Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಕುಕ್ಕರ್ನಲ್ಲಿಯೇ ಮಾಡಬಹುದು ಈ ಎಗ್ಲೆಸ್ ಕೇಕ್!
ಕೊರೊನಾವೈರಸ್ನಿಂದಾಗಿ ಲಾಕ್ಡೌನ್ ಆಗಿರುವುದರಿಂದ ಮನೆಯಲ್ಲಿ ಯಾರಾದಾದರೂ ಬರ್ತ್ಡೇ ಇದ್ದರೆ ಅಯ್ಯೋ ಕೇಕ್ ಇಲ್ಲ ಅಲ್ವಾ ಅಂತ ಅಂದ್ಕೋಬೇಡಿ. ಏಕೆಂದರೆ ನೀವೇ ಸುಲಭವಾಗಿ ಮನೆಯಲ್ಲಿಯೇ ಕೇಕ್ ತಯಾರಿಸಬಹುದು. ಈ ಕೇಕ್ ತಯಾರಿಸಲು ಮೈಕ್ರೋವೇವ್ ಕೂಡ ಬೇಕಾಗಿಲ್ಲ. ಮನೆಯಲ್ಲಿಯೇ ಮಾಡಬಹುದು.

ಇದು ಎಗ್ಲೆಸ್ ಕೇಕ್ ಆಗಿದ್ದು ಕೇಕ್ ಸವಿ ನೋಡ ಬಯಸುವವರು ಕೂಡ ಇದನ್ನು ಮಾಡಿ ಸವಿಯಬಹುದು. ಈ ಕೇಕ್ನ ರೆಸಿಪಿ ತುಂಬಾ ಸರಳವಾಗಿದೆ ನೋಡಿ.
Recipe By: Reena TK
Recipe Type: Cake
Serves: 6
-
ಬೇಕಾಗುವ ಸಾಮಗ್ರಿ
ಮೈದಾ 1 ಕಪ್
ಮಂದವಾದ ಹಾಲು ಅರ್ಧ ಕಪ್ (1ಕಪ್ ಹಾಲು ಕುದಿಸಿ ಅರ್ಧದಷ್ಟು ಮಾಡಿದ್ದು)
ಸಕ್ಕರೆ 1/4 ಕಪ್
ಗೋಡಂಬಿ 1 ಚಮಚ
ಒಣದ್ರಾಕ್ಷಿ 1 ಚಮಚ
ಅಡುಗೆ ಸೋಡಾ 1/4 ಕಪ್
ಬೇಕಿಂಗ್ ಪೌಡರ್ 1/2 ಚಮಚ
ಬೆಣ್ಣೆ 1/4 ಕಪ್
ಹಾಲು ಅರ್ಧ ಕಪ್
ಉಪ್ಪು 1 ಕಪ್(ಉಷ್ಣಾಂಶ ತಡೆಯಲು)
ತಳದಲ್ಲಿ ಸವರಲು
ಮೈದಾ 1 ಚಮಚ
ಬೆಣ್ಣೆ 1 ಚಮಚ
-
ಮಾಡುವ ವಿಧಾನ
*. ಬೇಕಿಂಗ್ ಪೌಡರ್, ಬೇಕಿಂಗ್ ಸೋಡಾ(ಅಡುಗೆ ಸೋಡಾ) ಹಾಗೂ ಮೈದಾ ಮೂರನ್ನು ಚೆನ್ನಾಗಿ ಮಿಕ್ಸ್ ಮಾಡಿ.
* ಸಕ್ಕರೆಯನ್ನು ಚೆನ್ನಾಗಿ ಪುಡಿ ಮಾಡಿ ಅದನ್ನು ಬೆಣ್ಣೆ ಜೊತೆ ಮಿಕ್ಸ್ ಮಾಡಿ.
* ಈಗ ಸಕ್ಕರೆ ಮಿಕ್ಸ್ಗೆ ಮಂದವಾದ ಹಾಲು ಚೆನ್ನಾಗಿ ಮಿಕ್ಸ್ ಮಾಡಿ.
* ಈಗ ಮೈದಾ ಹಿಟ್ಟಿಗೆ ಅರ್ಧದಷ್ಟು ಹಾಲು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
