Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಕೇರಳದ ಪ್ರಸಿದ್ಧ ಕಿಣ್ಣತ್ತಪ್ಪ ಅಲಿಯಾಸ್ ತಟ್ಟೆಯಪ್ಪ ಮಾಡುವುದು ಬಲು ಸುಲಭ ನೋಡಿ
ನೀವು ಕೇರಳ ಕಡೆ ಟ್ರಿಪ್ ಹೋದರೆ ಅಲ್ಲಿಯ ಬಹುತೇಕ ಬೇಕರಿಗಳಲ್ಲಿ ಹಲ್ವಾ ಜೊತೆಗೆ ಅದೇ ರೀತಿಯ ಮತ್ತೊಂದು ತಿನಿಸು ಕಾಣುತ್ತದೆ, ನೀವು ಅದೇನು ಎಂದು ಕೇಳಿದರೆ ಕಿಣ್ಣತ್ತಪ್ಪ ಅಂತಾರೆ, ಈ ಕಿಣ್ಣತ್ತಪ್ಪ ತಿನ್ನಲು ತುಂಬಾನೇ ರುಚಿಯಾಗಿರುತ್ತದೆ. ಇದನ್ನು ನೀವು ಬೇಕಿದ್ದರೆ ಮನೆಯಲ್ಲಿಯೇ ಟ್ರೈ ಮಾಡಬಹುದು,
ಇದನ್ನು ಮಾಡಿಟ್ಟು ಮಕ್ಕಳ ಸ್ನ್ಯಾಕ್ಸ್ ಡಬ್ಬಕ್ಕೆ ಹಾಕಿ ಕಳುಹಿಸಬಹುದು, ಅಲ್ಲದೆ ಹೊರಗಡೆ ಆದರೆ ಸಕ್ಕೆ ಹಾಕಿ ಮಾಡುತ್ತಾರೆ, ನೀವು ಮಾಡುವಾಗ ಬೆಲ್ಲ ಹಾಕಿ ಮಾಡಿದರೆ ಇನ್ನೂ ರುಚಿ. ಕಪ್ಪು ಬೆಲ್ಲ ಸೇರಿಸಿದರೆ ಇದು ಕಪ್ಪು ಬಣ್ಣದಲ್ಲಿರುತ್ತದೆ, ಬಿಳಿ ಬೆಲ್ಲ ಸೇರಿಸಿದರೆ ಸ್ವಲ್ಪ ಕಂದು ಬಣ್ಣದಲ್ಲಿ ಇರುತ್ತದೆ.

ಇದರ ಹೆಸರು ತಟ್ಟೆಪ್ಪ ಅಥವಾ ತಟ್ಟೆಹಿಟ್ಟು ಅಂತಲೂ ನಾವು ಹೇಳಬಹುದು, ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ:
ಬೇಕಾಗುವ ಸಾಮಗ್ರಿ
ಅಕ್ಕಿಹಿಟ್ಟು (ಕುಚಲಕ್ಕಿಯಿಂದ ಪುಡಿ ಮಾಡಿದ್ದು) 2 ಕಪ್, ನಂತರ ಇದನ್ನು
ರೋಸ್ಟ್ ಮಾಡಬೇಕು, ಸ್ವಲ್ಪ ಕಂದು ಬಣ್ಣಕ್ಕೆ ಬರುವಷ್ಟು ಹೊತ್ತು ರೋಸ್ಟ್
ಮಾಡಿ)
ತೆಂಗಿನ ಹಾಲು ಒಂದೂವರೆ ಕಪ್
ಏಲಕ್ಕಿ 3
ಜೀರಿಗೆ ಪುಡಿ 1/ 2 ಚಮಚ
ಗೋಡಂಬಿ ನಿಮಗೆ ಎಷ್ಟು ಬೇಕೋ ಅಷ್ಟು
ರೋಸ್ಟ್ ಮಾಡಿದ ನೆಲಗಡಲೆ
ಬೆಲ್ಲ 1/4 ಕೆಜಿ (ಕಪ್ಪು ಬೆಲ್ಲ ಅಥವಾ ಬಿಳಿ ಬೆಲ್ಲ ಬಳಸಬಹುದು)
ಚಿಟಿಕೆಯಷ್ಟು ಅಡುಗೆ ಸೋಡಾ
ಮಾಡುವುದು ಹೇಗೆ?
