Just In
- 6 hrs ago
ಮಾರ್ಚ್ ತಿಂಗಳಲ್ಲಿ ಹುಟ್ಟಿದವರು ಈ ವ್ಯಕ್ತಿತ್ವ ಹೊಂದಿರುತ್ತಾರೆ!!
- 7 hrs ago
ಮಾರ್ಚ್ 2021ರಲ್ಲಿ ಬರುವ ಹಬ್ಬಗಳು ಹಾಗೂ ವ್ರತಗಳು: ಈ ತಿಂಗಳಿನಲ್ಲಿ 11 ದಿನಗಳು ತುಂಬಾನೇ ವಿಶೇಷ
- 8 hrs ago
ಹಿರಿಯರೇ, ಸಣ್ಣ ವ್ಯಾಯಾಮವನ್ನು ನಿಮ್ಮ ದಿನಚರಿಯಲ್ಲಿ ಸೇರಿಸಿಕೊಂಡರೆ ಎಷ್ಟೆಲ್ಲಾ ಪ್ರಯೋಜನ ಇದೆ ಗೊತ್ತಾ?
- 11 hrs ago
ಮಾರ್ಚ್ ೨೦೨೧: ಇಲ್ಲಿದೆ ಶುಭ ಸಮಾರಂಭಕ್ಕೆ ಉತ್ತಮ ದಿನಾಂಕಗಳು
Don't Miss
- Sports
ಐಎಸ್ಎಲ್: ಕೊನೆಯಲ್ಲಿ ಗೌರವದೊಂದಿಗೆ ನಿರ್ಗಮಿಸಿದ ಒಡಿಶಾ
- Automobiles
ಬಿಡುಗಡೆಯಾಗಲಿರುವ ಓಲಾ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ವಿಶೇಷತೆಗಳೇನು?
- News
ಕಣಿವೆ ರಾಜ್ಯದಲ್ಲಿ ಭಯೋತ್ಪಾದಕ ನಿಗ್ರಹ ಕಾರ್ಯಾಚರಣೆ ನಿಲ್ಲಿಸುವುದಿಲ್ಲ: ಭಾರತೀಯ ಸೇನೆ
- Movies
ಕಾಮಾಟಿಪುರದ ನಿಜ ಕತೆಗೆ ಅಜಯ್ ದೇವಗನ್ ಎಂಟ್ರಿ
- Finance
ಮತ್ತಷ್ಟು ಇಳಿಕೆಗೊಂಡ ಚಿನ್ನದ ಬೆಲೆ: ಫೆಬ್ರವರಿ 27ರ ಬೆಲೆ ಹೀಗಿದೆ
- Education
MCL Recruitment 2021: 8 ಸಾಮಾನ್ಯ ವೈದ್ಯಕೀಯ ಸಲಹೆಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಭಾನುವಾರದ ಸ್ಪೆಷಲ್- ರುಚಿರುಚಿಯಾದ ಮೊಟ್ಟೆ ಪಲಾವ್
ಬಾಯಲ್ಲಿ ನೀರೂರಿಸುವ ಖಾದ್ಯವೆಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಅದರಲ್ಲೂ ಫಟಾಫಟ್ ಎಂದು ತಯಾರಿಸಲಾಗುವ ಖಾದ್ಯಗಳು ನಮ್ಮ ಜಂಜಾಟಗಳಿಂದ ಕೂಡಿದ ಜೀವನ ಶೈಲಿಗೆ ಅತ್ಯಂತ ಸಹಕಾರಿ. ಏಕೆಂದರೆ ಈ ಬ್ಯುಸಿ ಜೀವನದಲ್ಲಿ ನಿಧಾನವಾಗಿ, ಅಧಿಕ ಸಮಯ ಅಡುಗೆಗೆ ಮೀಸಲಿಡಲು ಯಾರ ಬಳಿ ತಾನೇ ಸಮಯ ಇದೆ, ಅಲ್ಲವೇ?