* ಈಗ ಕುಕ್ಕರ್ ಬಿಸಿ ಮಾಡಿ ತಳದಲ್ಲಿ ಉಪ್ಪು ಹಾಕಿ, ಇದು ಕುಕ್ಕರ್ ಉಷ್ಣಾಂಶವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಕುಕ್ಕರ್ ಮುಚ್ಚಳ ಹಾಕಿ ಬಿಸಿ ಮಾಡಿ.
* ಮೈದಾಗೆ ಮಂದವಾದ ಹಾಲಿನ ಮಿಶ್ರಣ ಹಾಕಿ ಚೆನ್ನಾಗಿ ಮಿಶ್ರ ಮಾಡಿ. ಮಿಶ್ರಣ ತುಂಬಾ ಮೃದುವಾಗಿರಬೇಕು, ಗಂಟು-ಗಂಟಾಗದಂತೆ ಚೆನ್ನಾಗಿ ಮಿಶ್ರಣ ಮಾಡಿ.
ಉಳಿದ ಹಾಲನ್ನು ಹಾಕಿ ಮಿಶ್ರಣವನ್ನು ಮತ್ತಷ್ಟು ಮೃದು ಮಾಡಿ.
* ಈಗ ಬೌಲ್ಗೆ ಬೆಣ್ಣೆ ಸವರಿ, ನಂತರ ಮೈದಾ ಮಿಶ್ರಣ ಉದುರಿಸಿ, ಅದರಲ್ಲಿ ಮಿಶ್ರಣ ಸವರಿ ಅದರಲ್ಲಿ ಹಿಟ್ಟನ್ನು ಸುರಿದು ಬೌಲ್ನ ಬಾಯಿ ಮುಚ್ಚಿ ನಂತರ ಕುಕ್ಕರ್ ಮುಚ್ಚಳ ಹಾಕಿ ಬೇಯಿಸಿ. ಆದರೆ ವಿಶಲ್ ಹಾಕಬೇಡಿ.
* ಕಡಿಮೆ ಉರಿಯಲ್ಲಿ 30-40 ನಿಮಿಷ ಬೇಯಿಸಿ.
*ಈಗ ಕುಕ್ಕರ್ ಮುಚ್ಚಳ ತೆಗೆದು ಬೌಲ್ನ ಮುಚ್ಚಳ ತೆಗೆದು ನೈಫ್ನಲ್ಲಿ ಚುಚ್ಚಿ ನೋಡಿ, ಮಿಶ್ರಣ ಬೆಂದಿದ್ದರೆ ಅದರ ಹಿಟ್ಟು ನೈಫ್ಗೆ ಅಂಟುವುದಿಲ್ಲ. ಕೇಕ್ ಬೆಂದ ಮೇಲೆ ತಣ್ಣಗಾಗಲು ಬಿಡಿ.
* ನಂತರ ಅದನ್ನು ಮೆಲ್ಲಗೆ ತೆಗೆದು ನಿಮಗೆ ಬೇಕಾದ ಆಕಾರದಲ್ಲಿ ಕತ್ತರಿಸಿ.
ರೆಡಿಯಾದ ಕೇಕ್ ಅನ್ನು ಮನೆಮಂದಿ ಜೊತೆ ಸವಿಯಿರಿ.
- ಈ ಕೇಕ್ ತುಂಬಾ ಸುಲಭವಾಗಿ ಮಾಡಬಹುದು, ಆದರೆ ಹಿಟ್ಟು ಗಂಟು-ಗಂಟಾಗದಂತೆ ಚೆನ್ನಾಗಿ ಮಿಶ್ರಣ ಮಾಡಬೇಕು.
- ಕ್ಯಾಲೋರಿ - 164
- ಕೊಬ್ಬಿನಂಶ - ಇತರ ಕೇಕ್ಗಿಂತ ಕಡಿಮೆ ಇದೆ
ಮಾಡುವ ವಿಧಾನ
*. ಬೇಕಿಂಗ್ ಪೌಡರ್, ಬೇಕಿಂಗ್ ಸೋಡಾ(ಅಡುಗೆ ಸೋಡಾ) ಹಾಗೂ ಮೈದಾ ಮೂರನ್ನು
ಚೆನ್ನಾಗಿ ಮಿಕ್ಸ್ ಮಾಡಿ.
* ಸಕ್ಕರೆಯನ್ನು ಚೆನ್ನಾಗಿ ಪುಡಿ ಮಾಡಿ ಅದನ್ನು ಬೆಣ್ಣೆ ಜೊತೆ ಮಿಕ್ಸ್
ಮಾಡಿ.

