Latest Updates
-
Actor Vijay father S A Chandrasekhar old video about daughter in law Sangeetha is trending -
ಈ 4 ಬಗೆಯ ಜನರಿಗೆ ಎಂದಿಗೂ ಸಹಾಯ ಮಾಡಬೇಡಿ! ನಿಮ್ಮ ಒಳ್ಳೆಯತನವೇ ಮುಳುವಾಗುತ್ತೆ -
ನಿಶಕ್ತಿ, ಬಲಹೀನತೆ ಇದ್ರೆ ವಾರದಲ್ಲಿ ಈ 2 ಮುದ್ದೆ ತಿನ್ನಿ ಸಾಕು -
ಹೆಸರುಬೇಳೆ ಬಳಸಿ ಪಕೋಡ ಮಾಡಿ ಸವಿಯಿರಿ! ಇಲ್ಲಿವೆ ಶೆಫ್ ಸ್ಟೈಲ್ನ ಈ 2 ಸಿಂಪಲ್ ವಿಧಾನಗಳು -
ಮೀನ ರಾಶಿಯಲ್ಲಿ ಶುಕ್ರ-ಚಂದ್ರನ ಸಮ್ಮಿಲನ; ಅಪರೂಪದ ಕಲಾತ್ಮಕ ಯೋಗ ಸೃಷ್ಟಿ! -
ಬೇಕರಿ ರುಚಿಯ ಆಪಲ್ ಕೇಕ್ ಥಟ್ ಅಂತ ಮನೆಯಲ್ಲಿ ಮಾಡಿ! ಇಲ್ಲಿದೆ ಸುಲಭದ ವಿಧಾನ -
Holi 2026: ಹೋಳಿಯಂದು ನಿಮ್ಮ ರಾಶಿಗೆ ಪ್ರಕಾರ ಈ ಉಪಾಯ ಮಾಡಿ! ಸಕಲ ಸಮಸ್ಯೆ- ಸಂಕಷ್ಟಗಳಿಂದ ಮುಕ್ತಿ ಸಿಗುತ್ತೆ -
ಈ ಟ್ರಿಕ್ ಬಳಸಿ ಮಾಡಿ ಗರಿಗರಿ ಆಲೂ ಚಿಪ್ಸ್! ಬಿಳಿಯಾಗಿ ಬರಲು.. ವರ್ಷವಿಡೀ ಕೆಡದಂತೆ ಇಡೋದು ಹೇಗೆ? -
ಹೋಳಿ ಸಂಭ್ರಮ.. ಸಂಗಾತಿಯ ಸಹವಾಸ ನೆಮ್ಮದಿ ನೀಡುತ್ತೆ! ಭಾವನೆಗಳ ಜೊತೆ ಆಟ ಬೇಡ -
March 04 Horoscope: ಆರ್ಥಿಕ ಲಾಭದ ಕಾರಣದಿಂದ ನೆಮ್ಮದಿ ಇದೆ!
ರೆಸಿಪಿ: ಶಮಿ ಕಬಾಬ್ ಚಿಕನ್‌ನಿಂದಲೂ ಮಾಡಬಹುದು, ಗೊತ್ತಾ? ಸೂಪರ್ ಟೇಸ್ಟ್ ಆಗಿರುತ್ತೆ ಈ ಸ್ನ್ಯಾಕ್ಸ್
ಶಮಿ ಕಬಾಬ್ ಟೇಸ್ಟ್ ಮಾಡಿದ್ದೀರಾ? ಇದನ್ನು ಹೆಚ್ಚಾಗಿ ಮಟನ್‌ನಿಂದ ತಯಾರಿಸುತ್ತಾರೆ, ಆದರೆ ನೀವು ಚಿಕನ್‌ನಲ್ಲಿಯೂ ತಯಾರಿಸಬಹುದು. ನೀವು ಈ ವಾರ ಹೊಸ ರುಚಿಯ ಅಡುಗೆ ಮಾಡಬೇಕೆಂದು ಯೋಚಿಸುತ್ತಿದ್ದರೆ ಇದನ್ನು ಟ್ರೈ ಮಾಡಿ ತುಂಬಾನೇ ಟೇಸ್ಟ್ ಆಗಿರುತ್ತದೆ.

ಬೇಕಾಗುವ ಸಾಮಗ್ರಿ
1/2 ಕೆಜಿ ಬೋನ್‌ಲೆಸ್ ಚಿಕನ್
1/3 ಕಪ್ ಕಡ್ಲೆ ಬೇಳೆ 75ಗ್ರಾಂ, ನೆನೆಹಾಕಿ
1 ಚಮಚ ಖಾರದ ಪುಡಿ
1/4 ಚಮಚ ಅರಿಶಿಣ ಪುಡಿ
ಇಂದು ಇಂಚಿನಷ್ಟು ದೊಡ್ಡದಿರುವ ಚಕ್ಕೆ
2-3 ಏಲಕ್ಕಿ
2 ಒಣ ಮೆಣಸು
ತುರಿದ ಶುಂಠಿ 1 ಚಮಚ
3 ಬೆಳ್ಳುಳ್ಳು ಎಸಳು, ಚಿಕ್ಕದಾಗಿ ಕತ್ತರಿಸಿದ್ದು
1 ಚಮಚ ಗರಂ ಮಸಾಲೆ
ರುಚಿಗೆ ತಕ್ಕ ಉಪ್ಪು
1 ಈರುಳ್ಳಿ, ಚಿಕ್ಕದಾಗಿ ಕತ್ತರಿಸಿದ್ದು
2 ಮೊಟ್ಟೆ, 1 ಮಿಕ್ಸರ್‌ಗೆ ಹಾಕಲು, ಮತ್ತೊಂದು ಕೋಟ್ ಮಾಡಲು
ಸ್ವಲ್ಪ ಕೊತ್ತಂಬರಿ ಸೊಪ್ಪು
ಸ್ವಲ್ಪ ಪುದೀನಾ
1 ಹಸಿಮೆಣಸು
ಎಣ್ಣೆ (ಫ್ರೈ ಮಾಡಲು)
ಮಾಡುವುದು ಹೇಗೆ?