ಅದರಲ್ಲೂ ಬೆಳಗಿನ ಹೊತ್ತು ಎಲ್ಲರಿಗೂ ಧಾವಂತವಿರುತ್ತದೆ. ಇನ್ನು ಉದ್ಯೋಗಸ್ಥ ಮಹಿಳೆಯರಿಗೆ ಈ ಧಾವಂತ ಅತ್ಯಂತ ಹೆಚ್ಚು. ಇತ್ತ ತಾವೂ ಉದ್ಯೋಗಕ್ಕೆ ತಲುಪಲು ತಯಾರಾಗಬೇಕು, ಮನೆಯವರು ಮತ್ತು ಮಕ್ಕಳನ್ನೂ ತಯಾರು ಮಾಡಿ ಅವರಿಗೆ ಬೆಳಗಿನ ಉಪಾಹಾರ ಮತ್ತು ಮಧ್ಯಾಹ್ನಕ್ಕೆ ಬುತ್ತಿಯನ್ನು ಕಟ್ಟಿಕೊಡಬೇಕು. ಈ ಧಾವಂತದಲ್ಲಿ ಬೆಳಗಿನ ಉಪಾಹಾರಕ್ಕೆ ಹೆಚ್ಚಿನ ಸಮಯ ನೀಡಲು ಸಾಧ್ಯವಿಲ್ಲದೇ ಹೆಚ್ಚಿನ ದಿನಗಳು ಬ್ರೆಡ್ ಜಾಮ್‌ನಲ್ಲಿಯೇ ಕಳೆದುಹೋಗುತ್ತವೆ...!
ಅದಕ್ಕೆಂದೇ ಬೋಲ್ಡ್ ಸ್ಕೈ ತಂಡ ನಿಮ್ಮ ಸಹಾಯಕ್ಕೆ ನಿಲ್ಲುತ್ತಿದೆ, ದಿನವಿಡೀ ವ್ಯಸ್ತರಿದ್ದರೂ ಕೆಲವೇ ನಿಮಿಷಗಳಲ್ಲಿ ಸ್ವಾದಿಷ್ಟಕರವಾದ ಮೊಟ್ಟೆ ಪಲಾವ್ ರೆಸಿಪಿ ತಯಾರಿಯ ಸವಿವರವನ್ನು ನಾವು ನಿಮ್ಮ ಮುಂದೆ ಇಡುತ್ತಿದ್ದೇವೆ...ಇನ್ನೇಕೆ ತಡ? ಮೊಟ್ಟೆ ಪಲಾವ್ ತಯಾರಿಸಲು ಹೊರಡೋಣವೇ?
ಮೂವರಿಗೆ ಬಡಿಸಬಹುದು
ತಯಾರಿಕೆಗೆ ತಗುಲುವ ಸಮಯ: 15 ನಿಮಿಷಗಳು
ಅಡುಗೆ ಮಾಡಲು ತಗುಲುವ ಸಮಯ: 15 ನಿಮಿಷಗಳು ಅಪ್ಪಟ ಗ್ರಾಮೀಣ ಶೈಲಿಯ ಮೊಟ್ಟೆ ಮಸಾಲ ರೆಸಿಪಿ
ಬೇಕಾದ ಪದಾರ್ಥಗಳು
*ಅನ್ನ - 2 ಕಪ್
*ಮೊಟ್ಟೆ- 2
*ಈರುಳ್ಳಿ- 2 (ಕತ್ತರಿಸಿದಂತಹುದು)
*ಬೆಳ್ಳುಳ್ಳಿ- 4 ತುಂಡುಗಳು (ಕತ್ತರಿಸಿದಂತಹುದು)
*ಟೊಮೇಟೊ - 2 (ಕತ್ತರಿಸಿದಂತಹುದು)
*ಹಸಿ ಮೆಣಸಿನಕಾಯಿ- 2 (ಕತ್ತರಿಸಿದಂತಹುದು)
*ತಾಜಾ ಅವರೆ ಕಾಳು - 1/4 ಕಪ್*ಅರಿಶಿನ ಪುಡಿ- 1/2
*ಖಾರದ ಪುಡಿ- 1 ಟೀ.ಚಮಚ
*ಕರಿ ಮೆಣಸಿನ ಪುಡಿ - 1 ಟೀ.ಚಮಚ
*ಗರಂ ಮಸಾಲ ಪುಡಿ- 1 ಟೀ.ಚಮಚ
*ಉರಿದ ಎಳ್ಳಿನ ಪುಡಿ - 1 ಟೀ.ಚಮಚ
*ಉಪ್ಪು- ರುಚಿಗೆ ತಕ್ಕಷ್ಟು
ತಯಾರಿಸುವ ವಿಧಾನ
*ಬಾಣಲೆಯ ಮೇಲೆ ಎಣ್ಣೆಯನ್ನು ಹಾಕಿ, ಅದರಲ್ಲಿ ಈರುಳ್ಳಿಗಳನ್ನು ಹಾಕಿಕೊಂಡು ಹೊಂಬಣ್ಣ ಬರುವವರೆಗೆ ಉರಿಯಿರಿ.
*ನಂತರ ಕತ್ತರಿಸಿದ ಬೆಳ್ಳುಳ್ಳಿಗಳನ್ನು ಸೇರಿಸಿ, ಕೆಲವು ಕ್ಷಣಗಳವರೆಗೆ ಉರಿಯಿರಿ.
