Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ರಂಜಾನ್ ಸ್ಪೆಷಲ್: ಅಲೀಸಾ ರುಚಿಗೆ ನೀವಾಗುವಿರಿ ಕ್ಲೀನ್ ಬೋಲ್ಡ್
ರಂಜಾನ್ ಹಬ್ಬದ ಶುಭಾಶಯಗಳು. ರಂಜಾನ್ ಹಬ್ಬವಂದರೆ ಹೇಳಬೇಕೆ? ಒಂದಕ್ಕೊಂದು ಮಿಗಿಲು ರುಚಿಯ ತಿಂಡಿ, ತಿನಿಸುಗಳನ್ನು ಮಾಡಲಾಗುವುದು. ಅದರಲ್ಲೂ ರಂಜಾನ್ ಹಬ್ಬಕ್ಕೆ ನಾನ್‌ವಜ್ ಅಡುಗೆಯದ್ದೇ ಮೇಲುಗೈ. ಇಲ್ಲಿ ನಾವು ಚಿಕನ್ ಹಾಕಿ ಮಾಡುವ ಅಲೀಸಾ ರೆಸಿಪಿ ನೀಡಿದ್ದೇವೆ.
ಗೋಧಿ, ಚಿಕನ್ ಹಾಕಿ ಮಾಡುವ ಈ ರೆಸಿಪಿ ತುಂಬಾ ರುಚಿಯಾಗಿರುತ್ತೆ. ಇದನ್ನು ನೀವು ಟ್ರೈ ಮಾಡಬಯಸುವುದಾದರೆ ಇಲ್ಲಿದೆ ನೋಡಿ ಸರಳವಾದ ರೆಸಿಪಿ. ನೀವು ಈ ರೆಸಿಪಿ ಟ್ರೈ ಮಾಡಿದ್ದೇ ಆದರೆ ನಮಗೆ ಥ್ಯಾಂಕ್ಸ್ ಹೇಳುವಿರಿ, ಅಷ್ಟೊಂದು ರುಚಿಯಾಗಿರುತ್ತೆ ನೋಡಿ, ಮತ್ತೇಕೆ ತಡ ಬನ್ನಿ ರೆಸಿಪಿ ನೋಡೋಣ:
Recipe By: Reena TK
Recipe Type: Nonveg
Serves: 4
-
ಬೇಕಾಗುವ ಸಾಮಗ್ರಿ
1 ಕಪ್ ಸಿಪ್ಪೆ ಸುಲಿದು ಗೋಧಿ(ರಾತ್ರಿ ನೆನೆಹಾಕಿರಬೇಕು)
7 ಕಪ್ ನೀರು
3-4 ಮೀಡಿಯಂ ಚಿಕನ್ ಪೀಸ್
1 ಈರುಳ್ಳಿ (ತೆಳುವಾಗಿ ಕತ್ತರಿಸಿದ್ದು)
2 ಬೆಳ್ಳುಳ್ಳಿ
1 ತುಂಡು ಚಕ್ಕೆ
2 ಏಲಕ್ಕಿ
6 ಚಮಚ ತುಪ್ಪ
3/4 ಉಪ್ಪು (ರುಚಿಗೆ ತಕ್ಕಷ್ಟು)
ಅಲಂಕಾರಕ್ಕೆ
3 ಚಮಚ ತುಪ್ಪ
1 ಈರುಳ್ಳಿ, ತೆಳುವಾಗಿ ಕತ್ತರಿಸಿದ್ದು
ಸ್ವಲ್ಪ ಗೋಡಂಬಿ
ಸ್ವಲ್ಪ ದ್ರಾಕ್ಷಿ
-
ಮಾಡುವುದು ಹೇಗೆ?
* ಗೋಧಿ ತೊಳೆದು ರಾತ್ರಿ ನೆನೆಹಾಕಿ.
* ಮಾರನೇಯ ದಿನ ನೀರು ಸೋಸಿ ಅದಕ್ಕೆ ನೀರು, ಚಿಕನ್ ಪೀಸ್, ಈರುಳ್ಳಿ, ಬೆಳ್ಳುಳ್ಳಿ, ಚಕ್ಕೆ, ಏಲಕ್ಕಿ, ತುಪ್ಪ, ರುಚಿಗೆ ತಕ್ಕ ಉಪ್ಪು ಹಾಕಿ ಮಿಶ್ರ ಮಾಡಿ, ಪಾತ್ರೆಯ ಬಾಯಿ ಮುಚ್ಚಿ ಬಾಯಿ ಮುಚ್ಚಿ ಬೇಯಿಸಿ.
* ಬೇಯಿಸುವಾಗ ಮೊದಲಿಗೆ ಸಾಧಾರಣ ಉರಿಯಲ್ಲಿ ಇಟ್ಟು, ನಂತರ ಕಡಿಮೆ ಉರಿಯಲ್ಲಿಒಂದು ಗಂಟೆ 40 ನಿಮಿಷ ಬೇಯಿಸಿ.
* ನಂತರ ಗ್ಯಾಸ್ ಆಫ್ ಮಾಡಿ 10 ನಿಮಿಷ ಬಿಡಿ, ನಂತರ ಪಾತ್ರೆಯ ಮುಚ್ಚಳ ತೆಗೆಯಿರಿ.
* ಎಲ್ಲಾವನ್ನು ಮಿಶ್ರ ಮಾಡಿ, ನಂತರ ಮ್ಯಾಶ್ ಮಾಡಿ.
*ಈಗ ಪ್ಯಾನ್ ಬಿಸಿ ಮಾಡಿ, ತುಪ್ಪ ಹಾಕಿ ಬಿಸಿ ಮಾಡಿ ಈರುಳ್ಳಿ ಹಾಕಿ, ಈರುಳ್ಳಿ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ, ನಂತರ ಗೋಡಂಬಿ ಹಾಕಿ.
* ಅದರಲ್ಲಿ ಸ್ವಲ್ಪ ತೆಗೆದಿಟ್ಟು, ಉಳಿದವುಗಳನ್ನು ಅಲೀಸಾ ಜೊತೆ ಹಾಕಿ.
* ಸರ್ವ್ ಮಾಡಿದಾಗ ತುಪ್ಪದಲ್ಲಿ ಕರಿದ ಉಳಿದ ಈರುಳ್ಳಿ-ಗೋಡಂಬಿ ಹಾಕಿ ಅಲಂಕರಿಸಿ ಸರ್ವ್ ಮಾಡಿ ಟೇಸ್ಟ್ ಸೂಪರ್ ಆಗಿರುತ್ತದೆ.
- ಈ ಅಲೀಸಾ ರೆಸಿಪಿ ರುಚಿಯ ಜೊತೆಗೆ ಆರೋಗ್ಯಕ್ಕೂ ಒಳ್ಳೆಯದು.
- ಸರ್ವ್ - 4
- ಕ್ಯಾಲೋರಿ - 196
- ಕೊಬ್ಬು - 8ಗ್ರಾಂ
- ಪ್ರೊಟೀನ್ - 26ಗ್ರಾಂ
- ಕಾರ್ಬ್ಸ್ - 5ಗ್ರಾಂ



Click it and Unblock the Notifications
