For Quick Alerts
ALLOW NOTIFICATIONS  
For Daily Alerts

ರೆಸಿಪಿ: ತುಂಬಾ ಟೇಸ್ಟ್‌ಯಾಗಿರುತ್ತೆ ರೂಪ್‌ಚಾಂದ್‌ ಮೀನಿನ ಫ್ರೈ

Posted By:
|

ನೀವು ರೂಪ್‌ಚಾಂದ್‌ ಮೀನಿನ ಫ್ರೈ ಟ್ರೈ ಮಾಡಿದ್ದೀರಾ, ಇದು ತುಂಬಾನೇ ರುಚಿಯಾಗಿರುತ್ತೆ, ಇದು ಸಮುದ್ರಾಹಾರವಲ್ಲ, ಸಿಹಿ ನೀರಿನಲ್ಲಿ ಅಥವಾ ಕೆರೆಯಲ್ಲಿ ಬೆಳೆಯಲಾಗುವುದು. ಸ್ವಲ್ಪ ಮುಳ್ಳು ಇದ್ದರೂ ದೊಡ್ಡ-ದೊಡ್ಡ ಮುಳ್ಳು ಇರುವುದರಿಂದ ತೆಗೆದು ತಿನ್ನಲು ಕೂಡ ಸುಲಭ. ಈ ಮೀನಿನ ಫ್ರೈ ರೆಸಿಪಿ ತುಂಬಾನೇ ಸರಳವಾಗಿದ್ದು ಮಾಡುವ ವಿಧಾನ ಇಲ್ಲಿದೆ ನೋಡಿ:

Roopchand Fish Fry Recipe In Kannada

ಬೇಕಾಗುವ ಸಾಮಗ್ರಿ

ರೂಪ್‌ಚಾಂದ್‌ ಮೀನು 1/2 ಕೆಜಿ
ಖಾರದ ಪುಡಿ 2 ಚಮಚ (ನಿಮ್ಮ ಖಾರಕ್ಕೆ ತಕ್ಕಷ್ಟು)
1/2 ಚಮಚ ಅರಿಶಿಣ ಪುಡಿ
ಗರಂ ಮಸಾಲ 1/4 ಚಮಚ
ಶುಂಠಿ-ಬೆಳ್ಳುಳ್ಳಿ ಪೇಸ್ಟ್ 1 ಚಮಚ
ರುಚಿಗೆ ತಕ್ಕ ಉಪ್ಪು
ಹುಣಸೆ ಹಣ್ಣಿನ ಪೇಸ್ಟ್ 2-3 ಚಮಚ
ಎಣ್ಣೆ 2 ಚಮಚ

Roopchand Fish Fry Recipe In Kannada

ಮಾಡುವ ವಿಧಾನ

* ಮೀನನ್ನು ತೊಳೆದು ಸ್ವಚ್ಛಮಾಡಿ.
* ಈಗ ಒಂದು ತಟ್ಟೆಗೆ ಎಲ್ಲಾ ಸಾಮಗ್ರಿ ಹಾಕಿ ಮಿಕ್ಸ್ ಮಾಡಿ, ಮಿಶ್ರಣ ಗಟ್ಟಿಯಾಗಿರಲಿ, ನಂತರ ಮೀನು ಹಾಕಿ ಮೀನಿಗೆ ಚೆನ್ನಾಗಿ ಪೇಸ್ಟ್ ಹಚ್ಚಿ 2-3 ಗಂಟೆ ಇಡಿ.
* ನಂತರ ತವಾಗೆ ಎಣ್ಣೆ ಹಾಕಿ ಬಿಸಿ ಮಾಡಿ, ನಂತರ ಮೀನನ್ನು ಹಾಕಿ ಕಡಿಮೆ ಉರಿಯಲ್ಲಿ 10 ನಿಮಿಷ ಫ್ರೈ ಮಾಡಿ, ನಂತರ ಮಗುಚಿ ಹಾಕಿ 10 ನಿಮಿಷ ಫ್ರೈ ಮಾಡಿದರೆ ರೂಪ್‌ಚಾಂದ್‌ಮೀನಿನ ಫ್ರೈ ರೆಡಿ.

[ of 5 - Users]
Story first published: Saturday, December 17, 2022, 16:22 [IST]
X
Desktop Bottom Promotion