Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಸಾಬುದಾನ ಪಾಯಸ ಟ್ರೈ ಮಾಡಿದ್ದೀರಾ? ಸೂಪರ್ ಆಗಿರುತ್ತೆ, ಇಲ್ಲಿದೆ ರೆಸಿಪಿ
ಸಾಬುದಾನ ಪಾಯಸ ಸೇವಿಸಿದ್ದೀರಾ? ಇತರ ಪಾಯಸಕ್ಕಿಂತ ಈ ಪಾಯಸ ತುಂಬಾ ಭಿನ್ನವಾಗಿರುತ್ತದೆ. ಈ ಪಾಯಸ ತುಂಬಾನೇ ರುಚಿಯಾಗಿರುತ್ತದೆ. ಈ ಪಾಯಸವನ್ನು ಮಾಡುವುದು ಸುಲಭ, ಬನ್ನಿ ಇದನ್ನು ಮಾಡುವುದು ಹೇಗೆ?

ಬೇಕಾಗುವ ಸಾಮಗ್ರಿ
ಒಂದೂವರೆ ಚಮಚ ತುಪ್ಪ
ಸ್ವಲ್ಪ ಗೋಡಂಬಿ-ದ್ರಾಕ್ಷಿ
1/2 ಕಪ್ ಸಾಬುದಾನ
ಎರಡೂವರೆ ಕಪ್ ನೀರು
ಒಂದೂವರೆ ಕಪ್ ಅಥವಾ 2 ಕಪ್ ಹಾಲು
1/4 ಚಮಚ ಏಲಕ್ಕಿ ಪುಡಿ
1/4 ಕೆಜಿ ಬೆಲ್ಲ
ಮಾಡುವುದು ಹೇಗೆ?
- ಸಾಬುದಾನವನ್ನು ರಾತ್ರಿ ನೆನೆ ಹಾಕಿ , ರಾತ್ರಿ ನೆನೆ ಹಾಕದಿದ್ದರೆ ಬಿಸಿ ನೀರಿನಲ್ಲಿ 2 ಗಂಟೆ ನೆನೆ ಹಾಕಬೇಕು. ಸಾಬುದಾನವನ್ನು ನೆನೆ ಹಾಕಿದರೆ ಮಾತ್ರ ಬೇಗನೆ ಬೇಯುವುದು.
- ಈಗ ಸಾಬುದಾನವನ್ನು ಬೇಯಸಿ, ಚೆನ್ನಾಗಿ ಬೇಯಬೇಕು.
- ಬೆಂದ ಮೇಲೆ ನೀರು ಬಸಿಯಿರಿ
- ಈಗ ಹಾಲನ್ನು ಕುದಿಸಿ, ಎರಡು ಲೀಟರ್ ಹಾಲು ಒಂದೂವರೆ ಲೀಟರ್ ಆಗಬೇಕು, ಹಾಲು ಮಂದವಾಗುವವವರೆಗೆ ಕಡಿಮೆ ಉರಿಯಲ್ಲಿ ಕುದಿಸಿ.
- ನಂತರ ಬೇಯಿಸಿದ ಸಾಬುದಾನ ಸೇರಿಸಿ ಮಿಕ್ಸ್ ಮಾಡಿ, ಮಿಕ್ಸ್ ಮಾಡುತ್ತಲೇ ಇರಬೇಕು, ಇಲ್ಲದಿದ್ದರೆ ಗಂಟು ಕಟ್ಟುವುದು.
- ಈಗ ಪುಡಿ ಬೆಲ್ಲ, ಅಥವಾ ಬೆಲ್ಲದ ಪಾಕ ಸೇರಿಸಿ, ಬೆಲ್ಲ ಬೇಡ ಸಕ್ಕರೆ ಹಾಕುತ್ತೇವೆ ಎನ್ನುವುದಾದರೆ ಸಕ್ಕರೆ ಬಳಸಬಹುದು.
- ಏಲಕ್ಕಿ ಪುಡಿ ಸೇರಿಸಿ ಮಿಕ್ಸ್ ಮಾಡಿ ಉರಿಯಿಂದ ಇಳಿಸಿ ಇಡಿ.
- ಈಗ ಪ್ಯಾನ್ ಬಿಸಿ ಮಾಡಿ ತುಪ್ಪ ಹಾಕಿ ಬಿಸಿಯಾದಾಗ ಗೋಡಂಬಿ, ದ್ರಾಕ್ಷಿ ಫ್ರೈ ಮಾಡಿ ಪಾಯಸಕ್ಕೆ ಸೇರಿಸಿದರೆ ಪಾಯಸ ಸುವಾಸನೆ ಜೊತೆಗೆ ಟೇಸ್ಟ್ ಸೂಪರ್ ಆಗಿರುತ್ತದೆ. ಇದನ್ನು ಸವಿಯುತ್ತಿದ್ದರೆ ಒನ್ ಮೋರ್ ಒನ್ ಮೋರ್ ಎಂದು ಹೇಳುವಿರಿ.
ಸಲಹೆ: ಸಾಬುದಾನ ಚೆನ್ನಾಗಿ ನೆನೆ ಹಾಕಿದರೆ ಬಯಲು ಹೆಚ್ಚು
ಸಮಯ ಬೇಕಾಗಿಲ್ಲ.
