Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ತುಂಬಾ ರುಚಿಯಾಗಿರುತ್ತೆ ಈ ಅಕ್ಕಿ ಪೂರಿ, ಅದರಲ್ಲಿಯೂ ಮೊಟ್ಟೆ ಸಾರಿಗಂತೂ ಇನ್ನೂ ಸೂಪರ್
ನೀವು ಪೂರಿ ಸವಿದಿರಬಹುದು, ಆದರೆ ಅಕ್ಕಿ ಪೂರಿ ಟೇಸ್ಟ್ ಮಾಡಿದ್ದೀರಾ? ಇದನ್ನು ಪತ್ತಲ್ ಎಂದು ಕೂಡ ಕರೆಯುತ್ತಾರೆ, ಸಾಮಾನ್ಯವಾಗಿ ಕೇರಳ ಹೋಟೆಲ್‌ಗಳ್ಲಿ ಸಿಗುತ್ತೆ. ಈ ಪೂರಿ ಬ್ರೇಕ್‌ಫಾಸ್ಟ್‌ಗೂ ಸೈ, ಡಿನ್ನರ್‌ಗೂ ಸೈ. ಇದನ್ನು ರೆಡಿ ಮಾಡಿದ ಮೇಲೆ ಒಂದು ಗಂಟೆಯೊಳಗೆ ತಿಂದು ಬಿಡಬೇಕು, ತಣ್ಣಗಾದರೆ ಅಷ್ಟು ಪೂರಿ ಗಟ್ಟಿ ಅನಿಸುವುದು. ಈ ಅಕ್ಕಿ ಪೂರಿ ಮಾಡುವುದು ಹೇಗೆ ಎಂದು ನೋಡೋಣ:

ಬೇಕಾಗುವ ಸಾಮಗ್ರಿ
1 ಕಪ್ ಕುಚಲಕ್ಕಿ
1 ಕಪ್ ಬೆಳ್ತಕ್ಕಿ
ಈರುಳ್ಳಿ ಸಾಧಾರಣ ಗಾತ್ರದ್ದು 3
ಅನ್ನ 1/2 ಕಪ್
1 ಚಮಚ ಸೋಂಪು
ತೆಂಗಿನ ತುರಿ 1/4 ಕಪ್
1/ 2 ಚಮಚ ಉಪ್ಪು
1 ಕಪ್ ಎಣ್ಣೆ
ಮಾಡುವ ವಿಧಾನ
- ಇದನ್ನು ಮಾಡುವಾಗ ಕುಚಲಕ್ಕಿ ಮತ್ತು ಬೆಳ್ತಕ್ಕಿಯನ್ನು 8 ಗಂಟೆಗಳ ಸಮ ಪ್ರಮಾಣದಲ್ಲಿ ನೆನೆ ಹಾಕಿ, 8-10 ಗಂಟೆ ಕಾಲ ನೆನೆ ಹಾಕಿದರೆ ಒಳ್ಳೆಯದು.
- ನಂತರ ಅಕ್ಕಿಯನ್ನು ತೊಳೆದು ಅದರ ನೀರು ಸೋಸಿ ಹೋಗಲು ಇಡಬೇಕು, ನೀರು ಸಂಪೂರ್ಣ ಸೋಸಿ ಹೋಗಲಿ
- ಬಳಿಕ ಗ್ರೈಂಡರ್‌ಗೆ ಹಾಕಿ,ತುಂಬಾ ತರಿತರಿ ಇರಬಾರದು, ರೊಟ್ಟಿ ಹಿಟ್ಟಿನಷ್ಟು ನುಣ್ಣನೆ ಕೂಡ ಇಡಬಾರದು
- ನಂತರ ಇದನ್ನು ಒಂದು ದೊಡ್ಡ ಬೌಲ್‌ಗೆ ಹಾಕಿ
- ಈಗ ಈರುಳ್ಳಿ ಮತ್ತು ಅನ್ನ ಸೇರಿಸಿ ರುಬ್ಬಿ ಅದನ್ನು ರುಬ್ಬಿದ ಅಕ್ಕಿ ಹಿಟ್ಟಿಗೆ ಹಾಕಿ, ಉಪ್ಪು, ಸೋಪು, ತೆಂಗಿನ ತುರಿ ಸೇರಿಸಿ ಮಿಕ್ಸ್ ಮಾಡಿ.
ಸೂಚನೆ: ಮಿಕ್ಸ್ ಮಾಡಲು ನೀರು ಸೇರಿಸಬೇಡಿ
ನೀವು ಈರುಳ್ಳಿ ಅನ್ನ ರುಬ್ಬಿದ ಮಿಶ್ರಣ ಎಲ್ಲಾ ಜೊತೆಗೆ ಹಾಕಬೇಡಿ, ಅರ್ಧ ಹಾಕಿ
ಕಲೆಸಿ ನೋಡಿ, ಮಿಕ್ಸ್ ಮಾಡಿದಾಗ ಹಿಟ್ಟಿನ ಉಂಡೆ ಸರಿಯಾಗಿ ಬಂದರೆ ಹಾಕಬೇಡಿ,
ಇಲ್ಲದಿದ್ದರೆ ಇನ್ನೂ ಸ್ವಲ್ಪ ಸೇರಿಸಿ
ಹಿಟ್ಟು ನೀರು ನೀರಾದರೆ ಅದನ್ನು ತಟ್ಟಿ ಎಣ್ಣೆಯಲ್ಲಿ ಹಾಕುವುದು
ಕಷ್ಟವಾಗುವುದು.
