Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
10 ನಿಮಿಷದಲ್ಲಿ ಆಂಧ್ರ ಶೈಲಿಯ ರವೆ ದೋಸೆ ಮಾಡಬಹುದು..! ಹೇಗೆ ನೋಡಿ.!
ಬೆಳಗ್ಗೆ ತಿಂಡಿಗೆ ಯಾವ ಖಾದ್ಯ ಸವಿಯಲು ಇದ್ದರೆ ನೀವು ಬಾಯಿ ಚಪ್ಪರಿಸಿ ಸವಿಯುತ್ತೀರಿ. ನಿಮ್ಮ ಬಳಿ ಒಂದಿಷ್ಟು ಉತ್ತರ ಇರಬಹುದು. ಆದ್ರೆ ಈ ದೋಸೆ ಇದ್ದರಂತು ಖಂಡಿತ ನೀವು ಎರಡು ದೋಸೆ ಹೆಚ್ಚಿಗೆ ತಿನ್ನುತ್ತೀರಿ. ದೋಸೆ ಪ್ರತಿಯೊಬ್ಬರ ಮನೆಯಲ್ಲೂ ಮಾಡಿಯೇ ಮಾಡುತ್ತಾರೆ. ಆದ್ರೆ ದೋಸೆಯಲ್ಲಿ ಎಷ್ಟೊಂದು ವಿಧಗಳಿವೆ ಎಂಬುದನ್ನು ನಾವು ಲೆಕ್ಕ ಹಾಕೋಕೆ ಸಮಯವೇ ಹಿಡಿಯುತ್ತೆ.
ಅದರಲ್ಲೂ ಜಿಲ್ಲೆಗೊಂದರಂತೆ ವಿವಿಧ ಶೈಲಿಯ ದೋಸೆ ನಾವು ನೋಡಬಹುದು. ಮೈಸೂರಿನಲ್ಲಿ ಮಸಾಲೆ ದೋಸೆ ಫೇಮಸ್ ಆಗಿರುವಂತೆ ದಾವಣಗೆರೆಯಲ್ಲಿ ಬೆಣ್ಣೆ ದೋಸೆ ಸಿಕ್ಕಾಪಟ್ಟೆ ಫೇಮಸ್ ಹಾಗೆ ಒಂದೊಂದು ಕಡೆಗಳಲ್ಲಿ ಒಂದೊಂದು ರೀತಿಯ ದೋಸೆಯಂತು ಫೇಮಸ್ ಆಗಿರುತ್ತೆ. ಹಾಗೆ ನೀವು ಆಂಧ್ರ ಶೈಲಿಯ ಖಾದ್ಯಕ್ಕೆ ಬಂದರೆ ಅಲ್ಲಿ ರವೆ ದೋಸೆ ಎಂಬುದು ಸಿಕ್ಕಾಪಟ್ಟೆ ಫೇಮಸ್.

ಆಂಧ್ರ ಶೈಲಿಯಲ್ಲಿ ಬಗೆ ಬಗೆಯ ಖಾದ್ಯವನ್ನ ನಾವು ಸವಿಯಬಹುದು. ಅದರಲ್ಲೂ ಈ ರವೆ ದೋಸೆ ಆಂಧ್ರ, ತೆಲಂಗಾಣದಲ್ಲಿ ಬಹಳ ಫೇಮಸ್. ನಾವು ಸಹ ಇಂದು ಈ ಆಂಧ್ರ ಶೈಲಿಯ ರವೆ ದೋಸೆ ಮಾಡುವ ಕುರಿತು ತಿಳಿದುಕೊಳ್ಳೋಣ. ಈ ದೋಸೆ ಎಷ್ಟು ರುಚಿಕರ ಹಾಗೂ ಕ್ರಿಸ್ಪಿಯಾಗಿರುತ್ತೆ ಅಂದ್ರೆ ನೀವು ಈ ದೋಸೆಗೆ ಫಿದಾ ಆಗೋದು ಗ್ಯಾರಂಟಿ.
ಹಾಗಾದ್ರೆ ಈ ಆಂಧ್ರ ಶೈಲಿಯ ರವೆ ದೋಸೆ ಮಾಡಲು ಬೇಕಾಗುವ ವಸ್ತುಗಳೇನು? ಮಾಡುವ ವಿಧಾನವೇನು? ಮಾಡಲು ಯಾವ ಕ್ರಮ ಅನುಸರಿಸಬೇಕು? ಮಾಡುವುದು ಹೇಗೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಆಂಧ್ರ ಶೈಲಿಯ ರವೆ ದೋಸೆ ಮಾಡಲು ಬೇಕಾಗುವ ಪದಾರ್ಥಗಳು
- ಅಕ್ಕಿ ಹಿಟ್ಟು - 1 ಕಪ್
- ರವೆ- ಅರ್ಧ ಕಪ್
- ಮೈದಾ ಹಿಟ್ಟು- 2 ದೊಡ್ಡ ಸ್ಪೂನ್
- ಕಡಲೆ ಹಿಟ್ಟು - 1 ಸ್ಪೂನ್
- ಶುಂಠಿ
- ಕಾಳು ಮೆಣಸು- ಜಜ್ಜಿಕೊಳ್ಳುವುದು
- ಹಸಿ ಮೆಣಸು
- ಕರಿಬೇವು
- ಜೀರಿಗೆ
- ಕೊತ್ತಂಬರಿ ಸೊಪ್ಪು
- ಉಪ್ಪು
- ಎಣ್ಣೆ
ಆಂಧ್ರ ಶೈಲಿಯ ರವೆ ಮಾಡುವುದು ಹೇಗೆ?
