Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಪಾಕಶಾಲೆ: ಮಾವಿನಹಣ್ಣಿನ ಸಾರಿನ ಸವಿ
ಈಗ ಹಣ್ಣುಗಳ ರಾಜ ಮಾವು ಸಮೃದ್ಧವಾಗಿ ದೊರೆಯುವ ಕಾಲ. ಮಾವಿನಹಣ್ಣನ್ನು ಉಪಯೋಗಿಸಿ ಹಲವಾರು ತಿಂಡಿ-ತಿನಿಸು, ಪಾನೀಯಗಳನ್ನು ಮಾಡಿ ಸವಿಯಬಹುದು. ಹಾಗೆಯೇ ರುಚಿಯಾದ ಮಾವಿನ ಸಾರು ಮಾಡುವುದು ಸಹ ತುಂಬ ಸುಲಭ.
ಇವಿಷ್ಟನ್ನು ಹೊಂದಿಸಿಕೊಳ್ಳಿ:
ತೊಗರಿ ಬೇಳೆ : 1 ಕಪ್ (ನೀರಿನಲ್ಲಿ ತೊಳೆದು 30 ನಿಮಿಷಗಳ ಕಾಲ ನೆನಸಿ)
ಹುಣಸೆ ಹಣ್ಣು : ನಿಂಬೆ ಹಣ್ಣು ಗಾತ್ರದ್ದು (5ನಿಮಿಷಗಳ ಕಾಲ ನೀರಿನಲ್ಲಿ ನೆನಸಿ)
ಸಿಪ್ಪೆ ತೆಗೆದ ಮಾವಿನಹಣ್ಣು : ಒಂದೂವರೆ ಹಣ್ಣು (ಸಣ್ಣ ಹೋಳುಗಳಾಗಿ ಹೆಚ್ಚಿಕೊಳ್ಳಬೇಕು)
ಸಾಂಬಾರ್ ಮಸಾಲ: 2 ಟೇಬಲ್ ಚಮಚ
ಹರಿಶಿಣ ಪುಡಿ: ಕಾಲು ಟೇಬಲ್ ಚಮಚ
ಧನಿಯ ಪುಡಿ: 1 ಟೇಬಲ್ ಚಮಚ
ಕೆಂಪು ಮೆಣಸಿನಕಾಯಿ ಪುಡಿ: 1 ಟೇಬಲ್ ಚಮಚ
ಜೀರಿಗೆ ಮತ್ತು ಸಾಸಿವೆ: ಅರ್ಧ ಟೇಬಲ್ ಚಮಚ
ಕೆಂಪು ಮೆಣಸಿನ ಕಾಯಿ: 3
ಕರಿಬೇವು: ಒಗ್ಗರಣೆಗೆ
ಈರುಳ್ಳಿ: 4
ಕುಂಬಳಕಾಯಿ: ಅರ್ಧ ಕಪ್ಪು (ಸಣ್ಣಗೆ ಹೆಚ್ಚಿಕೊಳ್ಳ ಬೇಕು)
ಟಮಾಟೋ: 1
ಸಣ್ಣಗೆ ಹೆಚ್ಚಿಕೊಂಡ ಕೊತ್ತಂಬರಿ ಸೊಪ್ಪು: 1 ಟೇಬಲ್ ಚಮಚ
ಬೆಳ್ಳುಳ್ಳಿ: 2-3 ಎಸಳು
ಉಪ್ಪು: ರುಚಿಗೆ ತಕ್ಕಷ್ಟು
ಎಣ್ಣೆ: 2 ಟೇಬಲ್ ಚಮಚ
ಸಾರು ಮಾಡುವ ವಿಧಾನ:
