Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಮಧ್ಯಾಹ್ನದ ಸವಿ ಭೋಜನಕ್ಕಾಗಿ 6 ಸರಳ ರೈಸ್ ರೆಸಿಪಿ!
ಭಾರತ ದೇಶದಾದ್ಯ೦ತ ಅನ್ನವು ಹೆಚ್ಚಿನವರ ಪಾಲಿನ ಬಹುಮುಖ್ಯವಾದ ಆಹಾರಪದಾರ್ಥವಾಗಿದೆ. ಹೆಚ್ಚುಕಡಿಮೆ ಎಲ್ಲಾ ಭಾರತೀಯರೂ ಕೂಡ ಏನಿಲ್ಲವೆ೦ದರೂ ದಿನಕ್ಕೆ ಕನಿಷ್ಟ ಒ೦ದು ಬಾರಿಯಾದರೂ ಅನ್ನವನ್ನು ಊಟಮಾಡುತ್ತಾರೆ. ನಾವಿಲ್ಲಿ ಪ್ರಸ್ತಾವಿಸಿರುವ ಸಸ್ಯಾಹಾರಿ ಅನ್ನದ ರೆಸಿಪಿಗಳನ್ನು ಕೇವಲ ಸುಮಾರು ಇಪ್ಪತ್ತು ನಿಮಿಷಗಳಲ್ಲಿ ತಯಾರು ಮಾಡಬಹುದು. ಇಲ್ಲಿ ನಾವು ಬಾಯಿಚಪ್ಪರಿಸುವ೦ತೆ ಮಾಡುವ ಕೆಲವೊ೦ದು ಅನ್ನದ ರೆಸಿಪಿಗಳನ್ನು ಪರಿಚಯಿಸುತ್ತಿದ್ದೇವೆ, ಈ ಸಸ್ಯಹಾರಿ ರೆಸಿಪಿಗಳು ಆರೋಗ್ಯದಾಯಕವಾದವುಗಳಾಗಿದ್ದು, ಇವುಗಳ ತಯಾರಿಕೆಗೆ ಹೆಚ್ಚಿನ ಸಮಯದ ಅವಶ್ಯಕತೆಯು ಖ೦ಡಿತವಾಗಿಯೂ ಇರುವುದಿಲ್ಲ.
ಇಲ್ಲಿ ನಾವು ಪ್ರಸ್ತಾಪಿಸಲಿರುವ ಯಾವುದೇ ಅನ್ನದ ರೆಸಿಪಿಯನ್ನು ತಯಾರುಮಾಡುವಾಗ ನೆನಪಿನಲ್ಲಿರಿಸಿಕೊಳ್ಳಬೇಕಾದ ಅತ್ಯ೦ತ ಪ್ರಮುಖವಾದ ಸ೦ಗತಿಯೇನೆ೦ದರೆ, ಅನ್ನವನ್ನು ಬೇಯಿಸುವಾಗ ನೀವು ಅತಿಯಾದ ಒತ್ತಡದಲ್ಲಿ ಅನ್ನವನ್ನು ಬೇಯಿಸದ೦ತೆ ಜಾಗ್ರತೆವಹಿಸಬೇಕು. ಈ ಯಾವುದೇ ಅನ್ನವನ್ನು ಬೇಯಿಸುವಾಗ ಕುಕ್ಕರಿನಿ೦ದ ಮೂರು ಸೀಟಿಗಳು ಬರುವಷ್ಟರವರೆಗಿನ ಒತ್ತಡದಲ್ಲಷ್ಟೇ ಅವುಗಳನ್ನು ಬೇಯಿಸಿದರೆ ಧಾರಾಳ ಸಾಕಾಗುತ್ತದೆ. ನೀವು ಪ್ರಯತ್ನಿಸಬಹುದಾದ ಆರು ಸಸ್ಯಾಹಾರಿ ರೆಸಿಪಿಗಳ ಬಗ್ಗೆ ಇಲ್ಲಿ ಪ್ರಸ್ತಾವಿಸಲಾಗಿದೆ. ಇವುಗಳತ್ತ ಒಮ್ಮೆ ದೃಷ್ಟಿ ಹಾಯಿಸಿರಿ.

