ರೆಸಿಪಿ: ಅನ್ನದಿಂದ ಕಟ್ಲೆಟ್‌ ರೆಸಿಪಿ ಟ್ರೈ ಮಾಡಿದ್ದೀರಾ? ಟೇಸ್ಟ್ ಸೂಪರೋ ಸೂಪರ್!

Posted By:

ನೀವು ಅನ್ನದಿಂದ ಟೇಸ್ಟಿ ಕಟ್ಲೆಟ್‌ ಟೇಸ್ಟ್‌ ಮಾಡಿದ್ದೀರಾ? ಈ ಕಟ್ಲೆಟ್ ಸೂಪರ್ ಆಗಿರುತ್ತದೆ, ಮಕ್ಕಳಿಗೆ ಸಂಜೆ ಸ್ನ್ಯಾಕ್ಸ್‌ಗೆ ಇದನ್ನು ಮಾಡಿ ಕೊಟ್ಟರೆ ತುಂಬಾ ಇಷ್ಟಪಟ್ಟು ತಿನ್ನುತ್ತಾರೆ. ಈ ಕಟ್ಲೆಟ್‌ ರೆಸಿಪಿ ಮಾಡುವುದು ಹೇಗೆ ಎಂದು ನೋಡೋಣ:

ಬೇಕಾಗುವ ಸಾಮಗ್ರಿ
* ಅನ್ನ 1 ಕಪ್‌
* ಬೇಯಿಸಿದ ಆಲೂಗಡ್ಡೆ ( ಸಿಪ್ಪೆ ಸುಲಿದು ಮ್ಯಾಶ್‌ ಮಾಡಿದ್ದು)
* ಮಿಕ್ಸ್ಡ್‌ ವೆಜಿಟೇಬಲ್( ಬೀನ್ಸ್, ಕ್ಯಾಪ್ಸಿಕಂ, ಕೆಂಪು, ಹಳದಿ ಬೆಲ್‌ ಪೆಪ್ಪರ್
* ಈರುಳ್ಳಿ 1
* ಶುಂಠಿ 2 ಚಮಚ
ಖಾರದ ಪುಡಿ 1/2 ಚಮಚ
ಕೊತ್ತಂಬರಿ ಸೊಪ್ಪು 2 ಚಮಚ
ರುಚಿಗೆ ತಕ್ಕ ಉಪ್ಪು
ಚಿಟಿಕೆಯಷ್ಟು ಅರಿಶಿಣ ಪುಡಿ 1/2 ಚಮಚ
ಕೊತ್ತಂಬರಿ ಪುಡಿ 1/2 ಚಮಚ
ಕಡ್ಲೆಹಿಟ್ಟಿನ ಪುಡಿ 3 ಚಮಚ
ಎಣ್ಣೆ 3 ಚಮಚ

rice cutlet snack recipe

ಮಾಡುವ ವಿಧಾನ:
* ಒಂದು ಬೌಲ್‌ ತೆಗೆದು ಅದರಲ್ಲಿ ಎಣ್ಣೆ ಬಿಟ್ಟು ಉಳಿದೆಲ್ಲಾ ಸಾಮಗ್ರಿ ಹಾಕಿ.
* ನಂತರ ಕೈಯಿಂದಲೇ ಎಲ್ಲಾ ಸಾಮಗ್ರಿ ಮಿಶ್ರ ಮಾಡಿ.
* ನಿಮಗೆ ಹೆಚ್ಚಿನ ಖಾರ ಬೇಕಿದ್ದರೆ ಇನ್ನೂ ಸ್ವಲ್ಪ ಮೆಣಸಿನ ಪುಡಿ ಸೇರಿಸಬಹುದು.
* ಅನ್ನವನ್ನು ಚೆನ್ನಾಗಿ ಹಿಸುಕಿ.
* ಅದರ ಮೇಲೆ ಕಡ್ಲೆ ಹಿಟ್ಟು ಹಾಕಿ.
* ನಂತರ ಟಿಕ್ಕಿ ಮಾಡಿ.
* ಪ್ಯಾನ್‌ಗೆ ಎಣ್ಣೆ ಹಾಕಿ ಕಾಯಿಸಿ.
* ನಂತರ ಟಿಕ್ಕಿ ಹಾಕಿ ಎರಡೂ ಬದಿ ಸ್ವಲ್ಪ ಕಂದು ಬಣ್ಣಕ್ಕೆ ಬರುವವರೆಗೆ ಫ್ರೈ ಮಾಡಿ.
* ಈಗ ಅಕ್ಕಿ ಕಟ್ಲೆಟ್ ಸರ್ವ್‌ ಮಾಡಲು ರೆಡಿ.
ರೆಡಿಯಾದ ಕಡ್ಲೆಟ್‌ ಅನ್ನು ಕೊತ್ತಂಬರಿ ಅಥವಾ ಪುದೀನಾ ಚಟ್ನಿ ಜೊತೆ ಸರ್ವ್ ಮಾಡಿ.

ಸಲಹೆ:
* ಹಿಟ್ಟು ಬೇಕಿದ್ದರೆ ಇನ್ನು ಸ್ವಲ್ಪ ಹಾಕಿ
* ಕಟ್ಲೆಟ್‌ ಅಂಟು-ಅಂಟಾಗಿ ಇರಬಾರದು.
* ಕಡ್ಲೆಟ್‌ ತುಪ್ಪದಲ್ಲಿ ಕರಿದರೆ ತುಂಬಾ ರುಚಿಯಾಗಿರುತ್ತದೆ.
* ಆರೋಗ್ಯದ ಬಗ್ಗೆ ಕಾಳಜಿ ಇದ್ದರೆ ಆಲೀವ್‌ ಎಣ್ಣೆ ಬಳಸಿ.

[ of 5 - Users]
Story first published: Wednesday, January 10, 2024, 14:49 [IST]
X
Desktop Bottom Promotion