Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
‘ಕೋಸಿನ ಪಲ್ಯ’ ಹೀಗೆ ಮಾಡಿದ್ರೆ ಹೇಗೆ?
ಕೋಸಿನ ಪಲ್ಯ ರೊಟ್ಟಿ-ಚಪಾತಿ ಮತ್ತು ದೋಸೆಗೆ ಒಳ್ಳೆಯ ಜೋಡಿ
- ಪ್ರಿಯಂವದಾ
[email protected]
ಅಗತ್ಯ ಪದಾರ್ಥಗಳು :
2 ಕಪ್ ಸಣ್ಣಗೆ ಹಚ್ಚಿದ ಕೋಸು
1 ಟೊಮಾಟೊ
1/2 ಕಪ್ ಬಟಾಣಿ
2 ದೊಡ್ಡ ಮೆಣಸಿನಕಾಯಿ
1/2 ಚಮಚ ಜೀರಿಗೆ ಪುಡಿ
1/2 ಚಮಚ ಕಾರದ ಪುಡಿ
1/4 ಚಮಚ ಧನಿಯ ಪುಡಿ
1/2 ಚಮಚ ಗರಂ ಮಸಾಲ
1/4 ಚಮಚ ಅರಿಶಿನದ ಪುಡಿ
1/2 ಚಮಚ ಸಕ್ಕರೆ (ಬೇಕಿದ್ದರೆ)
ಕಾಯಿತುರಿ (ಬೇಕಿದ್ದರೆ)
ಸ್ವಲ್ಪ ಕರಿಬೇವು,
ಕೊತ್ತಂಬರಿ ಸೊಪ್ಪು ,
ಚಿಟಿಕೆ ಹಿಂಗು,
ರುಚಿಗೆ ತಕ್ಕಷ್ಟು ಉಪ್ಪು
ತಯಾರಿಸುವ ಕ್ರಮ : ಬಾಣಲೆಯಲ್ಲಿ ಎರಡು ಚಮಚ ಎಣ್ಣೆ ಹಾಕಿ. ಅದು ಕಾದನಂತರ ಸಾಸಿವೆ, ಜೀರಿಗೆಯ ಒಗ್ಗರಣೆ ಹಾಕಿ. ಅದಕ್ಕೆ ಹಿಂಗು, ಕರಿಬೇವು, ಅರಿಶಿನ ಬೆರೆಸಿ. ನಂತರ ದೊಡ್ಡ ಮೆಣಸಿನಕಾಯಿ, ಬಟಾಣಿ ಹಾಕಿ ಸ್ವಲ್ಪ ಕಲಕಿ. ಆಮೇಲೆ ಹಚ್ಚಿದ ಕೋಸನ್ನು ಹಾಕಿ ನೀರು ಚಿಮುಕಿಸಿ ಚೆನ್ನಾಗಿ ಬಾಡಿಸಿ. ಎರಡು ನಿಮಿಷ ಮುಚ್ಚಳ ಮುಚ್ಚಿಡಿ.
ಕೋಸು ಅರ್ಧ ಬೆಂದ ಮೇಲೆ ಮಸಾಲೆ, ಉಪ್ಪು, ಟೊಮಾಟೋ ಬೆರೆಸಬೇಕು. ನಂತರ ಕಡಿಮೆ ಉರಿಯಲ್ಲಿ ಬೇಯಿಸಿ. ಬಡಿಸುವ ಮೊದಲು ಕೊತ್ತಂಬರಿ ಸೊಪ್ಪು, ಒಂದು ಚಮಚ ತೆಂಗಿನತುರಿ, ಸಕ್ಕರೆ (ಬೇಕಿದ್ದಲ್ಲಿ) ಬೆರೆಸಿ. ಸಿದ್ಧವಾದ ಕೋಸಿನ ಬಲ್ಯವನ್ನು ತಟ್ಟೆಗೆ ಬಡಿಸಿಕೊಂಡು ರುಚಿ ನೋಡಿ.
ನಮ್ಮ ಟಿಪ್ಸ್ : ತೊಗರಿಬೇಳೆಯ ಡಬ್ಬಿಯಲ್ಲಿ 15 ಇಪ್ಪತ್ತು ಲವಂಗಗಳನ್ನು ಒಂದು ಸಣ್ಣ ಬಟ್ಟೆಯಲ್ಲಿ ಕಟ್ಟಿಡಿ. ಹೀಗೆ ಮಾಡಿದರೆ ಲವಂಗದ ವಾಸನೆಗೆ ಹುಳಗಳು ಪರಾರಿಯಾಗುತ್ತವೆ.



Click it and Unblock the Notifications
