Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಗಟ್ಟಿ ಮೊಸರು ಮಾಡುವುದು ಇಷ್ಟು ಸುಲಭವೇ? ಯಾವುದೇ ಹೆಪ್ಪು ಬೇಕಾಗಿಲ್ಲ
ಮೊಸರು ಮಾಡಲು ಯಾವುದೇ ಮೊಸರು ಹೆಪ್ಪು ಬೇಕಾಗಿಲ್ಲ, ಆದರೂ ನೀವು ಗಟ್ಟಿ ಮೊಸರು ತಯಾರಿಸಬಹುದು, ಇದಕ್ಕೆ ಬರಿ ಎರಡು ವಸ್ತುವಿದ್ದರೆ ಸಾಕು ಗಟ್ಟಿ ಮೊಸರು ರೆಡಿ ಮಾಡಬಹುದು, ಅದರಲ್ಲಿಯೂ ಹೆಚ್ಚು ಹುಳಿಯಿಲ್ಲದ ಈ ಮೊಸರು ತಿನ್ನಲು ತುಂಬಾನೇ ರುಚಿಯಾಗಿರುತ್ತದೆ. ಗಟ್ಟಿ ಮೊಸರು ಹೊರಗಡೆಯಿಂದ ಖರೀದಿಸುವುದಾದರೆ ಮೊಸರಿನ ದುಪ್ಪಟ್ಟು ದುಡ್ಡು, ಆದರೆ ನೀವು ಕಡಿಮೆ ಹಣದಲ್ಲಿ ಗಟ್ಟಿ ಮೊಸರು ಮಾಡಬಹುದು.

ಇದಕ್ಕೆ ಬೇಕಾಗಿರುವುದು ಈ ಎರಡೇ ಎರಡು ಸಾಮಗ್ರಿ ಅಷ್ಟೇ
1. ಹಾಲು
2. ಮೂರು ಹಸಿಮೆಣಸು
ಗಟ್ಟಿ ಮೊಸರು ಮಾಡುವುದು ಹೇಗೆ?
ನೀವು ಹಾಲನ್ನು ಕುದಿಸಿ
ಹಾಲು ಕುದಿ ಬಂದ ಮೇಲೆ ಉರಿಯಿಂದ ಇಳಿಸಿ ನಂತರ ಅದಕ್ಕೆ ಹಸಿ ಮೆಣಸು ಹಾಕಿ ಅದರ
ತೊಟ್ಟು ಕೂಡ ಮುರಿದು ಹಾಕಿ.ನಂತರ ಪಾತ್ರೆಯ ಬಾಯಿ ಮುಚ್ಚಿ 8-10 ಗಂಟೆ ಕಳೆದ ಮೇಲೆ
ತೆಗೆದು ನೋಡಿ ಗಟ್ಟಿಯಾದ ಮೊಸರು ರೆಡಿ.
ಈ ಮೊಸರು ನೀವು ಹೊರಗಡೆಯಿಂದ ದುಬಾರಿ ದುಡ್ಡು ಕೊಟ್ಟು ತರುವ ಮೊಸರಷ್ಟೇ
ಚೆನ್ನಾಗಿರುತ್ತದೆ. ಇದಕ್ಕೆ ಸ್ವಲ್ಪ ಸಕ್ಕರೆ ಹಾಕಿ ತಿನ್ನಬಹುದು ಅಥವಾ ಈ
ಮೊಸರಿನಿಂದ ಮಜ್ಜಿಗೆ ಮಾಡಿಯೂ ಕುಡಿಯಬಹುದು.
ಮೊಸರು ಸೇವನೆಯಿಂದ ದೊರೆಯುವ ಪ್ರಯೋಜನಗಳು
ಇದರಲ್ಲಿ ಪ್ರೋಬಯೋಟಿಕ್ ಅಧಿಕವಿರಲಿದೆ, ಇದು ಜೀರ್ಣಕ್ರಿಯೆಗೆ ತುಂಬಾನೇ
ಒಳ್ಳೆಯದು, ಹೊಟ್ಟೆ ಉಬ್ಬುವುದು, ಅಜೀರ್ಣ, ಮಲಬದ್ಧತೆ ಈ ಬಗೆಯ ಸಮಸ್ಯೆ
ತಡೆಗಟ್ಟಲು ಸಹಕಾರಿಯಾಗಿದೆ.
ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ?
