Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಬೇಸಿಗೆಯಲ್ಲಿ ದೇಹಕ್ಕೆ, ಸೌಂದರ್ಯಕ್ಕೆ ಒಳ್ಳೆಯದು ಈ ಗುಲಾಬಿ ಜ್ಯೂಸ್
ಬೇಸಿಗೆಯಲ್ಲಿ ಆಹಾರ ತಿನ್ನಬೇಕೆಂದು ಅನಿಸಲ್ಲ ಆದರೆ ನೀರು ಕುಡಿಯಬೇಕು ಅನಿಸುತ್ತೆ, ಜ್ಯೂಸ್ ಬೇಕು ಅನಿಸುತ್ತೆ ಅಲ್ವಾ? ಇನ್ನು ಮನೆಗೆ ಯಾರಾದರೂ ಅತಿಥಿಗಳು ಬಂದರೆ ಅವರು ಟೀ -ಕಾಫಿ ಬೇಡ್ವೆ ಅಂತಾರೆ, ಬಿಸಿಲಿರುವಾಗ ತಣ್ಣನೆಯ ಏನಾದರೂ ಕುಡಿಯಬೇಕೆನಿಸುವುದು.
ನಾವಿಲ್ಲಿ ಗುಲಾಬಿ ದಳಗಳಿಂದ ಮಾಡುವ ಜ್ಯೂಸ್, ಮಿಲ್ಕ್ಶೇಕ್ ರೆಸಿಪಿ ನೀಡಿದ್ದೇವೆ, ಇವುಗಳನ್ನು ಮಾಡಿ ಸವಿಯಿರಿ, ಕುಡಿಯಲು ಸೂಪರ್ ರುಚಿ, ಆರೋಗ್ಯ, ಸೌಂದರ್ಯ ವೃದ್ಧಿಗೆ ಒಳ್ಳೆಯದು.

ಬೇಕಾಗುವ ಸಾಮಗ್ರಿ
ರೋಸ್ ದಳಗಳು 30-40 ದಳಗಳು
ನೀರು 1 ಕಪ್
ಸಕ್ಕರೆ
ಐಸ್ ಕ್ಯೂಬ್ಸ್
ಮಾಡುವ ವಿಧಾನ
* ನೀವು ರೋಸ್ ವಾಟರ್ ಜ್ಯೂಸ್ ಮಮಾಡಲು ಮೊದಲು ನೀವು ಸ್ವಲ್ಪ ನೀರಿಗೆ ರೋಸ್
ದಳಗಳನ್ನು ಹಾಕಿ ಕುದಿಸಿ, ನಂತರ ಸೋಸಿ ಆ ನೀರನ್ನು ತೆಗೆದಿಡಿ
* ಅದೇ ಸೋಸಿದ ನೀರಿಗೆ ಸ್ವಲ್ಪ ಸಕ್ಕರೆ ಹಾಕಿ ಕುದಿಸಿ ನಂತರ ತಣ್ಣಗಾಗಲು
ಬಿಡಿ
ಬಳಿಕ ಅದಕ್ಕೆ ಸ್ವಲ್ಪ ತಣ್ಣನೆಯ ನೀರು ಹಾಕಿ, ಐಸ್ಕ್ಯೂಬ್ಸ್ ಹಾಕಿ
ಸರ್ವ್ಮಾಡಿ
ನೀವು ಬೇಕಾದರೆ ನಿಂಬೆರಸ ಕೂಡ ಸೇರಿಸಬಹುದು.
ರೋಸ್ ಮಿಲ್ಕ್ಶೇಕ್ ಮಾಡುವುದು ಹೇಗೆ?
ಬೇಕಾಗುವ ಸಾಮಗ್ರಿ
ಹಾಲು: ತಣ್ಣನೆಯ ಹಾಲು
ರೋಸ್ ಸಿರಪ್ (ಗುಲಾಬಿ ದಳಗಳಗಳನ್ನು ಹಾಕಿ ಕುದಿಸಿದ ನೀರು)
ಸಕ್ಕರೆ ರುಚಿಗೆ ತಕ್ಕಷ್ಟು
ಸಬ್ಜಾ ಬೀಜ ಅಥವಾ ಕಾಮ ಕಸ್ತೂರಿ
2-3 ರೋಸ್ ದಳಗಳ ಅಲಂಕಾರಕ್ಕೆ
ರೋಸ್ ಮಿಲ್ಕ್ ಶೇಕ್ ಮಾಡುವುದು ಹೇಗೆ?
- ಒಂದು ಬೌಲ್ನಲ್ಲಿ ಸ್ವಲ್ಪ ನೀರು ಹಾಕಿ ಸಬ್ಜಾ ನೆನೆಹಾಕಿ. (ಇದನ್ನ ಬಳಸದೆಯೂ ಜ್ಯೂಸ್ ಮಾಡಬಹುದು, ಇದು ಬಳಸಿದರೆ ಬೇಸಿಗೆಯಲ್ಲಿ ಇನ್ನೂ ಒಳ್ಳೆಯದು)
- ಈಗ ತಣ್ಣನೆಯ ಹಾಲಿಗೆ ಸಕ್ಕರೆ ಹಾಕಿ ಮಿಕ್ಸ್ ಮಾಡಿ ಬಳಿಕ ರೋಸ್ ದಳ ಹಾಕಿ ಕುದಿಸಿ ಆರಿಸಿದ ನೀರು ಸೇರಿಸಿ. ನಂತರ ಸಬ್ಜಾ ಹಾಕಿ, ಅದರ ಮೇಲೆ ರೋಸ್ದಳ ಹಾಕಿ ಸರ್ವ್ ಮಾಡಿ.