ಯಾವುದೇ ಹಾಲು ಬಳಸಬಹುದು, ಟೋನ್ಡ್ ಹಾಲು ಕೂಡ ಬಳಸಬಹುದು. ಹಾಲನ್ನು ಕಾಯಿಸಿದಾಗ
ಅದು ಮಂದವಾಗುವುದು, ಈ ಗಟ್ಟಿ ಹಾಲು ಪಾಯಸದ ರುಚಿ ಹೆಚ್ಚಿಸುವುದು.
ಸಾಬುದಾನ ದೊಡ್ಡ ಸೈಜ್‌ನದ್ದು ಆದ್ರೆ ತಿನ್ನುವಾಗ ಇನ್ನೂ ಸೂಪರ್ ಅನಿಸುವುದು
ಬೆಲ್ಲವನ್ನು ಪುಡಿ ಮಾಡಿ ಹಾಕುವ ಬದಲಿಗೆ ಪಾಕ ಮಾಡಿ ಹಾಕಿದರೆ ರುಚಿ ಹೆಚ್ಚು.
ಇನ್ನು ನೀವು ಪಿಸ್ತಾವನ್ನು ಪುಡಿ ಮಾಡಿ ಹಾಕಬಹುದು. ಇದನ್ನು ಬಿಸಿಯಾಗಿದ್ದಾಗ ಸೇವಿಸಬಹುದು, ಫ್ರಿಡ್ಜ್‌ನಲ್ಲಿಟ್ಟು ತುಂಬಾ ತಣ್ಣಗಾದ ಮೇಲೂ ಇಡಬಹುದು.
ಸಾಬುದಾನ ನೆನೆ ಹಾಕದೆ ಮಾಡುವುದಾದರೆ
ನೀವು ಸಾಬುದಾನವನ್ನು ನೆನೆ ಹಾಕದೆ ಮಾಡುವುದಾದರೆ ಪ್ಯಾನ್‌ಗೆ ತುಪ್ಪ ಹಾಕಿ
ಅದರಲ್ಲಿ ತುಪ್ಪ ಹಾಕಿ. ನಂತರ ಸಾಬುದಾನ ಹಾಕಿ ಫ್ರೈ ಮಾಡಿ ನೀರು ಹಾಕಿ
ಬೇಯಿಸಿ.
ಈ ರೀತಿ ಮಾಡುವುದಾದರೆ ಸ್ವಲ್ಪ ಅಧಿಕ ಹೊತ್ತು ಬೇಯಿಸಬೇಕು.
ಸಾಬುದಾನದಲ್ಲಿ ದೊರೆಯುವ ಪ್ರಯೋಜನಗಳು
ಸಾಬುದಾನ ಗ್ಲುಟೀನ್ ಫ್ರೀ
100 ಗ್ರಾಂ ಸಾಬುದಾನದಲ್ಲಿ ಕಬ್ಬಿಣದಂಶ 1.2 ಮಿ.ಗ್ರಾಂ ಇದೆ
100ಗ್ರಾಂ ಸಾಬುದಾನದಲ್ಲಿ 17 ಮಿ.ಗ್ರಾಂ ಕ್ಯಾಲ್ಸಿಯಂ ಇದೆ.
ಸಾಬುದಾನದಲ್ಲಿ ಫೋಲೆಟ್ ಇದೆ
ಸಾಬುದಾನ ದೇಹಕ್ಕೆ ಶಕ್ತಿಯನ್ನು ಒದಗಿಸುತ್ತದೆ. ಆದ್ದರಿಂದ ವ್ರತದ ಸಮಯದಲ್ಲಿ
ಸಾಬುದಾನದ ಉಪ್ಪಿಟ್ಟು ಮಾಡಲಾಗುವುದು.
ಜೀರ್ಣಕ್ರಿಯೆಗೆ ಒಳ್ಳೆಯದು
ಸಾಬುದಾನ ನರಗಳ ಆರೋಗ್ಯಕ್ಕೆ ಒಳ್ಳೆಯದು
ಹೃದಯದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು
ಈ ಸಾಬುದಾನ ಮಧುಮೇಹಿಗಳಿಗೆ ಒಳ್ಳೆಯದು, ಗರ್ಭಿಣಿಯರಿಗೆ ಒಳ್ಳೆಯದು.
ಮಧುಮೇಹಿಗಳು ಸಾಬುದಾನ ಪಾಯಸವನ್ನು ಮಿತಿಯಲ್ಲಿ ಸೇವಿಸಬಹುದು.
ಒಂದು ಕಪ್ ಸಾಬುದಾನದಲ್ಲಿರುವ ಪೋಷಕಾಂಶಗಳು
544 ಕ್ಯಾಲೋರಿ
135ಗ್ರಾಂ ಕಾರ್ಬ್ಸ್
30.4 ಮಿಗ್ರಾಂ ಕ್ಯಾಲ್ಸಿಯಂ
ಕಬ್ಬಿಣದಂಶ
ಮೆಗ್ನಿಷ್ಯಿಯಂ
ಪೊಟಾಷ್ಯಿಯಂ
ನಾರಿನಂಶ
ಪ್ರೊಟೀನ್



Click it and Unblock the Notifications