For Quick Alerts
ALLOW NOTIFICATIONS  
For Daily Alerts

ವೆಜ್‌ ರೆಸಿಪಿ: ಸಕತ್‌ ಟೇಸ್ಟಿಯಾಗಿದೆ ಈ ಸೋಯಾ ಹಲೀಮ್‌

Posted By:
|

ರಂಜಾನ್ ತಿಂಗಳಿನಲ್ಲಿ ಉಪವಾಸ ಮುರಿಯುವಾಗ ವಿವಿಧ ರುಚಿಯ, ಪೋಷಕಾಂಶವಿರುವ ಆಹಾರಗಳನ್ನು ಮಾಡಿ ಸವಿಯಲಾಗುವುದು. ಈ ತಿಂಗಳಿನಲ್ಲಿ ಪ್ರತಿದಿನವೂ ವಿಶೇಷ ತಿನಿಸುಗಳನ್ನು ಮಾಡಲಾಗುವುದು, ಇಲ್ಲಿ ನಾವು ರಂಜಾನ್‌ ತಿಂಗಳಿನಲ್ಲಿ ಹೆಚ್ಚಾಗಿ ಮಾಡುವ ಹಲೀಮ್ ರೆಸಿಪಿ ನೀಡಿದ್ದೇವೆ.

ಹಲೀಮ್‌ ಅನ್ನು ವೆಜ್ ಹಾಗೂ ನಾನ್‌ವೆಜ್‌ ಕೂಡ ಮಾಡಬಹುದು. ಇವತ್ತು ನಾವು ಸೋಯಾ ಬಳಸಿ ಮಾಡುವ ಹಲೀಮ್‌ ರೆಸಿಪಿ ನೀಡಿದ್ದೇವೆ. ಇದರ ರುಚಿ ಯಾವ ನಾನ್‌ವೆಜ್‌ ಹಲೀಮ್‌ ರುಚಿಗಿಂತ ಕಡಿಮೆ ಇರಲ್ಲ.

Soya Haleem Recipe

ಹಲೀಮ್‌ ರುಚಿ ಒಮ್ಮೆ ನೋಡಿದರೆ ಆಗಾಗ ಅದರ ರುಚಿ ನೋಡಬಯಸುವುದು ಗ್ಯಾರಂಟಿ, ಅಷ್ಟೊಂದು ರುಚಿಯಾಗಿರುತ್ತದೆ ಹಾಗೂ ಇದನ್ನು ಮಾಡುವ ವಿಧಾನ ಕೂಡ ಅಷ್ಟೇನು ಕಷ್ಟಕರವಾಗಿಲ್ಲ. ಈಗಂತೂ ನೀವು ಬಯಸಿದ ಅಡುಗೆಯನ್ನು ಮನೆಯಲ್ಲಿಯೇ ಮಾಡಿ ಸವಿಯುವುದು ಆರೋಗ್ಯದ ದೃಷ್ಟಿಯಿಂದಲೂ ಒಳ್ಳೆಯದು.

ಇಲ್ಲಿ ನಾವು ಸೋಯಾ ಹಲೀಮ್ ಮಾಡುವ ರೆಸಿಪಿ ನೀಡಿದ್ದೇವೆ ನೋಡಿ:

Ramadan Special Soya Haleem Recipe, ಸೋಯಾ ಹಲೀಮ್‌ ರೆಸಿಪಿ
Ramadan Special Soya Haleem Recipe, ಸೋಯಾ ಹಲೀಮ್‌ ರೆಸಿಪಿ
Prep Time
20 Mins
Cook Time
25M
Total Time
45 Mins

Recipe By: Reena TK

Recipe Type: Ramadan Special Recipe

Serves: 4

Ingredients
  • ಬೇಕಾಗುವ ಸಾಮಗ್ರಿ

    8-10 ಎಸಳು ಬೆಳ್ಳುಳ್ಳಿ

    30ಗ್ರಾಂ ಬೆಳ್ಳುಳ್ಳಿ

    3 ಹಸಿ ಮೆಣಸಿನಕಾಯಿ

    3 ಚಮಚ ಆಲೀವ್ ಎಣ್ಣೆ

    250ಗ್ರಾ ಈರುಳ್ಳಿ (ತೆಳುವಾಗಿ , ಉದ್ದುದ್ದವಾಗಿ ಕತ್ತರಿಸಿದ್ದು)

    1 ಚಮಚ ಕೆಂಪು ಮೆಣಸಿನ ಪುಡಿ

    1 ಚಕ್ಕೆ

    2-3 ಲವಂಗ

    5-6 ಕಾಳು ಮೆಣಸು

    2 ಏಲಕ್ಕಿ

    2-3 ಪಲಾವ್ಎಲೆ

    1 ಕಪ್ ಸೋಯಾ

    3 ಚಮಚ ಹೆಸರುಬೇಳೆ

    3 ಚಮಚ ಕೆಂಪು ಬೇಳೆ

    3 ಚಮಚ ಕಪ್ಪು ಬೇಳೆ

    40-50ಗ್ರಾಂ ನುಚ್ಚು ಗೋಧಿ

    1ಚಮಚ ಜೀರಿಗೆ ಪುಡಿ

    1 ಚಮಚ ಕೊತ್ತಂಬರಿ ಪುಡಿ

    ಅರ್ಧ ಚಮಚ ಅರಿಶಿಣ ಪುಡಿ

    ಸ್ವಲ್ಪ ಕೊತ್ತಂಬರಿ ಸೊಪ್ಪು

    ಸ್ವಲ್ಪ ಪುದೀನಾ ಎಲೆ

Red Rice Kanda Poha
How to Prepare
  • ಮಾಡುವುದು ಹೇಗೆ?

