For Quick Alerts
ALLOW NOTIFICATIONS  
For Daily Alerts

ಕುಂಬಳಕಾಯಿ ಸೂಪ್ ಪಾಕವಿಧಾನ

Posted By: Divya Pandith
|

ಕುಂಬಳಕಾಯಿ ಎಂದರೆ ಅನೇಕರು ಮೂಗು ಮುರಿಯುತ್ತಾರೆ. ರುಚಿಯಲ್ಲಿ ಸ್ವಲ್ಪ ಸಿಹಿಯನ್ನು ಹೊಂದಿರುತ್ತದೆಯಾದ್ದರಿಂದ ಖಾರವನ್ನು ಬಯಸುವವರು ಕುಂಬಳಕಾಯಿಯಿಂದ ದೂರ ಸರಿಯುತ್ತಾರೆ. ಬಳ್ಳಿಯಲ್ಲಿ ಬೆಳೆಯುವ ಅತಿದೊಡ್ಡ ತರಕಾರಿ ಕುಂಬಳಕಾಯಿ. ಗಾತ್ರದಲ್ಲಿ ದೊಡ್ಡದಾಗಿರುವಂತೆ ಅದರ ಉಪಯೋಗದಿಂದಲೂ ಅನೇಕ ಆರೋಗ್ಯಕರ ಅಂಶಗಳನ್ನು ಪಡೆದುಕೊಳ್ಳಬಹುದು. ಪ್ರೋಟೀನ್ ಮತ್ತು ವಿಟಮಿನ್‍ಗಳು ಕುಂಬಳಕಾಯಿಯಲ್ಲಿ ಸಮೃದ್ಧವಾಗಿರುತ್ತವೆ.

ಕುಂಬಳಕಾಯಿಯಿಂದ ಅನೇಕ ಬಗೆಯ ಅಡುಗೆ ಹಾಗೂ ಸಿಹಿ ತಿಂಡಿಗಳನ್ನು ತಯಾರಿಸುತ್ತಾರೆ. ಚಳಿಗಾಲದಲ್ಲಿ ಆಗಾಗ ಸವಿಯಬೇಕೆನ್ನಿಸುವ ಸೂಪ್‍ಅನ್ನು ಸಹ ಕುಂಬಳಕಾಯಿಯಿಂದ ತಯಾರಿಸಬಹುದು. ಬಹು ಸರಳ ಹಾಗೂ ಕಡಿಮೆ ಸಮಯದಲ್ಲಿ ಕುಂಬಳಕಾಯಿ ಸೂಪ್‍ಅನ್ನು ತಯಾರಿಸಬಹುದು. ನೀವೂ ಇದನ್ನು ತಯಾರಿಸಬೇಕು ಹಾಗೂ ಸವಿಯಬೇಕೆಂದುಕೊಂಡಿದ್ದರೆ ಬೋಲ್ಡ್ ಸ್ಕೈ ನೀಡಿರುವ ಮುಂದಿನ ವಿವರಣೆಯನ್ನು ಪರಿಶೀಲಿಸಿ.

ಕುಂಬಳಕಾಯಿ ಸೂಪ್ ರೆಸಿಪಿ ಮಾಡುವ ವಿಧಾನ ಹೇಗೆ?
ಕುಂಬಳಕಾಯಿ ಸೂಪ್ ರೆಸಿಪಿ| ಕುಂಬಳಕಾಯಿ ಸೂಪ್ ಕ್ರೀಮಿ ಸೂಪ್ ಮಾಡುವ ವಿಧಾನ| ಕ್ರೀಮಿ ಕುಂಬಳಕಾಯಿ ಸೂಪ್ ರೆಸಿಪಿ| ಬಟರ್‌ನಟ್ ಸ್ಕ್ವ್ಯಾಷ್ ಸೂಪ್ ರೆಸಿಪಿ
ತಯಾರಿಗೆ ಬೇಕಾಗುವ ಸಮಯ - 20 ನಿಮಿಷ, ಪಾಕವಿಧಾನಕ್ಕೆ ಬೇಕಾಗುವ ಸಮಯ- 25 ನಿಮಿಷ, ಒಟ್ಟು ಸಮಯ - 45 ನಿಮಿಷ
Prep Time
20 Mins
Cook Time
25M
Total Time
45 Mins