ಈಗ ಬಾಣಲೆಗೆ ಎಣ್ಣೆ ಹಾಕಿ ಕುದಿಸಿ
- ಎಣ್ಣೆ ಕುದಿ ಬರುವಾಗ ಸ್ವಲ್ಪ ಹಿಟ್ಟನ್ನು ಉಂಡೆ ಮಾಡಿ
- ಒಂದು ಗಟ್ಟಿ ಬಟ್ಟೆಯನ್ನು ಚಪಾತಿ ಮಣೆ ಮೇಲೆ ಹರಡಿ(ಟರ್ಕಿ ರೀತಿ ಚಿಕ್ಕ ಟವಲ್)
- ಈಗ ಉಂಡೆಯನ್ನು ತೆಗೆದು ಕೈಯಿಂದಲೇ ತಟ್ಟಿ, ಪೂರಿ ಆಕಾರದಲ್ಲಿ ತಟ್ಟಿ ಎಣ್ಣೆ ಬಿಡಿ
- ಎಣ್ಣೆಗೆ ಹಾಕಿದಾಗ ಮಿಶ್ರಣ ಪೂರಿಯಂತೆ ಉಬ್ಬಿ ಬರುತ್ತದೆ
- ಎರಡೂ ಬದಿ ಸ್ವಲ್ಪ ಕಂದು ಬಣ್ಣಕ್ಕೆ ಬರುವಾಗ ತೆಗೆಯಿರಿ
ರೆಡಿಯಾದ ಅಕ್ಕಿ ಪೂರಿಗೆ ಯಾವ ಸಾರು ಒಳ್ಳೆಯ
ಕಾಂಬಿನೇಷನ್?
ನೀವು ವೆಜ್ ಮಾತ್ರ ಸೇವಿಸುವವರಾದರೆ ವೆಜ್ ಕುರ್ಮಾ ತುಂಬಾ
ಚೆನ್ನಾಗಿರುತ್ತದೆ.
ನಾನ್‌ವೆಜ್ ಸೇವಿಸುವವರಾದರೆ...
ಮೊಟ್ಟೆ ಮಸಾಲೆ ಇದಕ್ಕೆ ತುಂಬಾನೇ ಚೆನ್ನಾಗಿರುತ್ತದೆ
ಚಿಕನ್ ಅಥವಾ ಮೀನು ಸಾರು ಕೂಡ ತುಂಬಾನೇ ಚೆನ್ನಾಗಿರುತ್ತದೆ.
ಪತ್ತಲ್ ಹಿಟ್ಟು ಅಂತ ರೆಡಿಮೇಡ್ ಹಿಟ್ಟು ಕೂಡ ಮಾರ್ಕೆಟ್‌ನಲ್ಲಿ ಸಿಗುತ್ತೆ, ಅದನ್ನು ತಂದು ಸ್ವಲ್ಪ ನೀರು, ಉಪ್ಪು ಸೇರಿಸಿ ಮಿಕ್ಸ್ ಮಾಡಿ ಅರ್ರಧ ಗಂಟೆ ಇಟ್ಟು ನಂತರ ಅಕ್ಕಿ ಪೂರಿ ರೀತಿ ಮಾಡಿ ಸವಿಯಬಹುದು.
ಆದರೆ ಮನೆಯಲ್ಲಿಯೇ ರೆಡಿ ಮಾಡಿದ ಅಕ್ಕಿ ಪೂರಿಯ ರುಚಿ ಸೂಪರ್.
ಕುಚಲಕ್ಕಿಯಲ್ಲಿ ಯಾವುದೇ ಬಗೆಯ ಕುಚಲಕ್ಕಿ ಬಳಸಬಹುದು, ಬೆಳ್ತಕ್ಕಿ ರೇಷನ್ ಅಕ್ಕಿ ಅಥವಾ ಅನ್ನಕ್ಕೆ ಬಳಸುವ ಅಕ್ಕಿ ಬಳಸಿ, ಬಿಟಿ ರೈಸ್, ತುಪ್ಪದನ್ನ ಮಾಡುವಾಗ ಬಳಸುವ ಅಕ್ಕಿ ಇಂಥದ್ದಲ್ಲಾ ಬಳಸಬೇಡಿ. ರೇಷನ್ ಅಕ್ಕಿಯಾದರೆ ಪೂರಿ ಮೃದುವಾಗಿ ಬರುತ್ತದೆ.
ಎಣ್ಣೆ ಕಾಯಬೇಕು, ನಂತರ ಮೀಡಿಯಂ ಉರಿಯಲ್ಲಿ ಫ್ರೈ ಮಾಡಿ ಆವಾಗ ಒಳಗಡೆ ಕೂಡ ಚೆನ್ನಾಗಿ ಬೆಂದಿರುತ್ತದೆ.



Click it and Unblock the Notifications