Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಹುಳಿಮೊಸರಿನ ಹಸಿಮಜ್ಜಿಗೆ ಹುಳಿ
ಅಡುಗೆ ಮಾಡಿ ಯಾರಾದರೂ ತಂದು ಮುಂದಿಟ್ಟರೆ ತಿನ್ನುವುದಕ್ಕೆ ಅಷ್ಟೇನು ಕಷ್ಟವಾಗದು. ಆದರೆ, ನಾವೇ ಅಡುಗೆ ಮಾಡಿಕೊಳ್ಳಬೇಕಾದ ಸಂದರ್ಭ ಬಂದಾಗ ತೊಂದರೆ ಎನ್ನುವುದಕ್ಕಿಂತ, ಒಪ್ಪತ್ತಿನ ಊಟದ ಸವಾಲಾಗಿ ಬೃಹದಾಕಾರ ಸಮಸ್ಯೆಯಾಗಿ ಸ್ಟೌವ್ ಮುಂದೆ ಬಂದು ನಿಲ್ಲುತ್ತದೆ. ಮೊನ್ನೆ ಮತ್ತೆ ಹೀಗಾಯಿತು. ಹೆಪ್ಪು ಹಾಕಿಟ್ಟಿದ್ದ ಮೊಸರು ಎರಡು ದಿನವಾದರೂ ಹಾಗೇ ಇತ್ತು. ಹುಳಿಯಾಗಿದೆ, ಲೊಟಲೊಟ ಅಂತಾಯಿತ್ತು. ಚೆಲ್ಲುವುದಕ್ಕೆ ಮನಸ್ಸಾಗುವುದಿಲ್ಲ, ಉಪಯೋಗಿಸುವಂತಿಲ್ಲ. ಕೆಟ್ಟಹುಳಿ ಪದಾರ್ಥ ತಿಂದರೆ ಮತ್ತೆ ಗಂಟಲು ಬೇನೆ ಆಗಿ ಮತ್ತೆ ಆಂಟಿ ಬಯೋಟಿಕ್.
ದಟ್ಸ್ ಕನ್ನಡ ಅಡುಗೆ ಶಾಲೆಯಲ್ಲಿ ಏನಾದರೂ ಐಡಿಯಾ ಸಿಗತ್ತಾ ಅಂತ ಹುಡುಕಾಡಿದರೆ ನಿರ್ದಿಷ್ಟವಾದ ಪರಿಹಾರ ಸಿಗುತ್ತಿಲ್ಲ. ಹಾಗಾಗಿ, ನನ್ನ ತಂಗಿಗೆ ಫೋನು ಮಾಡಿದೆ. ಉತ್ತರ ಸಿಕ್ಕಿತು ಆದರೆ ಅದು ಪರಿಹಾರ ಅಲ್ಲ. ಯಾಕೆಂದರೆ, ಮಿಕ್ಸಿ ಇಲ್ಲದೆ ಇದ್ದರೆ ಈಗಿನ ಕಾಲದಲ್ಲಿ ವೆರೈಟಿ ವೆರೈಟಿ ಅಡುಗೆ ಮಾಡುವುದು ಸಾಧ್ಯವಿಲ್ಲ ಎಂಬ ಆದೇಶ ತಂಗಿಕಡೆಯಿಂದ ಬಂತು. ಅಂತೂ ಒಂದು ಚಮಚ ಮೊಸರಿಗೆ ಒಂದು ಬಕೆಟು ನೀರು ಬೆರೆಸಿ ಹುಳಿಯನ್ನು ಒದ್ದೋಡಿಸಿ ಅದಕ್ಕೆ ಹುರಿದ ಒಂದು ಡೊಣ್ಣೆ ಮೆಣಸಿನಕಾಯಿ ಚೂರುಗಳು ಮತ್ತು ಉಪ್ಪು ಬೆರೆಸಿ ಆವತ್ತಿನ ಊಟದ ಕತೆಯನ್ನು ಸಕ್ಸ್ ಫುಲ್ ಆಗಿ ಮುಗಿಸಿದೆ.