Recipe By: ಪೂಜಾ ಗುಪ್ತಾ

Recipe Type: ಸೂಪ್

Serves: 6 ಮಂದಿಗೆ

Ingredients
  • ಆಲಿವ್ ಎಣ್ಣೆ-2 ಟೇಬಲ್ ಚಮಚ

    ಚಿಕ್ಕದಾಗಿ ಹೆಚ್ಚಿಕೊಂಡ ಈರುಳ್ಳಿ - 2

    ಕುಂಬಳಕಾಯಿ -1 ಕೆ.ಜಿ

    ಇತರ ತರಕಾರಿಗಳ ಚೂರು ಅಥವಾ ಚಿಕನ್ ಚೂರು -2-3 ಕಪ್

    ಗಟ್ಟಿ ಕೆನೆ -1 ಪ್ಯಾಕ್ ಅಮೂಲ್ ಕ್ರೀಮ್

    ಅಲಂಕಾರಕ್ಕೆ

    ಆಲಿವ್ ಎಣ್ಣೆ - 2 ಟೇಬಲ್ ಚಮಚ

    ಕತ್ತರಿಸಿಕೊಂಡ ಹೋಲ್ ಮೀಲ್ ಸೀಡೆಡ್ ಬ್ರೆಡ್ -4 ಚೂರು

    ಒಂದು ಮುಷ್ಟಿ ಕುಂಬಳ ಬೀಜ

Red Rice Kanda Poha
How to Prepare
  • 1. ಒಂದು ದೊಡ್ಡ ಪಾತ್ರೆಯಲ್ಲಿ ಆಲಿವ್ ಎಣ್ಣೆಯನ್ನು ಹಾಕಿ ಬಿಸಿ ಮಾಡಿ. ನಂತರ ಹೆಚ್ಚಿಕೊಂಡ ಈರುಳ್ಳಿಯನ್ನು ಹಾಕಿ. ಈರುಳ್ಳಿ ಮೃದುವಾಗಿ ಬೆಂದು, ಹೊಂಬಣ್ಣಕ್ಕೆ ಬರುವ ಹಾಗೆ 5 ನಿಮಿಷ ಹುರಿಯಿರಿ.

    2. ಹೆಚ್ಚಿಕೊಂಡ ಕುಂಬಳಕಾಯಿಯನ್ನು ಸೇರಿಸಿ. ಇದು ಮೃದುವಾಗಿ ಬೆಂದು, ಹೊಂಬಣ್ಣಕ್ಕೆ ತಿರುಗಲು 8-10 ನಿಮಿಷಗಳಕಾಲ ಬೇಯಲು ಬಿಡಿ.

    3. ಹೆಚ್ಚಿಕೊಂಡ ತರಕಾರಿ ಅಥವಾ ಚಿಕನ್ ಪೀಸ್‍ಗಳು ಹಾಗೂ ಉಪ್ಪು ಮತ್ತು ಪೆಪ್ಪರ್ ಪುಡಿಯನ್ನು ಸೇರಿಸಿ.

    4. ಎಲ್ಲಾ ಸಾಮಾಗ್ರಿಗಳು ಚೆನ್ನಾಗಿ ಬೆಂದು ಕುವುಚಿದಂತಾಗುವವರೆಗೆ, ಸುಮಾರು 10 ನಿಮಿಷಗಳ ಕಾಲ ಕುದಿಯಲು ಬಿಡಿ.

    5. ದಪ್ಪ ಕೆನೆಯನ್ನು ಸೇರಿಸಿ. ಸ್ವಲ್ಪ ಸಮಯ ಕುದಿಯಲು ಬಿಡಿ. ನಂತರ ಕೈಯಿಂದ ಸ್ವಲ್ಪ ಜಜ್ಜಿ.

    6. ನಿಮಗೆ ಸೂಪ್‍ನಲ್ಲಿ ಯಾವುದೇ ಜಗಟುಗಳಿಲ್ಲದೆ ನಯವಾಗಿರಬೇಕೆಂದರೆ ಸೂಪ್‍ಅನ್ನು ಜರಡಿ ಹಿಡಿಯಿರಿ.

    7. ಈ ಸೂಪ್‍ಅನ್ನು ನೀವು 2 ತಿಂಗಳ ಕಾಲ ಫ್ರಿಜ್‍ನಲ್ಲಿಟ್ಟು ರಕ್ಷಿಸಿಕೊಳ್ಳಬಹುದು.

