Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಹಿಟ್ಟು ರುಬ್ಬುವ ತಲೆನೋವು ಇಲ್ಲ.. 10 ನಿಮಿಷದಲ್ಲಿ ಅಕ್ಕಿ ಹಿಟ್ಟಿನಿಂದ ಮಾಡಿ ಈ ರುಚಿಯಾದ ತಿಂಡಿ! ಮಕ್ಕಳ ಫೇವರೆಟ್
ಹಿಟ್ಟು ರುಬ್ಬುವ ತಲೆನೋವು ಇಲ್ಲ.. ದಿಢೀರ್ ಬೆಳಗಿನ ತಿಂಡಿಗೆ 10 ನಿಮಿಷದಲ್ಲಿ ಮಾಡಿ ಈ ರುಚಿಯಾದ ಬ್ರೇಕ್‌ಫ್ಯಾಸ್ಟ್! ಎಲ್ಲರಿಗೂ ಫೇವರೆಟ್ ಆಗೋದು ಖಚಿತ. ಹೌದು, ಪ್ರತಿದಿನ ಬೆಳಗ್ಗೆ ತಿಂಡಿಗೆ ಏನು ಮಾಡುವುದು? ಎಂಬ ಗೊಂದಲ ಅನೇಕರನ್ನು ಕಾಡುತ್ತದೆ. ಕಡಿಮೆ ಸಮಯದಲ್ಲಿ, ಆರೋಗ್ಯಕರ ಹಾಗೂ ರುಚಿಕರವಾದ ತಿಂಡಿ ಆರಿಸುವುದು ಸವಾಲಿನ ಕೆಲಸ. ಚಿಲ್ಲಾ ಅಥವಾ ದೋಸೆಯನ್ನು (Dosa) ಇಷ್ಟಪಡುವವರಿಗೆ ಅಕ್ಕಿ ಹಿಟ್ಟಿನ ಚಿಲ್ಲಾ (Rice Flour Chilla) ಅತ್ಯುತ್ತಮ ಆಯ್ಕೆ.
ಇದು ಕೇವಲ 10 ರಿಂದ 15 ನಿಮಿಷಗಳಲ್ಲಿ ಸಿದ್ಧವಾಗುವುದಲ್ಲದೆ, ಮಕ್ಕಳಿಂದ ದೊಡ್ಡವರವರೆಗೆ ಎಲ್ಲರಿಗೂ ಇಷ್ಟವಾಗುತ್ತದೆ. ಸಮಯ ಉಳಿಸುವ ಈ ಆರೋಗ್ಯಕರ ತಿಂಡಿ, ನಿಜಕ್ಕೂ ಎಲ್ಲರ ಮೆಚ್ಚುಗೆ ಪಡೆಯುವಲ್ಲಿ ಸಂಶಯವಿಲ್ಲ. ರುಚಿಕರವಾದ ಅಕ್ಕಿ ಹಿಟ್ಟಿನ ಚೀಲಾ ತಯಾರಿಸಲು ಬೇಕಾದ ಅಗತ್ಯ ಸಾಮಗ್ರಿಗಳು ಮತ್ತು ತಯಾರಿಸುವ ವಿಧಾನ (Rice Flour Chilla Recipe) ಇಲ್ಲಿದೆ.

ಅಕ್ಕಿ ಹಿಟ್ಟಿನ ಚಿಲ್ಲಾದ ವಿಶೇಷತೆ
ದೋಸೆ ತಯಾರಿಕೆಗೆ ಬೇಕಾಗುವ ಅಕ್ಕಿ ನೆನೆಸುವುದು, ರುಬ್ಬುವುದು, ಹಿಟ್ಟು ಹುದುಗಿಸುವುದು ಮುಂತಾದ ಪೂರ್ವಸಿದ್ಧತಾ ಶ್ರಮ ಈ ಚೀಲಾಗೆ ಬೇಕಿಲ್ಲ. ಇದು ಕಡಿಮೆ ಸಮಯದಲ್ಲಿ ಸಿದ್ಧವಾಗುವುದರಿಂದ ಅಡುಗೆ ಕೆಲಸ ಬಹಳ ಸುಲಭವಾಗುತ್ತದೆ.
