For Quick Alerts
ALLOW NOTIFICATIONS  
For Daily Alerts

ಸಂಕ್ರಾಂತಿ : ಎಳ್ಳು-ಬೆಲ್ಲದ ಲಡ್ಡು ರೆಸಿಪಿ

Posted By:
|

ಸಂಕ್ರಾಂತಿಗೆ ಎಳ್ಳು-ಬೆಲ್ಲ ತಯಾರಿಸಲಾಗುವುದು, ಇದರ ಜೊತೆಗೆ ನೀವು ಅನೇಕ ಬಗೆಯ ಸಿಹಿ ತಿಂಡಿ ಕೂಡ ಮಾಡಬಹುದು. ನಾವಿಲ್ಲಿ ಸಂಕ್ರಾಂತಿಗೆ ಎಳ್ಳು-ಬೆಲ್ಲದ ಲಡ್ಡು ಮಾಡುವ ರೆಸಿಪಿ ನೀಡಿದ್ದೇವೆ. ಚಳಿಗಾಲದಲ್ಲಿ ಆರೋಗ್ಯಕ್ಕೆ ಹೇಳಿ ಮಾಡಿಸಿದ ರೆಸಿಪಿ ಇದಾಗಿದೆ. ಈ ಎಳ್ಳು-ಬೆಲ್ಲದ ಉಂಡೆ ಮಾಡಿಟ್ಟು ದಿನಾ ಒಂದು ಸವಿದರೆ ಆರೋಗ್ಯಕ್ಕೆ, ತ್ವಚೆಗೆ ತುಂಬಾನೇ ಒಳ್ಳೆಯದು. ನೆಲಗಡಲೆ, ಎಳ್ಳಿನಲ್ಲಿರುವ ಎಣ್ಣೆಯಂಶ ತ್ವಚೆ ರಕ್ಷಣೆ ಮಾಡಿದರೆ ಬೆಲ್ಲ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದು.

Sankranti Recipe

ಈ ಎಳ್ಳು-ಬೆಲ್ಲದ ರೆಸಿಪಿ ಮಾಡುವುದು ದೊಡ್ಡ ಕಷ್ಟವೇನಿಲ್ಲ, ತುಂಬಾ ಸುಲಭವಾಗಿ ಮಾಡಬಹುದು ನೋಡಿ:

Til Jaggery Ladoo, ಎಳ್ಳು-ಬೆಲ್ಲದ ಲಡ್ಡು
Til Jaggery Ladoo, ಎಳ್ಳು-ಬೆಲ್ಲದ ಲಡ್ಡು
Prep Time
30 Mins
Cook Time
10M
Total Time
40 Mins

Recipe By: Reena TK

Recipe Type: snacks

Serves: 5

Ingredients
  • ಬೇಕಾಗುವ ಸಾಮಗ್ರಿ

    *145ಗ್ರಾಂ ಅಥವಾ 1 ಕಪ್‌ ಬಿಳಿ ಎಳ್ಳು

    * 40 ಗ್ರಾಂ ನೆಲಗಡಲೆ

    * 1/2 ಕಪ್ ತೆಂಗಿನ ತುರಿ

    * 100ಗ್ರಾಂ ಅಥವಾ ಮುಕ್ಕಾಲು ಕಪ್‌ ತುರಿದ ಬೆಲ್ಲ

    * 1/2 ಚಮಚ ಏಲಕ್ಕಿ ಪುಡಿ

Red Rice Kanda Poha
How to Prepare
  • ಮಾಡುವುದು ಹೇಗೆ?

    1. ಎಳ್ಳನ್ನು ಹುರಿಯಿರಿ

    * ಎಳ್ಳನ್ನು ಸ್ವಚ್ಛ ಮಾಡಿ, ಕಲ್ಲು ಇದ್ದರೆ ತೆಗೆಯಿರಿ. ಪ್ಯಾನ್‌ ಬಿಸಿ ಮಾಡಿ ಕಡಿಮೆ ಉರಿಯಲ್ಲಿ ಹುರಿಯಿರಿ.

    * ಎಳ್ಳು ಚೆನ್ನಾಗಿ ರೋಸ್ಟ್ ಮಾಡಬೇಕು, ಎಳ್ಳನ್ನು ಹುರಿದಾಗ ಚಟ್‌ಪಟ್ ಅಂತ ಶಬ್ದ ಬರುತ್ತದೆ ಅಷ್ಟು ಹೊತ್ತು ಹುರಿಯಬೇಕು, ನಂತರ ಅದನ್ನು ಒಂದು ಪ್ಲೇಟ್‌ನಲ್ಲಿ ಹಾಕಿಡಿ.

    2. ನೆಲಗಡಲೆ ಹುಡಿಯಿರಿ

    * ನೆಲಗಡಲೆಯನ್ನು ಕೂಡ ಕಡಿಮೆ ಉರಿಯಲ್ಲಿ ಚೆನ್ನಾಗಿ ಹುರಿಯಿರಿ. ನಂತರ ತಣ್ಣಗಾಗಲು ಪ್ಲೇಟ್‌ನಲ್ಲಿ ಹಾಕಿ.

    3. ತೆಂಗಿನ ತುರಿಯನ್ನು ಕಡಿಮೆ ಉರಿಯಲ್ಲಿ ಹುರಿಯಿರಿ. ತೆಂಗಿನ ತುರಿ ಸ್ವಲ್ಪ ಕಂದು ಬಣ್ಣಕ್ಕೆ ತಿರುಗುವಾಗ ತಣ್ಣಗಾಗಲು ತಟ್ಟೆಯಲ್ಲಿ ಹಾಕಿಡಿ.

    4. ವಿಧಾನ

    * ಈಗ ಎಳ್ಳು, ನೆಲಗಡಲೆ, ತೆಮಗಿನ ತುರಿ ತರಿ-ತರಿಯಾಗಿ ರುಬ್ಬಿ, ನಂತರ ಬೆಲ್ಲವನ್ನು ಪುಡಿ ಮಾಡಿ.

    * ಈಗ ಒಂದು ಬೌಲ್‌ಗೆ ಬೆಲ್ಲ, ರುಬ್ಬಿದ ಮಿಶ್ರಣ ಹಾಕಿ, ಏಲಕ್ಕಿ ಪುಡಿ ಮಿಕ್ಸ್ ಮಾಡಿ, ಚಿಕ್ಕ-ಚಿಕ್ಕ ಉಂಡೆ ಕಟ್ಟಿದರೆ ಎಳ್ಳು-ಬೆಲ್ಲದ ಲಡ್ಡು ರೆಡಿ.

Instructions
  • ಇದರ ಜೊತೆಗೆ ಡ್ರೈ ಫ್ರೂಟ್ಸ್ ಪುಡಿ ಮಾಡಿ ಸೇರಿಸಬಹುದು
Nutritional Information
[ 5 of 5 - 106 Users]
X
Desktop Bottom Promotion