    8. ಅಲಂಕಾರಕ್ಕೆ ಬ್ರೆಡ್‍ಅನ್ನು ಸಣ್ಣ ಚೌಕಾಕಾರದಲ್ಲಿ ನಾಲ್ಕು ತುಂಟನ್ನಾಗಿ ಕತ್ತರಿಸಿ.

    9. ಹುರಿಯುವ ಪಾತ್ರೆಯಲ್ಲಿ ಆಲಿವ್ ಎಣ್ಣೆಯನ್ನು ಹಾಕಿ ಬಿಸಿ ಮಾಡಿ. ನಂತರ ಬ್ರೆಡ್ ಚೂರನ್ನು ಸೇರಿಸಿ. ಗರಿಗರಿಯಾಗುವವರೆಗೂ ಹುರಿಯಿರಿ.

    10. ಒಂದು ಮುಷ್ಟಿ ಕುಂಬಳ ಬೀಜನವನ್ನು ಹುರಿಯುವ ಪಾತ್ರೆಗೆ ಸೇರಿಸಿ. ಚೆನ್ನಾಗಿ ಬೇಯುವ ವರೆಗೆ ಹುರಿಯಿರಿ.

    11. ನೀವು ಇದನ್ನು ಹಿಂದಿನ ದಿನವೇ ಮಾಡಿಟ್ಟುಕೊಳ್ಳಬಹುದು. ಗಾಳಿಯಾಡದ ಡಬ್ಬದಲ್ಲಿಟ್ಟು ಹಲವುದಿನಗಳಕಾಲ ಸಂಗ್ರಹಿಸಿಡಬಹುದು.

    12. ಅಗತ್ಯವಿದ್ದರೆ ಪುನಃ ಸೂಪ್‍ಅನ್ನು ಒಮ್ಮೆ ಬಿಸಿಮಾಡಿಕೊಳ್ಳಿ. ನಂತರ ಹುರಿದ ಬ್ರೆಡ್ ಚೂರು, ಕುಂಬಳ ಬೀಜವನ್ನು ಸೇರಿಸಿ. ನಂತರ ಆಲಿವ್ ಎಣ್ಣೆಯನ್ನು ಚಿಮುಕಿಸಿ.

    13. ಸೂಪ್‍ನ ಮೇಲೆ ಅಲಂಕರಿಸಿರುವ ಬೀಜ ಮತ್ತು ಬ್ರೆಡ್‍ನ ಚೂರುಗಳು ಮೇಲ್ಭಾಗದಲ್ಲಿ ಇರುವಂತೆ ಮಾಡಿ.

    14. ಬೇಕಿದ್ದರೆ ಮೇಕೆಯ ಚೀಸ್ (ಮೇಕೆ ಹಾಲಿನ ಚೀಸ್) ಮತ್ತು ತುಳಸಿಯನ್ನು ಸೇರಿಸಿಕೊಳ್ಳಬಹುದು. ಚೀಸ್ ಕರಗುವವರೆಗೆ ಸೂಪ್‍ಅನ್ನು ಬಿಸಿಯಲ್ಲಿಡಬೇಕು.

Instructions
  • ಹೆಚ್ಚಿನ ಪರಿಮಳಕ್ಕಾಗಿ ಬೆಳ್ಳುಳ್ಳಿಯನ್ನು ಸೇರಿಸಿಕೊಳ್ಳಬಹುದು
  • ಉತ್ತಮ ರುಚಿಗೆ ಕುಂಬಳ ಕಾಯಿಯ ಬದಲಾಗಿ ಬಟರ್‍ನಟ್‍ಗಳನ್ನು ಬಳಸಬಹುದು.
Nutritional Information
  • ಬಡಿಸುವ ಪ್ರಮಾಣ - 1 ಬೌಲ್
  • ಕ್ಯಾಲೋರಿ - 317
  • ಕೊಬ್ಬು - 24 ಗ್ರಾಂ.
  • ಪ್ರೋಟೀನ್ - 6 ಗ್ರಾಂ.
  • ಕಾರ್ಬೋಹೈಡ್ರೇಟ್ - 20 ಗ್ರಾಂ.
  • ಸಕ್ಕರೆ - 6 ಗ್ರಾಂ
[ 5 of 5 - 51 Users]
X
Desktop Bottom Promotion