ಮೊದಲು ಒಂದು ಬೌಲ್ ತೆಗೆದುಕೊಂಡು ಅದಕ್ಕೆ ಒಂದು ಕಪ್ ಅಕ್ಕಿ ಹಿಟ್ಟು ಹಾಕಿ. ಹಾಗೆ ಅದೇ ಕಪ್‌ನಲ್ಲಿ ಅರ್ಧ ಕಪ್‌ನಷ್ಟು ರವೆಯನ್ನು ಹಾಕಿ. 2 ಚಮಚ ಮೈದಾ ಹಿಟ್ಟು, 1 ಚಮಚ ಕಡಲೆ ಹಿಟ್ಟು ಸಹ ಹಾಕಿಕೊಂಡು ಕಲಸಿಕೊಳ್ಳಿ. ಇದಕ್ಕೆ ಎರಡೂವರೆ ಕಪ್ ನೀಡು ಹಾಕಿ ಗಂಟು ಆಗದಂತೆ ಕಲಸಿಕೊಳ್ಳಬೇಕು.
ಹಿಟ್ಟು ಕಲಸಿಕೊಂಡ ಬಳಿಕ 15 ನಿಮಿಷಗಳ ಕಾಲ ನೆನೆಯಲು ಬಿಡಬೇಕು. ಹಿಟ್ಟು ತೆಳುವಾಗಿದ್ದರೆ ಉತ್ತಮ. ಈಗ ಕತ್ತಿರಿಸಿಕೊಂಡಿರುವ ಕೊತ್ತಂಬರಿ ಸೊಪ್ಪು, ಶುಂಠಿ, ಜೀರಿಗೆ, ಕಾಳು ಮೆಣಸು, ಹಸಿ ಮೆಣಸು, ಕರಿಬೇವು ತೆಗೆದುಕೊಂಡು ಅದನ್ನು ಹಿಟ್ಟಿಗೆ ಹಾಕಿ ಕಲಸಿಕೊಳ್ಳಿ. ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕಲಸಿಕೊಳ್ಳಿ.
ಈ ಹಿಟ್ಟು ಹೆಚ್ಚು ದಪ್ಪ ಇರುವಂತೆ ಮಾಡಿಕೊಳ್ಳುವುದು ಬೇಡ. ತೆಳುವಾಗಿದ್ದರೆ ಚೆನ್ನಾಗಿ ದೋಸೆ ಬರುತ್ತದೆ. ಈಗ ಕಾವಲಿಯನ್ನು ಒಲೆ ಮೇಲೆ ಇಟ್ಟು ಎಣ್ಣೆಯನ್ನು ಈರುಳ್ಳಿ ಸಹಾಯದಿಂದ ಹಚ್ಚಿಕೊಂಡು ಅದಕ್ಕೆ ಹಿಟ್ಟನ್ನು ಹಾಕಿಕೊಳ್ಳಿ. ನೀವು ಬೇಕಿದ್ದರೆ ಎರಡೂ ಕಡೆಗಳಲ್ಲೂ ದೋಸೆಯನ್ನು ಕರಿಯಬಹುದು. ಇಲ್ಲವೇ ಒಂದೇ ಕಡೆ ರೋಸ್ಟ್ ಸಹ ಮಾಡಬಹುದು.
ಇಷ್ಟಾದರೆ ನಿಮ್ಮ ಮುಂದೆ ಆಂಧ್ರ ಶೈಲಿಯ ರವೆ ದೋಸೆ ರೆಡಿಯಾಗುತ್ತದೆ. ಇದರ ಜೊತೆ ತೆಂಗಿನಕಾಯಿ ಅಥವಾ ಹುಡಿಗಡಲೆಯ ಚಟ್ನಿ ಇಲ್ಲವೆ ಮೆಣಸಿನಕಾಯಿ ಚಟ್ನಿ ಇದ್ದರೆ ಅದರ ರುಚಿ ದುಪ್ಪಟ್ಟಾಗುತ್ತದೆ.



Click it and Unblock the Notifications