ಮಿಕ್ಸಿ ಇದ್ದರೆ ಹಸಿ ಮಜ್ಜಿಗೆ ಹುಳಿ ಮಾಡಿಕೊಳ್ಳಬಹುದು. ಸ್ವಲ್ಪ ಪುಟಾಣಿ, ತೆಂಗಿನಕಾಯಿ ತುರಿ, ನಾಕಾರು ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು ಮತ್ತು ಚಿಟಿಕೆ ಇಂಗು ಹಾಕಿ ಗಡಗಡ ರುಬ್ಬಿಕೊಳ್ಳಬೇಕು. ಮಿಕ್ಸಿ ಓಡುತ್ತಿದ್ದರೆ ಫ್ಲಾಟಿಗೆಲ್ಲ ಕೇಳಿಸುತ್ತದೆ. ಬೆಂಗಳೂರಿನ ಟೂ ಸ್ಟ್ರೋಕ್ ಇಂಜಿನ್ ಆಟೋ ಥರ ಸೌಂಡು ಬರ್ತಾಯಿರತ್ತೆ. ಆದ್ದರಿಂದ 4 stroke Engine ಇರುವ mixi ಕೊಂಡರೆ ಲೇಸು.
ಒಂಟಿ ಬರ್ನರ್ ಗ್ಯಾಸ್ ಸಿಲಿಂಡರಿನ ಮೇಲೆ ತವ ಪ್ರತಿಷ್ಠಾಪನೆ ಮಾಡಿ ಒಂದೇ ಒಂದು ಚಮಚ ಎಣ್ಣೆ ಹಾಕಿ ಬಿಸಿಯಾದ ನಂತರ, ಚಿಟಿಕೆ ಅರಿಶಿನ, ಸಾಸಿವೆ, ಕರಿಬೇವು ಮತ್ತು ಒಣ ಮೆಣಸಿನಕಾಯಿ ಚೂರುಗಳನ್ನು ಬೆರೆಸಿ ಒಗ್ಗರಣೆ ಮಾಡಿಕೊಂಡು ಅದಕ್ಕೆ ರುಬ್ಬಿಕೊಂಡ ಚಟ್ನಿ ಹಾಕಿ ಹದವಾಗುವ ತನಕ ಸ್ವಲ್ಪ ಹೊತ್ತು ಅಲ್ಲೇ ಸುಮ್ಮನೆ ನಿಂತಿರಬೇಕು. ಆಕಸ್ಮಾತ್ ತರಕಾರಿ ರೆಡಿ ಇದ್ದರೆ ಸೌತೆಕಾಯಿ ಅಥವಾ ಸೀಮೆ ಬದನೆಕಾಯಿ ಏನಿಲ್ಲಾ ಅಂದರೆ ಡೊಣ್ಣ ಮೆಣಸಿನಕಾಯಿ ಹೆಚ್ಚಿ ಹಾಕಬಹುದು.
ಆನಂತರ ಅದಕ್ಕೆ ಹುಳಿ ಮೊಸರು ಕಡೆದು ತೆಗೆದ ಗಟ್ಟಿ ಮಜ್ಜಿಗೆ ಒಂದೆರಡು ಲೋಟದಷ್ಟು ಸುರಿದು ಮತ್ತೆ ಕಾಯಬೇಕು. ಒಂದು ಕುದಿ ಬಂದನಂತರ ಉಪ್ಪು ಬೆರೆಸಿ ಕೆಳಗಿಳಿಸಬೇಕು. ಒಲೆ ಮೇಲೆ ಅಡುಗೆ ಯಜ್ಞ ನಡೆಯುತ್ತಿರುವಾಗ ಫೋನು ಬಂದರೆ ರಿಸೀವ್ ಮಾಡಬಾರದು. ಹಸಿ ಮಜ್ಜಿಗೆ ಹುಳಿ ಯಾವತ್ತೂ ಜಾಸ್ತಿ ಕುದಿಯಬಾರದು. ಹೈ ವೋಲ್ಟೇಜ್ ಶಾಖಕ್ಕೆ ಮೊಸರು ಒಡೆದು ಪಕಳೆಗಳು ಹೊರಬರುತ್ತವೆ.



Click it and Unblock the Notifications
