Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಸಕ್ಕರೆ ಪಾಕ ಬೇಡ.. ಬಾಯಲ್ಲಿ ಕರಗುವ ರುಚಿ! ದೀಪಾವಳಿಗೆ ರೋಸ್ ಕೋಕನಟ್ ಲಡ್ಡು ಮಾಡಿ
ಹಬ್ಬಕ್ಕೆ ಹೊಸ ಸಿಹಿ.. ಸಕ್ಕರೆ ಪಾಕ ಇಲ್ಲದೆ, ಬಾಯಲ್ಲಿ ಕರಗುವ ರುಚಿ! ಕೇವಲ ಮೂರು ಸಾಮಗ್ರಿ ಸಾಕು. ಹೌದು, ದೀಪಾವಳಿ (Diwali) ಹಬ್ಬವು ಸಿಹಿತಿಂಡಿಗಳಿಲ್ಲದೆ ಅಪೂರ್ಣ. ಹಬ್ಬಕ್ಕೆ ಮನೆಗಳನ್ನು ಅಲಂಕರಿಸುವುದರ ಜೊತೆಗೆ, ಎಲ್ಲಾ ಮನೆಗಳಲ್ಲಿಯೂ ಸಿಹಿತಿಂಡಿಗಳಿಗಾಗಿ ವಿಶೇಷ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಾರೆ. ನೀವು, ಈ ದೀಪಾವಳಿಗೆ ಹೊಸ ಮತ್ತು ಆರೋಗ್ಯಕರ ಏನನ್ನಾದರೂ ಪ್ರಯತ್ನಿಸಲು ಬಯಸಿದರೆ, ಈ ರೋಸ್ ಕೋಕನಟ್ ಲಡ್ಡು (ಗುಲಾಬಿ ಮತ್ತು ತೆಂಗಿನಕಾಯಿ ಲಡ್ಡು) ರೆಸಿಪಿ ಸೂಕ್ತ.
ಗುಲಾಬಿಯ ಪರಿಮಳ ಮತ್ತು ತೆಂಗಿನಕಾಯಿಯ ರುಚಿ ಈ ಲಡ್ಡುಗಳನ್ನು ವಿಶೇಷವಾಗಿಸುತ್ತವೆ. ಇವುಗಳನ್ನು ತಯಾರಿಸಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಇದುವೇ ಈ ಲಡ್ಡುವಿನ ಸ್ಪಷೆಲ್. ಈ ದೀಪಾವಳಿಗೆ ನೀವು ಈ ವಿಶಿಷ್ಟ ಲಡ್ಡುಗಳನ್ನು ಪ್ರಯತ್ನಿಸಬಹುದು ಮತ್ತು ನಿಮ್ಮ ಕುಟುಂಬದ ಸದಸ್ಯರು ಹಾಗೂ ಅತಿಥಿಗಳಿಗೆ ರುಚಿಕರವಾದ ಲಡ್ಡುಗಳ ಸವಿಯನ್ನು ನೀಡಬಹುದು. ರೋಸ್ ಕೋಕನಟ್ ಲಡ್ಡುಗೆ ಬೇಕಾಗುವ ಸಾಮಗ್ರಿಗಳು ಮತ್ತು ತಯಾರಿಸುವ ವಿಧಾನ (Rose Coconut Laddu Recipe) ಇಲ್ಲಿದೆ.

