Latest Updates
-
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ? -
ಬೇಕರಿಯಲ್ಲಿ ಸಿಗುವ ಕೊಬ್ಬರಿ ತುರಿ ಬರ್ಫಿ ನಿಮಿಷದಲ್ಲಿ ಮಾಡಿ! ಇಲ್ಲಿದೆ ಸುಲಭದ ಸ್ವೀಟ್ ವಿಧಾನ -
ಮಧುರೈಗೆ ಹೋಗ್ತಿದ್ದೀರಾ? ಈ ಪವಿತ್ರ ದೇಗುಲಗಳಿಗೂ ಭೇಟಿ ನೀಡೋದನ್ನ ಮರೀಬೇಡಿ.. ಪಟ್ಟಿ ಇಲ್ಲಿದೆ -
ಈ 3 ರಾಶಿಗಳಿಗೆ ಜೀವನದಲ್ಲಿ ಏರಿಳಿತಗಳು! ಹಳೆಯ ನೆನಪುಗಳು ಕಾಡುತ್ತೆ -
March 09 Horoscope: ಶುಭ ಕಾರ್ಯದಲ್ಲಿ ಭಾಗಿಯಾಗುವ ಸಾಧ್ಯತೆ ಹೆಚ್ಚು!
ಬಾಯಿಯಲ್ಲಿ ನೀರೂರಿಸುವ ಹೂಕೋಸಿನ ರೈಸ್ ರೆಸಿಪಿ
ಗೋಬಿ ರೈಸ್ ರೆಸಿಪಿಯು ಉತ್ತರ ಭಾರತದಲ್ಲಿ ಅತ್ಯಂತ ಜನಪ್ರಿಯವಾಗಿದೆ. ಹೂಕೋಸಿನ ಅನ್ನವನ್ನು ಭಾರತದಲ್ಲಿ ಗೋಬಿ ರೈಸ್ ಎಂದು ಸಹ ಕರೆಯುತ್ತಾರೆ. ಈ ವಾರದ ದಿನಗಳಲ್ಲಿ ಯಾವುದನ್ನು ಮಾಡಲಿ ಎಂದು ನೀವು ಆಲೋಚಿಸುತ್ತಿದ್ದಲ್ಲಿ, ಗೋಬಿ ರೈಸ್ ಒಂದು ಒಳ್ಳೆಯ ಖಾದ್ಯವಾಗಿದೆ. ಅದರಲ್ಲೂ ತುಂಬಾ ಖಾರದಿಂದ ಅಥವಾ ಮಸಾಲೆಯಿಂದ ಕೂಡಿರದ ಖಾದ್ಯ ನಿಮಗೆ ಬೇಕು ಎಂದಾದಲ್ಲಿ , ಗೋಬಿ ರೈಸ್ ನಿಮಗೆ ಹೇಳಿ ಮಾಡಿಸಿದ ಆಯ್ಕೆಯಾಗಿರುತ್ತದೆ.
ಇದನ್ನು ತಯಾರಿಸುವುದು ಸುಲಭ ಮತ್ತು ಶೀಘ್ರವಾಗಿ ತಯಾರಿಸಬಹುದು. ನಿಮಗೆ ಅಗತ್ಯವಿದ್ದಲ್ಲಿ, ಇದಕ್ಕೆ ಆಲೂಗಡ್ಡೆಗಳನ್ನು ಮತ್ತು ಇನ್ನಿತರ ತರಕಾರಿಗಳನ್ನು ಇದಕ್ಕೆ ಬೆರೆಸಬಹುದು. ಇದರಿಂದ ರುಚಿಯು ಹೆಚ್ಚುತ್ತದೆ ಮತ್ತು ಪೋಷಕಾಂಶಗಳು ಸಹ ಹೆಚ್ಚುತ್ತವೆ. ಬನ್ನಿ ಹೂಕೋಸಿನಲ್ಲಿ ಅನ್ನ ತಯಾರಿಸುವ ಬಗೆಯನ್ನು ಮುಂದೆ ತಿಳಿದುಕೊಳ್ಳೋಣ. ಮಧ್ಯಾಹ್ನ ಊಟದ ಸವಿಯನ್ನು ಹೆಚ್ಚಿಸುವ ಕ್ಯಾರೆಟ್ ಅನ್ನ

*ಪ್ರಮಾಣ: ಇಬ್ಬರಿಗೆ ಬಡಿಸಬಹುದು
*ತಯಾರಿಕೆಗೆ ತಗುಲುವ ಸಮಯ - 10 ನಿಮಿಷಗಳು
*ಅಡುಗೆಗೆ ತಗುಲುವ ಸಮಯ - 15 ನಿಮಿಷಗಳು
ನಿಮಗೆ ಬೇಕಾದ ಪದಾರ್ಥಗಳು
*ಬಾಸುಮತಿ ಅಕ್ಕಿಯಲ್ಲಿ ತಯಾರಿಸಿದ ಅನ್ನ- 2 ಕಪ್
*ಹೂಕೋಸು - ½ (ಕತ್ತರಿಸಿದಂತಹುದು)
*ಈರುಳ್ಳಿ - 1 (ಕತ್ತರಿಸಿದಂತಹುದು)
*ಹಸಿ ಮೆಣಸಿನಕಾಯಿಗಳು - 2 (ಕತ್ತರಿಸಿದಂತಹುದು)
*ಜೀರಿಗೆ - ½ ಟೀ. ಚಮಚ
*ಖಾರದ ಪುಡಿ - ½ ಟೀ. ಚಮಚ
*ಅರಿಶಿಣ ಪುಡಿ - ½ ಟೀ. ಚಮಚ
*ಚಕ್ಕೆ - 2
*ಲವಂಗ - 2
*ಉಪ್ಪು ರುಚಿಗೆ ತಕ್ಕಷ್ಟು
*ಎಣ್ಣೆ ಆಹಾ ಉಡುಪಿ ಶೈಲಿಯ ರುಚಿಕರ ಸಾಂಬಾರ್ ರೆಸಿಪಿ!