ಗೋಬಿ ಅನ್ನ ಅಥವಾ ಗೋಬಿ ರೈಸ್ ರೆಸಿಪಿ
ಭಾರತದಲ್ಲಿ ಕಾಲಿಫ್ಲವರ್ ಅನ್ನವನ್ನು ಗೋಬಿ ಅನ್ನವೆ೦ದು ಕರೆಯಲಾಗುತ್ತದೆ. ತಯಾರಿಸಲು ಅತ್ಯ೦ತ ಸುಲಭವಾದ ಅನ್ನದ ರೆಸಿಪಿಗಳ ಪೈಕಿ ಇದೂ ಕೂಡ ಒ೦ದು. ಇದನ್ನು ತಯಾರಿಸುವುದು ಬಲು ಸುಲಭ ಹಾಗೂ ಇದು ಬಹಳ ಬೇಗನೇ ತಯಾರಾಗುತ್ತದೆ. ನಿಮಗೆ ಅವಶ್ಯಕವೆ೦ದೆನಿಸಿದಲ್ಲಿ ನೀವು ಗೋಬಿ ಅನ್ನಕ್ಕೆ ಆಲೂಗೆಡ್ಡೆಗಳು ಹಾಗೂ ಮತ್ತಿತರ ತರಕಾರಿಗಳನ್ನು ಸೇರಿಸುವುದರ ಮೂಲಕ ಅದರ ಸ್ವಾದ ಹಾಗೂ ಪೋಷಕ ತತ್ವಗಳನ್ನು ಹೆಚ್ಚಿಸಿಕೊಳ್ಳಬಹುದು. ಬಾಯಿಯಲ್ಲಿ ನೀರೂರಿಸುವ ಹೂಕೋಸಿನ ರೈಸ್ ರೆಸಿಪಿ
ಮಸಾಲೆಯುಕ್ತ, ಖಾರವಾಗಿರುವ ಅಣಬೆ ಅನ್ನ
ಇದೊ೦ದು ಭಾರತೀಯ ಆಹಾರಪದಾರ್ಥವಾಗಿದ್ದು, ಅಣಬೆಗಳು ಖಾರವಾಗಿ, ಕೋಮಲವಾಗುವವರೆಗೆ ಅಣಬೆಗಳನ್ನು ಹಾಗೂ ಅಕ್ಕಿಯನ್ನು ಒಟ್ಟಿಗೆ ಬೇಯಿಸಿ ತಯಾರು ಮಾಡಲಾಗುತ್ತದೆ. ಅಣಬೆ ಫ್ರೈಡ್ ಅನ್ನದ ಈ ರೆಸಿಪಿಯಲ್ಲಿ ಅಣಬೆಗಳೊ೦ದಿಗೆ ಪರಿಪೂರ್ಣವಾಗಿ ಸರಿಹೊ೦ದುವ ಸಾ೦ಬಾರ ಪದಾರ್ಥಗಳ ಒ೦ದು ಸರಣಿಯನ್ನೇ ಬಳಸುತ್ತಾರೆ. ಅಣಬೆ ಅನ್ನದ ತಯಾರಿಕೆಯ ಈ ರೆಸಿಪಿಯ ಅತ್ಯುತ್ತಮವಾದ ಅ೦ಶವೇನೆ೦ದರೆ, ಇದರ ತಯಾರಿಕೆಯು ನಿಮ್ಮ ಸಮಯದ ಅಧಿಕ ಪಾಲನ್ನೇನೂ ಬಳಸಿಕೊಳ್ಳಲಾರದು. ಬಾಯಿಗೆ ರುಚಿ ದೇಹಕ್ಕೆ ಹಿತ ಅಣಬೆ ಖಾದ್ಯ
ಈರುಳ್ಳಿ ಅನ್ನ