ರೋಸ್ ಕೋಕನಟ್ ಲಡ್ಡುಗೆ ಬೇಕಾಗುವ ಸಾಮಗ್ರಿಗಳು
• ಒಣ ತೆಂಗಿನಕಾಯಿ - 2 ಕಪ್
• ಕಂಡೆನ್ಸ್ಡ್ ಹಾಲು - ¾ ಕಪ್
• ಗುಲಾಬಿ ಸಿರಪ್ ಅಥವಾ ರೋಸ್ ಎಸೆನ್ಸ್ - 2 ಚಮಚ
• ಏಲಕ್ಕಿ ಪುಡಿ - ½ ಚಮಚ
• ತುಪ್ಪ - 1 ಚಮಚ
• ಕತ್ತರಿಸಿದ ಬಾದಾಮಿ ಅಥವಾ ಪಿಸ್ತಾ - ಅಗತ್ಯಕ್ಕೆ ತಕ್ಕಷ್ಟು
(ಅಲಂಕಾರಕ್ಕಾಗಿ)
• ಗುಲಾಬಿ ದಳಗಳು - ಸ್ವಲ್ಪ
ರೋಸ್ ಕೋಕನಟ್ ಲಡ್ಡು ತಯಾರಿಸುವ ವಿಧಾನ
- ರುಚಿಕರವಾದ ಲಡ್ಡು ತಯಾರಿಕೆಗೆ ಮೊದಲು, ಒಂದು ಬಾಣಲೆ ಅಥವಾ ಪ್ಯಾನ್‌ನಲ್ಲಿ ತುಪ್ಪವನ್ನು ಬಿಸಿ ಮಾಡಬೇಕು. ತುಪ್ಪ ಕಾದ ನಂತರ, ಅದಕ್ಕೆ ಒಣ ತೆಂಗಿನಕಾಯಿ ತುರಿಯನ್ನು ಸೇರಿಸಿ. ಈ ಮಿಶ್ರಣವನ್ನು ಸಣ್ಣ ಉರಿಯಲ್ಲಿ ಸುಮಾರು ಒಂದು ನಿಮಿಷ ಕಾಲ ಸೌಮ್ಯವಾಗಿ ಹುರಿಯಿರಿ, ಇದರಿಂದ ತೆಂಗಿನಕಾಯಿ ಸುವಾಸನೆ ಹೊರಹೊಮ್ಮುತ್ತದೆ.
- ಹುರಿದ ತೆಂಗಿನಕಾಯಿಗೆ ಕಂಡೆನ್ಸ್‌ಡ್ ಮಿಲ್ಕ್ ಸೇರಿಸಿ ಚೆನ್ನಾಗಿ ಕಲಸಬೇಕು. ಮಿಶ್ರಣ ಗಟ್ಟಿಯಾಗಲು ಪ್ರಾರಂಭಿಸುವವರೆಗೆ ಸೌಟು ಬಳಸಿ ನಿರಂತರವಾಗಿ ತಿರುಗಿಸುತ್ತಲೇ ಇರಬೇಕು. ಈ ಹಂತದಲ್ಲಿ ಮಿಶ್ರಣವು ಪಾತ್ರೆಯ ತಳ ಹಿಡಿಯದಂತೆ ಎಚ್ಚರ ವಹಿಸುವುದು ಮುಖ್ಯ.
- ಮಿಶ್ರಣ ಸಾಕಷ್ಟು ಗಟ್ಟಿಯಾದ ನಂತರ, ಅದಕ್ಕೆ ಗುಲಾಬಿ ಸಿರಪ್ (ಅಥವಾ ಗುಲಾಬಿ ಸಾರ) ಮತ್ತು ಏಲಕ್ಕಿ ಪುಡಿಯನ್ನು ಸೇರಿಸಬೇಕು. ಈ ಪದಾರ್ಥಗಳನ್ನು ಸೇರಿಸಿದ ನಂತರ, ಎಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿ, ಇದರಿಂದ ಸುವಾಸನೆಗಳು ಎಲ್ಲೆಡೆ ಹರಡುತ್ತವೆ.

- ಈಗ ಗ್ಯಾಸ್ ಆಫ್ ಮಾಡಿ. ಮಿಶ್ರಣವನ್ನು ಸ್ವಲ್ಪ ಸಮಯ ತಣ್ಣಗಾಗಲು ಬಿಡಿ. ಲಡ್ಡು ಕಟ್ಟಲು ಹದವಾಗುವಷ್ಟು ತಾಪಮಾನಕ್ಕೆ ಬರುವವರೆಗೆ ಕಾಯುವುದು ಮುಖ್ಯ. ಇದು ಲಡ್ಡುಗಳಿಗೆ ಸರಿಯಾದ ಆಕಾರ ನೀಡಲು ಸಹಾಯ ಮಾಡುತ್ತದೆ.
- ಮಿಶ್ರಣ ತಣ್ಣಗಾದ ನಂತರ, ನಿಮ್ಮ ಕೈಗಳಿಗೆ ಸ್ವಲ್ಪ ತುಪ್ಪ ಹಚ್ಚಿಕೊಳ್ಳಿ. ನಂತರ ಮಿಶ್ರಣದಿಂದ ಸಣ್ಣ ಸಣ್ಣ ಉಂಡೆಗಳನ್ನು (ಲಡ್ಡು) ಕಟ್ಟಿ. ಲಡ್ಡುಗಳು ಸಮಾನ ಗಾತ್ರದಲ್ಲಿ ಇರುವಂತೆ ನೋಡಿಕೊಳ್ಳಿ.
- ಅಂತಿಮವಾಗಿ, ತಯಾರಾದ ಲಡ್ಡುಗಳನ್ನು ಪಿಸ್ತಾ ಅಥವಾ ಗುಲಾಬಿ ದಳಗಳಿಂದ ಅಲಂಕರಿಸಿ. ಇವುಗಳನ್ನು ತಕ್ಷಣವೇ ಸವಿಯಬಹುದು ಅಥವಾ ನಂತರ ಉಪಯೋಗಿಸಲು ಸಂಗ್ರಹಿಸಿಡಬಹುದು. ಈ ಲಡ್ಡುಗಳು ಯಾವುದೇ ಸಂದರ್ಭಕ್ಕೂ ಉತ್ತಮ ಸಿಹಿ ತಿಂಡಿ.
- ಗಾಳಿಯಾಡದ ಡಬ್ಬದಲ್ಲಿ ಸಂಗ್ರಹಿಸಿದರೆ ಈ ಲಡ್ಡುಗಳು ಒಂದು ವಾರದವರೆಗೂ ತಾಜಾವಾಗಿರುತ್ತವೆ. ಈ ದೀಪಾವಳಿಗೆ ಈ ಸುಲಭವಾದ ಸಿಹಿಯನ್ನು ಸವಿಯುವ ಮೂಲಕ ನಿಮ್ಮ ಹಬ್ಬವನ್ನು ಇನ್ನಷ್ಟು ಆನಂದಮಯವಾಗಿಸಿಕೊಳ್ಳಿ.



Click it and Unblock the Notifications