ತಯಾರಿಸುವ ವಿಧಾನ
1. ಒಂದು ಬಾಣಲೆಯಲ್ಲಿ ಎಣ್ಣೆಯನ್ನು ಕಾಯಿಸಿ ಮತ್ತು ಅದಕ್ಕೆ ಜೀರಿಗೆ, ಲವಂಗ ಮತ್ತು ಚಕ್ಕೆಯನ್ನು ಹಾಕಿ. ಜೀರಿಗೆ ಚಿಟ ಪಟ ಎಂದು ಸದ್ದು ಮಾಡುವವರೆಗೆ ಕಾಯಿರಿ, ನಂತರ ಅದಕ್ಕೆ ಈರುಳ್ಳಿಯನ್ನು ಹಾಕಿ ಹೊಂಬಣ್ಣಕ್ಕೆ ಬರುವವರೆಗೆ ಕಾಯಿರಿ.
2. ನಂತರ, ಇದಕ್ಕೆ ಹಸಿ ಮೆಣಸಿನ ಕಾಯಿಗಳನ್ನು ಮತ್ತು ಈರುಳ್ಳಿಗಳನ್ನು ಹಾಕಿ. ಚೆನ್ನಾಗಿ ಉರಿಯಿರಿ.
3. ಇದಾದ ಮೇಲೆ ಖಾರದಪುಡಿ, ಅರಿಶಿಣ ಪುಡಿ ಮತ್ತು ಉಪ್ಪನ್ನು ಹಾಕಿ. ಚೆನ್ನಾಗಿ ಕಲೆಸಿಕೊಡಿ.
4. ಈಗ ಬಾಣಲೆಗೆ ಹೂಕೋಸನ್ನು ಹಾಕಿ ಮತ್ತು ಎಲ್ಲಾ ಮಸಾಲೆ ಚೆನ್ನಾಗಿ ಬೆರೆಯುವಂತೆ ಕಲೆಸಿ ಕೊಡಿ. ಈ ಮಿಶ್ರಣವನ್ನು ಮಧ್ಯಮ ಗಾತ್ರದ ಉರಿಯಲ್ಲಿ 10 ನಿಮಿಷಗಳ ಕಾಲ ಬೇಯಿಸಿ.
5. ಗೋಬಿಯು ಹೊಂಬಣ್ಣಕ್ಕೆ ಬರುವವರೆಗೆ ಕಲೆಸಿಕೊಡಿ.
6. ಈಗ, ಇದಕ್ಕೆ ತಯಾರಿಸಿದ ಅನ್ನವನ್ನು ಹಾಕಿ ಮತ್ತು ಇದನ್ನು ಚೆನ್ನಾಗಿ ಮಿಶ್ರಣ ಮಾಡಿ. ನಂತರ, ಇದಕ್ಕೆ ಕೊತ್ತಂಬರಿ ಸೊಪ್ಪನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಇದನ್ನು 5-6 ನಿಮಿಷ ಬೇಯಿಸಿ, ನಂತರ ಉರಿಯನ್ನು ಆರಿಸಿ. ಈಗ ಗೋಬಿ ಅನ್ನವು ತಯಾರಾಯಿತು. ಹೀಗೆ ಇದನ್ನು ತಯಾರಿಸುಸುವುದು ಸುಲಭ.
#ಪೋಷಕಾಂಶಗಳ ಪ್ರಮಾಣ
*ಅನ್ನದಲ್ಲಿ ಕಾರ್ಬೋಹೈಡ್ರೇಟ್‍ಗಳ ಪ್ರಮಾಣ ಅಧಿಕವಾಗಿರುತ್ತದೆ. ಇದು ನೀವು ಆರೋಗ್ಯವಾಗಿರಲು ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತದೆ.
*ಹೂಕೋಸು ಎಂಬುದು ಒಂದು ಅದ್ಭುತವಾದ ತರಕಾರಿಯಾಗಿದೆ. ಇದು ನಿಮ್ಮ ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ. ಹೂಕೋಸನ್ನು ಸೇವಿಸುವುದರಿಂದ ಕ್ಯಾನ್ಸರ್ ಬರುವುದನ್ನು ತಡೆಯಬಹುದು.
#ಸಲಹೆ
*ಖಾದ್ಯವನ್ನು ಬೇಗ ಬೇಯಿಸಬೇಕೆಂದಾದಲ್ಲಿ, ಗೋಬಿ ರೈಸ್ ಖಾದ್ಯವನ್ನು ಪ್ರಯತ್ನಿಸಬಹುದು. ನಿಮಗೆ ಬೇಕಾದಲ್ಲಿ ಗೋಬಿ ರೈಸ್‍ಗೆ ಮಸಾಲೆಗಳನ್ನು ಹೆಚ್ಚು ಬೆರೆಸಬಹುದು. ಇದಕ್ಕೆ ಹಸಿ ಬಟಾಣಿಯನ್ನು ಸಹ ಬೆರೆಸಬಹುದು. ಇದು ಈ ಗೋಬಿ ರೈಸ್‍ನ ರುಚಿಯನ್ನು ಹೆಚ್ಚಿಸುತ್ತದೆ.



Click it and Unblock the Notifications