*ಮೊಟ್ಟೆಗಳನ್ನು ಹುಷಾರಾಗಿ ಒಡೆದು, ಬಾಣಲೆಗೆ ಹಾಕಿ. ಮೊಟ್ಟೆಗಳನ್ನು ಚೆನ್ನಾಗಿ ಮಿಶ್ರಣ ಮಾಡುತ್ತ ಬೇಯಿಸಿ.
*ಈಗ ಉಪ್ಪು, ಕರಿ ಮೆಣಸು, ಅರಿಶಿನ ಪುಡಿ, ಖಾರದ ಪುಡಿ, ಹಸಿ ಮೆಣಸಿನ ಕಾಯಿ, ಟೊಮೇಟೊಗಳನ್ನೆಲ್ಲಾ ಹಾಕಿ 3-4 ನಿಮಿಷಗಳ ಕಾಲ ಬೇಯಿಸಿ.
*ಇನ್ನು ಈ ಮಿಶ್ರಣಕ್ಕೆ ಅನ್ನವನ್ನು ಹಾಕಿ ಚೆನ್ನಾಗಿ ಬೆರೆಸಿ. ನಂತರ ಗರಂ ಮಸಾಲ ಪುಡಿಯನ್ನು ಬೆರೆಸಿ, ಚೆನ್ನಾಗಿ ಮಿಶ್ರಣ ಮಾಡಿ.
*ಇದೆಲ್ಲ ಮುಗಿದ ಮೇಲೆ, ಒಲೆಯನ್ನು ಆರಿಸಿ. ಈ ಖಾದ್ಯದ ಮೇಲೆ ಎಳ್ಳು ಪುಡಿಯನ್ನು ಚಿಮುಕಿಸಿ. ಬಿಸಿಯಾಗಿರುವಾಗಲೆ ಬಡಿಸಿ. ಈಗ ನೋಡಿ ರುಚಿ ರುಚಿಯಾದ ಮೊಟ್ಟೆ ಪುಲಾವ್ ನಿಮ್ಮ ಮುಂದೆ ಸಿದ್ಧವಾಗಿರುತ್ತದೆ. ಇದನ್ನು ಸಾರಿನ ಜೊತೆಗೆ ಅಥವಾ ಸಾರಿಲ್ಲದೆ ಬೇಕಾದರು ಸೇವಿಸಬಹುದು.
ಪೋಷಕಾಂಶಗಳ ಪ್ರಮಾಣ
*ಈ ಎಗ್ ಪುಲಾವ್ ಆರೋಗ್ಯಕಾರಿಯಾಗಿರುತ್ತದೆ. ಇದರಲ್ಲಿ ಕ್ಯಾಲೊರಿಗಳ ಪ್ರಮಾಣ ಅಧಿಕವಾಗಿರುವುದಿಲ್ಲ. ಕಬ್ಬಿಣಾಂಶ, ಪ್ರೋಟೀನ್ ಮತ್ತು ಇನ್ನಿತರ ಪೋಷಕಾಂಶಗಳನ್ನು ಹೊಂದಿರುವ ಈ ಖಾದ್ಯವು ಊಟದ ಸಮಯದಲ್ಲಿ ಸೇವಿಸಲು ಹೇಳಿ ಮಾಡಿಸಿದಂತಿರುತ್ತದೆ. ಒಂದು ಪ್ಲೇಟ್ ರುಚಿಕರ ಎಗ್ ಪುಲಾವ್‍ನಲ್ಲಿ ವಿಟಮಿನ್ ಎ ಮತ್ತು ಸಿ ಗಳು ಸಮೃದ್ಧವಾಗಿರುತ್ತದೆ.
ಸಲಹೆಗಳು
*ಈ ಪುಲಾವ್ ಮಾಡಲು ನಿಮ್ಮ ರೆಫ್ರಿಜಿರೇಟರಿನಲ್ಲಿರುವ ಉಳಿಕೆ ಅನ್ನವನ್ನು ಬಳಸಿಕೊಳ್ಳಬಹುದು. ಇದನ್ನು ಮತ್ತಷ್ಟು ಪೋಷಕಾಂಶ ಭರಿತ ಮಾಡಲು ಕೆಲವೊಂದು ತರಕಾರಿಗಳನ್ನು ಬಳಸಿಕೊಳ್ಳಿ. ನಿಮಗೆ ಅವಶ್ಯಕವಿದ್ದಲ್ಲಿ ಕೋಳಿ ಮಾಂಸದ ತುಣುಕುಗಳನ್ನು ಸಹ ಬಳಸಿಕೊಳ್ಳಬಹುದು.