ಕಡಿಮೆ ಎಣ್ಣೆಯ ಬಳಕೆಯಿಂದ ತಯಾರಾಗುವ ಇದು ಜೀರ್ಣಕ್ರಿಯೆಗೂ ಸೂಕ್ತ. ನಿಮ್ಮಿಷ್ಟದ ವೈವಿಧ್ಯಮಯ ತರಕಾರಿಗಳನ್ನು ಸೇರಿಸುವ ಮೂಲಕ ಇದನ್ನು ಪೌಷ್ಟಿಕಾಂಶ ಸಮೃದ್ಧ ಆರೋಗ್ಯಕರ ಉಪಾಹಾರವನ್ನಾಗಿಸಬಹುದು.
ಅಕ್ಕಿ ಹಿಟ್ಟಿನ ಚಿಲ್ಲಾಗೆ ಬೇಕಾದ ಸಾಮಗ್ರಿಗಳು
• ಅಕ್ಕಿ ಹಿಟ್ಟು
• ಈರುಳ್ಳಿ
• ಹಸಿ ಮೆಣಸಿನಕಾಯಿ
• ಕ್ಯಾರೆಟ್
• ಕ್ಯಾಪ್ಸಿಕಂ
• ಟೊಮೆಟೊ
• ಶುಂಠಿ
• ಕೊತ್ತಂಬರಿ ಸೊಪ್ಪು
• ಜೀರಿಗೆ
• ಕೆಂಪು ಮೆಣಸಿನ ಪುಡಿ
• ರುಚಿಗೆ ತಕ್ಕಷ್ಟು ಉಪ್ಪು
• ನೀರು
• ಎಣ್ಣೆ ಅಥವಾ ತುಪ್ಪ
ಅಕ್ಕಿ ಹಿಟ್ಟಿನ ಚಿಲ್ಲಾ ತಯಾರಿಸುವ ವಿಧಾನ
- ಮೊದಲು ಒಂದು ದೊಡ್ಡ ಪಾತ್ರೆಯಲ್ಲಿ ಒಂದು ಕಪ್ ಅಕ್ಕಿ ಹಿಟ್ಟನ್ನು ತೆಗೆದುಕೊಳ್ಳಿ. ಅದಕ್ಕೆ ಹೆಚ್ಚಿದ ಈರುಳ್ಳಿ, ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ತುರಿದ ಶುಂಠಿ ಮತ್ತು ಹೆಚ್ಚಿದ ಟೊಮೆಟೊ ಸೇರಿಸಿ.
- ನಂತರ ತುರಿದ ಕ್ಯಾರೆಟ್ ಹಾಗೂ ಸಣ್ಣಗೆ ಹೆಚ್ಚಿದ ಕ್ಯಾಪ್ಸಿಕಂ ಹಾಕಿ, ಎಲ್ಲವನ್ನೂ ಚೆನ್ನಾಗಿ ಬೆರೆಸಿರಿ.
- ಈ ತರಕಾರಿ ಮಿಶ್ರಣಕ್ಕೆ ಜೀರಿಗೆ, ಕೆಂಪು ಮೆಣಸಿನ ಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ.
- ನಂತರ ಸ್ವಲ್ಪ ಸ್ವಲ್ಪವೇ ನೀರು ಹಾಕುತ್ತಾ ಗಂಟುಗಳಾಗದಂತೆ ಹಿಟ್ಟನ್ನು ನಯವಾಗಿ ಕಲಸಿಕೊಳ್ಳಿ. ಚೀಲಾ ಮೃದುವಾಗಿ ಬರಲು ಹಿಟ್ಟು ದೋಸೆ ಹಿಟ್ಟಿಗಿಂತ ಸ್ವಲ್ಪ ತೆಳ್ಳಗಿರಬೇಕು.