* ಈಗ ಸಕ್ಕರೆ ಮಿಕ್ಸ್ಗೆ ಮಂದವಾದ ಹಾಲು ಚೆನ್ನಾಗಿ ಮಿಕ್ಸ್ ಮಾಡಿ.
* ಈಗ ಮೈದಾ ಹಿಟ್ಟಿಗೆ ಅರ್ಧದಷ್ಟು ಹಾಲು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.

* ಮೈದಾಗೆ ಮಂದವಾದ ಹಾಲಿನ ಮಿಶ್ರಣ ಹಾಕಿ ಚೆನ್ನಾಗಿ ಮಿಶ್ರ ಮಾಡಿ. ಮಿಶ್ರಣ ತುಂಬಾ ಮೃದುವಾಗಿರಬೇಕು, ಗಂಟು-ಗಂಟಾಗದಂತೆ ಚೆನ್ನಾಗಿ ಮಿಶ್ರಣ ಮಾಡಿ.
ಉಳಿದ ಹಾಲನ್ನು ಹಾಕಿ ಮಿಶ್ರಣವನ್ನು ಮತ್ತಷ್ಟು ಮೃದು ಮಾಡಿ.
* ಈಗ ಬೌಲ್ಗೆ ಬೆಣ್ಣೆ ಸವರಿ, ನಂತರ ಮೈದಾ ಮಿಶ್ರಣ ಉದುರಿಸಿ, ಅದರಲ್ಲಿ ಮಿಶ್ರಣ ಸವರಿ ಅದರಲ್ಲಿ ಹಿಟ್ಟನ್ನು ಸುರಿದು ಬೌಲ್ನ ಬಾಯಿ ಮುಚ್ಚಿ ನಂತರ ಕುಕ್ಕರ್ ಮುಚ್ಚಳ ಹಾಕಿ ಬೇಯಿಸಿ. ಆದರೆ ವಿಶಲ್ ಹಾಕಬೇಡಿ.

* ಕಡಿಮೆ ಉರಿಯಲ್ಲಿ 30-40 ನಿಮಿಷ ಬೇಯಿಸಿ.
*ಈಗ ಕುಕ್ಕರ್ ಮುಚ್ಚಳ ತೆಗೆದು ಬೌಲ್ನ ಮುಚ್ಚಳ ತೆಗೆದು ನೈಫ್ನಲ್ಲಿ ಚುಚ್ಚಿ
ನೋಡಿ, ಮಿಶ್ರಣ ಬೆಂದಿದ್ದರೆ ಅದರ ಹಿಟ್ಟು ನೈಫ್ಗೆ ಅಂಟುವುದಿಲ್ಲ. ಕೇಕ್ ಬೆಂದ
ಮೇಲೆ ತಣ್ಣಗಾಗಲು ಬಿಡಿ.

* ನಂತರ ಅದನ್ನು ಮೆಲ್ಲಗೆ ತೆಗೆದು ನಿಮಗೆ ಬೇಕಾದ ಆಕಾರದಲ್ಲಿ ಕತ್ತರಿಸಿ.

ರೆಡಿಯಾದ ಕೇಕ್ ಅನ್ನು ಮನೆಮಂದಿ ಜೊತೆ ಸವಿಯಿರಿ.

Click it and Unblock the Notifications