ಈ ಮೊಸರು ಸೇವನೆಯಿಂದ ಹೊಟ್ಟೆಯ ಆರೋಗ್ಯಕ್ಕೆ ಒಳ್ಳೆಯದು ಅಲ್ಲದೆ ದೇಹದಲ್ಲಿ ರೋಗ
ನಿರೋಧಕ ಶಕ್ತಿ ಹೆಚ್ಚಾಗಲಿದೆ, ಬೇಸಿಗೆಯಲ್ಲಿ ಮೊಸರು ಸೇವನೆ ತುಂಬಾನೇ
ಒಳ್ಳೆಯದು.
ತ್ವಚೆಯ ಆರೋಗ್ಯಕ್ಕೆ ಒಳ್ಳೆಯದು
ಮೊಸರಿನಲ್ಲಿ ವಿಟಮಿನ್ ಸಿ ಇದೆ, ಇದರಿಂದಾಗಿ ತ್ವಚೆಹೆ ತುಂಬಾನೇ ಒಳ್ಳೆಯದು,
ತ್ವಚೆಯನ್ನು ಆಂತರಿಕವಾಗಿ ಪೋಷಣೆ ಮಾಡುತ್ತದೆ.
ಮೊಸರು ಮಾನಸಿಕ ಒತ್ತಡ ಕಡಿಮೆ ಮಾಡುತ್ತದೆ
ಮೊಸರಿನಲ್ಲಿ ಪೋಷಕಾಂಶ ಚೆನ್ನಾಗಿದೆ, ಅಲ್ಲದೆ ಇದರ ಸೇವನೆಯಿಂದ ಮಾನಸಿಕ ಒತ್ತಡ
ಕಡಿಮೆ ಮಾಡುವಲ್ಲಿ ಸಹಕಾರಿಯಾಗಿದೆ. ಇದು ಚಟುಪಚಯ ಕ್ರಿಯೆ ಉತ್ತಮವಾಗಿಸಲು
ತುಂಬಾನೇ ಸಹಕಾರಿಯಾಗಿದೆ.
ಮೊಸರನ್ನು ಯಾವಾಗ ತಿಂದರೆ ಒಳ್ಳೆಯದು?
ಆಯುರ್ವೇದ ಪ್ರಕಾರ ಮೊಸರನ್ನು ಬೆಳಗ್ಗೆ ಹೊತ್ತಿನಲ್ಲಿಅಥವಾ ಮಧ್ಯಾಹ್ನದ ಸಮಯದಲ್ಲಿ
ತಿಂದರೆ ಒಳ್ಳೆಯದು. ರಾತ್ರಿ ಹೊತ್ತಿನಲ್ಲಿ ತಿನ್ನಬಾರದು, ಮೊಸರು ಕೊಬ್ಬಿನಂಶದ
ಆಹಾರವಾಗಿದ್ದು ರಾತ್ರಿ ಸಮಯದಲ್ಲಿ ತಿನ್ನುವುದರಿಂದ ಜೀರ್ಣಕ್ರಿಯೆಗೆ ತೊಂದರೆ
ಉಂಟಾಗುವುದು ಎಂದು ಆಯುರ್ವೇದದಲ್ಲಿ ಹೇಳಲಾಗಿದೆ.
ಇತರ ಸಲಹೆ:ಈ ಗಟ್ಟಿ ಮೊಸರನ್ನು ಯಾವುದೇ ಹಾಲಿನಿಂದ ತಯಾರಿಸಬಹುದೇ?
ಈ ಮೊಸರನ್ನು ಹಸುವಿನ ಹಾಲಿನಿಂದ ಅಥವಾ ಪ್ಯಾಕೆಟ್ ಹಾಲಿನಿಂದಲೂ ತಯಾರಿಸಬಹುದು, ಆದರೆ ನಮಗೆ ಹಸುವಿನಿಂದ ನೇರವಾಗಿ ಸಿಗುವ ಹಾಲಾದರೆ ಈ ಮೊಸರು ತುಂಬಾ ರುಚಿಯಾಗಿರುತ್ತದೆ, ಅದರಲ್ಲಿ ಕೆನೆಯಂಶ ಇರುವುದರಿಂದ ಮೊಸರಿನ ರುಚಿ ಕೂಡ ಸೂಪರ್ ಅನಿಸುವುದುಉ.



Click it and Unblock the Notifications