- ಒಲೆಯ ಮೇಲೆ ನಾನ್-ಸ್ಟಿಕ್ ತವಾವನ್ನು (ಅಂಟದ ತವಾ) ಬಿಸಿ ಮಾಡಿ. ತವಾ ಬಿಸಿಯಾದ ನಂತರ ಅದಕ್ಕೆ ಸ್ವಲ್ಪ ಎಣ್ಣೆ ಅಥವಾ ತುಪ್ಪವನ್ನು ಸವರಿ.
- ಈಗ ಒಂದು ದೊಡ್ಡ ಚಮಚದ ಸಹಾಅಯದಿಂದ ತಯಾರಿಸಿದ ಹಿಟ್ಟನ್ನು ತೆಗೆದುಕೊಂಡು ತವದ ಮೇಲೆ ದಪ್ಪವಾಗದಂತೆ ಮಧ್ಯಮ ಗಾತ್ರದಲ್ಲಿ ಹರಡಿರಿ.
- ಚಿಲ್ಲಾದ ಸುತ್ತಲೂ ಒಂದು ಚಮಚ ಎಣ್ಣೆ ಹಾಕಿ. ಒಂದು ಬದಿ ಚೆನ್ನಾಗಿ ಬೆಂದು ಹೊಂಬಣ್ಣಕ್ಕೆ ಬಂದ ನಂತರ, ಅದನ್ನು ಮಗುಚಿ ಇನ್ನೊಂದು ಬದಿಯನ್ನು ಬೇಯಿಸಿ. ಎರಡೂ ಬದಿಗಳು ಹದವಾಗಿ ಬೆಂದು, ಚೆನ್ನಾಗಿ ಹುರಿಯುವವರೆಗೆ ಬೇಯಿಸಬೇಕು.
ಸವಿಯುವುದು ಹೇಗೆ?
ಬಿಸಿಬಿಸಿಯಾದ ಅಕ್ಕಿ ಹಿಟ್ಟಿನ ಚಿಲ್ಲಾವನ್ನು ಕಾಯಿ ಚಟ್ನಿ, ಪುದೀನಾ ಚಟ್ನಿ ಅಥವಾ ಖಾರವಾದ ಉಪ್ಪಿನಕಾಯಿಯೊಂದಿಗೆ ಸವಿಯಿರಿ. ಸಮಯವಿಲ್ಲದಿದ್ದರೆ ಟೊಮೆಟೊ ಕೆಚಪ್ ಜೊತೆಯಲ್ಲಿಯೂ ಇದು ಅದ್ಭುತವಾಗಿ ರುಚಿ ನೀಡುತ್ತದೆ.
ನೀವು ಇದರಲ್ಲಿ ಪಾಲಕ್ ಸೊಪ್ಪು, ಸಣ್ಣಗೆ ಹೆಚ್ಚಿದ ಎಲೆಕೋಸು ಅಥವಾ ಹೂಕೋಸನ್ನು ಕೂಡ ಬಳಸಬಹುದು. ಚೀಲಾ ಸ್ವಲ್ಪ ಕ್ರಿಸ್ಪಿಯಾಗಿ ಬೇಕೆಂದರೆ, ಹಿಟ್ಟನ್ನು ತೆಳ್ಳಗೆ ಹರಡಿ ಮತ್ತು ಸಣ್ಣ ಉರಿಯಲ್ಲಿ ಹೆಚ್ಚು ಸಮಯ ಬೇಯಿಸಿ. ಮಕ್ಕಳಿಗೆ ನೀಡುವಾಗ ಹಸಿಮೆಣಸಿನಕಾಯಿ ಬದಲು ಸ್ವಲ್ಪ ಮೆಣಸಿನ ಪುಡಿ ಮತ್ತು ತುಪ್ಪ ಬಳಸಿ ಮಾಡಿಕೊಟ್ಟರೆ, ಅವರು ಇಷ್ಟಪಟ್ಟು ತಿನ್ನುತ್ತಾರೆ.



Click it and Unblock the Notifications