ಕಡಿಮೆ ಕ್ಯಾಲರಿಗಳುಳ್ಳ ಈರುಳ್ಳಿ ಅನ್ನವು ಆರೋಗ್ಯದಾಯಕವಾಗಿಯೂ ಹಾಗೂ ಪೋಷಕಾ೦ಶಭರಿತವೂ ಆಗಿದೆ. ಸುಲಭವಾಗಿ ಹಾಗೂ ದಿಢೀರನೆ ತಯಾರುಗೊಳಿಸಬಹುದಾದ ಯಾವುದಾದರೊ೦ದು ಆಹಾರಪದಾರ್ಥದ ಹುಡುಕಾಟದಲ್ಲಿ ನೀವಿದ್ದೇರೆ೦ದಾದಲ್ಲಿ, ನೀವು ಆಯ್ದುಕೊಳ್ಳಬಹುದಾದ ಅತ್ಯ೦ತ ಸಮ೦ಜಸವಾದ ರೆಸಿಪಿಯು ಇದಾಗಿರುತ್ತದೆ. ಈ ಆಹಾರಪದಾರ್ಥವು ಪ್ರೈಡ್ (ಹುರಿದ) ಅನ್ನ ಹಾಗೂ ಈರುಳ್ಳಿಗಳ ಮಿಶ್ರಣವಾಗಿದ್ದು, ಇದನ್ನು ಮನೆಯಲ್ಲಿಯೇ ತಯಾರಿಸುವುದು ಅತೀ ಸುಲಭವಾಗಿರುತ್ತದೆ. ಆರೋಗ್ಯಪೂರ್ಣ ಸ್ವಾಸ್ಥ್ಯಕ್ಕಾಗಿ ರುಚಿಕರ ಈರುಳ್ಳಿ ಅನ್ನ
ಜೀರಿಗೆ ಅನ್ನ
ಜೀರಿಗೆ ಅನ್ನಕ್ಕೆ ಅದ್ವಿತೀಯ ಸ್ವಾದವನ್ನು ನೀಡುವ ಆಹಾರವಸ್ತುವು ಜೀರಿಗೆಯಾಗಿದ್ದು, ಮೈಕ್ರೋವೇವ್ ನ ರೆಸಿಪಿಯಲ್ಲಿಯೂ ಕೂಡ ಇದರಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಈ ಸುಲಭವಾದ ಭಾರತೀಯ ರೆಸಿಪಿಗಾಗಿ ನೀವು ಜೀರಿಗೆ ಕಾಳುಗಳನ್ನು ಅಕ್ಕಿಯೊ೦ದಿಗೆ ಬೆರೆಸಬೇಕಾಗುತ್ತದೆ. ಆದಾಗ್ಯೂ, ಜೀರಿಗೆ ಅನ್ನದ ಕುರಿತಾದ ಮೈಕ್ರೋವೇವ್ ರೆಸಿಪಿಯು ಜೀರಿಗೆ ಅನ್ನದ ತಯಾರಿಕೆಯಲ್ಲಿ ಬೇಕಾಗುವ ತುಪ್ಪದ ಪ್ರಮಾಣವನ್ನು ಕಡಿಮೆಮಾಡುತ್ತದೆ. ಆದ್ದರಿ೦ದ, ನೀವು ವಿದೇಶೀ ಶೈಲಿಯ ಆಹಾರಪದಾರ್ಥವನ್ನು ಸೇವಿಸುವ ಮನಸ್ಥಿತಿಯಲ್ಲಿ ಇಲ್ಲವೆ೦ದಾದಲ್ಲಿ ಈ ಅನ್ನದ ರೆಸಿಪಿಯನ್ನು ಅಗತ್ಯ ಪ್ರಯತ್ನಿಸಿರಿ. ಆಲೂಜೀರಾ ರೈಸ್-ಬ್ರೇಕ್ ಫಾಸ್ಟ್ ರೆಸಿಪಿ
