Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ರಸಂ ಪೌಡರ್ ಬೇಡ, ಬೇಳೆಯೂ ಬೇಡ ಬರಿ ಐದೇ ನಿಮಿಷದೊಳಗೆ ರೆಡಿಮಾಡಬಹುದು ಸೂಪರ್ ರಸಂ
5 ನಿಮಿಷದೊಳಗೆ ರಸಂ ಮಾಡಬೇಕೆಂದರೆ ರಸಂ ಪೌಡರ್ ಕ್ಯೂಬ್ಸ್ ಸಿಗುತ್ತೆ ಅದನ್ನು ನೀರಿನಲ್ಲಿ ಹಾಕಿ ಕುದಿಸಿ ಮಾಡುತ್ತಾರೆ, ಆದರೆ ಹೊರಗಡೆಯಿಂದ ಸಿಗುವ ಯಾವುದೇ ರಸಂ ಪುಡಿ ಅಥವಾ ರಸಂ ಪುಡಿಯ ಕ್ಯೂಬ್ ಏನೂ ಇಲ್ಲದೆ ರುಚಿ ರುಚಿಯಾದ ರಸಂ ಅನ್ನು ಬರಿ ಐದು ನಿಮಿಷದೊಳಗೆ ಮಾಡಬಹುದು ಎಂದರೆ ನೀವು ನಂಬುತ್ತೀರಾ? ಹೌದು ಅಂಥದ್ದೊಂದು ರಸಂ ರೆಸಿಪಿ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ.
ಇನ್ನು ಈ ರಸಂ ಮಾಡಲು ಬೇಳೆ ಹಾಕಬೇಕಾಗಿಲ್ಲ, ಯಾವುದೇ ಮಸಾಲೆ ಪುಡಿ, ರಸಂ ಪುಡಿ ಮಾಡಬೇಕಾಗಗಿಲ್ಲ, ಬಲು ಸುಲಭದಲ್ಲಿ ಮಾಡಬಹುದು. ಇನ್ನು ಈ ರಸಂ 5 ಜನರಿಂದ 50 ಜನಕ್ಕೆ ಬೇಕಾದರೆ ಮಾಡಬಹುದು. ಮಾಡುವ ವಿಧಾನ ಒಂದೇ ಆದರೆ ಬಳಸುವ ಸಾಮಗ್ರಿ ಹೆಚ್ಚು ಬಳಸಿದರೆ ನೀವು ಮನೆಯ ಸಮಾರಂಭಗಳಲ್ಲಿ ಬಲು ಸುಲಭದಲ್ಲಿ ಮಾಡಬಹುದಾದ ರಸಂ ಇದಾಗಿದೆ, ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ:

ಪಟ್ ಅಂತ ರೆಡಿಯಾಗುವ ರಸಂಗೆ ಬೇಕಾಗುವ ಸಾಮಗ್ರಿ
2-3 ಒಣ ಮೆಣಸು
2 ಹಸಿ ಮೆಣಸು (ಖಾರ ಕಡಿಮೆ ಬೇಕೆಂದರೆ 1 ಹಸಿ ಮೆಣಸು ಹಾಕಿದರೆ ಸಾಕಾಗುತ್ತೆ)
1 ಚಮಚ ಕಾಳು ಮೆಣಸು
1 ಚಮಚ ಜೀರಿಗೆ
ಅರ್ಧ ಟೊಮೆಟೊ
8-10 ಎಸಳು ಬೆಳ್ಳುಳ್ಳಿ
3-4 ಕೊತ್ತಂಬರಿ ಸೊಪ್ಪು
1 ನೆಲ್ಲಿಕಾಯಿ ಗಾತ್ರದಷ್ಟು ಹುಣಸೆಹಣ್ಣು
ಇಷ್ಟು ಸಾಮಗ್ರಿ ಹಾಕಿ ನುಣ್ಣನೆ ರುಬ್ಬಿ
ಈಗ ಪಾತ್ರೆ ಬಿಸಿ 1 ಚಮಚ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದಾಗ ಸಾಸಿವೆ ಹಾಕಿ, ಸಾಸಿವೆ ಚಟ್ಪಟ್ ಶಬ್ದ ಮಾಡುವಾಗ ಕರಿಬೇವು ಹಾಕಿ, ನಂತರ ಉಳಿದ ಟೊಮೆಟೊ ಚಿಕ್ಕದಾಗಿ ಕತ್ತರಿಸಿ, ಟೊಮೆಟೊ ಮೆತ್ತಗಾಗುವವರೆಗೆ ಫ್ರೈ ಮಾಡಿ, ಬಳಿಕ ರುಬ್ಬಿದ ಮಸಾಲೆ ಹಾಕಿ, ಎಣ್ಣೆಯಲ್ಲಿಯೇ ಸ್ವಲ್ಪ ಫ್ರೈ ಮಾಡಿ, ನಂತರ ಅರಿಶಿಣ ಪುಡಿ, ಉಪ್ಪು ಸೇರಿಸಿ ಬಳಿಕ 1 ಕಪ್ ನೀರು ಸೇರಿಸಿ ಕುದಿಸಿ, ಬಳಿಕ ಸ್ವಲ್ಪ ಕೊತ್ತಂಬರಿ ಸೊಪ್ಪು ಹಾಕಿ ಉದುರಿಸಿದರೆ ಸಂ ರೆಡಿ.
ಇತರ ಸಲಹೆ
ನೀವು ಬೆಳ್ಳುಳ್ಳಿಯನ್ನು ಒಗ್ಗರಣೆ ಹಾಕುವಾಗ ಕೂಡ 2-3 ಎಸಳು ಬಳಸಬಹುದು
ಬೆಳ್ಳುಳ್ಳಿ ಒಗ್ಗರಣೆಗೆ ಅಥವಾ ರುಬ್ಬುವಾಗ ಹಾಕದೆಯೂ ಬಳಸಬಹುದು
ಇನ್ನು ಒಗ್ಗರಣೆ ಹಾಕುವಾಗ ಸ್ವಲ್ಪ ಇಂಗು ಕೂಡ ಸೇರಿಸಿದರೆ ಘಂ ಎನ್ನುವ ಸುವಾಸನೆ
ಜೊತೆಗೆ ರುಚಿ ತುಂಬಾ ಚೆನ್ನಾಗಿರುತ್ತದೆ.
ಒಗ್ಗರಣೆಗೆ ಒಣ ಮೆಣಸು ಕೂಡ ಮುರಿದು ಹಾಕಬಬಹುದು.
ಇನ್ನು ಕೆಲವೊಮ್ಮೆ ತರಕಾರಿ ಎಲ್ಲಾ ಖಾಲಿಯಾಗಿದೆ ಅಥವಾ ತರಕಾರಿ ರೇಟ್ ಗಗನಕ್ಕೇರಿದಾಗ ಈ ರೀತಿ ಸಿಂಪಲ್ ರೆಸಿಪಿಗಳು ಬಜೆಟ್ ಫ್ರೆಂಡ್ಲಿ ಅಲ್ಲದೆ ರುಚಿ ಕೂಡ ತುಂಬಾನೇ ಚೆನ್ನಾಗಿರುತ್ತದೆ.



Click it and Unblock the Notifications