* ಕಡ್ಲೆ ಬೇಳೆಯನ್ನು 4 ಗಂಟೆಗಳ ನೆನೆ ಹಾಕಿ. ನಂತರ ನೀರನ್ನು ಸೋಸಿ.
* ಪ್ಯಾನ್‌ಗೆ ಬೇಳೆ, ಶುಂಠಿ, ಉಪ್ಪು, ಅರಿಶಿಣ ಪುಡಿ, ಖಾರದ ಪುಡಿ, ಒಣ ಮೆಣಸು,
ಗರಂ ಮಸಾಲ, ಚಕ್ಕೆ, ಜೀರಿಗೆ, ಏಲಕ್ಕಿ, ಚಿಕನ್, ಸ್ವಲ್ಪ ನೀರು ಹಾಕಿ
ಬೇಯಿಸಿ.
* ಚಿಕನ್, ಕಡ್ಲೆಬೇಳೆ ಬೇಯಿಸಿದಾಗ ಅದರಲ್ಲಿರುವ ನೀರಿನಂಶ ಸಂಪೂರ್ಣ
ತೆಗಿಯುವವರೆಗೆ ಬೇಯಿಸಿ.
* ನಂತರ ಚಿಕನ್, ಕಡ್ಲೆಬೇಳೆ ಬೆಂದ ಮೇಲೆ ಉರಿಯಿಂದ ಇಳಿಸಿ ತಣ್ಣಗಾದ ಮೇಲೆ,
ಮೊಟ್ಟೆ ಹಾಕಿ ತರಿ-ತರಿ ರುಬ್ಬಿ.
* ಮಿಶ್ರಣ ಹುಡಿ-ಹುಡಿಯಾಗಿರಬೇಕು.
* ಹಸಿಮೆಣಸು, ಈರುಳ್ಳಿ, ಪುದೀನಾ, ಕೊತ್ತಂಬರಿ ಸೊಪ್ಪು, ರುಚಿಗೆ ತಕ್ಕ ಉಪ್ಪು
ಹಾಕಿ ಮಿಕ್ಸ್ ಮಾಡಿ.
* ಒಂದು ಬೌಲ್‌ಗೆ ಮೊಟ್ಟೆಯನ್ನು ಒಡೆದು ಹಾಕಿ, ಸ್ವಲ್ಪ ಉಪ್ಪು ಹಾಕಿ ಚೆನ್ನಾಗಿ
ಬೀಟ್ ಮಾಡಿ
* ನಂತರ ಸ್ವಲ್ಪ-ಸ್ವಲ್ಪ ಮಿಶ್ರಣ ತೆಗೆದು ನಾವು ವಡೆಗೆ ತಟ್ಟುತ್ತೇವೆ ಅಲ್ವಾ ಅದೇ
ರೀತಿ ತಟ್ಟಿ ಮೊಟ್ಟೆಯಲ್ಲಿ ಅದ್ದಿ ಎಣ್ಣೆಯಲ್ಲಿ ಹಾಕಿ ಫ್ರೈ ಮಾಡಿ.
* ಇದನ್ನು ಕರಿಯುವಾಗ ಉರಿ ಮೀಡಿಯಂನಲ್ಲಿರಲಿ
* ಎಣ್ಣೆಯನ್ನು ತುಂಬಾ ಕಾಯಿಸಿದರೆ ಹೊರಗಡೆ ಬೆಂದು ಒಳಗಡೆ ಸರಿಯಾಗಿ
ಬೇಯುವುದಿಲ್ಲ, ಆದ್ದರಿಂದ ಮೀಡಿಯಂ ಉರಿಯಲ್ಲಿ ಬೇಯಿಸಿ.
* ರೆಡಿಯಾದ ಶಮಿ ಕಬಾಬ್ ಅನ್ನು ಪುದೀನಾ ಚಟ್ನಿಯೊಂದಿಗೆ ಸರ್ವ್ ಮಾಡಿ.
ಸಲಹೆ:
* ನೀವು ಎಣ್ಣೆ ಶಮಿ ಕಬಾಬ್ ಹಾಕುವಾಗ ಪ್ರತಿ ಬಾರಿ ಒಂದೊಂದೇ ಹಾಕಿ, ಎರಡು-ಮೂರು
ಜೊತೆಯಲ್ಲಿ ಹಾಕಬೇಡಿ. ಮೆಲ್ಲನೆ ಮಗುಚಿ ಹಾಕಿ.
* ಶಮಿಯನ್ನು ಮೊಟ್ಟೆಯಲ್ಲಿ ಅದ್ದಿ ತೆಗೆದಾಗ ಶಮಿಯನ್ನು ಮೆಲ್ಲನೆ ಕೊಡವಿ
ತೆಗೆಯಿರಿ.
* ಕಂದು ಬಣ್ಣಕ್ಕೆ ಬರುವವರೆಗೆ ಫ್ರೈ ಮಾಡಿ.



Click it and Unblock the Notifications