Latest Updates
-
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ?
27 ವರ್ಷದ ಬಳಿಕ ಶನಿ ನಕ್ಷತ್ರ ಬದಲಾವಣೆ: 3 ರಾಶಿಯವರ ಅದೃಷ್ಟ ಬದಲು..!
ವೈದಿಕ ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹಗಳ ಚಲನೆಗೆ ಬಹಳ ಮಹತ್ವ ನೀಡಲಾಗುತ್ತದೆ. ಅದರಲ್ಲೂ ಅದೃಷ್ಟದ ಗ್ರಹವೆಂದು ಹಾಗೆ ಸಂಕಟಕ್ಕೆ ಕಾರಣವಾಗುವ ಗ್ರಹವೆಂದು ಕೂಡ ಪರಿಗಣಿಸಲಾಗಿದೆ. ಅದರಲ್ಲೂ ಶನಿ ಯಾವ ರಾಶಿಯಲ್ಲಿ ಚಲಿಸುತ್ತಾನೋ ಅವರಲ್ಲಿ ಒಂದು ಸಮಸ್ಯೆ ದೂರಾಗಬಹುದು ಹಾಗೆ ಉಳಿದ 12 ಗ್ರಹಗಳ ಮೇಲೆಯೂ ಕೂಡ ಆತನಿಂದ ಪರಿಣಾಮ ಉಂಟಾಗುವುದು ಸಾಮಾನ್ಯ.
ಆದ್ರೆ ಶನಿ ಗ್ರಹವು ಈಗ ರಾಶಿಯ ಬದಲಾಗಿ ತನ್ನ ನಕ್ಷತ್ರವನ್ನು ಬದಲಾಯಿಸುತ್ತಿದೆ. ಶನಿ ಈಗ ಉತ್ತರ ಭಾದ್ರಪದ ನಕ್ಷತ್ರಕ್ಕೆ ಸಲಿಸುತ್ತಿರುವುದು ಹಲವರಲ್ಲಿ ಲಾಭದಾಯಕ ಬೆಳವಣಿಗೆಗೆ ಕಾರಣವಾಗುತ್ತಿದೆ. ಶನಿ 27 ವರ್ಷಗಳ ಬಳಿಕ ತನ್ನ ನಕ್ಷತ್ರ ಬದಲಾಯಿಸುತ್ತಿದ್ದಾನೆ. ಶನಿ ಒಂದೇ ರಾಶಿಯಲ್ಲಿ ಎರಡೂವರೆ ವರ್ಷ ಚಲಿಸುವ ಗ್ರಹ. ಆದ್ರೆ ಕಾಲ ಕಾಲಕ್ಕೆ ನಕ್ಷತ್ರ ಬದಲಾಯಿಸುತ್ತಾನೆ.

ಪ್ರಸ್ತುತ ಶನಿಯು ಗುರು ಅಧಿಪತ್ಯ ಇರುವ ಮೀನ ರಾಶಿಯಲ್ಲಿ ಚಲಿಸುತ್ತಿದ್ದಾನೆ. ಆದ್ರೆ ಈಗ ಶನಿಯು ಉತ್ತರ ಭಾದ್ರಪದ ನಕ್ಷತ್ರಕ್ಕೆ ಚಲಿಸುತ್ತಿದ್ದಾನೆ. ಸುಮಾರು 27 ವರ್ಷದ ಬಳಿ ಶನಿ ಉತ್ತರ ಭಾದ್ರಪದ ನಕ್ಷತ್ರಕ್ಕೆ ಚಲಿಸುತ್ತಾನೆ. ಶನಿಯು ಈ ನಕ್ಷತ್ರದಲ್ಲಿ ಸಂಚಾರ ಮಾಡುವುದರಿಂದ ಅದರ ಪ್ರಭಾವವು ಎಲ್ಲಾ ರಾಶಿ ಜನರ ಮೇಲೆ ಕಂಡುಬರುತ್ತದೆ.
ಇದು ಹಲವರಿಗೆ ಲಾಭದಾಯಕವಾಗುತ್ತಿದೆ. ವೃತ್ತಿ ಆರ್ಥಿಕ ಸ್ಥಿತಿ ಸೇರಿ ಅವರ ಒಟ್ಟಾರೆ ಪ್ರಗತಿಗೆ ಇದು ಕಾರಣವಾಗುತ್ತಿದೆ. ಹಾಗಾದ್ರೆ ನಾವಿಂದು ಶನಿಯ ಈ ನಕ್ಷತ್ರ ಬದಲಾಣೆಯು ಯಾರಿಗೆ ಶುಭ ತರುತ್ತಿದೆ ಎಂಬುದನ್ನು ಈ ಲೇಖನದಲ್ಲಿ ತಿಳಿದುಕೊಳ್ಳುವ ಪ್ರಯತ್ನ ಮಾಡೋಣ.