ತೊಗರಿ ಬೇಳೆಗೆ ಹುಣಸೆ ಹಣ್ಣು, ಸಣ್ಣಗೆ ಹೆಚ್ಚಿಕೊಂಡ ಅರ್ಧ ಟಮಾಟೋ ಹಾಗೂ ಒಂದು ಈರುಳ್ಳಿಯನ್ನು ಹಾಕಿ. ಇದಿಷ್ಟನ್ನು ಕುಕ್ಕರ್‌ನಲ್ಲಿ ಹಾಕಿ ನಾಲ್ಕು ಸಲ ಕೂಗಿದ ಮೇಲೆ ಕೆಳಗಿಳಿಸಿ. ಸ್ವಲ್ಪ ಸಮಯದ ನಂತರ ಕುಕ್ಕರನ್ನು ತೆರೆದು ಬೆಂದ ತೊಗರಿ ಬೇಳೆಯನ್ನು ನುಣ್ಣಗೆ ಮಾಡಿಕೊಳ್ಳಿ. ನಂತರ ಎಲ್ಲ ಮಸಾಲೆ ಹಾಗೂ ಒಂದು ಈರುಳ್ಳಿ,ಕಾಲು ಟಮಾಟೋ, ಬೆಳ್ಳುಳ್ಳಿಯನ್ನು ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಉಳಿದ ಈರುಳ್ಳಿ ಮತ್ತು ಟಮಾಟೋಗಳನ್ನು ಸಣ್ಣಗೆ ಹೆಚ್ಚಿಕೊಳ್ಳಿ.
ಈಗ ಕಾದ ಎಣ್ಣೆಗೆ ಸಾಸಿವೆ, ಕರಿಬೇವು ಹಾಕಿ ಒಗ್ಗರಣೆ ಕೊಡಿ. ಸಣ್ಣಗೆ ಹೆಚ್ಚಿಕೊಂಡ ಕುಂಬಳಕಾಯಿ , ಈರುಳ್ಳಿ, ಟಮಾಟೋ ಹಾಗೂ ಮಾವಿನಕಾಯಿಯನ್ನು ಹಾಕಿ 2 ನಿಮಿಷಗಳ ಕಾಲ ಬೇಯಿಸಬೇಕು. ಈ ಮಿಶ್ರಣಕ್ಕೆ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಂಡ ಮಸಾಲೆಗಳನ್ನು ಹಾಕಿ ಮತ್ತೆರಡು ನಿಮಿಷಗಳ ಕಾಲ ಬೇಯಿಸಿ. ನಂತರ ತೊಗರಿ ಬೇಳೆಯನ್ನು ಹಾಕಿ ದೊಡ್ಡ ಹುರಿಯಲ್ಲಿ ಕುದಿಸಬೇಕು. ಸಾರಿಗೆ ಬೇಕಾದಷ್ಟು ನೀರನ್ನು ಸೇರಿಸಿ. ಎಲ್ಲ ಮಸಾಲೆಗಳು ಸರಿಯಾಗಿವೆ ಎಂದು ಬಾಯಿಗೆ ಹಾಕಿಕೊಂಡು ನೋಡಿ.
ನಂತರ ಸಣ್ಣ ಉರಿಯಲ್ಲಿ 15 ನಿಮಿಷಗಳ ಕಾಲ ಕುದಿಸಿ. ಸಾಂಬಾರಿನ ಘಮಘಮ ಮೂಗಿಗೆ ಬಡಿಯುತ್ತಿದ್ದಂತೆ ಸಣ್ಣಗೆ ಹೆಚ್ಚಿಕೊಂಡ ಕೊತ್ತಂಬರಿ ಸೊಪ್ಪನ್ನು ಹಾಕಿದರೆ ಮಾವಿನಕಾಯಿ ಸಾರು ಸಿದ್ಧವಾದಂತೆ. ಬಿಸಿಬಿಸಿ ಇಡ್ಲಿ, ಅನ್ನದೊಂದಿಗೆ ಮಾವಿನಕಾಯಿಯ ಸಾರನ್ನು ಸವಿಯಬಹುದು.
(ದಟ್ಸ್‌ಕನ್ನಡ ಪಾಕಶಾಲೆ)



Click it and Unblock the Notifications