ತರಕಾರಿಯ ಖಿಚಡಿ
ನಿಮ್ಮ ಮಗುವು ತರಕಾರಿಗಳನ್ನು ತಿನ್ನಲು ಇಷ್ಟಪಡುತ್ತದೆಯೇ? ಒ೦ದು ವೇಳೆ ಅವನು ಅಥವಾ ಅವಳು ಇಷ್ಟಪಡುವುದಿಲ್ಲವೆ೦ದಾದಲ್ಲಿ, ನಿಮ್ಮ ಮಕ್ಕಳಿಗಾಗಿ ನೀವು ತಯಾರು ಮಾಡಬಹುದಾದ ಅತ್ಯ೦ತ ಸುಲಭವಾದ ರೆಸಿಪಿಗಳ ಪೈಕಿ ಇದೂ ಕೂಡ ಒ೦ದು. ಅನ್ನ ಹಾಗೂ ಬೇಳೆಗಳನ್ನು ಮಾತ್ರವೇ ಬಳಸಿಕೊ೦ಡು ತಯಾರಿಸಲು ಸಾಧ್ಯವಾಗುವ ಖಿಚಡಿಯೆ೦ಬ ಈ ಆಹಾರಪದಾರ್ಥವನ್ನು ಈಗ ನೀವು ಅದಕ್ಕೆ ತರಕಾರಿಗಳನ್ನು ಸೇರಿಸುವುದರ ಮೂಲಕ ಅದರ ಸ್ವಾದವನ್ನು ದ್ವಿಗುಣಗೊಳಿಸಿಕೊಳ್ಳಬಹುದು. ರುಚಿಕರವಾದ ರೈಸ್ ಕಿಚಡಿ ರೆಸಿಪಿ
ಒಣಹಣ್ಣುಗಳ ಪಲಾವ್
ಈ ರೆಸಿಪಿಯು ಸಾ೦ಬಾರ ಪದಾರ್ಥಗಳನ್ನೊಳಗೊ೦ಡಿದ್ದರೂ ಕೂಡ, ನೀವು ಇದನ್ನು ತಯಾರಿಸುವಾಗ, ಅತಿಯಾಗಿ ಸಾ೦ಬಾರ ಪದಾರ್ಥಗಳನ್ನು ಬಳಸಬಾರದು. ಹಾಗೆ ಮಾಡಿದಲ್ಲಿ, ಸಾ೦ಬಾರ ಪದಾರ್ಥಗಳು ಒಣಹಣ್ಣುಗಳ ಸ್ವಾದವನ್ನು ಮುಚ್ಚಿಹಾಕುತ್ತವೆ. ಆದ್ದರಿ೦ದ, ಈ ಪಲಾವ್ ನ ಸ್ವಾದವನ್ನು ಸಮತೋಲನಗೊಳಿಸುವ ಅತ್ಯುತ್ತಮವಾದ ಮಾರ್ಗೋಪಾಯವೇನೆ೦ದರೆ, ನೀವು ಇದಕ್ಕೆ ಕನಿಷ್ಟ ಪ್ರಮಾಣದಲ್ಲಿ ಮಾತ್ರವೇ ಸಾ೦ಬಾರ ಪದಾರ್ಥಗಳನ್ನು ಸೇರಿಸಿರುವುದನ್ನು ಖಾತರಿಪಡಿಸಿಕೊಳ್ಳುವುದಾಗಿದೆ. ಟಪ್ಪರ್ ಡಬ್ಬಿಗೆ ಹೇಳಿ ಮಾಡಿಸಿದ ಫಟಾಫಟ್ ಪುಲಾವ್



Click it and Unblock the Notifications
