- ಹೀಗೆ ನೀವು ಮನೆಯಲ್ಲಿ ಬಿಟ್ಟ ಗುಲಾಬಿಯಿದ ಜ್ಯೂಸ್ ಮಾಡಿ ಕುಡಿಯಿರಿ.
ಹೊರಗಿನಿಂದ ತರುವ ಗುಲಾಬಿಗಳಲ್ಲಿ ಅವು ಬೇಗನೆ ಬಾಡದಿರಲು ಕೆಮಿಕಲ್ ಸ್ಪ್ರೇ ಮಾಡಿರಬಹುದು, ಆದ್ದರಿಂದ ಮನೆಯಲ್ಲಿ ಬೆಳೆದ ಗುಲಾಬಿ ದಳಗಳು ಸರಕ್ಷಿತ.
ಗುಲಾಬಿ ದಳ ಸೇವನೆಯಿಂದ ದೊರೆಯುವ ಪ್ರಯೋಜನಗಳು:
ಅತ್ಯಧಿಕ ವಿಟಮಿನ್ ಸಿ ಇದೆ
ರೋಸ್ ದಳಗಳಲ್ಲಿ ವಿಟಮಿನ್ ಸಿ ಅಧಿಕವಿದೆ, ಆದ್ದರಿಂದ ಕೊಲೆಜಿನ್ ಉತ್ಪತ್ತಿಗೆ ಸಹಕಾರಿ, ಯೌವನ ಕಳೆ ಕಾಪಾಡಲು ಈ ರೋಸ್ ದಳಗಳು ಸಹಕಾರಿ, ಈ ರೋಸ್ಗಳನ್ನು ಸೇವಿಸುವುದರಿಂದ ಮುಖದಲ್ಲಿ ಸುಕ್ಕು ಬೇಗನೆ ಮೂಡುವುದಿಲ್ಲ.
ಗಂಟಲು ಕೆರೆತ ಕಡಿಮೆ ಮಾಡಲು ಸಹಕಾರಿ
'
ಇದು ನಿಮಗೆ ಗೊತ್ತಿತ್ತೇ? ಇದರಲ್ಲಿರುವ ಆಂಟಿಆಕ್ಸಿಡೆಂಟ್ ಗಂಟಲು ಕೆರೆತದಿಂದ ಉಂಟಾಗುವ ಕೆಮ್ಮು ತಡೆಗಟ್ಟಲು ಸಹಕಾರಿ, ಇದಕ್ಕೆ ಸ್ವಲ್ಪ ಪುದೀನಾ, ಜೇನು ಸೇರಿಸಿ ಕುಡಿದರೆ ಗಂಟಲಿಗೆ ಒಳ್ಳೆಯದು. ಗಂಟಲು ಕೆರೆತಕ್ಕೆ ಬಳಸುವಾಗ ಜ್ಯೂಸ್ ಹದ ಬಿಸಿಯಿರಲಿ.
ಲಿವರ್ನ ಆರೋಗ್ಯಕ್ಕೆ ಒಳ್ಳೆಯದು
ರೋಸ್ ದಳಗಳು ಲಿವರ್ ಆರೋಗ್ಯಕ್ಕೆ ಒಳ್ಳೆಯದು ಎಂದು ಅಧ್ಯಯನಗಳಿಂದ ಸಾಬೀತಾಗಿದೆ, ಇದರಿಂದ ಜೀರ್ಣಕ್ರಿಯೆಗೆ ತುಂಬಾನೇ ಸಹಕಾರಿ.
ಮೊಡವೆ ತಡೆಗಟ್ಟುತ್ತದೆ
ಈ ಗುಲಾಬಿ ದಳಗಳು ತ್ವಚೆಯನ್ನು ಆಂತರಿಕವಾಗಿ ಪೋಷಣೆ ಮಾಡಲು ಸಹಕಾರಿ, ಇದನ್ನು ಸೇವಿಸುವುದರಿಂದ ಮೊಡವೆ ಕಡಿಮೆಯಾಗುವುದು, ಅಲ್ಲದೆ ತ್ವಚೆ ಹೊಳಪು ಹೆಚ್ಚಾಗುವುದು. ಆದ್ದರಿಂದ ಮನೆಯ ಕೈ ತೋಟದಲ್ಲಿ ಗುಲಾಬಿ ಬಿಟ್ಟರೆ ಅದು ಹಾಗೇ ಉದುರಿ ಹೋಗುವ ದಲಿಗೆ ಜ್ಯೂಸ್ ಮಾಡಿ ಕುಡಿಯಿರಿ, ಇದರಿಂದ ನಿಮ್ಮ ಆರೋಗ್ಯಕ್ಕೆ ಒಳ್ಳೆಯದು, ಸೌಂದರ್ಯಕ್ಕೂ ಒಳ್ಳೆಯದು, ಇದು ನಿಮ್ಮ ತ್ವಚೆ ಸೌಂದರ್ಯ ಹೆಚ್ಚಿಸುತ್ತದೆ.



Click it and Unblock the Notifications