ಹೊಸ ವರ್ಷಕ್ಕೆ ಸಿಹಿ ರೆಸಿಪಿ: ಸಾಬುದಾನ-ಸಿಹಿ ಗೆಣಸಿನ ಪಾಯಸ ರೆಸಿಪಿ

Posted By:

ಹೊಸ ವರ್ಷದಲ್ಲಿ ಮನೆಯಲ್ಲಿ ಏನಾದರೂ ಸಿಹಿ ಮಾಡಿ ಸ್ವೀಕರಿಸಬೇಕೆಂದು ಬಯಸುತ್ತೇವೆ ಅಲ್ವಾ? ಈ ಬಾರಿ ನೀವು ಸಿಹಿ ಗೆಣಸಿನ ಪಾಯಸ ಏಕೆ ಟ್ರೈ ಮಾಡಬಾರದು, ಸಿಹಿ ಗೆಣಸು ಆರೋಗ್ಯಕ್ಕೂ ತುಂಬಾನೇ ಒಳ್ಳೆಯದು, ಟೇಸ್ಟ್‌ ಸೂಪರ್ ಆಗಿರುತ್ತದೆ, ಮಾಡುವುದು ಕೂಡ ಸುಲಭ, ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ:

 Sabudana Sweet Potato Payasa Recipe

ಬೇಕಾಗುವ ಸಾಮಗ್ರಿ
ಸಾಬುದಾನ 3 ಚಮಚ
ಸಕ್ಕರೆ 2 ಚಮಚ
ಸಿಹಿ ಗೆಣಸು 1
ಗೋಡಂಬಿ 1 ಚಮಚ
ಬಾದಾಮಿ 1 ಚಮಚ
ಹಾಲು 3 ಕಪ್
ಏಲಕ್ಕಿ 1 ಚಮಚ

ಮಾಡುವ ವಿಧಾನ
* ಒಂದು ಕಪ್ ಸಾಬುದಾನವನ್ನು ಒಂದು ಗಂಟೆ ನೀರಿನಲ್ಲಿ ನೆನೆಹಾಕಿ.
* ಈಗ ಬೇಯಿಸಿದ ಸಿಹಿಗೆಣಸನ್ನು ಸಿಪ್ಪೆ ಸುಲಿದು ಚಿಕ್ಕದಾಗಿ ಕತ್ತರಿಸಿ ಇಡಿ.
* ಈಗ ಒಂದು ಪ್ಯಾನ್‌ ತೆಗೆದು ಬಿಸಿ ಮಾಡಿ
* ಪ್ಯಾನ್‌ ಬಿಸಿಯಾದಾಗ ಹಾಲು ಹಾಕಿ, ಹಾಲು ಕುದಿಯಲು ಆರಂಭಿಸಿದಾಗ ಸಾಬುದಾನ ಹಾಕಿ, ಹಾಲನ್ನು ಸಿಮ್ಮರ್‌ನಲ್ಲಿ ಇಟ್ಟು 5 ನಿಮಿಷ ಬೇಯಿಸಿ, ಬೇಯಿಸಿದ ಸಿಹಿಗೆಣಸು ಸೇರಿಸಿ ಮಿಕ್ಸ್ ಮಾಡಿ.
* ಸಕ್ಕರೆ, ಗೋಡಂಬಿ, ಬಾದಾಮಿ ಹಾಕಿ ಮಿಕ್ಸ್ ಮಾಡಿ,
* ಕೊನೆಗೆ ಏಲಕ್ಕಿ ಹಾಕಿ ಮಿಕ್ಸ್ ಮಾಡು
* ನಂತರ ಸ್ಟೌವ್‌ ಆಫ್‌ ಮಾಡಿ ಪಿಸ್ತಾ, ಗೋಡಂಬಿಯಿಂದ ಅಲಂಕರಿಸಿ ಸರ್ವ್ ಮಾಡಿ.

ಸೂಚನೆ
ಸಿಹಿ ಗೆಣಸು ಬೆಂದ ಮೇಲೆ ಮ್ಯಾಶ್‌ ಮಾಡಿ ಹಾಕುವ ಬದಲಿಗೆ ತುರಿದು ಹಾಕಿ
* ಸಾಬುದಾನ ಮೆತ್ತಗಾಗುವವರೆಗೆ ನೆನೆಹಾಕಿ.

ಸಾಬುದಾನ ಪ್ರಯೋಜನಗಳು
* ಶಕ್ತಿ ಒದಗಿಸುತ್ತದೆ
ಸಾಬುದಾನ ದೇಹಕ್ಕೆ ಶಕ್ತಿಯನ್ನು ಒದಗಿಸುತ್ತದೆ, ಆದ್ದರಿಂದ ಉಪವಾಸ ವ್ರತ ಮಾಡುವವರು ಇದನ್ನು ಬಳಸುತ್ತಾರೆ.
* ಜೀರ್ಣಕ್ರಿಯೆಗೆ ಒಳ್ಳೆಯದು
ಸಾಬುದಾನ ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು.
* ಸಾಬುದಾನದಲ್ಲಿ ಪೋಷಕಾಂಶಗಳು ಇರಲಿದೆ
ಕ್ಯಾಲ್ಸಿಂ, ಕಬ್ಬಿಣದಂಶ, ವಿಟಮಿನ್ ಬಿ ಇರುವುದರಿಂದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.
* ಸಾಬುದಾನ ಗ್ಲುಟೀನ್ ಫ್ರೀ ಕೂಡ ಹೌದು

ಸಿಹಿ ಗೆಣಸಿನಲ್ಲಿ ಅನೇಕ ಗುಣಗಳಿವೆ
* ಸಿಹಿ ಗೆಣಸು ಚಳಿಗಾಲದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.
* ದೇಹವನ್ನು ಡಿಟಾಕ್ಸ್ ಮಾಡುತ್ತದೆ
* ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು
* ತ್ವಚೆ ಕಾಂತಿಗೂ ಒಳ್ಳೆಯದು.

[ of 5 - Users]
X
Desktop Bottom Promotion