- ನೀವು ರೋಸ್ಟ್ ಮಾಡಿದ ಅಕ್ಕಿ ಪುಡಿಯನ್ನು ತೆಂಗಿನ ಹಾಲು ಜೊತೆಗೆ ಮಿಕ್ಸ್ ಮಾಡಿ, ಯಾವುದೇ ಗಂಟು ಕಟ್ಟಬಾರದು
- ನಂತರ ಏಲಕ್ಕಿ, ಜೀರಿಗೆ ಪುಡಿ, ಗೋಡಂಬಿ, ನೆಲಗಡಲೆ
- ಬೆಲ್ಲವನ್ನು ಪುಡಿ ಮಾಡಿ, ಚಿಟಿಕೆಯಷ್ಟು ಅಡುಗೆ ಸೋಡಾ ಹಾಕಿ ಮಿಕ್ಸ್ ಮಾಡಿ
- ಈಗ ಒಂದು ಪ್ಲೇಟ್‌ಗೆ ತುಪ್ಪ ಸವಿರಿ, ಆ ಪ್ಲೇಟ್ ನಿಮ್ಮ ಇಡ್ಲಿ ಪಾತ್ರೆಯಲ್ಲಿ ಹಿಡಿಸುವಂತಿರಬೇಕು, ನಾವು ತಟ್ಟೆ ಇಡ್ಲಿ ಮಾಡುತ್ತೇವೆ ಅಲ್ಲಾ ಹಾಗೆಯೇ ಇದನ್ನು ಹಬೆಯಲ್ಲಿ ಬೇಯಿಸಿ, ಒಂದು 20-25 ನಿಮಿಷ ಬೇಯಿಸ
- ನಂತರ ಹಬೆಯಿಂದ ಹೊರ ತೆಗೆದು ತಣ್ಣಗಾಗಲು ಇಡಿ ಬಳಿಕ ಅದನ್ನು ಕತ್ತರಿಸಿ ಸರ್ವ್ ಮಾಡಿ.
- ಇದನ್ನು ಹೊರಗಡೆ ಹಾಗೇ ಇಟ್ಟರೂ ಒಂದು ವಾರದವರೆಗೆ ಕೆಡುವುದಿಲ್ಲ, ಫ್ರಿಡ್ಜ್‌ನಲ್ಲಿ ಆದರೆ ಎರಡರಿಂದ-3 ವಾರ ಇಟ್ಟು ಸವಿಯಬಹುದು.
ಇದನ್ನು ಕೇರಳದಲ್ಲಿ ಕಿಣ್ಣತ್ತಪ್ಪ ಎಂದು ಕರೆಯುತ್ತಾರೆ, ಕಿಣ್ಣ ಎಂದರೆ ತಟ್ಟೆ, ತಟ್ಟೆಯಲ್ಲಿ ಹಾಕಿ ಇದನ್ನು ಬೇಯಿಸುವುದು, ಇದನ್ನು ಕನ್ನಡದಲ್ಲಿ ನಾವು ಕಿಣ್ಣತ್ತಪ್ಪ ಎಂದು ಕರೆಯಬಹುದು.
ಬೆಳ್ತಕ್ಕಿಯಿಂದ ಮಾಡಬಹುದೇ?
ನೀವು ಈ ತಟ್ಟೆಪ್ಪವನ್ನು ಬೆಳ್ತಕ್ಕಿಯಿಂದಲೂ ಮಾಡಬಹುದು, ಕೆಂಪಕ್ಕಿ ಬಳಸಿದರೆ
ಇನ್ನೂ ಒಳ್ಳೆಯದು, ಇದನ್ನು ಕೂಡ ರೋಸ್ಟ್ ಮಾಡಿ ಬಳಸಿ. ತೆಂಗಿನ ಹಾಲು
ಬಳಸಿರುವುದರಿಂದ ಹೆಚ್ಚು ಸಮಯ ಬಾಳಿಕೆ ಬರುತ್ತದೆ, ಬೇಗನೆ ಹಾಳಾಗುವುದಿಲ್ಲ.



Click it and Unblock the Notifications