ವೃಷಭ ರಾಶಿ
ವೃಷಭ ರಾಶಿಯವರಿಗೆ ಶನಿಯ ಈ ಸಂಚಾರದಿಂದಾಗಿ ಹಲವು ರೀತಿಯ ಲಾಭಕ್ಕೆ ಕಾರಣವಾಗಲಿದೆ. ನಿಮ್ಮ ಮನೆಯ ಒಟ್ಟಾರೆ ಆದಾಯದಲ್ಲಿ ಹೆಚ್ಚಳವಾಗಲಿದೆ. ನಿಮ್ಮ ಆದಾಯ ಮೂಲಗಳು ಮತ್ತಷ್ಟು ಹೆಚ್ಚಾಗಲಿವೆ. ನೀವು ಬಯಸಿದಂತೆ ಆಸ್ತಿ ಖರೀದಿ, ಜಮೀನು, ಮನೆ ಖರೀದಿಯಂತಹ ಕೆಲಸಕ್ಕೆ ಮುಂದಾಗಬಹುದು. ಆದರೆ ಹಣಕಾಸು ವಿಚಾರದಲ್ಲಿ ಎಚ್ಚರಿಕೆ ಇಡಿ. ಈ ಸಮಯದಲ್ಲಿ ನಿಮ್ಮ ಹಣವನ್ನು ನೀರಿನಂತೆ ಖರ್ಚು ಮಾಡುತ್ತಾರೆ. ನೀವು ಈಗಾಗಲೇ ಹೂಡಿಕೆ ಮಾಡಿದ್ದರೆ ಈ ಸಮಯದಲ್ಲಿ ನಿಧಾನವಾಗಿ ಲಾಭ ನೋಡುತ್ತೀರಿ. ಲಾಭದ ಎಲ್ಲಾ ಅಂಶವನ್ನು ನೀವು ಉತ್ತಮ ಕಾರ್ಯಕ್ಕೆ ಬಳಸುವುದು ಉತ್ತಮ. ವಿದ್ಯಾರ್ಥಿಗಳಿಗೆ ಈ ಸಮಯದಲ್ಲಿ ಬಹಳ ಉತ್ತಮ ದಿನಗಳು ಬರಲಿವೆ. ನೀವು ಬಯಸಿದ ಉನ್ನತ ಶಿಕ್ಷಣ ಪಡೆಯಲು ಮುಂದಾಗಬಹುದು.
ಕರ್ಕ ರಾಶಿ
ಶನಿಯು ಉತ್ತರ ಭಾದ್ರಪದ ನಕ್ಷತ್ರಕ್ಕೆ ಚಲಿಸುವುದರಿಂದ ಕರ್ಕ ರಾಶಿಯವರಿಗೆ ಹಲವು ರೀತಿಯಲ್ಲಿ ಲಾಭವಾಗಲಿದೆ. ನೀವು ಹೊಸ ವಸ್ತುವನ್ನು ಖರೀದಿಸುವ ಆಲೋಚನೆಯಲ್ಲಿದ್ದರೆ ಈ ಸಮಯದಲ್ಲಿ ನೆರವೇರಲಿದೆ. ಹೂಡಿಕೆಯಿಂದು ಲಾಭದಾಯಕವಾಗಿ ಪರಿಣಮಿಸಲಿದೆ. ಕುಟುಂಬದಲ್ಲಿ ಬಹಳ ಸಮಯದಿಂದ ಇದ್ದ ಸಮಸ್ಯೆಯೊಂದು ನಿವಾರಣೆಯಾಗಲಿದೆ. ಕೌಟುಂಬಿಕ ಜೀವನದಲ್ಲಿ ಸಂತಸ ಇರಲಿದೆ. ಹಾಗೆ ಪ್ರವಾಸದಂತಹ ಕೆಲಸದಲ್ಲಿ ನೀವು ಭಾಗಿಯಾಗಬಹುದು. ಅದರಲ್ಲೂ ನೀವು ವಿದೇಶಕ್ಕೆ ತೆರಳುವ ಆಸಕ್ತಿ ಹೊಂದಿದ್ದರೆ ಈ ಸಮಯದಲ್ಲಿ ನೆರವೇರಬಹುದು. ನೀವು ಯಾರಿಗಾದರು ಸಾಲ ನೀಡಿದ್ದರೆ ವಾಪಾಸು ಪಡೆಯಬಹುದು.
ತುಲಾ ರಾಶಿ
ತುಲಾ ರಾಶಿಯವರಿಗೆ ಶನಿಯ ನಕ್ಷತ್ರ ಬದಲಾವಣೆಯು ಆರ್ಥಿಕ ಲಾಭದ ಸೂಚನೆಯಾಗಲಿದೆ. ನೀವು ಯಾವುದೇ ಕೆಲಸದಲ್ಲಿ ತೊಡಗಿದರು ಅದು ಲಾಭದಾಯಕವಾಗಬಹುದು. ಹಾಗೆ ಬಾಕಿ ಇರುವ ಕೆಲಸಗಳು ಪೂರ್ಣ ಆಗಲಿದೆ. ಮತ್ತೆ ನ್ಯಾಯಾಲಯ, ಆಸ್ತಿ ಸಂಬಂಧಿತ ಸಮಸ್ಯೆಗಳು ದೂರಾಗಲಿವೆ. ಸಾಲದಿಂದ ಮುಕ್ತರಾಗುವ ಎಲ್ಲಾ ಲಕ್ಷಣಗಳಿವೆ. ಅವಿವಾಹಿತರು ವಿವಾಹ ಸಂಬಂಧವಾಗಿ ದೊಡ್ಡ ಸುದ್ದಿ ಕೇಳುವಿರಿ. ಹೊಸ ವಾಹನಗಳು ಮತ್ತು ಆಸ್ತಿಗಳನ್ನು ಖರೀದಿಸಲು ಅವಕಾಶಗಳು ಸಿಗುತ್ತವೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ನಿಖರವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನದಲ್ಲಿನ ಮಾಹಿತಿಯನ್ನು ಅನುಮೋದಿಸುವುದಿಲ್ಲ. ಮತ್ತು ನಮ್ಮ ಏಕೈಕ ಉದ್ದೇಶ ಮಾಹಿತಿಯನ್ನು ಒದಗಿಸುವುದಾಗಿದೆ)



Click it and Unblock the Notifications