    * ಸೋಯಾ ನೀರಿನಲ್ಲಿ ನೆನೆ ಹಾಕಿಡಿ

    * ಬ್ಲೆಂಡರ್‌ಗೆ ಶುಂಠಿ, ಬೆಳ್ಳುಳ್ಳಿ, ಹಸಿ ಮೆಣಸಿನಕಾಯಿ ಹಾಕಿ ನುಣ್ಣನೆ ರುಬ್ಬಿ.

    * ಒಂದು ಪ್ಯಾನ್‌ಗೆ ಸ್ವಲ್ಪ ಎಣ್ಣೆ ಹಾಕಿ ಅದರಲ್ಲಿ ಈರುಳ್ಳಿನ ಹಾಕಿ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ, ಸ್ವಲ್ಪ ಒಂದು ಬೌಲ್‌ನಲ್ಲಿ ಹಾಕಿಡಿ, ಇನ್ನು ಪ್ಯಾನ್‌ನಲ್ಲಿಯೇ ಇಡಿ.

    * ಈಗ ಪ್ಯಾನ್‌ಗೆ ಚಕ್ಕೆ, ಲವಂಗ, ಕಾಳು ಮೆಣಸು, ಏಲಕ್ಕಿ, ಜೀರಿಗೆ, ಪಲಾವ್ಎಲೆ ಹಾಕಿ.

    * ಈಗ ಸೋಯಾ ಹಾಕಿ ಮಿಕ್ಸ್ ಮಾಡಿ.

    * ಈಗ ಮೂರು ಬಗೆಯ ಬೇಳೆ ಹಾಕಿ ಮಿಕ್ಸ್ ಮಾಡಿ, ಚೆನ್ನಾಗಿ ಮಿಕ್ಸ್ಆಗಲಿ.

    * ಈಗ ನುಚ್ಚು ಗೋಧಿ, 1/4 ಲೀಟರ್ ನೀರು, ಇತರ ತರಕಾರಿ ಹಾಕಿ ಮಿಕ್ಸ್ ಮಾಡಿ.

    * ಎಲ್ಲಾ ಸಾಮಾಗ್ರಿ ಚೆನ್ನಾಗಿ ಮಿಶ್ರವಾಗಲಿ.

    *ಈಗ ಜೀರಿಗೆ ಪುಡಿ, ಕೊತ್ತಂಬರಿ ಪುಡಿ, ಅರಿಶಿಣ ಪುಡಿ, ಗರಂ ಮಸಾಲ ಹಾಕಿ ಮಿಶ್ರ ಮಾಡಿ, ರುಚಿಗೆ ತಕ್ಕ ಉಪ್ಪು ಸೇರಿಸಿ.

    * ಕೊತ್ತಂಬರಿ ಸೊಪ್ಪು ಕತ್ತರಿಸಿ ಹಾಕಿ ಬೇಯಿಸಿ.

    * ನುಚ್ಚು ಗೋಧಿ, ಬೇಳೆ ತುಂಬಾ ಮೆದುವಾಗುವವರೆಗೆ ಬೇಯಿಸಿ.

    * ರೆಡಿಯಾದ ಹಲೀಮ್‌ ಮೇಲೆ ಕೊತ್ತಂಬರಿ ಸೊಪ್ಪು, ಪುದೀನಾ ಎಲೆ, ಹಸಿ ಮೆಣಸಿನಕಾಯಿ, ಫ್ರೈ ಮಾಡಿದ ಈರುಳ್ಳಿ ಹಾಕಿ ಬಿಸಿ, ಬಿಸಿ ಇರುವಾಗಲೇ ಸರ್ವ್ ಮಾಡಿ.

Instructions
  • ರಂಜಾನ್‌ ತಿಂಗಳಿನಲ್ಲಿ ಮಾಡುವ ಸ್ಪೆಷಲ್‌ ರೆಸಿಪಿ ಇದಾಗಿದ್ದು ಇದರಲ್ಲಿರುವ ಪೋಷಕಾಂಶಗಳು ದೇಹಕ್ಕೆ ಶಕ್ತಿಯನ್ನು ತುಂಬುವುದು.
Nutritional Information
  • ಕ್ಯಾಲೋರಿ - 800cal
  • ಪ್ರೊಟೀನ್ - 79ಗ್ರಾಂ
  • ಕಾರ್ಬ್ಸ್ - 26ಗ್ರಾಂ
[ 4.5 of 5 - 58 Users]
X
Desktop Bottom Promotion