಬಾಬ್ ಉಂಡೆಗಳನ್ನು ಮಾಡಿ ಅದನ್ನು ಸ್ವಲ್ಪ ಚಪ್ಪಟೆಯಾಗಿ ತಟ್ಟಬೇಕು.
7. ಮೊದಲೆ ಕಡಲೆಹಿಟ್ಟನ್ನು ಸ್ವಲ್ಪ ನೀರು ಹಾಕಿ ಕಲೆಸಿರಬೇಕು. ಈ ಹಿಟ್ಟಿಗೆ ಕಬಾಬ್ ಉಂಡೆಯನ್ನು ಅದ್ದಿ ಎಣ್ಣೆಯಲ್ಲಿ ಹಾಕಿ ಹುರಿದರೆ ಹಲಸಿನ ಕಾಯಿ ಕಬಾಬ್ ರೆಡಿ.



Click it and Unblock the Notifications
