Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ರಂಜಾನ್ ಸ್ಪೆಷಲ್ ನಾನ್‌ವೆಜ್ ರೆಸಿಪಿ: ಲ್ಯಾಂಬ್‌ವಿಥ್ ಡೇಟ್ಸ್
ೀದ್ ಉಲ್ ಫಿತ್ತರ್ ಶುಭಾಶಯಗಳು... ಲ್ಯಾಂಬ್ ವಿಥ್ ಡೇಟ್ಸ್ ಟೇಸ್ಟ್ ಮಾಡಿ ನೋಡಿದ್ದೀರಾ, ಕುರಿ ಮಾಂಸ ಪ್ರಿಯರಾಗಿದ್ದರೆ ಈ ರುಚಿ ನಿಮಗೆ ತುಂಬಾ ಇಷ್ಟವಾಗುವುದು. ಇದು ಆರೋಗ್ಯಕ್ಕೂ ತುಂಬಾ ಒಳ್ಳೆಯದು.
ದಿನವಿಡೀ ಉಪವಾಸವಿದ್ದು ಒಂದು ಹೊತ್ತು ಇಂಥ ಪೋಷಕಾಂಶದ ಆಹಾರ ಸೇವಿಸಿದರೆ ದೇಹಕ್ಕೆ ಶಕ್ತಿ ದೊರೆಯುತ್ತದೆ, ಆದ್ದರಿಂದ ಇಂಥ ಆರೋಗ್ಯಕರ ಹಾಗೂ ರುಚಿಕರವಾದ ಆಹಾರವನ್ನು ರಂಜಾನ್ ಸ್ಪೆಷಲ್ ಅಡುಗೆಯಲ್ಲಿ ತಯಾರಿಸಲಾಗುವುದು.
ಲ್ಯಾಂಬ್ ವಿಥ್ ಡೇಟ್ಸ್ ತುಂಬಾ ಸರಳವಾದ ರೆಸಿಪಿಯಾದರೂ, ಹೈಫೈ ರೆಸ್ಟೋರೆಂಟ್‌ಗಳಲ್ಲಿ ಸಿಗುವಷ್ಟು ರುಚಿಕರವಾಗಿರುತ್ತದೆ. ಇದನ್ನು ಅರ್ಧ ಗಂಟೆಯಲ್ಲಿ ತಯಾರಿಸಬಹುದು ಹಾಗೂ ಹೆಚ್ಚಿನ ಶ್ರಮವೂ ಪಡಬೇಕಾಗಿಲ್ಲ. ಬನ್ನಿ ನಿಮ್ಮ ಬಾಯಿಯ ರುಚಿ ಹೆಚ್ಚಿಸುವ ಲ್ಯಾಂಬ್ ವಿಥ್ ಡೇಟ್ಸ್ ಮಾಡುವುದು ಹೇಗೆ ಎಂದು ನೋಡೋಣ:
Recipe By: Reena T K
Recipe Type: Non veg
Serves: 4
-
ಬೇಕಾಗುವ ಸಾಮಗ್ರಿ
* 1 ಚಮಚ ಆಲೀವ್ ಎಣ್ಣೆ(ನೀವು ಯಾವುದೇ ಅಡುಗೆ ಎಣ್ಣೆ ಬಳಸಬಹುದು)
* ಈರುಳ್ಳಿ, ತೆಳುವಾಗಿ ಕತ್ತರಿಸಿ
* ಬೋನ್‌ಲೆಸ್ ಕುರಿ ಮಾಂಸ, ಅದರಲ್ಲೂ ಕಾಲಿನ ಭಾಗದ ಮಾಂಸ ಒಳ್ಳೆಯದು
*250ಗ್ರಾಂ ಸಿಹಿ ಗೆಣಸು(ಚಿಕ್ಕದಾಗಿ ಕತ್ತರಿಸಿ)
* 2 ಚಮಚ ಕೊತ್ತಂಬರಿ ಪುಡಿ
* 1 ಚಮಚ ಟೊಮೆಟೊ ಪೇಸ್ಟ್
* 2 ಚಮಚ ಚಕ್ಕೆ ಪುಡಿ
* 50ಗ್ರಾಂ ಒಣ ಖರ್ಜೂರ
* 2 ಚಮಚ ಕೊತ್ತಂಬರಿ ಸೊಪ್ಪು
-
ಮಾಡುವ ವಿಧಾನ
1. ದಪ್ಪ ತಳವಿರುವ ಪ್ಯಾನ್‌ಗೆ ಎಣ್ಣೆ ಹಾಕಿ ಬಿಸಿ ಮಾಡಿ, ಈಗ ಈರುಳ್ಳಿ, ಕುರಿ ಮಾಂಸ ಹಾಕಿ ಫ್ರೈ ಮಾಡಿ, ಈರುಳ್ಳಿ ಸ್ವಲ್ಪ ಕಂದು ಬಣ್ಣ ಬರುವಷ್ಟು ಫ್ರೈ ಮಾಡಿ.
2. ನಂತರ ಸಿಹಿ ಗೆಣಸು ಹಾಗೂ ಹಾಕಿ ಮಿಶ್ರ ಮಾಡಿ. ಈಗ ಅರ್ಧ ಲೀಟರ್ ಕುದಿಯುವ ನೀರು ಹಾಕಿ, ಟೊಮೆಟೊ ಪೇಸ್ಟ್ ಹಾಕಿ ಕುದಿಸಿ.
3. ಈಗ ಪಾತ್ರೆಯ ಬಾಯಿ ಮುಚ್ಚಿ 15ನಿಮಿಷ ಬೇಯಿಸಿ. ಸಿಹಿ ಗೆಣಸು, ಕುರಿ ಮಾಂಸ ಚೆನ್ನಾಗಿ ಬೇಯಲಿ. ಸಿಹಿ ಗೆಣಸು ಮುಕ್ಕಾಲು ಬೆಂದಾಗ ಒಣ ಖರ್ಜೂರ ಹಾಕಿ ಬೇಯಿಸಿ, ನಂತರ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ ಸರ್ವ್ ಮಾಡಿ.
- ಇದು ರುಚಿಯ ಜೊತೆಗೆ ಪೌಷ್ಠಿಕ ಆಹಾರವಾಗಿದೆ. ಇದನ್ನು ಇಫ್ತಾರ್ ಕೂಟದಲ್ಲಿ ಮಾಡಿ ಸವಿಯಿರಿ.
- ಸರ್ವ್ - 4
- ಕ್ಯಾಲೋರಿ - 343
- ಕೊಬ್ಬು - 145ಗ್ರಾಂ
- ಪ್ರೊಟೀನ್ - 38ಗ್ರಾಂ
- ಕಾರ್ಬ್ಸ್ - 30ಗ್ರಾಂ
- ನಾರಿನಂಶ - 3ಗ್ರಾಂ



Click it and Unblock the Notifications
