Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಸುಲಭವಾಗಿ ಮಾಡಬಹುದು ಚಿಕನ್ ಸುಕ್ಕಾ: ಮಂಗಳೂರು ವ್ಯಕ್ತಿ ನೀಡಿದ ಸುಲಭ ರೆಸಿಪಿ
ಮಂಗಳೂರು ಕಡೆಯ ರೆಸಿಪಿಗಳಲ್ಲಿ ಕೋರಿ ರೊಟ್ಟಿ ಹಾಗೂ ಸುಕ್ಕಾ ಬಿಟ್ಟರೆ ಆಟವಿಲ್ಲ, ಯಾವುದೇ ಸಮಾರಂಭವಿರಲಿ ಎಷ್ಟೇ ವೆರೈಟಿ ಅಡುಗೆಯಿರಲಿ ನಾನ್‌ವೆಜ್ ಅಡುಗೆ ಇದ್ದರೆ ಅಲ್ಲಿ ಈ ಚಿಕನ್ ಸುಕ್ಕ ಇದ್ದೇ ಇರುತ್ತದೆ. ಇನ್ನು ಮನೆಗೆ ಯಾರಾದರು ಗೆಸ್ಟ್ ಬರಲಿ ಸುಕ್ಕಾ ಮಾಡ್ತಾರೆ, ಸುಕ್ಕಾ ಇಲ್ಲದ ಅಡುಗೆ ಅಲ್ಲಿ ಸ್ಪೆಷಲ್ ಅನಿಸುವುದೇ ಇಲ್ಲ. ಇನ್ನು ಚಿಕನ್ ತಿಂದರೆ ಹೀಟ್ ಎಂದು ಹೇಳುವವರು ಇದನ್ನು ತಿನ್ನಬಹುದು.
ತೆಂಗಿನಕಾಯಿ ಹಾಕಿ ಮಾಡುವುದರಿಂದ ಚಿಕನ್ ತಿಂದರೆ ಹೀಟ್ ಆಗುತ್ತೆ ಎಂಬ ಸಮಸ್ಯೆಯೂ ಇರಲ್ಲ, ಮಂಗಳೂರಿನ ವ್ಯಕ್ತಿಯು ಈ ರೆಸಿಪಿ ನಮಗೆ ನೀಡಿದ್ದು ಈ ಚಿಕನ್ ಸುಕ್ಕಾ ತುಂಬಾ ಸುಲಭವಾಗಿ ಮಾಡಬಹುದು ನೋಡಿ:

ಬೇಕಾಗುವ ಸಾಮಗ್ರಿ
ಚಿಕನ್ 1 ಕೆಜಿ (ವಿಥ್ ಬೋನ್)
ರುಚಿಗೆ ತಕ್ಕ ಉಪ್ಪು
ಅರ್ಧ ಚಮಚ ಅರಿಶಿಣ ಪುಡಿ
ಟೊಮೆಟೊ 2
ಈರುಳ್ಳಿ 2-3
1 ಚಮಚ ಎಣ್ಣೆ
ಸ್ವಲ್ಪ ಕರಿಬೇವು
ಬೇಕಾಗುವ ಸಾಮಗ್ರಿ
ಒಣಮೆಣಸು 5-6
ಬ್ಯಾಡಗಿ ಮೆಣಸು 3-4(ಕೆಂಪು ಬಣ್ಣ ಸಿಗುತ್ತೆ)
5-6 ಎಸಳು ಬೆಳ್ಳುಳ್ಳಿ
ಸ್ವಲ್ಪ ಹುಣಸೆ ಹಣ್ಣು
ಕೊತ್ತಂಬರಿ ಬೀಜ 1 ಚಮಚ
ಸ್ವಲ್ಪ ಜೀರಿಗೆ (1/4 ಚಮಚ)
1 ಚಕ್ಕೆ
2 ಲವಂಗ
ಸ್ವಲ್ಪ ಮೆಂತೆ ಬೀಜ
ತೆಂಗಿನ ತುರಿ 1 ಕಪ್
ಮಾಡುವ ವಿಧಾನ
- ನೀವು ಸಾರಿನ ಪಾತ್ರೆಯನ್ನು ಒಲೆ ಅಥವಾ ಸ್ಟೌವ್ ಮೇಲಿಡಿ, ನಂತರ ಒಂದು ಚಮಚ ಎಣ್ಣೆ ಹಾಕಿ ಸ್ವಲ್ಪ ಕರಿಬೇವು ಸೇರಿಸಿ
- ಬಳಿಕ ಈರುಳ್ಲಿ ಹಾಕಿ, ಈರುಳ್ಳಿ ಮೆತ್ತಗಾಗುವವರೆಗೆ ಫ್ರೈ ಮಾಡಿ, ಬಳಿಕ ಟೊಮೆಟೊ ಹಾಕಿ ಫ್ರೈ ಮಾಡಿ
- ನಂತರ ಚಿಕನ್ ಹಾಕಿ, ಸ್ವಲ್ಪ ಉಪ್ಪು, ಅರಿಶಿಣ ಹಾಕಿ ಬೇಯಲು ಇಡಿ.
- ಚಿಕನ್ ಬೇಯುತ್ತಿರುವ ಸಮಯದಲ್ಲಿ ಮಸಾಲೆ ರೆಡಿ ಮಾಡಿ
- ಒಣ ಮೆಣಸು ರೋಸ್ಟ್ ಮಾಡಿ
- ಕೊತ್ತಂಬರಿ ಬೀಜ ರೋಸ್ಟ್ ಮಾಡಿ
- ನಂತರ ಕೊತ್ತಂಬರಿ ಬೀಜ ಹಾಗೂ ಜೀರಿಗೆ ಹಾಕಿ ರೋಸ್ಟ್ ಮಾಡಿ
- ಈಗ ಬೆಳ್ಳುಳ್ಳಿ, ರೋಸ್ಟ್ ಮಾಡಿದ ಮಸಾಲೆ, ಸ್ವಲ್ಪ ಹುಣಸೆ ಹಣ್ಣು ಹಾಕಿ ರುಬ್ಬಿ.
- ಮಸಾಲೆಯನ್ನು ನುಣ್ಣನೆ ರುಬ್ಬಬಹುದು, ಬೇಕಿದ್ದರೆ ತರಿತರಿಯಾಗಿ ರುಬ್ಬಬಹುದು(ನಿಮಗೆ ಹೇಗೆ ಬೇಕೋ ಅದೇ ರೀತಿ ರುಬ್ಬಬಹುದು)
- ರುಬ್ಬಿದ ಮಸಾಲೆಯನ್ನು ಚಿಕನ್ ಜೊತೆ ಹಾಕಿ ಮಿಕ್ಸ್ ಮಾಡಿ ಬೇಯಿಸಿ.
ತೆಂಗಿನ ತುರಿಯನ್ನು ಸ್ವಲ್ಪ ಹುರಿಯಿರಿ. ಬಂತರ ತರಿತರಿಯಾಗಿ ರುಬ್ನಿ.
ಚಿಕನ್ ಬೇಯುತ್ತಾ ಬರುವಾಗ ತರಿತರಿಯಾಗಿ ರುಬ್ಬಿದ ತೆಂಗಿನ ತುರಿ ಸೇರಿಸಿ,
ಮಿಕ್ಕ್ ಮಾಡಿ ಮತ್ತೆ 5 ನಿಮಿಷ ಬೇಯಿಸಿದರೆ ಸುಕ್ಕಾ ರೆಡಿ.



Click it and Unblock the Notifications